ಜ್ಞಾನವಾಪಿ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅತ್ಯಂತ ಸ್ಪಷ್ಟವಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಜ್ಞಾನವಾಪಿಯನ್ನು ಮಸೀದಿ ಅಂತಾ ಕರೆದಾಗಲೇ ವಿವಾದ ಆಗೋದು. ಮೊದಲಿಗೆ ಅದನ್ನು ಮಸೀದಿ ಎಂದು ಕರೆಯೋದು ಬಿಡಿ ಎಂದು ಹೇಳಿದ್ದಾರೆ.
ನವದೆಹಲಿ (ಜು.31): ಬಹುಶಃ ಜ್ಞಾನವಾಪಿ ಮಸೀದಿ ಹಾಗೂ ಶೃಂಗಾರ್ ಗೌರಿ ಪ್ರಕರಣದಲ್ಲಿ ಭಾರತದ ಯಾವೊಬ್ಬ ರಾಜಕಾರಣಿ ಕೂಡ ಇಷ್ಟು ಸ್ಪಷ್ಟವಾಗಿ ತಮ್ಮ ಅಭಿಪ್ರಾಯ ಹೇಳಿರಲಿಕ್ಕಿಲ್ಲ. ವಿಶೇಷ ಸಂದರ್ಶನವೊಂದರಲ್ಲಿ ಜ್ಞಾನವಾಪಿ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ ಅತ್ಯಂತ ಸ್ಪಷ್ಟವಾಗಿ ಉತ್ತರ ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಇದನ್ನು ಮಸೀದಿ ಎಂದು ಕರೆದಾಗಲೇ ವಿವಾದ ಆಗೋದು. ಜ್ಞಾನವಾಪಿಯನ್ನು ಮಸೀದಿ ಎಂದು ಕರೆಯೋದು ಬಿಡಿ. ಹಾಗೇನಾದರೂ ಮಸೀದಿಯೇ ಆಗಿದ್ದಲ್ಲಿ ಅಲ್ಲಿ ತ್ರಿಶೂಲ ಯಾಕಿರುತ್ತದೆ ಅನ್ನೋದನ್ನು ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ. ದೇವರು ಯಾರಿಗೆಲ್ಲಾ ಕಣ್ಣು ಕೊಟ್ಟಿದ್ದಾರೂ ಅವರೆಲ್ಲರೂ ನೋಡುತ್ತಾರೆ. ಮಸೀದಿಯಲ್ಲಿ ತ್ರಿಶೂಲ ಯಾಕಿದೆ ಅನ್ನೋದನ್ನೂ ಪ್ರಶ್ನೆ ಮಾಡ್ತಾರೆ? ನಾವೇನು ಅಲ್ಲಿ ತ್ರಿಶೂಲ ಇಟ್ಟಿದ್ದೇವೆಯೇ. ಜ್ಯೋತಿರ್ಲಿಂಗಗಳು ನಮ್ಮ ದೇವರುಗಳು. ಹಿಂದೆ ತಪ್ಪಾಗಿದೆ. ಇತಿಹಾಸದ ಹಿಂದೆ ಆಗಿರುವ ತಪ್ಪುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸ್ವತಃ ಮುಸ್ಲಿಂ ಸಮುದಾಯದಿಂದಲೇ ಇದರ ಪ್ರಸ್ತಾಪ ಬರಬೇಕು. ಈ ಪ್ರಕರಣದ ಇತ್ಯರ್ಥ ಮಾಡುವಲ್ಲಿ ಗಮನವಿಸಬೇಕು ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
Loud & Clear. 🔥 pic.twitter.com/pwZuoZJJyt
— Exclusive Minds (@Exclusive_Minds)ಕಳೆದ ಆರು ವರ್ಷಗಳಿಂದ ಉತ್ತರ ಪ್ರದೇಶದ ಆಡಳಿತವನ್ನು ನಿಭಾಯಿಸುತ್ತಿದ್ದೇನೆ ಎಂದು ಸಿಎಂ ಯೋಗಿ ಹೇಳಿದ್ದಾರೆ. ಆದರೆ ಕಳೆದ 6 ವರ್ಷಗಳಿಂದ ಯಾವುದೇ ಗಲಭೆ ನಡೆದಿಲ್ಲ. ಯುಪಿ ಮತ್ತು ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆಗಳು ನಡೆದಿವೆ. ಎಷಷ್ಟು ಭಿನ್ನವಾಗಿ ಚುನಾವಣೆ ನಡೆಯಿತು ಅನ್ನೋದನ್ನು ಎಲ್ಲರೂ ನೋಡಿದ್ದಾರೆ. ಅಲ್ಲಿ ಅಧಿಕಾರದಲ್ಲಿರುವ ಕೆಲವರು ಎಲ್ಲರನ್ನು ಬಲವಂತವಾಗಿ ಬಂಧಿಸಲು ಬಯಸುತ್ತಾರೆ, ಅಲ್ಲಿ ವಿರೋಧ ಪಕ್ಷದ ಜನರನ್ನು ಹೇಗೆ ಕೊಲ್ಲಲಾಯಿತು. ಈ ಬೇಧಭಾವ ಯಾವುದಕ್ಕಾಗಿ ಎಂದು ಪ್ರಶ್ನೆ ಮಾಡಿದ್ದಾರೆ.
ಜ್ಞಾನವಾಪಿ ಮಸೀದಿ ವಿವಾದ; ಮಣ್ಣಲ್ಲಿ ಹೂತು ಹೋಗಿದೆಯಾ ಶಿವನ ದೇವಾಲಯ..?
ವಿರೋಧ ಪಕ್ಷಗಳ ಹೊಸ ಹೆಸರಾದ ಐಎನ್‌ಡಿಐಎ ಬಗ್ಗೆ ಸಿಎಂ ಯೋಗಿ ಕೂಡ ಪ್ರತಿಕ್ರಿಯಿಸಿದ್ದು, ಐಎನ್‌ಡಿಐಎ ಬಗ್ಗೆ ಮಾತನಾಡಬಾರದು ಎಂದು ಹೇಳಿದ್ದಾರೆ. ಬಟ್ಟೆ ಬದಲಾಯಿಸುವುದರಿಂದ ಹಿಂದಿನ ಕರ್ಮಗಳಿಂದ ಮುಕ್ತಿ ಸಿಗುವುದಿಲ್ಲ ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.
ಜ್ಞಾನವಾಪಿ ಸಂಕೀರ್ಣದಲ್ಲಿ ಸರ್ವೆಗೆ ಅವಕಾಶ ನೀಡಿದ ವಾರಣಾಸಿ ಕೋರ್ಟ್