ಸಶಸ್ತ್ರ ಪಡೆಯಲ್ಲಿ ಮಹಿಳಾ ಸಬಲೀಕರಣ; UN ರೆಸಲ್ಯೂಶನ್‌ಗೆ ಭಾರತ ಬೆಂಬಲ!

Published : Aug 29, 2020, 03:36 PM ISTUpdated : Aug 29, 2020, 03:43 PM IST
ಸಶಸ್ತ್ರ ಪಡೆಯಲ್ಲಿ ಮಹಿಳಾ ಸಬಲೀಕರಣ; UN ರೆಸಲ್ಯೂಶನ್‌ಗೆ ಭಾರತ ಬೆಂಬಲ!

ಸಾರಾಂಶ

ಎಲ್ಲಾ ಕ್ಷೇತ್ರದಲ್ಲಿ ಇದೀಗ ಮಹಿಳೆಯರು ಪುರುಷರಷ್ಟೇ ಪ್ರಾಬಲ್ಯ, ಪ್ರಭುತ್ವ ಹೊಂದಿದ್ದಾರೆ. ಮಹಿಳಾ ಸಬಲೀಕರಣಕ್ಕಾಗಿ ಭಾರತ ಹಲವು ಕಾರ್ಯಕ್ರಮ,ಯೋಜನಗಳನ್ನು ರೂಪಿಸಿದೆ. ಪೊಲೀಸ್, ಭದ್ರತಾ ಪಡೆ ಸೇರಿದಂತೆ ರಕ್ಷಣಾ ವ್ಯವಸ್ಥೆಯಲ್ಲೂ ಭಾರತ ಮಹಿಳೆಯರಿಗೆ ಆದ್ಯತೆ ನೀಡಿದೆ. ಈ ಕುರಿತು ವಿಶ್ವ ಸಂಸ್ಥೆ ಹೊಸ ರಸಲ್ಯೂಶನ್ ಪಾಸ್ ಮಾಡಿದೆ. ಇದಕ್ಕೆ ಭಾರತ ಬೆಂಬಲ ನೀಡಿದೆ.

ನವದೆಹಲಿ(ಆ.29):  ಮಹಿಳಾ ಸಬಲೀಕರಣ ವಿಚಾರದಲ್ಲಿ ಭಾರತ ಸರ್ಕಾರ ಹಲವು ಯೋಜನೆಗಳು ಯಶಸ್ವಿಯಾಗಿದೆ. ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ನೀಡಲಾಗಿದೆ. ಮುಂದುವರಿದ ಭಾಗವಾಗಿ ಭಾರತೀಯ ಸೇನೆ, ವಾಯುಪಡೆ, ನೌಕಾಪಡೆಗಳಲ್ಲೂ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಭದ್ರತಾ ವ್ಯವಸ್ಥೆಯಲ್ಲಿ ಮಾತ್ರವಲ್ಲ, ಕಾನೂನು ಪಾಲನೆಯಾದ ಪೊಲೀಸ್ ವಿಭಾಗದಲ್ಲಿ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಮಹಿಳಾ ಸಬಲೀಕರಣ ಕುರಿತು ವಿಶ್ವ ಸಂಸ್ಥೆ ಹೊಸ ವಿಧೇಯಕ ಪಾಸ್ ಮಾಡಿದೆ. ಇದಕ್ಕೆ ಭಾರತ ಸಂಪೂರ್ಣ ಬೆಂಬಲ ನೀಡೋ ಮೂಲಕ ಐತಿಹಾಸಿಕ ಹೆಜ್ಜೆ ಇಟ್ಟಿದೆ.

ಮೊನ್ನೇ ಅಷ್ಟೇ ಬಿಜೆಪಿ ಸೇರಿದ್ದ ಮಾಜಿ IPS ಅಣ್ಣಾಮಲೈ ವಿರುದ್ಧ ಕೇಸ್ ಬುಕ್.

ವಿಶ್ವ ಸಂಸ್ಥೆಯ ಭಾರತದ ಪರ್ಮನೆಂಟ್ ಮಿಶನ್ ಭದ್ರತಾ ಮಂಡಳಿಯ ಶಾಂತಿಪಾಲನಾ ಕಾರ್ಯಚರಣೆಗಳಲ್ಲಿ ಮಹಿಳಾ ಸಿಬ್ಬಂದಿಯ ಪೂರ್ಣ ಹಾಗೂ ಪರಿಣಾಮಕಾರಿ ಭಾಗವಹಿಸುವಿಕೆ ಕುರಿತು ವಿಶ್ವ ಸಂಸ್ಥೆ ಹೊಸ ರಸಲ್ಯೂಶನ್ ಪಾಸ್ ಮಾಡಿದೆ. ಈ ರಸಲ್ಯೂಶನ್‌ಗೆ ಭಾರತ ಸಂಪೂರ್ಣ ಬೆಂಬಲ ನೀಡಿದೆ.  ಇಂಡೋನೇಷ್ಯಾ ಮಂಡಿಸಿದ ನಿರ್ಣಯವನ್ನು  ಭಾರತ ಬೆಂಬಲಿಸುತ್ತದೆ ಎಂದಿದೆ.

2019-20ರ ಕೌನ್ಸಿಲ್ ಸಭೆಯಲ್ಲಿ ಶಾಂತಿಪಾಲನೆ ಇಂಡೋನೇಷ್ಯಾದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ವಿಶ್ವ ಸಂಸ್ಥೆಯಲ್ಲಿ ಇಂಡೋನೇಷ್ಯಾ ಮೊದಲ ಅಧ್ಯಕ್ಷತೆ ಪಡೆದಾಗ ಶಾಂತಿಪಾಲನೆಗೆ ಮಹಿಳೆಯರಿಗೆ ಆದ್ಯತೆ ನೀಡುವ ಕರಡು ನಿರ್ಣಯವನ್ನು ಮುಂದಿಟ್ಟಿತ್ತು.  ಇದೀಗ ವಿಶ್ವ ಸಂಸ್ಥೆ ಈ ಕರಡು ನಿರ್ಣಯದ ಮೇಲೆ ರಸಲ್ಯೂಶನ್ ಪಾಸ್ ಮಾಡಿದೆ. ಇದಕ್ಕೆ ಭಾರತ ಸಹಮತ ವ್ಯಕ್ತಪಡಿಸಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!
ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ