ಪೆಟ್ರೋಲ್‌ ಬೆಲೆ 25 ರಿಂದ 30 ರೂನಷ್ಟು ಇಳಿಸಿ: ಕಾಂಗ್ರೆಸ್‌ ಆಗ್ರಹ

Published : Jul 31, 2023, 01:03 PM ISTUpdated : Jul 31, 2023, 01:11 PM IST
ಪೆಟ್ರೋಲ್‌ ಬೆಲೆ 25 ರಿಂದ 30 ರೂನಷ್ಟು ಇಳಿಸಿ: ಕಾಂಗ್ರೆಸ್‌ ಆಗ್ರಹ

ಸಾರಾಂಶ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಸಾಕಷ್ಟು ಇಳಿದಿದ್ದರೂ ಕೇಂದ್ರ ಸರ್ಕಾರ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲೆ ದುಬಾರಿ ತೆರಿಗೆ ವಿಧಿಸಿ ನಿರ್ದಯವಾಗಿ ಲಾಭ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಪಕ್ಷ, ಪ್ರತಿ ಲೀಟರ್‌ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು 25-30 ರು.ನಷ್ಟುಇಳಿಸಬೇಕು ಎಂದು ಆಗ್ರಹಿಸಿದೆ.

ನವದೆಹಲಿ:  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಸಾಕಷ್ಟು ಇಳಿದಿದ್ದರೂ ಕೇಂದ್ರ ಸರ್ಕಾರ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲೆ ದುಬಾರಿ ತೆರಿಗೆ ವಿಧಿಸಿ ನಿರ್ದಯವಾಗಿ ಲಾಭ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಪಕ್ಷ, ಪ್ರತಿ ಲೀಟರ್‌ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು 25-30 ರು.ನಷ್ಟುಇಳಿಸಬೇಕು ಎಂದು ಆಗ್ರಹಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ (Jairam Ramesh) , ‘ನರೇಂದ್ರ ಮೋದಿ ಸರ್ಕಾರ ಪೆಟ್ರೋಲ್‌ ಹಾಗೂ ಡೀಸೆಲ್‌ ಮಾರಾಟದಿಂದ ಮಾಡಿಕೊಂಡ ಲಾಭವನ್ನು ಜನರಿಗೆ ವರ್ಗಾಯಿಸುವ ಮೂಲಕ ಅವರ ಬೆನ್ನುಮೂಳೆ ಮುರಿಯುತ್ತಿರುವ ಹಣದುಬ್ಬರದಿಂದ ರಕ್ಷಣೆ ನೀಡಬೇಕು. ತೈಲ ಬೆಲೆಯನ್ನು ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿದ್ದ ದರಕ್ಕೆ ಸರಿಸಮವಾಗಿ ಇಳಿಕೆ ಮಾಡಬೇಕು. ಜನರಿಗೆ ಬೆಲೆಯೇರಿಕೆಯಿಂದ ರಕ್ಷಣೆ ನೀಡಬೇಕೆಂಬ ಉದ್ದೇಶ ಸರ್ಕಾರಕ್ಕೆ ನಿಜವಾಗಿಯೂ ಇದ್ದರೆ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು 25-30 ರು. ಇಳಿಕೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

ಇನ್ಮುಂದೆ ಹೋಟೆಲ್ ಪ್ರಿಯರ ಜೇಬಿಗೆ ಕತ್ತರಿ , ಕಾಫಿ-ತಿಂಡಿ ದರ ನಾಳೆಯಿಂದಲೇ ಏರಿಕೆ, ಹೊಸ ದರ ಇಲ್ಲಿದೆ

ಜನರು ಹಣದುಬ್ಬರ (Inflation) ಹಾಗೂ ನಿರುದ್ಯೋಗದ ಕಾರಣ ಆರ್ಥಿಕ ಸಂಕಷ್ಟದಿಂದ ನಲುಗುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ‘ಅವರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಲೂಟಿ’ ಮಾಡುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿದರೂ ಅದರ ಲಾಭವನ್ನು ದೇಶದ ಜನರಿಗೆ ನೀಡುವುದನ್ನು ಬಿಟ್ಟು ಮೋದಿ ಸರ್ಕಾರ ಕಡಿಮೆ ದರದ ತೈಲವನ್ನು ದುಬಾರಿ ದರಕ್ಕೆ ಮಾರಾಟ ಮಾಡಿ ನಿರ್ದಯವಾಗಿ ಲಾಭ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಕಳೆದ ಒಂದು ವರ್ಷದಲ್ಲಿ ಕಚ್ಚಾತೈಲ ಬೆಲೆ ಶೇ.35ರಷ್ಟುಇಳಿಕೆಯಾಗಿದೆ. ಆದರೆ ಪೆಟ್ರೋಲ್‌, ಡೀಸೆಲ್‌ ಬೆಲೆ ಮಾತ್ರ ಇಳಿಕೆಯಾಗಿಲ್ಲ. ಸರ್ಕಾರ ಹಾಗೂ ಖಾಸಗಿ ತೈಲ ಕಂಪನಿಗಳು ಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಮೇಲೆ ಕನಿಷ್ಠ 10 ರು. ಲಾಭ ಮಾಡಿಕೊಳ್ಳುತ್ತಿವೆ. ಸರ್ಕಾರ ತಾನು ಲಾಭ ಮಾಡಿಕೊಳ್ಳುವುದಷ್ಟೇ ಅಲ್ಲ, ತನ್ನ ಬಂಡವಾಳಶಾಹಿ ಸ್ನೇಹಿತರಿಗೂ ಲಾಭ ಮಾಡಿಕೊಡುತ್ತಿದೆ ಎಂದು ದೂಷಿಸಿದ್ದಾರೆ

ಇನ್ಮುಂದೆ ಪಿಜಿ ಹಾಸ್ಟೆಲ್‌ಗಳಲ್ಲಿ ಉಳಿಯುವವರಿಗೂ ಶೇ. 12 ಜಿಎಸ್‌ಟಿ ಹೊರೆ: ವಿದ್ಯಾರ್ಥಿಗಳಿಗೆ ಸಂಕಷ್ಟ

 ಐಟಿ ರಿಟರ್ನ್ಸ್‌ ಸಲ್ಲಿಕೆಗೆ ಇಂದು ಕೊನೆಯ ದಿನ

ನವದೆಹಲಿ: 2023-24ನೇ ಸಾಲಿನ ಆದಾಯ ತೆರಿಗೆ  ಐಟಿ ರಿಟರ್ನ್ಸ್‌ ಫೈಲ್‌ ಮಾಡಲು ಸೋಮವಾರ ಕೊನೆಯ ದಿನವಾಗಿದೆ. ಜು.30ರ ಮಧ್ಯಾಹ್ನ 1 ಗಂಟೆಯವರೆಗೆ ಸುಮಾರು 6 ಕೋಟಿ ರಿಟರ್ನ್‌ಗಳು (5.83 ಕೋಟಿ) ಫೈಲ್‌ ಆಗಿವೆ. ಭಾನುವಾರ ಮಧ್ಯಾಹ್ನ 12ರಿಂದ 1 ಗಂಟೆವರೆಗೆ ಕೇವಲ 1 ತಾಸಿನ ಅವಧಿಯಲ್ಲಿ 3.04 ಲಕ್ಷ ರಿಟರ್ನ್‌ಗಳು ಫೈಲ್‌ ಆಗಿವೆ. ರಿಟರ್ನ್‌ ಸಲ್ಲಿಕೆಗೆ ಜು.31 ಕೊನೆಯ ದಿನ’ ಎಂದು ಆದಾಯ ತೆರಿಗೆ ಇಲಾಖೆ ಭಾನುವಾರ ಟ್ವೀಟ್‌ ಮಾಡಿದೆ. ಈ ಬಾರಿ ಯಾವುದೇ ಕಾರಣಕ್ಕೂ ಈ ದಿನಾಂಕವನ್ನು ಮುಂದೂಡುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ಹೇಳಿತ್ತು. ಹೀಗಾಗಿ ಫೈಲ್‌ ಮಾಡುವುದು ತಡ ಆದರೆ 5 ಸಾವಿರ ರು. ದಂಡ ಪಾವತಿ ಅನಿವಾರ್ಯವಾಗಲಿದೆ. ಆದಾಯ 5 ಲಕ್ಷ ರು. ಮೀರದಿದ್ದರೆ ದಂಡದ ಪ್ರಮಾಣ 1 ಸಾವಿರ ರು.ನಷ್ಟಿದೆ. ದಂಡಶುಲ್ಕದೊಂದಿಗೆ ಪಾವತಿಗೆ ಡಿ.31 ಕೊನೆಯ ದಿನ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ
ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್