ಹಿಂದೂ ಹಬ್ಬಗಳಿಗೆ ರಜೆ ಕಟ್, ಮುಸಲ್ಮಾನ ಹಬ್ಬಗಳಿಗೆ ಸಾರ್ವತ್ರಿಕ ರಜೆ ಹೆಚ್ಚಳ: ಬಿಜೆಪಿ ಆಕ್ರೋಶ

Published : Nov 28, 2023, 01:20 PM ISTUpdated : Nov 28, 2023, 01:21 PM IST
ಹಿಂದೂ ಹಬ್ಬಗಳಿಗೆ ರಜೆ ಕಟ್, ಮುಸಲ್ಮಾನ ಹಬ್ಬಗಳಿಗೆ ಸಾರ್ವತ್ರಿಕ ರಜೆ ಹೆಚ್ಚಳ: ಬಿಜೆಪಿ ಆಕ್ರೋಶ

ಸಾರಾಂಶ

ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವು ಹಿಂದೂ ಹಬ್ಬಗಳ ರಜಾದಿನಗಳನ್ನು ಆಯ್ದವಾಗಿ ಕಡಿತಗೊಳಿಸಲಾಗಿದೆ, ಮುಸ್ಲಿಂ ಹಬ್ಬಗಳಿಗೆ ರಜೆಯನ್ನು ಹೆಚ್ಚಿಸಲಾಗಿದೆ ಎಂದು ಸುಶೀಲ್‌ ಮೋದಿ ಹೇಳಿದ್ದಾರೆ. 

ಪಾಟ್ನಾ (ನವೆಂಬರ್ 28, 2023): ಬಿಹಾರ ಸರ್ಕಾರವು ಹಿಂದೂ ಹಬ್ಬಗಳನ್ನು ಆಚರಿಸಲು ಶಾಲೆಗಳಿಗೆ ರಜೆಯ ಸಂಖ್ಯೆಯನ್ನು ಕಡಿತಗೊಳಿಸಿದೆ ಎಂದು ಬಿಜೆಪಿ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದೆ. ಬಿಹಾರ ರಾಜ್ಯ ಶಿಕ್ಷಣ ಇಲಾಖೆಯು 2024 ರ ರಜೆಯ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದ್ದು, ಇದನ್ನು ಉಲ್ಲೇಖಿಸಿದ ಬಿಜೆಪಿ ನಾಯಕರು I.N.D.I.A ಒಕ್ಕೂಟದ ಮೈತ್ರಿಕೂಟದ ಹಾಗೂ ನಿತೀಶ್‌ ಕುಮಾರ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಶಿಕ್ಷಣ ಇಲಾಖೆಯು 2024 ರ ರಜೆಯ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಹರ್ತಾಲಿಕಾ ತೀಜ್ ಮತ್ತು ಜಿತಿಯಾ ರಜಾದಿನಗಳನ್ನು ತೆಗೆದುಹಾಕಿದರೆ, ಈದ್ ಅಲ್-ಫಿತರ್ ಮತ್ತು ಈದ್ ಅಲ್-ಅಧಾ (ಬಕ್ರೀದ್) ರ ರಜಾದಿನಗಳನ್ನು ಮೂರಕ್ಕೆ ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಬಿಜೆಪಿ ಸಂಸದ ಸುಶೀಲ್ ಮೋದಿ ಮಾತನಾಡಿದ್ದು, ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವು ಹಿಂದೂ ವಿರೋಧಿ ಮುಖವನ್ನು ತೋರಿಸಿದೆ ಮತ್ತು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ನಿರ್ಧಾರವನ್ನು ತೆಗೆದುಕೊಂಡಿದೆ. ಹಿಂದೂ ಹಬ್ಬಗಳ ರಜಾದಿನಗಳನ್ನು ಆಯ್ದವಾಗಿ ಕಡಿತಗೊಳಿಸಲಾಗಿದೆ, ಆದರೆ ಮುಸ್ಲಿಂ ಹಬ್ಬಗಳಿಗೆ ರಜೆಯನ್ನು ಹೆಚ್ಚಿಸಲಾಗಿದೆ ಎಂದು ಸಂಸದರ ಹೇಳಿಕೆ ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

ಇದನ್ನು ಓದಿ: ನಿತೀಶ್ ಕುಮಾರ್ ಸೆಕ್ಸ್‌ ಹೇಳಿಕೆಗೆ ಅಮೆರಿಕ ಗಾಯಕಿ ಮೇರಿ ಮಿಲ್ಬೆನ್ ವಾಗ್ದಾಳಿ: ಮಹಿಳೆ ಪರ ನಿಲುವಿಗೆ ಮೋದಿಗೆ ಶ್ಲಾಘನೆ

ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸಹ ಈ ಬಗ್ಗೆ ಟ್ವೀಟ್‌ ಮಾಡಿದ್ದು, ಮುಸ್ಲಿಮರ ಹಬ್ಬಗಳ ರಜೆಯನ್ನು ಹೆಚ್ಚಿಸಲಾಗಿದ್ದು, ಹಿಂದೂಗಳ ರಜಾದಿನಗಳನ್ನು ಕಡಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವು ಇಸ್ಲಾಮಿಕ್ ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ರಾಜ್ಯದಲ್ಲಿ ಕೆಲಸ ಮಾಡುತ್ತಿದೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ ಎಂದೂ ಹೇಳಿದ್ದಾರೆ. ಅಲ್ಲದೆ, ಸಿಎಂ ನಿತೀಶ್ ಕುಮಾರ್ ಈ ರಜೆಗಳನ್ನು ಮರುಸ್ಥಾಪಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ನಿತೀಶ್ ಕುಮಾರ್ ಅವರನ್ನು ತುಷ್ಟೀಕರಣದ ನಾಯಕ ಮತ್ತು ಬಿಹಾರದ ಕುರ್ಸಿ ಕುಮಾರ್ ಎಂದು ಬಣ್ಣಿಸಿದ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ, ಮತ್ತೊಮ್ಮೆ 'ಚಾಚಾ-ಭಟಿಜಾ' ಸರ್ಕಾರದ ಹಿಂದೂ ವಿರೋಧಿ ಮುಖವು ಮುನ್ನೆಲೆಗೆ ಬಂದಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: ನಿತೀಶ್‌ ಕುಮಾರ್‌ ಸೆಕ್ಸ್‌ ಹೇಳಿಕೆಗೆ ಮೋದಿ ತರಾಟೆ: ಇನ್ನೆಷ್ಟು ಕೆಳಗಿಳಿಯುತ್ತೀರಿ ಎಂದು ಕಿಡಿ

ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್ ಎಕ್ಸ್‌ (ಈ ಹಿಂದಿನ ಟ್ವಿಟ್ಟರ್‌) ಪೋಸ್ಟ್‌ನಲ್ಲಿ ಬರೆದುಕೊಂಡ ಹಿರಿಯ ಬಿಜೆಪಿ ನಾಯಕ, ಒಂದೆಡೆ, ಶಾಲೆಗಳಲ್ಲಿ ಮುಸ್ಲಿಂ ಹಬ್ಬಗಳಿಗೆ ರಜೆಯನ್ನು ವಿಸ್ತರಿಸಲಾಗುತ್ತಿದೆ. ಆದರೆ ಹಿಂದೂ ಹಬ್ಬಗಳಿಗೆ ರಜೆಯನ್ನು ರದ್ದುಗೊಳಿಸಲಾಗುತ್ತಿದೆ.. ವೋಟ್ ಬ್ಯಾಂಕ್‌ಗಾಗಿ ಸನಾತನವನ್ನು ದ್ವೇಷಿಸುವ ಸರ್ಕಾರಕ್ಕೆ ನಾಚಿಕೆಗೇಡು. ." ಎಂದೂ ಬರೆದುಕೊಂಡಿದ್ದಾರೆ.

ಟಿವಿ ಆ್ಯಂಕರ್‌ಗಳ ಬಹಿಷ್ಕಾರ ತಪ್ಪು: I.N.D.I.A ಒಕ್ಕೂಟದ ನಿರ್ಧಾರ ತಿರಸ್ಕರಿಸಿ ಅಚ್ಚರಿ ಮೂಡಿಸಿದ ನಿತೀಶ್ ಕುಮಾರ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ