ಲವ್ ಜಿಹಾದ್ ತಡೆಯಲು ಸಿಎಂ ಯೀಗಿ ದಿಟ್ಟ ಕ್ರಮ| ಅಪರಾಧಿಗಳಿಗೆ ಉಳಿಗಾಲವಿಲ್ಲ| ಗೃಹ ಇಲಾಖೆಯ ಸಭೆಯಲ್ಲಿ ಖಡಕ್ ಆದೇಶ
ಲಕ್ನೋ(ಆ.29): ಉತ್ತರ ಪ್ರದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಲವ್ ಜಿಹಾದ್ ಪ್ರಕರಣ ಸಂಬಂಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಠಿಣ ಕ್ರಮ ಜರುಗಿಸಲು ಮುಂದಾಗಿದ್ದಾರೆ. ಇಂತಹ ಪ್ರಕರಣಗಳನ್ನು ಮಟ್ಟ ಹಾಕಲು ಸೂಕ್ತ ಕಾರ್ಯ ಯೋಜನೆ ನಿರ್ಮಿಸಿ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸುವಂತೆ ಆದೇಶಿಸಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸ್ ಹಾಗೂ ಗೃಹ ವಿಭಾಗದ ಸಿಬ್ಬಂದಿಗೆ ಯುವತಿಯರನ್ನು ಮೋಸ ಮಾಡಿ ಮದುವೆಯಾಗಿ ಬಳಿಕ ಅವರಿಗೆ ಕಿರುಕುಳ ನೀಡುವ ಪ್ರಕರಣಗಳ ಬಂದ ಕೂಡಲೇ ಅವುಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.
ಯೋಗಿ ಸರ್ಕಾರದ ದಿಟ್ಟ ಕ್ರಮ, ಪಾತಕಿಯ ಮನೆ ನೆಲಸಮ!
ಇಂತಹ ಪ್ರಕರಣಕ್ಕೆ ಲಗಾಮು ಹಾಕಲು ಸೂಕ್ತ ನೀಲಿನಕ್ಷೆ ತಯಾರಿಸಿ. ಅಪರಾಧಿಗಳ ವಿರುದ್ಧ ಸೂಕ್ತ ಕಾನೂನಾತ್ಮಕ ತನಿಖೆಯಾಗಬೇಕು ಎಂದು ಸಿಎಂ ಯೋಗಿ ಹೇಳಿದ್ದಾರೆ. ಇತ್ತೀಚೆಗಷ್ಟೇ ಕಾನ್ಪುರದ ಸಂತ್ರಸ್ತೆಯೊಬ್ಬಳ ವಿಡಿಯೋ ಒಂದೂ ಭಾರೀ ವೈರಲ್ ಆಗಿತ್ತು. ಅಲ್ಲದೇ ಅತ್ತ ಲಖೀಂಪುರ ಹಾಗೂ ಮೀರತ್‌ನಲ್ಲೂ ಇಬ್ಬರು ಯುವತಿಯರ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಗಳನ್ನು ಲವ್ ಜಿಹಾದ್ ಎನ್ನಲಾಘಿದೆ. ಮೀರತ್‌ನಲ್ಲಿ ಹತ್ಯೆ ಪ್ರಕರಣ ಹೊರತುಪಡಿಸಿ ಲವ್ ಜಿಹಾದ್‌ನ ಇನ್ನೂ ಮೂರು ಪ್ರಕರಣಗಳು ಬೆಳಕಿಗೆ ಬಂದಿವೆ.
ಸಾಂಪ್ರದಾಯಿಕ ವಾತಾವರಣ ಹಾಳಾಗುತ್ತಿರುವುದನ್ನು ತಡೆಯಲು ಹಾಗೂ ಮಹಿಳಾ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಕರೆಸ್‌ಗಳ ಸೂಕ್ತ ತನಿಖೆ ಹಾಗೂ ಕ್ರಮ ಜರುಗಿಸಲು ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ. ಧರ್ಮದ ಹೆಸರಿನಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಸಿಎಂ ಈ ಆದೇಶ ನೀಡಿದ್ದಾರೆ.
ಭಾರತದ ಅತ್ಯುತ್ತಮ CM ಸಮೀಕ್ಷೆ ಫಲಿತಾಂಶ ಪ್ರಕಟ, ಸತತ 3ನೇ ಬಾರಿ ಯೋಗಿ ಆದಿತ್ಯಾನಾಥ್‌ಗೆ ಪಟ್ಟ!
ಹೊಸ ಕಾನೂನು ರಚಿಸುವಲ್ಲಿ ಸರ್ಕಾರದ ಚಿತ್ತ
ಸಿಎಂ ಯೋಗಿ ಮಾಧ್ಯಮ ಸಲಹೆಗಾರ ಮೃತ್ಯುಂಜಯ ಕುಮಾರ್ ಈ ಸಂಬಂಧ ಮಾತನಾಡುತ್ತಾ ರಾಜ್ಯದ ಅನೇಕ ಭಾಗಗಳಲ್ಲಿ ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈಗಿರುವಾಗ ಗೃಹ ಇಲಾಖೆಯ ಸಿಬ್ಬಂದಿಗೆ ಇದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಜರುಗಿಸುವಂತೆ ಸಿಎಂ ಆದೇಶಿಸಿದದ್ದಾರೆಂದು ಅವರು ತಿಳಿಸಿದ್ದಾರೆ.