ರೈತರದ್ದು ಅನಗತ್ಯ ಪ್ರತಿಭಟನೆ ಎಂದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್!

By Santosh Naik  |  First Published May 18, 2022, 10:56 AM IST

ಗೋಧಿ ಬೆಳೆಯ ಬೋನಸ್‌ಗಾಗಿ ಸರ್ಕಾರವನ್ನು ಒತ್ತಾಯಿಸಲು ಮತ್ತು ಜೂನ್ 10 ರಿಂದ ಭತ್ತ ಬಿತ್ತನೆಗೆ ಅವಕಾಶ ನೀಡುವಂತೆ ಪಂಜಾಬ್ ರೈತರು ಮಂಗಳವಾರ ರಾಜ್ಯ ರಾಜಧಾನಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಪ್ರತಿಭಟನಾನಿರತ ರೈತರನ್ನು ಚಂಡೀಗಢ-ಮೊಹಾಲಿ ಗಡಿಯ ಬಳಿ ತಡೆ ಹಿಡಿಯಲಾಯಿತು.


ಚಂಡೀಗಢ (ಮೇ.18): ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Punjab Chief Minister Bhagwant Mann) ಮಂಗಳವಾರ ರಾಜ್ಯದ ರೈತರ ಆಂದೋಲನವನ್ನು (agitation by state farmers) ಅನಗತ್ಯ ಮತ್ತು ಅನಪೇಕ್ಷಿತ ( unwarranted and undesirable ) ಎಂದು ಕರೆದಿದ್ದಾರೆ ಆದರೆ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ. ಪಂಜಾಬ್‌ನಲ್ಲಿ ಕುಸಿಯುತ್ತಿರುವ ಅಂತರ್ಜಲವನ್ನು ಪರಿಶೀಲಿಸಲು (depleting groundwater ) ರಾಜ್ಯ ಸರ್ಕಾರದ ಪ್ರಯತ್ನಗಳಿಗೆ ಕೈಜೋಡಿಸುವಂತೆ ಅವರು ರೈತ ಸಂಘಗಳನ್ನು ಕೇಳಿದರು.

ಗೋಧಿ ಬೆಳೆಯ ಬೋನಸ್‌ಗಾಗಿ ಸರ್ಕಾರವನ್ನು ಒತ್ತಾಯಿಸಲು ಮತ್ತು ಜೂನ್ 10 ರಿಂದ ಭತ್ತ ಬಿತ್ತನೆಗೆ ಅವಕಾಶ ನೀಡುವಂತೆ ಪಂಜಾಬ್ ರೈತರು ಮಂಗಳವಾರ ರಾಜ್ಯ ರಾಜಧಾನಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಪ್ರತಿಭಟನಾನಿರತ ರೈತರನ್ನು ಚಂಡೀಗಢ-ಮೊಹಾಲಿ ಗಡಿಯ (Chandigarh-mohali Border) ಬಳಿ ನಿಲ್ಲಿಸಲಾಯಿತು.

ಜೂನ್ 18ರವರೆಗೆ ರೈತರು ಭತ್ತ ನಾಟಿಗೆ (paddy sowing ) ಮುಂದಾಗಬಾರದು ಎಂದು ಸರ್ಕಾರ ತಿಳಿಸಿದೆ. ರೈತರೊಂದಿಗೆ ಮಾತುಕತೆಗೆ ನಾವು ಮುಕ್ತವಾಗಿದ್ದೇವೆ. ಅಂತರ್ಜಲ ಮತ್ತಷ್ಟು ಕುಸಿತವನ್ನು ತಡೆಯುವ ಅವರ ಸಂಕಲ್ಪವನ್ನು ಪೊಳ್ಳು ಘೋಷಣೆಗಳು ಮುರಿಯಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದರು.

ಧರಣಿ ನಡೆಸಲು ಅವರಿಗೆ ಪ್ರಜಾಪ್ರಭುತ್ವದ ಹಕ್ಕಿದೆ ಆದರೆ ಅವರು ತಮ್ಮ ಸಮಸ್ಯೆಗಳನ್ನು ಹೇಳಬೇಕು ಎಂದು ಮಾನ್ ದೆಹಲಿಯಿಂದ ( New Delhi) ಹಿಂದಿರುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.ಸರ್ಕಾರ ಮಂಗಳವಾರ ರೈತರೊಂದಿಗೆ ಮಾತುಕತೆ ನಡೆಸಿದೆ ಎಂದು  ಮಾನ್ ಹೇಳಿದ್ದಾರೆ.

ರೈತರು ತಮ್ಮನ್ನು ಭೇಟಿಯಾಗುವ ವಿಚಾರದಲ್ಲಿ ಅಚಲವಾಗಿದ್ದಾರೆ ಎನ್ನುವ ಮಾತಿಗೆ ಉತ್ತರಿಸಿದ ಮಾನ್, "ಅವರು ಯಾವಾಗ ಬೇಕಾದರೂ ಬರಬಹುದು. ನಾನು ಅವರಿಗೆ ಮೊದಲೇ ಕರೆ ಮಾಡಿದ್ದೇನೆ." ಭತ್ತ ಬಿತ್ತನೆಯ ಅಸ್ಥಿರ ಕಾರ್ಯಕ್ರಮವು ರೈತರ ಹಿತಾಸಕ್ತಿಗಳಿಗೆ ಹಾನಿಯಾಗುವುದಿಲ್ಲ ಆದರೆ ಇದು ಅಂತರ್ಜಲವನ್ನು ಉಳಿಸಲು ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.

"ನಾನು ರೈತನ ಮಗ. ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎನ್ನುವುದು ನನಗೆ ಗೊತ್ತು. ಜೂನ್ 18 ಮತ್ತು 10ಕ್ಕೆ ಏನು ವ್ಯತ್ಯಾಸವಾಗಲಿದೆ' ಎಂದು ಪ್ರಶ್ನಿಸಿದರು. ಒಂದು ವರ್ಷದವರೆಗೆ ಬೆಂಬಲ ನೀಡುವಂತೆ ರೈತರಿಗೆ ಮನವಿ ಮಾಡಿದ ಸಿಎಂ, ಈ ಅವಧಿಯಲ್ಲಿ ರೈತರಿಗೆ ಏನಾದರೂ ನಷ್ಟವಾದರೆ ರಾಜ್ಯ ಸರ್ಕಾರ ಸಂಪೂರ್ಣ ಪರಿಹಾರ ನೀಡಲಿದೆ ಎಂದರು.

"ದಯವಿಟ್ಟು ಕನಿಷ್ಠ ಒಂದು ವರ್ಷ ನನ್ನನ್ನು ಬೆಂಬಲಿಸಿ, ನೀವು ನಷ್ಟವನ್ನು ಅನುಭವಿಸಿದರೆ, ನಿಮ್ಮ ಎಲ್ಲಾ ನಷ್ಟವನ್ನು ನಾನು ಸರಿದೂಗಿಸುತ್ತೇನೆ" ಎಂದು ಅವರು ಪುನರುಚ್ಚರಿಸಿದ್ದಾರೆ. ರಾಜ್ಯದಲ್ಲಿ ನೀರು ಉಳಿಸುವ ಹಾಗೂ ಪರಿಸರ ಮಾಲಿನ್ಯ ತಡೆಗೆ ಚಿಂತನೆ ನಡೆಸಿದ್ದು ತಪ್ಪೇ ಎಂದು ಧರಣಿ ನಿರತ ರೈತರನ್ನು ಪ್ರಶ್ನಿಸಿದ್ದಾರೆ.  "ಭೂಮಿಗಾಗಿ ನಾನು ಏನು ತಪ್ಪು ಮಾಡುತ್ತಿದ್ದೇನೆ ಎಂದು ಹೇಳುವ ಗೌರವಾನ್ವಿತ ಸಂಸ್ಥೆಗಳನ್ನು ನಾನು ಕೇಳಲು ಬಯಸುತ್ತೇನೆ" ಎಂದು ಅವರು ಹೇಳಿದರು.

Bhagwant Mann ಪಂಜಾಬ್ ನಲ್ಲಿ ಪ್ರತಿ ಮನೆಗೆ 300 ಯುನಿಟ್ ಗಳ ಉಚಿತ್ ವಿದ್ಯುತ್!

ತಮ್ಮ ಬೇಡಿಕೆಗಳಿಗಾಗಿ ಕೇಂದ್ರಾಡಳಿತ ಪ್ರದೇಶದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಹಲವು ರೈತ ಸಂಘಟನೆಗಳು ಕರೆ ನೀಡಿರುವ ಹಿನ್ನೆಲೆಯಲ್ಲಿ ಚಂಡೀಗಢ-ಮೊಹಾಲಿ ಗಡಿಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮೊಹಾಲಿ ಪೊಲೀಸರು ಬ್ಯಾರಿಕೇಡ್‌ಗಳು ಮತ್ತು ಟಿಪ್ಪರ್‌ಗಳನ್ನು ಹಾಕಿ ಭದ್ರತೆ ನೀಡಿದ್ದು, ರೈತರು ಚಂಡೀಗಢಕ್ಕೆ ಪ್ರವೇಶಿಸದಂತೆ ಜಲಫಿರಂಗಿಗಳನ್ನು ಪ್ರಯೋಗ ಮಾಡಿದ್ದಾರೆ. ಚಂಡೀಗಢ ಪೊಲೀಸರು ಕೂಡ ಇದೇ ರೀತಿಯ ಭದ್ರತಾ ವ್ಯವಸ್ಥೆ ಮಾಡಿದ್ದರು.

ಮಾನ್‌ ಗೈರಲ್ಲಿ ಪಂಜಾಬ್‌ ಅಧಿಕಾರಿಗಳ ಜತೆ ಕೇಜ್ರಿ ಸಭೆ: ವಿವಾದ

“ಇದು ಪಂಜಾಬ್‌ನಲ್ಲಿ ನಮ್ಮ ಹೋರಾಟದ ಪ್ರಾರಂಭವಾಗಿದೆ ಮತ್ತು ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಇದು ಮುಂದುವರಿಯುತ್ತದೆ. ಇಲ್ಲಿಯವರೆಗೆ ಶೇ 25ರಷ್ಟು ರೈತರು ಮಾತ್ರ ಇಲ್ಲಿಗೆ ಬಂದಿದ್ದಾರೆ. ಬುಧವಾರ ಇನ್ನಷ್ಟು ಬರಲಿದೆ. ಮಾಡು ಇಲ್ಲವೇ ಮಡಿ ಹೋರಾಟ' ಎಂದು ರೈತ ಮುಖಂಡರೊಬ್ಬರು ಹೇಳಿದರು.

Tap to resize

Latest Videos

click me!