50 ವರ್ಷ ದಾಟಿದೆ, ಒಂಟಿತನ ಕಾಡ್ತಿದೆ: ರಾಹುಲ್‌ ಗಾಂಧಿ ವಿರುದ್ಧ ಓವೈಸಿ ವ್ಯಂಗ್ಯ

By BK AshwinFirst Published Nov 28, 2023, 3:36 PM IST
Highlights

ರಾಹುಲ್ ಗಾಂಧಿ ಮಾತನಾಡುವ ಮುನ್ನ ಯೋಚಿಸಿ, ನಿಮಗೆ 50 ವರ್ಷ ದಾಟಿದೆ, ಒಂಟಿತನ ನಿಮ್ಮನ್ನು ಕಾಡುತ್ತಿರಬೇಕು ಎಂದು ಓವೈಸಿ ವ್ಯಂಗ್ಯವಾಡಿದ್ದಾರೆ. 

ಹೈದರಾಬಾದ್‌ (ನವೆಂಬರ್ 28, 2023): ತೆಲಂಗಾಣದಲ್ಲಿ ನವೆಂಬರ್ 30 ರಂದು ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜಕೀಯ ಪಕ್ಷಗಳ ನಾಯಕರ ನಡುವೆ ಆರೋಪ - ಪ್ರತ್ಯಾರೋಪಗಳು, ವಾಗ್ಯುದ್ಧಗಳು ಹೆಚ್ಚಾಗಿದೆ. ಇದೇ ರೀತಿ, ಅಖಿಲ ಭಾರತ ಮಜ್ಲಿಸ್ - ಎ - ಇತ್ತೆಹಾದ್ - ಉಲ್ - ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ನೇಹಿತ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಗೆ ಓವೈಸಿ ವ್ಯಂಗ್ಯವಾಡಿದ್ದಾರೆ. 

ರಾಹುಲ್ ಗಾಂಧಿ ಮಾತನಾಡುವ ಮುನ್ನ ಯೋಚಿಸಿ, ನಿಮಗೆ 50 ವರ್ಷ ದಾಟಿದೆ, ಒಂಟಿತನ ನಿಮ್ಮನ್ನು ಕಾಡುತ್ತಿರಬೇಕು. ಅದು ನಿಮ್ಮ ನಿರ್ಧಾರ, ನಾವು ಯಾರ ಜೀವನದಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ, ನಾವು ಯಾರಿಗೂ ತೊಂದರೆ ನೀಡುವುದಿಲ್ಲ, ಆದರೆ ಯಾರಾದರೂ ನಮ್ಮನ್ನು ಚುಡಾಯಿಸಿದರೆ, ನಾವು ಅವರನ್ನು ಸುಮ್ಮನೆ ಬಿಡಲ್ಲ ಎಂದು AIMIM ಮುಖ್ಯಸ್ಥ ರಾಹುಲ್ ಗಾಂಧಿ ಅವರ ‘ಇಬ್ಬರು ಗೆಳೆಯರು’ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದಾರೆ.

ಇದನ್ನು ಓದಿ: ರಾಹುಲ್ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ: ಖರ್ಗೆ ಹೇಳಿಕೆ ವೈರಲ್‌; ಬಿಜೆಪಿ ಲೇವಡಿ

ನವೆಂಬರ್ 25 ರಂದು ತೆಲಂಗಾಣದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್‌ ಗಾಂಧಿ, ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸರ್ಕಾರವನ್ನು ಭ್ರಷ್ಟ ಎಂದು ಬಣ್ಣಿಸಿದ ನಂತರ ಮತ್ತು ಬಿಜೆಪಿ ಹಾಗೂ ಎಐಎಂಐಎಂ ಪಕ್ಷವು ಒಂದೇ ಎಂದು ಹೇಳಿದ್ದಕ್ಕೆ ಓವೈಸಿ ಈ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ಮೋದಿಗೆ ಓವೈಸಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಹಾಗೂ ಬಿಆರ್‌ಎಸ್ ನಾಯಕ ಕೆ ಚಂದ್ರಶೇಖರ್ ರಾವ್ ಸೇರಿ ಇಬ್ಬರು ಸ್ನೇಹಿತರಿದ್ದಾರೆ ಎಂದು ತೆಲಂಗಾಣದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಹೇಳಿದ್ದರು. 

ಅಲ್ಲದೆ, ಮೋದಿ ಪ್ರಧಾನಿಯಾಗಬೇಕೆಂದು ಕೆಸಿಆರ್ ಬಯಸಿದ್ದಾರೆ ಮತ್ತು ಕೆಸಿಆರ್ ಮುಖ್ಯಮಂತ್ರಿಯಾಗಬೇಕೆಂದು ಮೋದಿ ಬಯಸಿದ್ದಾರೆ ಎಂದೂ ಅವರು ಹೇಳಿದರು. ಕಾಂಗ್ರೆಸ್ ಪಕ್ಷವು ಮೊದಲು ತೆಲಂಗಾಣದಲ್ಲಿ ಬಿಆರ್‌ಎಸ್ ಮತ್ತು ನಂತರ ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಸೋಲಿಸುವ ಗುರಿ ಹೊಂದಿದೆ. ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಕಾಂಗ್ರೆಸ್‌ ಪಕ್ಷ ಗೆಲ್ಲಿದೆ ಎಂದೂ ರಾಹುಲ್ ಗಾಂಧಿ ಹೇಳಿದ್ದರು. 

ಛತ್ತೀಸ್‌ಗಢದಲ್ಲಿ ಮತಯಂತ್ರ ಸಾಗಿಸುತ್ತಿದ್ದ ವಾಹನ ಸ್ಪೋಟಿಸಿದ ನಕ್ಸಲರು; ಯೋಧ ಬಲಿ: 2 ರಾಜ್ಯಗಳಲ್ಲಿ ಉತ್ತಮ ಮತದಾನ

ತೆಲಂಗಾಣ ತನ್ನ 119 ಸದಸ್ಯರ ರಾಜ್ಯ ವಿಧಾನಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನವೆಂಬರ್ 30 ರಂದು ಮತದಾನ ನಡೆಯಲಿದೆ. ಇನ್ನು, ಛತ್ತೀಸ್‌ಗಢ, ಮಿಜೋರಾಂ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ಜತೆಗೆ ಡಿಸೆಂಬರ್ 3 ರಂದು ತೆಲಂಗಾಣದ ಫಲಿತಾಂಶಗಳನ್ನು ಪ್ರಕಟಿಸಲಾಗುವುದು.
 

click me!