ರೋಗಿಯನ್ನು ನೋಡಲು ಬಾರದ ಕುಟುಂಬಸ್ಥರು: ಕೈಯ್ಯಾರೆ ಊಟ ಮಾಡಿಸಿದ ವೈದ್ಯ!

By Kannadaprabha NewsFirst Published Apr 5, 2020, 4:29 PM IST
Highlights

ಕೊರೋನಾ ವಿರುದ್ಧ ವೈದ್ಯರ ಸಮರ| ರೋಗಿಯ ನೋಡಲು ಕುಟುಂಬ ಸದಸ್ಯರಿಗೆ ಇಲ್ಲ ಅವಕಾಶ| ಕೈಯ್ಯಾರೆ ಊಟ ಮಾಡಿಸಿದ ಡಾಕ್ಟರ್

ನವದೆಹಲಿ(ಏ.05): ಕೊರೋನಾ ಯುದ್ಧದಲ್ಲಿ ಹೋರಾಡಲು ವೈದ್ಯರು, ನರ್ಸ್‌ಗಳು ಹಾಗೂ ಪ್ಯಾರಾ ಮೆಡಿಕಲ್ ಸ್ಟಾಫ್‌ ಎಲ್ಲರಿಗಿಂತಲೂ ಮುಂಚೂಣಿಯಲ್ಲಿದ್ದಾರೆ. ತಮ್ಮ ಜೀವವನ್ನೇ ಪಣಕ್ಕಿಟ್ಟು, ರೋಗಿಗಳ ಚಿಕಿತ್ಸೆ ಮಾಡಲು ದೀರ್ಘ ಕಾಲದ ಶಿಫ್ಟ್ ಮಾಡುತ್ತಿದ್ದಾರೆ. ಹೀಗಿರುವಾ ಡಾಕ್ಟರ್‌ ಒಬ್ಬರ ಫೋಟೋ ಒಂದು ಭಾರೀ ವೈರಲ್ ಆಗುತ್ತಿದ್ದುಉ, ಇದರಲ್ಲಿ ಅವರು ರೋಗಿಗೆ ಊಟ ತಿನ್ನಿಸುತ್ತಿರುವ ದೃಶ್ಯವಿದೆ. 

As relatives of a patient couldn't come, a doctor (Georgi Abraham, a senior Nephrologist of Madras Medical Mission) is feeding his patient. This is MEDICINE. pic.twitter.com/W7xE4G31fi

— Arun Janardhanan (@arunjei)

ವೈರಲ್ ಆದ ಟ್ವೀಟ್‌ನಲ್ಲಿ ನೀಡಿರುವ ಮಾಹಿತಿ ಅನ್ವಯ, ರೋಗಿಯ ಕುಟುಂಬ ಸದಸ್ಯರು ಯಾರೂ ಬಾರದ ಹಿನ್ನೆಲೆ ಡಾಕ್ಟರ್ ಖುದ್ದು ತಾನೇ ಆತನಿಗೆ ಊಟ ತಿನ್ನಿಸುತ್ತಿರುವುದಾಗಿ ಹೇಳಲಾಗಿದೆ. ಈ ಫೋಟೋ ನೋಡಿದ ಬಳಿಕ ನೆಟ್ಟಿಗರು ವೈದ್ಯರ ಸರಳತೆಗೆ ಹಾಗೂ ಸೇವಾ ಮನೋಭಾವಕ್ಕೆ ಫುಲ್ ಫಿದಾ ಆಗಿದ್ದಾರೆ. 

All the doctors in Madras Medical Mission are gems. That institute is a treasure.

— Sumirti (@sumirti)

This tweet made my day👏👏👏👏

— Antony Idhaya Amalan_L (@26rose1)

A good teacher and a humble person.. proud to be associated with him for a while..

— Arunkumar (@arunkumarpdy)

ಸದ್ಯ ಈ ಫೋಟೋ ಭಾರೀ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ.  ಅಲ್ಲದೇ ವೈದ್ಯರ ಸೇವಾ ಮನೋಭಾವಕ್ಕೆ ಹಾಗೂ ಮಾನವೀಯ ನಡೆಗೆ ಎಲ್ಲರೂ ತಲೆ ದೂಗಿದ್ದಾರೆ.

click me!