ಹೊಸ ಮದರಸಾಗಳಿಗೆ ಅನುದಾನ ನಿಲ್ಲಿಸುವ ಪ್ರಸ್ತಾಪಕ್ಕೆ ಯೋಗಿ ಕ್ಯಾಬಿನೆಟ್ ಅಂಗೀಕಾರ!

By Santosh NaikFirst Published May 18, 2022, 11:52 AM IST
Highlights

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸಂಪುಟವು ರಾಜ್ಯದ 558 ಮದರಸಾಗಳಿಗೆ ಅನುದಾನವನ್ನು ನಿಲ್ಲಿಸುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ.
 

ಲಕ್ನೋ (ಮೇ. 18): ಉತ್ತರ ಪ್ರದೇಶದಲ್ಲಿ ( Uttar Pradesh ) ಯೋಗಿ ಆದಿತ್ಯನಾಥ್ ( Yogi  Adityanath ) ನೇತೃತ್ವದ ಸರ್ಕಾರವು ಮಂಗಳವಾರ, ತನ್ನ ಅನುದಾನ ಪಟ್ಟಿಯಿಂದ ( Grant List ) ಹೊಸ ಮದರಸಾಗಳನ್ನು ( New madrassas ) ಹೊರಗಿಡುವ ಪ್ರಸ್ತಾಪವನ್ನು ಅಂಗೀಕರಿಸಿದೆ.

ಅಖಿಲೇಶ್ ಯಾದವ್ ಸರ್ಕಾರದ ( Akhilesh Yadav government )  ನೀತಿಗೆ ಅಂತ್ಯ ಹಾಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಂಪುಟ ಈಗ ಹೊಸ ಮದರಸಾಗಳಿಗೆ ಯಾವುದೇ ಅನುದಾನವನ್ನು ಪಡೆಯುವುದಿಲ್ಲ ಎಂದು ನಿರ್ಧರಿಸಿದೆ. ತನ್ನ ಕೊನೆಯ ಬಜೆಟ್‌ನಲ್ಲಿ, ಯುಪಿ ಸರ್ಕಾರವು ಮದರಸಾ ಆಧುನೀಕರಣ ಯೋಜನೆಯಡಿಯಲ್ಲಿ (madrassa modernisation scheme ) 479 ಕೋಟಿ ರೂ.ಗಳನ್ನು ವಿನಿಯೋಗಿಸಿತ್ತು, ರಾಜ್ಯದಲ್ಲಿ ಒಟ್ಟು 16,000 ನೋಂದಾಯಿತ ಮದರಸಾಗಳ 558 ಸಂಸ್ಥೆಗಳಿಗೆ ಹಣವನ್ನು ಮಂಜೂರು ಮಾಡಿದೆ.

ರಾಜ್ಯದ ಮದರಸಾಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತರಗತಿಗಳನ್ನು ಪ್ರಾರಂಭಿಸುವ ಮೊದಲು ರಾಷ್ಟ್ರಗೀತೆಯನ್ನು ಹಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ ಒಂದು ವಾರದ ಒಳಗಾಗಿ ಉತ್ತರ ಪ್ರದೇಶ ಸರ್ಕಾರವು,  ಹೊಸ ಮದರಸಾಗಳಿಗೆ ಧನಸಹಾಯವನ್ನು ನಿಲ್ಲಿಸುವ ನಿರ್ಧಾರವನ್ನು ಪ್ರಕಟಿಸಿದೆ. ಈ ಆದೇಶವನ್ನು ಮೇ 12 ರಂದು ಜಾರಿಗೊಳಿಸಲಾಗಿದೆ.

ಉತ್ತರ ಪ್ರದೇಶದ ಅಲ್ಪಸಂಖ್ಯಾತ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ ( UP Minority Minister Danish Azad Ansari ) ಅವರು ಈ ಆದೇಶ ಹೊರಡಿಸಿದ್ದಾರೆ. ಮಾರ್ಚ್ 24 ರಂದು ನಡೆದ ಯುಪಿ ಮದ್ರಸಾ ಶಿಕ್ಷಣ ಮಂಡಳಿಯ ( UP Madrasa Education Board ) ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮಂಡಿಸಿದ ಪ್ರಸ್ತಾವನೆಯನ್ನು ಧ್ವನಿ ಮತದ (voice vote)ಮೂಲಕ ಅಂಗೀಕರಿಸಲಾಯಿತು. ಈ ನೀತಿಯನ್ನು ಆಧರಿಸಿ ಮದರಸಾ ಆಡಳಿತ ಮಂಡಳಿ ( madrasa management ) ಅನುದಾನ ಬಿಡುಗಡೆಗಾಗಿ ನ್ಯಾಯಾಲಯದ ಮೊರೆ ಹೋಗುತ್ತಿತ್ತು. ಹಿಂದಿನ ಅಖಿಲೇಶ್ ಯಾದವ್ ನೇತೃತ್ವದ ಎಸ್‌ಪಿ ಸರ್ಕಾರವು 2003 ರವರೆಗೆ ಮಾನ್ಯತೆ ಪಡೆದಿದ್ದ ಮದರಸಾಗಳಿಗೆ ಅನುದಾನ ನೀಡಲು ಈ ನೀತಿಯನ್ನು ಜಾರಿಗೆ ತಂದಿತ್ತು.

National Anthem ಯುಪಿ ಬಳಿಕ ಮಧ್ಯ ಪ್ರದೇಶ ಮದರಸಾದಲ್ಲೂ ರಾಷ್ಟ್ರಗೀತ ಕಡ್ಡಾಯಕ್ಕೆ ಚಿಂತನೆ!

ನೀತಿಯ ಅಡಿಯಲ್ಲಿ, ಸುಮಾರು 100 ಮದರಸಾಗಳಿಗೆ ಅಖಿಲೇಶ್ ಸರ್ಕಾರವು ಅನುದಾನವನ್ನು ನೀಡಿತು. ಆದರೆ, ಯೋಗಿ ಸರಕಾರ 1.0ರಲ್ಲಿ ಒಂದೇ ಒಂದು ಮದರಸಾಕ್ಕೂ ಅನುದಾನ ನೀಡಿರಲಿಲ್ಲ. ಉತ್ತರ ಪ್ರದೇಶ ಸರ್ಕಾರವು ರಾಜ್ಯದಾದ್ಯಂತ ಮದರಸಾಗಳ ಕಾರ್ಯನಿರ್ವಹಣೆಯ ಬಗ್ಗೆ ತನಿಖೆಗೆ ಆದೇಶಿಸಿದ ಕೆಲವು ದಿನಗಳ ನಂತರ ಇದೆಲ್ಲವೂ ನಡೆದಿತ್ತು. ರಾಜ್ಯಾದ್ಯಂತ ಇರುವ ಮದರಸಾಗಳ ಕಟ್ಟಡಗಳು, ಜಮೀನು, ಬಾಡಿಗೆ ಪತ್ರ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ದೈಹಿಕ ಪರೀಕ್ಷೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು.

ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯ, ಯೋಗಿ ನಾಡಿನಲ್ಲಿ ಹೊಸ ನಿಯಮ!

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನಕಲಿ ಮದರಸಾಗಳ ಬಗ್ಗೆ ಸರ್ಕಾರಕ್ಕೆ ದೂರುಗಳು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಸಮಿತಿಯನ್ನು ಸಹ ಘೋಷಿಸಲಾಗಿತ್ತು.  ಉತ್ತರ ಪ್ರದೇಶದಲ್ಲಿ 7,000ಕ್ಕೂ ಹೆಚ್ಚು ಮದರಸಾಗಳಿವೆ. ಇದರ ಪ್ರಕಾರ ಬ್ಲಾಕ್ ಶಿಕ್ಷಣಾಧಿಕಾರಿಗಳು ಹಾಗೂ ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ತಿಳಿಸಲಾಗಿದೆ. ಇತ್ತೀಚೆಗಷ್ಟೇ ಯೋಗಿ ಸರ್ಕಾರ ರಾಜ್ಯದ ಮದರಸಾಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿತ್ತು. ಈ ಆದೇಶವು ಎಲ್ಲಾ ಮಾನ್ಯತೆ ಪಡೆದ, ಅನುದಾನಿತ ಮತ್ತು ಅನುದಾನ ರಹಿತ ಮದರಸಾಗಳಿಗೆ ಅನ್ವಯಿಸುತ್ತದೆ ಎಂದು ಮದರಸಾ ಶಿಕ್ಷಣ ಮಂಡಳಿ ಆದೇಶದಲ್ಲಿ ತಿಳಿಸಿದೆ.

Latest Videos

click me!