
ನವದೆಹಲಿ (ಮೇ.24): ಪ್ರತಿವರ್ಷ ಹಾಂಕೆ ಪ್ರಕಟ ಮಾಡುವ ವಿಶ್ವದ ಅತ್ಯಂತ ಶೋಚನೀಯ ದೇಶಗಳ ಪಟ್ಟಿಯಲ್ಲಿ ಆಫ್ರಿಕಾ ದೇಶ ಜಿಂಬಾಬ್ವೆ ಅಗ್ರಸ್ಥಾನ ಪಡೆದುಕೊಂಡಿದೆ. ಆಫ್ರಿಕಾದ ದಕ್ಷಿಣದಲ್ಲಿರುವ ಈ ದೇಶವು ಅತಿಯಾದ ಹಣದುಬ್ಬರದಿಂದ ಬಳಲುತ್ತಿದೆ. ಇತ್ತೀಚಿನ ಮಾಹಿತಿಯ ಪ್ರಕಾರ ಕಳೆದ ವರ್ಷ ಜಿಂಬಾಬ್ವೆಯ ಹಣದುಬ್ಬರ ಗಗನಕ್ಕೇರಿದ್ದಲ್ಲದೆ ಶೇ. 243.8 ಆಗಿದೆ. ಸೂಚ್ಯಂಕದ ಪ್ರಕಾರ, ಅಧ್ಯಕ್ಷ ಎಮರ್ಸನ್ ಮ್ನಂಗಾಗ್ವಾ ಮತ್ತು ಅವರ ಝಡ್‌ಎಎನ್‌ಯು-ಪಿಎಫ್ ಪಕ್ಷದ ನೀತಿಗಳು ಜಿಂಬಾಬ್ವೆಯ ನಾಗರಿಕರ ಶೋಚನೀಯ ಸ್ಥಿತಿಗೆ ಕಾರಣವಾಗಿದೆ ಎನ್ನಲಾಗಿದೆ. ನಿರುದ್ಯೋಗ, ಹಣದುಬ್ಬರ, ಬ್ಯಾಂಕ್-ಸಾಲ ದರಗಳು ಮತ್ತು ಜಿಡಿಪಿಯಲ್ಲಿನ ಶೇಕಡಾವಾರು ಬದಲಾವಣೆಯಂತಹ ಅಂಶಗಳನ್ನು ಪಡೆದುಕೊಂಡ ಬಳಿಕ 2022 ರ ಹ್ಯಾಂಕೆ ಅವರ ವಿಶ್ವದ ಅತ್ಯಂತ ಶೋಚನೀಯ ದೇಶಗಳ ಪಟ್ಟಿಯನ್ನು ಅರ್ಥಶಾಸ್ತ್ರಜ್ಞ ಸ್ಟೀವ್ ಹ್ಯಾಂಕೆ ಅವರು ಸಿದ್ಧ ಮಾಡಿದ್ದಾರೆ. ಒಟ್ಟು 157 ದೇಶಗಳು ಈ ಪಟ್ಟಿಯಲ್ಲಿದ್ದು ಶೋಚನೀಯ ದೇಶಗಳು ಮೊದಲ ಸ್ಥಾನಗಳಲ್ಲಿದ್ದರೆ, ಅತ್ಯಂತ ಕಡಿಮೆ ಶೋಚನೀಯ ದೇಶಗಳು ಕೊನೆಯಲ್ಲಿ ಸ್ಥಾನ ಪಡೆದಿರುತ್ತದೆ. ಸ್ವಿಜರ್ಲೆಂಡ್ ದೇಶವು ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಶೋಚನೀಯ ದೇಶವಾಗಿದೆ ಎಂದು ಈ ಪಟ್ಟಿಯ ಪ್ರಕಾರ ತಿಳಿಸಲಾಗಿದೆ.
ಜಿಂಬಾಬ್ವೆ, ವೆನೆಜುವೆಲಾ, ಸಿರಿಯಾ, ಲೆಬನಾನ್, ಸುಡಾನ್, ಅರ್ಜೆಂಟೀನಾ, ಯೆಮೆನ್, ಉಕ್ರೇನ್, ಕ್ಯೂಬಾ, ಟರ್ಕಿ, ಶ್ರೀಲಂಕಾ, ಹೈಟಿ, ಅಂಗೋಲಾ, ಟೋಂಗಾ ಮತ್ತು ಘಾನಾ ವಿಶ್ವದ 15 ಅತ್ಯಂತ ಶೋಚನೀಯ ದೇಶಗಳು ಎಂದು ಹೇಳಲಾಗಿದೆ.
ಭಾರತದ ಸ್ಥಾನವೆಷ್ಟು: ‘ವಿಶ್ವದ ಅತ್ಯಂತ ಶೋಚನೀಯ ದೇಶಗಳ’ ಪಟ್ಟಿಯಲ್ಲಿ ಭಾರತ 103ನೇ ಸ್ಥಾನದಲ್ಲಿದೆ. ಸೂಚ್ಯಂಕದ ಪ್ರಕಾರ ಭಾರತದಲ್ಲಿ ಶೋಚನೀಯ ಸ್ಥಿತಿಗೆ ಪ್ರಮುಖ ಕಾರಣವೆಂದರೆ ನಿರುದ್ಯೋಗ ಎಂದು ಹೇಳಲಾಗಿದೆ. ಆದರೆ, ಭಾರತ ತನ್ನದೇ ರೀತಿಯ ಅಭಿವೃದ್ಧಿಶೀಲ ದೇಶವಾಗಿರುವ ಬ್ರೆಜಿಲ್ (27ನೇ ಸ್ಥಾನ), ನೆರೆಯ ಪಾಕಿಸ್ತಾನ (35), ನೇಪಾಳ (63) ಹಾಗೂ ಯುರೋಪ್‌ನ ಸ್ವೀಡನ್ (88) ದೇಶಗಳಿಗಿಂತ ಉತ್ತಮ ಸ್ಥಾನದಲ್ಲಿವೆ.
'ಗಂಡ ಇನ್ನು ಫ್ರೆಂಡ್ ಮಾತ್ರ..' ಫಿನ್ಲೆಂಡ್ ಪ್ರಧಾನಿ ಸನ್ನಾ ಮರಿನ್ ವಿಚ್ಛೇದನ!
ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್‌ನಿಂದ ಸತತ ಆರನೇ ವರ್ಷ ವಿಶ್ವದ ಅತ್ಯಂತ ಸಂತೋಷದ ದೇಶ ಎಂದು ಸ್ಥಾನ ಪಡೆದಿರುವ ಫಿನ್‌ಲ್ಯಾಂಡ್, ಶೋಚನೀಯ ದೇಶಗಳ ಸೂಚ್ಯಂಕದಲ್ಲಿ 109 ನೇ ಸ್ಥಾನದಲ್ಲಿದೆ. ಏತನ್ಮಧ್ಯೆ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ 134 ನೇ ಶ್ರೇಯಾಂಕ ಪಡೆದುಕೊಂಡಿದೆ.
ವಿಶ್ವ ಸಂತೋಷ ಸೂಚ್ಯಂಕ 2023: ಟಾಪ್ 20 ದೇಶಗಳು ಹೀಗಿವೆ; ಸಂತೋಷದಲ್ಲೂ ಭಾರತ ಹಿಂದಿರುವುದೇಕೆ ನೋಡಿ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ