ಕಾರ್ಖಾನೆಗಳಿಂದ ತ್ಯಾಜ್ಯ ಹರಿಯುತ್ತಿಲ್ಲ| ಮಲಿನಗೊಳಿಸಲು ಜನರೂ ಬರುತ್ತಿಲ್ಲ| ದೇಶದ ಅತ್ಯಂತ ಮಲಿನ ನದಿಗಳೆಂದು ಕುಖ್ಯಾತಿ ಪಡೆದ ಗಂಗಾ ಹಾಗೂ ಯಮುನಾ ನದಿಗಳು ಕ್ಲೀನ್
ವಾರಾಣಸಿ/ಮಥುರಾ(ಏ.06): ದೇಶದ ಅತ್ಯಂತ ಮಲಿನ ನದಿಗಳೆಂದು ಕುಖ್ಯಾತಿ ಪಡೆದ ಗಂಗಾ ಹಾಗೂ ಯಮುನಾ ನದಿಗಳು ಕೊರೋನಾ ವೈರಸ್ ಲಾಕ್‌ಡೌನ್‌ನಿಂದಾಗಿ ಬಹುತೇಕ ಸ್ವಚ್ಛವಾಗಿವೆ. ಕಾರ್ಖಾನೆಗಳು ಮುಚ್ಚಿರುವುದರಿಂದ ಅವುಗಳಿಂದ ತ್ಯಾಜ್ಯ ಬಂದು ನದಿಗೆ ಸೇರುತ್ತಿಲ್ಲ. ಜೊತೆಗೆ, ಪ್ರಸಿದ್ಧ ಪುಣ್ಯಕ್ಷೇತ್ರಗಳಾದ ಉತ್ತರ ಪ್ರದೇಶದ ವಾರಾಣಸಿ ಹಾಗೂ ಮಥುರಾಕ್ಕೆ ಭಕ್ತರೂ ಹೋಗುತ್ತಿಲ್ಲ. ಹೀಗಾಗಿ ಸ್ನಾನ ಹಾಗೂ ಭಕ್ತರು ತೇಲಿಬಿಡುತ್ತಿದ್ದ ಹೂವಿನಿಂದ ಆಗುತ್ತಿದ್ದ ಮಾಲಿನ್ಯ ಕೂಡ ನಿಂತಿದೆ.
ಗಂಗೆಯನ್ನು ಶೇ. 50ರಷ್ಟು ಸ್ವಚ್ಛಗೊಳಿಸಿದ ಲಾಕ್‌ಡೌನ್: ಉಸಿರಾಡ್ತಿದ್ದಾಳೆ ಪ್ರಕೃತಿ ಮಾತೆ!
‘ವಾರಾಣಸಿಯಲ್ಲಿ ಗಂಗಾ ನದಿ ಶೇ.40ರಿಂದ 50ರಷ್ಟುಸ್ವಚ್ಛವಾಗಿದೆ. ಗಂಗಾ ನದಿಯ ಮಾಲಿನ್ಯದಲ್ಲಿ 1/10ರಷ್ಟುಪಾಲು ಕೈಗಾರಿಕೆಗಳದ್ದಿದೆ. ಮಾ.24ರಿಂದ ಕೈಗಾರಿಕೆಗಳು ಬಂದ್ ಆಗಿರುವುದರಿಂದ ಮತ್ತು ಜನರು ನದಿಗೆ ಬರುವುದೂ ನಿಂತಿರುವುದರಿಂದ ಮಾಲಿನ್ಯ ಸಾಕಷ್ಟುಕಡಿಮೆಯಾಗಿದೆ. ಜೊತೆಗೆ 2 ದಿನ ಮಳೆ ಸುರಿದಿರುವುದರಿಂದ ನೀರಿನ ಮಟ್ಟಹೆಚ್ಚಾಗಿ ಕೊಳೆ ತೊಳೆದುಹೋಗಿದೆ’ ಎಂದು ಬನಾರಸ್ ಹಿಂದು ವಿಶ್ವವಿದ್ಯಾಲಯದ ತಜ್ಞರು ಹೇಳಿದ್ದಾರೆ. ಗಂಗಾ ನದಿ ಸ್ವಚ್ಛವಾಗಿರುವುದಕ್ಕೆ ಸ್ಥಳೀಯರು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.
This is Yamuna River from Kalindi Kunj. In short: we're such a burden on this planet. thanks for sharing these. pic.twitter.com/CWbG0wETp7
— Dr Ritesh Malik (@drriteshmalik)ಪಾರದರ್ಶಕವಾದ ಯಮುನಾ ನೀರು:
ವಾರಾಣಸಿಯಲ್ಲಿ ಗಂಗಾ ನದಿ ಸ್ವಚ್ಛವಾದಂತೆ ಮಥುರಾದಲ್ಲಿ ಯಮುನಾ ನದಿ ಕೂಡ ಸಾಕಷ್ಟುಸ್ವಚ್ಛವಾಗಿದ್ದು, ಮೊದಲೆಲ್ಲ ಕಪ್ಪಾಗಿ ಕಾಣಿಸುತ್ತಿದ್ದ ನೀರು ಈಗ ಪಾರದರ್ಶಕವಾಗಿದೆ. 42 ವರ್ಷಗಳ ನಂತರ ನಾನು ಇಷ್ಟುಸ್ವಚ್ಛ ನೀರನ್ನು ಯಮುನಾ ನದಿಯಲ್ಲಿ ನೋಡುತ್ತಿದ್ದೇನೆ ಎಂದು ಮಥುರಾ ಚತುರ್ವೇದ ಪರಿಷತ್‌ನ ಉಪಾಧ್ಯಕ್ಷ ರಾಕೇಶ್ ತಿವಾರಿ ಹೇಳಿದ್ದಾರೆ.
ದಶಕಗಳ ನಂತ್ರ ಜಲಂಧರ್ ನಿವಾಸಿಗಳಿಗೆ ಹಿಮಾಚಲ ಪರ್ವತ ಶ್ರೇಣಿ ದರ್ಶನ
ಮಥುರೆಗೆ ಬರುವ ಭಕ್ತರು ಯಮುನಾ ನದಿಯಲ್ಲಿ ಸ್ನಾನ ಮಾಡಿ, ಹೂವು ಚೆಲ್ಲಿ ಪೂಜೆ ಮಾಡುತ್ತಿದ್ದರು. ಜೊತೆಗೆ ಕಾರ್ಖಾನೆಗಳಿಂದಲೂ ತ್ಯಾಜ್ಯ ಹರಿಯುತ್ತಿತ್ತು. ಅವೆಲ್ಲವೂ ಈಗ ನಿಂತಿದೆ. ಹೀಗಾಗಿ ನೀರು ಸ್ವಚ್ಛವಾಗುತ್ತಿದೆ ಎಂದು ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.
ನಗರದಲ್ಲಿ ವಾಯು ಮಾಲಿನ್ಯ ದಾಖಲೆ ಮಟ್ಟದಲ್ಲಿ ಕುಸಿತ!