
ಬೆಂಗಳೂರು(ಸೆ.24) ಭಾರತ ಇಂದು ನಿಜವಾದ ಯುವ ಶಕ್ತಿಯನ್ನು ನೋಡುತ್ತಿದೆ. ಈ ಯುವಶಕ್ತಿ ದೇಶದ ಆರ್ಥಿಕ ಚಕ್ರ ಮುನ್ನಡೆಸುವ ಕೌಶಲ್ಯ ಹೊಂದಿದೆ. ದೇಶದಲ್ಲಿ ಕೌಶಲ್ಯಕ್ಕೆ ಯಾವುದೇ ಕೊರತೆ ಇಲ್ಲ. ದೇಶ ವಿದೇಶಗಳಲ್ಲಿ ಭಾರಿ ಬೇಡಿಕೆ ಇದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ವಿಶ್ವದ ಅತಿದೊಡ್ಡ ಕೌಶಲ್ಯ ಸ್ಪರ್ಧೆ, ವರ್ಲ್ಡ್ ಸ್ಕಿಲ್ಸ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಹೊರಟ ಸ್ಪರ್ಧಾಳುಗಳ ಕುರಿತು ರಾಜೀವ್ ಚಂದ್ರಶೇಕರ್ ಈ ಮಾತುಗಳನ್ನ ಆಡಿದ್ದಾರೆ. ಈ ಪೈಪೋಟಿ ಜಗತ್ತಿನಲ್ಲಿ ಹೊಸ ಮಾನದಂಡಗಳಿಗೆ ತಮ್ಮ ಪ್ರತಿಭೆಗಳನ್ನು ಒರೆಗೆ ಹಚ್ಚಲು ಹೊರಟಿರುವ ಎಲ್ಲಾ ಸ್ಪರ್ಧಿಗಳಿಗೆ ನನ್ನ ಅಭಿನಂದನೆಗಳು ಎಂದು ಸಚಿವರು ಹೇಳಿದ್ದಾರೆ.
ವರ್ಲ್ಡ್ ಸ್ಕಿಲ್ಸ್ ಸ್ಪರ್ಧೆ 2022, ರಲ್ಲಿ ಪಾಲ್ಗೊಳ್ಳಲು ಹೊರಟಿರುವ 58 ಸದಸ್ಯರ ಪ್ರಬಲ ಭಾರತೀಯ ತಂಡಕ್ಕೆ ರಾಜಧಾನಿಯಲ್ಲಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಪಾಲ್ಗೊಂಡು ರಾಜೀವ್ ಚಂದ್ರಶೇಖರ್ ಮಾತನಾಡಿದರು. ಈ ಸ್ಪರ್ಧೆಯಲ್ಲಿ ಭಾರತ ಸೇರಿದಂತೆ ಯುರೋಪ್, ಕೊರಿಯಾ, ಜಪಾನ್ ಮತ್ತು USA ನಲ್ಲಿ 15 ದೇಶಗಳು 52 ವಿಭಾಗಗಳಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲಿದ್ದಾರೆ.
ಐಟಿ ಸಚಿವಾಲಯ- ಫೇಸ್‌ಬುಕ್‌ನಿಂದ XR ಸ್ಟಾರ್ಟ್‍ಅಪ್ ಪ್ರೋಗ್ರಾಂ ಆರಂಭ!
ಸ್ಪರ್ಧೆಯ ಈ ಬಾರಿಯ ಆವೃತ್ತಿಯಲ್ಲಿ, ಟೀಮ್ ಇಂಡಿಯಾವು ಉದ್ಯಮ 4.0, ರೋಬೋಟ್ ಸಿಸ್ಟಮ್ ಇಂಟಿಗ್ರೇಷನ್, ಅಡ್ಹೆಸಿವ್‍ಗಳ ಉತ್ಪಾದನೆ ಮತ್ತು ನವೀಕರಿಸಬಹುದಾದ ಇಂಧನ ಸೇರಿದಂತೆ ಆರು ಹೊಸ-ಯುಗದ ಕೌಶಲ್ಯಗಳಲ್ಲಿ ಸ್ಪರ್ಧಿಸಲಿದೆ. 58-ಸದಸ್ಯರ ತಂಡವು 19% ಮಹಿಳಾ ಪ್ರಾತಿನಿಧ್ಯವನ್ನು ಹೊಂದಿದ್ದು, ಈ ಮೊದಲು ಪುರುಷರ ಸ್ವತ್ತಾಗಿದ್ದ ಕೌಶಲ್ಯಗಳು ಸೇರಿದಂತೆ ಮಹಿಳೆಯರ ಸ್ಥಾನಮಾನದಲ್ಲಿನ ವರ್ಧನೆಯನ್ನು ಸೂಚಿಸುತ್ತದೆ. ಎಲ್ಲಾ ಭಾರತೀಯ ಸ್ಪರ್ಧಿಗಳು ಟೊಯೋಟಾ, ಮಾರುತಿ, NIFT, ಮಹೀಂದ್ರ & ಮಹೀಂದ್ರ ಸೇರಿದಂತೆ ವಿವಿಧ ಕೈಗಾರಿಕೆಗಳು ಮತ್ತು ಅಕಾಡೆಮಿಗಳ ಬೆಂಬಲದೊಂದಿಗೆ ತಮ್ಮ ಕೌಶಲ್ಯಗಳನ್ನು ಪರಿಪೂರ್ಣಾವಾಗಿಸಲು ಉತ್ತಮ ತರಬೇತಿಯನ್ನು ಪಡೆದಿದ್ದಾರೆ.
ಕೌಶಲ್ಯದ ಶಕ್ತಿಯೊಂದಿಗೆ, ನಾವು ಶೀಘ್ರದಲ್ಲೇ ಭಾರತದ ಟೆಕೇಡ್ ಅನ್ನು ವೀಕ್ಷಿಸುತ್ತೇವೆ ಎಂದು ನನಗೆ ಖಚಿತವಾಗಿದೆ. ನಮ್ಮ ಮಾನ್ಯ ಪ್ರಧಾನಮಂತ್ರಿ ಶ್ರೀಯುತ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ ಮಾರ್ಗದರ್ಶನ ಪಡೆದು, ಭಾರತವನ್ನು ವಿಶ್ವದ ಕೌಶಲ್ಯ ಕೇಂದ್ರವನ್ನಾಗಿ ಮಾಡಲು ತಯಾರಾದ ಜಾಗತಿಕವಾಗಿ ಸ್ಪರ್ಧಾತ್ಮಕ ಯುವಕರನ್ನು ರಚಿಸಲು ನಾವು ಸಮರ್ಥರಾಗಿದ್ದೇವೆ. ಇಂದು ಪ್ರದರ್ಶನದಲ್ಲಿರುವ ಕೌಶಲ್ಯಗಳ ಬೃಹತ್ ಶ್ರೇಣಿಯು, ನಾವು ಸಂಭ್ರಮಿಸಬೇಕಾದ ಅನೇಕ ಕುಶಲ ಚಾಂಪಿಯನ್‍ಗಳನ್ನು ನಾವು ಹೊಂದಿದ್ದೇವೆ ಎಂದು ನಂಬಲು ನನಗೆ ಕಾರಣವನ್ನು ನೀಡುತ್ತದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಎಲ್ಲಾ ಅಭ್ಯರ್ಥಿಗಳಿಗೆ ನನ್ನ ಶುಭ ಹಾರೈಕೆಗಳು. ಸಾಂಕ್ರಾಮಿಕ ರೋಗವನ್ನು ಒಳಗೊಂಡಂತೆ ನಾವು ದೊಡ್ಡ ಸವಾಲುಗಳನ್ನು ಎದುರಿಸಿದ್ದೇವೆ ಎಂಬ ಅಂಶವು ನಮ್ಮ ಸ್ಥಿತಿಸ್ಥಾಪಕತ್ವ ಮತ್ತು ಸಂಕಲ್ಪಗಳಿಗೆ ಸಾಕ್ಷಿಯಾಗಿದೆ. ರಾಷ್ಟ್ರೀಯ ಸ್ಪರ್ಧೆಗಳಲ್ಲಿ ನಾವು ಕಂಡಿರುವುದೆಲ್ಲವೂ ವಲ್ರ್ಡ್‍ಸ್ಕಿಲ್ಸ್ ಸ್ಪರ್ಧೆ 2022 ರಲ್ಲಿ ನಮ್ಮ ರಾಷ್ಟ್ರಕ್ಕೆ ಹೆಚ್ಚಿನ ಕೀರ್ತಿಯನ್ನು ಗಳಿಸುತ್ತೇವೆ ಎಂಬ ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ ಎಂದು MSDE ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ ಹೇಳಿದ್ದಾರೆ.
ಸ್ಟಾರ್ಟ್‌ಅಪ್ ತವರಾಗಿದೆ ಪ್ರಧಾನಿ ಮೋದಿ ನವ ಭಾರತ, ಯುವಕರಿಗೆ ಹೆಚ್ಚಿನ ಅವಕಾಶ, ರಾಜೀವ್ ಚಂದ್ರಶೇಖರ್!
ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವ ಪ್ರಸ್ತುತ ವರ್ಲ್ಡ್ ಸ್ಕಿಲ್ಸ್ ಇಂಡಿಯಾದ ಅಭ್ಯರ್ಥಿ ಲಿಖಿತ್ ಕುಮಾರ್ YP ಅವರು ಸ್ವಿಟ್ಜರ್ಲೆಂಡ್‍ನ ಬರ್ನ್‍ನಲ್ಲಿ ನಡೆದ ವಲ್ರ್ಡ್‍ಸ್ಕಿಲ್ಸ್ ಸ್ಪರ್ಧೆ 2022 (WSC 2022) ರ ಮೊದಲ ಲೆಗ್‍ನಲ್ಲಿ ಪ್ರೊಟೊಟೈಪ್ ಮಾಡೆಲಿಂಗ್‍ನಲ್ಲಿ ಈಗಾಗಲೇ ಕಂಚಿನ ಪದಕವನ್ನು ಗೆದ್ದಿದ್ದಾರೆ.
ಹಿಂದಿನ ವರ್ಲ್ಡ್ ಸ್ಕಿಲ್ಸ್ ಸ್ಪರ್ಧೆಗಳ ವಿವಿಧ ವಿಜೇತರು ಭಾರತ ತಂಡವನ್ನು ಉದ್ದೇಶಿಸಿ ಮಾತನಾಡುತ್ತಾ, ಅತಿದೊಡ್ಡ ಕೌಶಲ್ಯ ಸ್ಪರ್ಧೆಯ ಅನುಭವಗಳನ್ನು ಹಂಚಿಕೊಂಡರು ಮತ್ತು ಜಾಗತಿಕ ವೇದಿಕೆಯಲ್ಲಿ ತಮ್ಮ ಸಾಮಥ್ರ್ಯದ ಅತ್ಯುತ್ತಮ ಪ್ರದರ್ಶನ ನೀಡಲು ಮಹತ್ವಾಕಾಂಕ್ಷಿ ಸದಸ್ಯರನ್ನು ಪ್ರೇರೇಪಿಸಿದರು. 46 ನೇ ವರ್ಲ್ಡ್ ಸ್ಕಿಲ್ಸ್ ಸ್ಪರ್ಧೆಯು 60 ಕ್ಕೂ ಹೆಚ್ಚು ದೇಶಗಳನ್ನು ಪ್ರತಿನಿಧಿಸುವ 1,400 ಕ್ಕೂ ಹೆಚ್ಚು ಯುವ ವೃತ್ತಿಪರರನ್ನು ಒಂದು ಕಡೆ ಸೇರಿಸುತ್ತದೆ. 2019 ರಲ್ಲಿ, ರಷ್ಯಾದ ಕಜಾನ್‍ನಲ್ಲಿ ನಡೆದ ವರ್ಲ್ಡ್ ಸ್ಕಿಲ್ಸ್ ಇಂಟರ್ ನ್ಯಾಶನಲ್‍ನಲ್ಲಿ ಭಾರತದಿಂದ, 48 ಅಭ್ಯರ್ಥಿಗಳು ಭಾಗವಹಿಸಿದ್ದರು. ಆ ತಂಡವು ಒಂದು ಚಿನ್ನ (ವಾಟರ್ ಟೆಕ್ನಾಲಜಿ), ಒಂದು ಬೆಳ್ಳಿ (ವೆಬ್ ಟೆಕ್ನಾಲಜಿ), ಎರಡು ಕಂಚು (ಜ್ಯುವೆಲ್ಲರಿ ಅಂಡ್ ಗ್ರಾಫಿಕ್ ಡಿಸೈನ್ ಟೆಕ್ನಾಲಜಿ) ಮತ್ತು ಶ್ರೇಷ್ಠತೆಗಾಗಿ 15 ಪದಕಗಳನ್ನು ಗೆದ್ದುಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ