ಶಿವಾಜಿ ನಾಡಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಹೇಳಿದ್ದೀರಿ, ಇದರ ಪರಿಣಾಮ ಗೊತ್ತಾಗುತ್ತೆ: ಮಹಾ ಸಿಎಂ ಶಿಂಧೆ ಖಡಕ್‌ ವಾರ್ನಿಂಗ್‌!

By Santosh NaikFirst Published Sep 24, 2022, 6:48 PM IST
Highlights

ಎನ್‌ಐಎ ದಾಳಿಯನ್ನು ವಿರೋಧಿಸಿ ಶುಕ್ರವಾರ ಪಿಎಫ್‌ಐ ಬೆಂಬಲಿಗರು ಮಹಾರಾಷ್ಟ್ರದ ವಿವಿಧೆಡೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪುಣೆಯ ಕಲೆಕ್ಟರ್ ಕಚೇರಿಯ ಹೊರಗೆ ಪ್ರತಿಭಟನೆಯನ್ನೂ ನಡೆಸಲಾಯಿತು. ಇಲ್ಲಿ 'ಪಾಕಿಸ್ತಾನ ಜಿಂದಾಬಾದ್' ಘೋಷಣೆಗಳು ಮೊಳಗಿದವು. ಇದಕ್ಕೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
 

ಪುಣೆ (ಸೆ. 24): ರಾಷ್ಟ್ರೀಯ ತನಿಖಾ ದಳ ಗುರುವಾರ ದೇಶಾದ್ಯಂತ ದೊಡ್ಡ ಮಟ್ಟದ ದಾಳಿಯನ್ನು ನಡೆಸಿ, ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾದ ಕಚೇರಿಗಳು ಹಾಗೂ 100 ಅಧಿಕ ಸದಸ್ಯರನ್ನು ಬಂಧನ ಮಾಡಿದೆ. ಕೇಂದ್ರದ ಏಜೆನ್ಸಿಗಳ ಈ ಕ್ರಮದ ವಿರುದ್ಧ ಶುಕ್ರವಾರ ದೇಶಾದ್ಯಂತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದೇ ವೇಳೆ ಪುಣೆಯ ಜಿಲ್ಲಾಧಿಕಾರಿ ಕಚೇರಿ ಎದುರೂ ದೊಡ್ಡ ಮಟ್ಟದಲ್ಲಿ ಪಿಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಪೊಲೀಸರು ಈ ವೇಳೆ ಬಂಧಿಸಿದ್ದಾರೆ. ಇವರನ್ನು ಬಂಧನ ಮಾಡುವ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರು ನಡುವೆ ದೊಡ್ಡ ಮಟ್ಟದ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಾಕಾರರು ಪಾಕಿಸ್ತಾನ್‌ ಜಿಂದಾಬಾದ್‌ ಎನ್ನುವ ಘೋಷಣೆ ಕೂಗಿದ್ದಲ್ಲದೆ, ಪೊಲೀಸರನ್ನೇ ಬೆದರಿಸುವ ಪ್ರಯತ್ನ ಮಾಡಿದ್ದಾರೆ ಆದರೆ, ಪೊಲೀಸ್‌ ಅಧಿಕಾರಿಗಳು ಇದನ್ನು ನಿರಾಕರಿಸಿದ್ದರೂ, ಮಹಾರಾಷ್ಟ್ರದ ಸಿಎಂ ಏಕನಾಥ್‌ ಶಿಂಧೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಶಿವಾಜಿಯ ನೆಲದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ನಂಥ ಘೋಷಣೆಗಳನ್ನು ಸಹಿಸೋದಿಲ್ಲ. ಇದಕ್ಕಾಗಿ ಕಠಿಣ ಕ್ರಮವನ್ನು ಎದುರಿಸ್ತೀರಿ ಎಂದು ಸರ್ಕಾರ ಎಚ್ಚರಿಸಿದೆ.

ಪುಣೆಯಲ್ಲಿ (Pune)  ದೇಶವಿರೋಧಿ 'ಪಾಕಿಸ್ತಾನ ಜಿಂದಾಬಾದ್' ಘೋಷಣೆಗಳು ಎದ್ದಿದ್ದು, ಇದನ್ನು ಖಂಡಿಸಲೇಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಹೇಳಿದ್ದಾರೆ. ಪೊಲೀಸರು ಖಂಡಿತಾ ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಾರೆ, ಆದರೆ ಶಿವಾಜಿಯ ನೆಲದಲ್ಲಿ(Land Of Shivaji)  ಇಂತಹ ಘೋಷಣೆಗಳನ್ನು ಸಹಿಸುವುದಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

पुण्यात ज्या समाजकंटकांनी पाकिस्तान झिंदाबादचे नारे दिले त्या प्रवृत्तीचा करावा तेवढा निषेध कमीच आहे. पोलीस यंत्रणा त्यांच्याविरोधात योग्य ती कारवाई करेलच, पण शिवरायांच्या भूमीत असले नारे अजिबात सहन केले जाणार नाहीत.

— Eknath Shinde - एकनाथ शिंदे (@mieknathshinde)


ಇದೇ ವೇಳೆ ಪಾಕಿಸ್ತಾನ ಜಿಂದಾಬಾದ್(Pakistan Zindabad ) ಘೋಷಣೆ ಕೂಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ನಾಗ್ಪುರದಲ್ಲಿ (Nagpur) ಮಾತನಾಡಿದ ಫಡ್ನವೀಸ್ (Devendra Fadnavis), "ಮಹಾರಾಷ್ಟ್ರ ಅಥವಾ ಭಾರತದಲ್ಲಿ ಯಾರಾದರೂ 'ಪಾಕಿಸ್ತಾನ ಜಿಂದಾಬಾದ್' ಘೋಷಣೆ ಕೂಗಿದರೆ, ಆ ವ್ಯಕ್ತಿಯನ್ನು ಬಿಡಲಾಗುವುದಿಲ್ಲ ಮತ್ತು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು, ಅವರು ಎಲ್ಲಿದ್ದರೂ, ನಾವು ಅವರನ್ನು ಪತ್ತೆಹಚ್ಚಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ಹೇಳಿದರು.

ಭಾರತವನ್ನು ಇಸ್ಲಾಮೀಕರಣ ಮಾಡಲು ಹೊರಟ PFI ವಿರುದ್ಧ NIA ದಾಳಿ, 45 ಶಂಕಿತರು ಅರೆಸ್ಟ್!

ಭಯೋತ್ಪಾದಕ ಕೃತ್ಯಗಳಿಗೆ ನಿಧಿ (terror funding ), ತರಬೇತಿ ಶಿಬಿರಗಳು (Training Camp) ಮತ್ತು ಸಂಘಟನೆಗೆ ಸೇರಲು ಜನರನ್ನು ಪ್ರೇರೇಪಿಸುತ್ತಿರುವ ಪಿಎಫ್‌ಐ (PFI) ಸದಸ್ಯರ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಬಿಹಾರದ ಫುಲ್ವಾರಿ ಷರೀಫ್‌ನಲ್ಲಿ ಘಜ್ವಾ-ಎ-ಹಿಂದ್ ಸ್ಥಾಪಿಸಲು ಪಿಎಫ್‌ಐ ಮೂಲಕ ಸಂಚು ರೂಪಿಸಲಾಗಿತ್ತು. ಇತ್ತೀಚೆಗೆ ಎನ್‌ಐಎ ದಾಳಿ ನಡೆಸಿತ್ತು. ತೆಲಂಗಾಣದ ನಿಜಾಮಾಬಾದ್‌ನಲ್ಲಿ ಕರಾಟೆ ತರಬೇತಿಯ ಹೆಸರಿನಲ್ಲಿ ಪಿಎಫ್‌ಐ ಶಸ್ತ್ರಾಸ್ತ್ರ ತರಬೇತಿಯನ್ನೂ ನೀಡುತ್ತಿತ್ತು. ಅಲ್ಲಿಯೂ ಎನ್‌ಐಎ ದಾಳಿ ನಡೆಸಿತ್ತು. ಇದಲ್ಲದೇ ಕರ್ನಾಟಕದ ಹಿಜಾಬ್ ವಿವಾದ ಹಾಗೂ ಪ್ರವೀಣ್ ನೆಟ್ಟಾರ್‌ ಹತ್ಯೆ ಪ್ರಕರಣದಲ್ಲೂ ಪಿಎಫ್‌ಐ ನಂಟು ಬಹಿರಂಗವಾಗಿದೆ.

ED NIA raid PFI; ಶಿರಸಿಯಲ್ಲಿ ದೇಶವಿರೋಧಿ ಚಟುವಟಿಕೆಯಲ್ಲಿದ್ದ ಎಸ್‌ಡಿಪಿಐ ಮುಖಂಡನ ಬಂಧನ

ಎನ್‌ಐಎ ಗುರುವಾರ ನಡೆಸಿದ ಕಾರ್ಯಾಚರಣೆಯಲ್ಲಿ ಕೇರಳದಿಂದ 22 ಜನರನ್ನು ಬಂಧಿಸಲಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದಿಂದ 20-20 ಜನರನ್ನು ಬಂಧಿಸಲಾಗಿದೆ. ಇವರಲ್ಲದೆ, ತಮಿಳುನಾಡಿನಿಂದ 10, ಅಸ್ಸಾಂನಿಂದ 9, ಉತ್ತರ ಪ್ರದೇಶದಿಂದ 8, ಆಂಧ್ರಪ್ರದೇಶದಿಂದ 5, ಮಧ್ಯಪ್ರದೇಶದಿಂದ 4, ಪುದುಚೇರಿ ಮತ್ತು ದೆಹಲಿಯಿಂದ ತಲಾ 3 ಮತ್ತು ರಾಜಸ್ಥಾನದಿಂದ 2 ಜನರನ್ನು ಬಂಧಿಸಲಾಗಿದೆ. ಪಿಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಒಎಂಎಸ್ ಸಲಾಂ ಮತ್ತು ದೆಹಲಿ ಅಧ್ಯಕ್ಷ ಪರ್ವೇಜ್ ಅಹ್ಮದ್ ಅವರನ್ನು ಎನ್‌ಐಎ ಬಂಧಿಸಿದೆ.

click me!