ಸಂಸತ್‌ ಭವನ ಉದ್ಘಾಟನೆಯ ಸಮಯ ಸರಿಯಿಲ್ಲ, ಪ್ಲೀಸ್‌ ಬದಲಾಯಿಸಿ ಎಂದು ಜ್ಯೋತಿಷಿಯ ಮನವಿ!

Published : May 24, 2023, 03:22 PM ISTUpdated : May 24, 2023, 03:23 PM IST
ಸಂಸತ್‌ ಭವನ ಉದ್ಘಾಟನೆಯ ಸಮಯ ಸರಿಯಿಲ್ಲ, ಪ್ಲೀಸ್‌ ಬದಲಾಯಿಸಿ ಎಂದು ಜ್ಯೋತಿಷಿಯ ಮನವಿ!

ಸಾರಾಂಶ

ಒಂದೆಡೆ ನೂತನ ಸಂಸತ್‌ ಭವನ ಉದ್ಘಾಟನೆಯ ವಿಚಾರವಾಗಿ ವಿಪಕ್ಷಗಳು ತಗಾದೆ ಎತ್ತಿದ್ದರೆ, ಟ್ವಿಟರ್‌ನಲ್ಲಿ ಜ್ಯೋತಿಷಿಯೊಬ್ಬರು ನೂತನ ಸಂಸತ್‌ ಭವನ ಕಟ್ಟಡ ಉದ್ಘಾಟನೆಗೊಳ್ಳುತ್ತಿರುವ ಸಮಯ ಸರಿಯಿಲ್ಲ. ಆದಷ್ಟು ಬೇಗ ಅದನ್ನು ಬದಲಾಯಿಸಿ ಎಂದು ಮನವಿ ಮಾಡಿದ್ದಾರೆ.

ಬೆಂಗಳೂರು (ಮೇ.24): ನೂತನ್‌ ಸಂಸತ್‌ ಭವನ ಉದ್ಘಾಟನೆ ಕುರಿತಾಗಿ ಕೇಂದ್ರ ಸರ್ಕಾರ ಹಾಗೂ ವಿಪಕ್ಷಗಳ ಜಿದ್ದಾಜಿದ್ದಿ ಜೋರಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು, ಸಂಸತ್‌ ಭವನವನ್ನು ಸಂವಿಧಾನದ ರಕ್ಷಕ ಸ್ಥಾನದಲ್ಲಿರುವ ರಾಷ್ಟ್ರಪತಿಗಳು ಉದ್ಘಾಟನೆ ಮಾಡೋದು ಶಿಷ್ಟಾಚಾರ. ಆದರೆ, ರಾಷ್ಟ್ರಪತಿಗೆ ಗೌರವ ನೀಡದೇ ಪ್ರಧಾನಿ ಮೋದಿ ಉದ್ಘಾಟನೆ ಮಾಡಲು ಹೊರಟಿದ್ದಾರೆ. ಈ ಸಮಾರಂಭವನ್ನು ಬಾಯ್ಕಾಟ್‌ ಮಾಡಲಿದ್ದೇವೆ ಎಂದು ವಿಪಕ್ಷಗಳು ತಿಳಿಸಿವೆ. ಇನ್ನೊಂದೆಡೆ ಕೇಂದ್ರ ಸರ್ಕಾರ, ಭಾನುವಾರ ಮಧ್ಯಾಹ್ನ 12 ಗಂಟೆಯ ವೇಳೆಗ ನೂತನ ಸಂಸತ್‌ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಉದ್ಘಾಟನೆ ಮಾಡಲಿದ್ದಾರೆ. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿವೆ. ಈ ನಡುವೆ ಸೋಶಿಯಲ್‌ ಮೀಡಿಯಾದಲ್ಲಿ ಜ್ಯೋತಿಷಿಯೊಬ್ಬರು, ಸಂಸತ್‌ ಭವನವನ್ನು ಉದ್ಘಾಟನೆ ಮಾಡುವ ಸಮಯ ಒಳ್ಳೆಯದಲ್ಲ. ಆದಷ್ಟು ಶೀಘ್ರವಾಗಿ ಇದನ್ನು ಬದಲಾವಣೆ ಮಾಡಿ ಎಂದು ಪ್ರಧಾನಿ ಮೋದಿ ಅವರಿಗೆ ಟ್ಯಾಗ್‌ ಮಾಡಿ ಪೋಸ್ಟ್‌ ಮಾಡಿದ್ದಾರೆ. ಜ್ಯೋತಿಷ್ಯ ಮಾರ್ಗದರ್ಶನ ಮಾಡುವ ಪ್ರಿಯಾಂಕಾ ಎನ್ನುವ ಮಹಿಳೆ ಈ ಕುರಿತಾಗಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, ಯಾಕಾಗಿ ಸಮಯ ಒಳ್ಳೆಯದಲ್ಲ ಎನ್ನುವ ಬಗ್ಗೆಯೂ ವಿವರವಾಗಿ ಬರೆದುಕೊಂಡಿದ್ದಾರೆ.

'ಸಂಸತ್ತಿನ ಹೊಸ ಕಟ್ಟಡದ ಉದ್ಘಾಟನೆಯ ಸಮಯವನ್ನು 2023ರ ಮೇ 28 ರ ಮಧ್ಯಾಹ್ನ 12 ಗಂಟೆಗೆ ಎಂದು ಹೇಳುವ ಆಹ್ವಾನ ಪತ್ರಿಕೆಯನ್ನು ನಾನು ನೋಡಿದ್ದೇನೆ. ಆದರೆ, ಒಂದು ಉತ್ತಮ ಕೆಲಸಕ್ಕಾಗಿ ಭಾನುವಾರದ ಅತ್ಯಂತ ಕೆಟ್ಟ ಸಮಯದ ಆಯ್ಕೆ ಇದಾಗಿದೆ. ಒಂದು ಮಹೂರ್ತಕ್ಕೆ ಇದು ಕೆಟ್ಟ ಸಮಯ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರೇ, ರಾಷ್ಟ್ರೀಯ ಹಾಗೂ ಭವಿಷ್ಯದ ಪ್ರಾಮುಖ್ಯತೆಯ ದೃಷ್ಟಿಯಿಂದ ಈ ಮಹೂರ್ತವನ್ನು ಆದಷ್ಟು ಬೇಗ ಪರಿಶೀಲನೆ ಮಾಡುವಂತೆ ನಿಮಗೆ ಮನವಿ ಮಾಡುತ್ತೇವೆ. ಒಮ್ಮೆ ಈ ಸಮಯದಲ್ಲಿ ಕಟ್ಟಡದ ಉದ್ಘಾಟನೆ ಮಾಡಿದರೆ, ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಹಾಗಾಗಿ ಈ ಸಮಯವನ್ನು ಯಾವುದೇ ಕಾರಣಕ್ಕೂ ತೆಗೆದುಕೊಳ್ಳಬೇಡಿ. ಮಹೂರ್ತ ಜ್ಯೋತಿಷ್ಯವನ್ನು ಆಳವಾಗಿ ತಿಳಿದಿರುವ ಯಾರೇ ಆದರೂ, ಆಯ್ಕೆ ಮಾಡಿರುವ ಸಮಯದಲ್ಲಿ ನಾನು ಈ ಅಭಿಪ್ರಾಯ ಏಕೆ ಹೊಂದಿದ್ದೇನೆ ಎಂದು ತೀರ್ಮಾನ ಮಾಡಲು ಹೆಚ್ಚಿನ ಸಮಯ ತೆಗೆದುಕೊಳ್ಳೋದಿಲ್ಲ. ಇದನ್ನು ಯಾರಾದರೂ ಪ್ರಧಾನಮಂತ್ರಿ ಕಚೇರಿಯವರಿಗೆ ಬೇಕಾದರೂ ತಿಳಿಸಬಹುದು. ಮಧ್ಯಾಹ್ನ 11.25 ರಿಂದ 11.50ರವರೆಗಿನ ಸಮಯ ಉತ್ತಮ ಮಹೂರ್ತವಿದೆ. ಅದನ್ನು ಬಳಸಿಕೊಳ್ಳಬಹುದು' ಎಂದು ಬರೆದಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ ಬರೆದಿರುವ ಅವರು, ಅವರೂ ಕೂಡ ಕೆಲ ವ್ಯಕ್ತಿಗಳೊಂದಿಗೆ ಸಮಾಲೋಚನೆ ಮಾಡಿಯೇ ಈ ಸಮಯ ಇಟ್ಟಿರಬಹುದು. ಆ ವ್ಯಕ್ತಿಗಳ ಬಗ್ಗೆ ಕಾಮೆಂಟ್‌ ಮಾಡಲು ನಾನು ಇಷ್ಟಪಡುವುದಿಲ್ಲ. ಆದರೆ, ಅವರು ಆಯ್ಕೆ ಮಾಡಿರುವ ಸಮಯ ಅತ್ಯಂತ ಕೆಟ್ಟದ್ದು. ಮೇಲ್ನೋಟಕ್ಕೆ ಮಾತ್ರವೇ ಈ ಮಹೂರ್ತದ ವಿಶ್ಲೇಷಣೆ ಮಾಡಲಾಗಿದೆ. ಸಂಸತ್‌ ಭವನ ಉದ್ಘಾಟನೆಯ ಸಮಯ ನೋಡಿದಾಗ ನನ್ನ ಹೃದಯ ನಿಜಕ್ಕೂ ಭಾರವಾಯಿತು ಎಂದು ಬರೆದಿದ್ದಾರೆ.

ಯಾರೊಂದಿಗೂ ಸಮಾಲೋಚನೆ ನಡೆಸದೇ ಪ್ರಧಾನಿ ಮೋದಿ ಈ ಸಮಯವನ್ನು ಫಿಕ್ಸ್‌ ಮಾಡೋದಿಲ್ಲ. ಹಾಗಾಗಿ ಈ ಸಮಯವನ್ನು ನೋಡಿ ನನಗೆ ಬಹಳ ಅಚ್ಚರಿಯಾಗಿದೆ. ಯಾವುದೇ ಕಟ್ಟಡವನ್ನು ಭಾನುವಾರದ ಈ ಸಮಯದಲ್ಲಿ ಲೋಕಾರ್ಪಣೆ ಮಾಡೋದು ಒಳ್ಳೆಯದಲ್ಲ ಎಂದು ಇನ್ನೊಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.

Historic Sceptre Sengol: ಕಾಂಗ್ರೆಸ್‌ ಮರೆತಿದ್ದ ರಾಜದಂಡವನ್ನು ಹೊಸ ಸಂಸತ್ತಿನಲ್ಲಿ ಇಡಲಿರುವ ಪ್ರಧಾನಿ ಮೋದಿ!

ನಾನು ಹಂಚಿಕೊಂಡ ಚಿತ್ರವು ಸಂಸತ್ತಿನ ಹೊಸ ಕಟ್ಟಡವನ್ನು ನವದೆಹಲಿಯಲ್ಲಿ ಮಧ್ಯಾಹ್ನ 12 ಗಂಟೆಗೆ ರಾಷ್ಟ್ರಕ್ಕೆ ಸಮರ್ಪಿಸಲಾಗುವುದು ಎಂದು ಸ್ಪಷ್ಟವಾಗಿ ಹೇಳುತ್ತದೆ. ಯಾರೋ (PMO ಗೆ ಸಮಯವನ್ನು ಸಲಹೆ ಮಾಡಿದವರು) ಅಭಿಜಿತ್ ಮುಹೂರ್ತ, ಖಾಲಿ 8 ನೇ ಮನೆ ಮತ್ತು ಆರೋಹಣದಲ್ಲಿ ಸ್ಥಿರ ಚಿಹ್ನೆಯನ್ನು ಮೀರಿ ನೋಡಲಿಲ್ಲ ಎಂದು ನನಗನಿಸುತ್ತದೆ ಎಂದಿದ್ದಾರೆ. ಇನ್ನು ಇವರ ಟ್ವೀಟ್‌ಗೆ 1.35 ಲಕ್ಷ ವೀವ್ಸ್‌ಗಳು ಬಂದಿದ್ದು, ಹಲವರಿಗೆ ಅವರು ಕಾರಣಗಳನ್ನೂ ನೀಡಿದ್ದಾರೆ.

New Parliament Building: ನೂತನ ಸಂಸತ್‌ ಭವನ ಉದ್ಘಾಟನೆಗೆ 19 ಪಕ್ಷಗಳ ಬಾಯ್ಕಾಟ್‌!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್