
ಪಟನಾ: ಪ್ರಧಾನಿ ನರೇಂದ್ರ ಮೋದಿ ಅವರಿಗೆ 2024ರ ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿ ಇದೆ. ಹೀಗಾಗಿ ಅವರು ಚುನಾವಣೆ ನಂತರ ವಿದೇಶಕ್ಕೆ ಹೋಗಿ ನೆಲೆಸುವ ಸಾಧ್ಯತೆ ಇದೆ ಎಂದು ಆರ್‌ಜೆಡಿ ನೇತಾರ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ. ಭಾನುವಾರ ಮಾತನಾಡಿದ ಲಾಲು, ‘ವಿಪಕ್ಷಗಳ ಇಂಡಿಯಾ ಕೂಟಕ್ಕೆ ಮೋದಿ ‘ಕ್ವಿಟ್ ಇಂಡಿಯಾ’ ಎಂದು ಛೇಡಿಸಿದ್ದಾರೆ. ಆದರೆ ನಿಜವಾಗಿಯೂ ‘ಕ್ವಿಟ್’ ಬಗ್ಗೆ ಯೋಚನೆ ಮಾಡುತ್ತಿರುವವರು ಮೋದಿ. ಅದಕ್ಕೆಂದೇ ಅವರು ಅನೇಕ ವಿದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಎಲ್ಲಿ ಒಳ್ಳೇ ಪಿಜ್ಜಾ, ಮೋಮೋ ಸಿಗುತ್ತೆ ಎಂದು ಹುಡುಕುತ್ತಿದ್ದಾರೆ’ ಎಂದು ಚಟಾಕಿ ಹಾರಿಸಿದರು.
ಐಐಎಂ ತಿದ್ದುಪಡಿ ಮಸೂದೆ ಐಐಎಂಗಳ ಸ್ವಾಯತ್ತೆ ಕಸಿದುಕೊಳ್ಳಲಿದೆ: ಕಾಂಗ್ರೆಸ್
ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಿದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ತಿದ್ದುಪಡಿ ಮಸೂದೆಯು, ಐಐಎಂಗಳ ಸ್ವಾಯತ್ತೆಯನ್ನು ಕಸಿದುಕೊಳ್ಳಲಿದೆ ಎಂಬ ಕಳವಳಕ್ಕೆ ಕಾರಣವಾಗಿದೆ. ಜೊತೆಗೆ ಇದು ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ಕೇಂದ್ರ ಸರ್ಕಾರ ಮಾಡುತ್ತಿರುವ ಯತ್ನ ಎಂದು ಕಾಂಗ್ರೆಸ್ ಆರೋಪಿಸಿದೆ. ಐಐಎಂಗಳಿಗೆ ರಾಷ್ಟ್ರಪತಿಗಳನ್ನು ಸಂದರ್ಶಕರಾಗಿ ನಿಯುಕ್ತಿಗೊಳಿಸುವ, ಅವರಿಗೆ ಐಐಎಂಗಳ ಕಾರ್ಯನಿರ್ವಹಣೆ ಬಗ್ಗೆ ಪರಿಶೋಧನೆಗೆ ಆದೇಶಿಸುವ, ನಿರ್ದೇಶಕರ ನೇಮಕ ಮತ್ತು ಪದಚ್ಯುತಿಗೆ ಅವಕಾಶ ಕಲ್ಪಿಸುವ ಸಂಬಂಧ ಕೇಂದ್ರ ಸರ್ಕಾರ ಇತ್ತೀಚೆಗೆ ಲೋಕಸಭೆಯಲ್ಲಿ ಮಸೂದೆ ಮಂಡಿಸಿದೆ. ಆದರೆ ಇದು ಐಐಎಂಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಮತ್ತು ಸೈದ್ದಾಂತಿಕ ಪರಿಶುದ್ಧತೆ ಕಾಪಾಡಲು ಪ್ರಧಾನಿ ಕಾರ್ಯಾಲಯವು ನಡೆಸಿದ ಯತ್ನ ಎಂದು ಕಾಂಗ್ರೆಸ್ ಟೀಕಿಸಿದೆ.
ಮೋದಿ To ಪ್ರಿಯಾಂಕಾ ಗಾಂಧಿ..ಬಾರ್ಬಿ ಟ್ರೆಂಡ್‌ನಲ್ಲಿ ಭಾರತದ ರಾಜಕಾರಣಿಗಳು
ಯಾವುದೇ ಲೋಪದೋಷಗಳಿಗೆ ಸಂಸ್ಥೆಯನ್ನು ಹೊಣೆ ಮಾಡುವ ಬದಲು, ಈ ತಿದ್ದುಪಡಿ ಮಸೂದೆ ಮೂಲಕ ಸರ್ಕಾರವು ಅವುಗಳನ್ನು ತನ್ನ ಹಿಡಿತಕ್ಕೆ ತರುವ ಯತ್ನ ಮಾಡುತ್ತಿದೆ. 2017ರಲ್ಲಿ ಸಂಪೂರ್ಣ ಬಹುಮತದೊಂದಿಗೆ ಐಐಎಂಗಳಿಗೆ ಸ್ವಾಯತ್ತೆ ನೀಡುವ ಮಸೂದೆ ಅಂಗೀಕರಿಸಲಾಗಿತ್ತು. ಆದರೆ ಇದೀಗ ಮಸೂದೆ ತಿದ್ದುಪಡಿ ಮೂಲಕ ಸ್ವಾಯತ್ತೆಯನ್ನು ತಾನು ಒಪ್ಪಲ್ಲ ಎಂಬುದನ್ನು ಮೋದಿ ಸರ್ಕಾರ ಸಾಬೀತುಪಡಿಸಲು ಮುಂದಾಗಿದೆ. ಐಐಎಂಗಳ ಗುಣಮಟ್ಟ, ಚಿಂತನಾ ಸ್ವಾತಂತ್ರದ ವಿಷಯಗಳನ್ನು ಬದಿಗೊತ್ತಿ ತನ್ನ ಸೈದ್ದಾಂತಿಕ ಶುದ್ಧತೆಯನ್ನು ಹೇರಲು ಹೊರಟಿದೆ ಎಂದು ಕಾಂಗ್ರೆಸ್ ವಕ್ತಾರ ಜೈರಾಂ ರಮೇಶ್ ಟೀಕಿಸಿದ್ದಾರೆ.
ಮದುವೆ ಆಗದೇ ಯಾರೂ ಪ್ರಧಾನಿಯಾಗಿಲ್ಲ.. ರಾಹುಲ್ ಗಾಂಧಿಗೆ ಸಲಹೆ ನೀಡಿದ ಲಾಲು ಪ್ರಸಾದ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ