ಇದು ವಿಶ್ವದ ಅತಿ ದುಬಾರಿ ಹ್ಯಾಂಡ್‌ಬ್ಯಾಗ್‌: ಅಬ್ಬಬ್ಬಾ... ಬ್ಯಾಗಿನ ದರವೆಷ್ಟು..?

Kannadaprabha News   | Asianet News
Published : Nov 29, 2020, 09:34 AM IST
ಇದು ವಿಶ್ವದ ಅತಿ ದುಬಾರಿ ಹ್ಯಾಂಡ್‌ಬ್ಯಾಗ್‌:  ಅಬ್ಬಬ್ಬಾ... ಬ್ಯಾಗಿನ ದರವೆಷ್ಟು..?

ಸಾರಾಂಶ

ಐಷಾರಾಮಿ ಫ್ಯಾಷನ್‌ ಬ್ರ್ಯಾಂಡ್‌ ಬೋರಿನಿ ಮೆಲನೇಸಿ ವಿಶ್ವದ ಅತ್ಯಂತ ದುಬಾರಿ ಹ್ಯಾಂಡ್‌ಬ್ಯಾಗ್‌  ಬಿಡುಗಡೆ ಮಾಡಿದೆ. ಇದರ ಬೆಲೆ ಎಷ್ಟು..? ಇದರಲ್ಲೇನು ವಿಶೇಷ..?

ರೋಮ್‌ (ನ.29): ಇಟಲಿಯ ಐಷಾರಾಮಿ ಫ್ಯಾಷನ್‌ ಬ್ರ್ಯಾಂಡ್‌ ಬೋರಿನಿ ಮೆಲನೇಸಿ ವಿಶ್ವದ ಅತ್ಯಂತ ದುಬಾರಿ ಹ್ಯಾಂಡ್‌ಬ್ಯಾಗ್‌ ಅನ್ನು ಬಿಡುಗಡೆ ಮಾಡಿದೆ. 

ಅಂದಹಾಗೆ ಈ ಬ್ಯಾಗಿನ ದರ ಬರೋಬ್ಬರಿ 52 ಕೋಟಿ ರು.ಗಳು! ಪ್ರತಿ ಬ್ಯಾಗ್‌ ಅನ್ನು ತಯಾರಿಸಲು 1000 ಗಂಟೆಗಳ ಕೆಲಸದ ಅವಧಿಯ ಅಗತ್ಯವಿದ್ದು, ಕೇವಲ 3 ಐಷಾರಾಮಿ ಬ್ಯಾಗ್‌ಗಳನ್ನು ಉತ್ಪಾದನೆ ಮಾಡಲಾಗುವುದು. ಅವುಗಳ ಮಾರಾಟದಿಂದ ಬಂದ ಹಣವನ್ನು ಸಮುದ್ರದ ಸ್ವಚ್ಛತೆಗೆ ವಿನಿಯೋಗಿಸುವುದಾಗಿ ಕಂಪನಿ ತಿಳಿಸಿದೆ.

ರಚಿತಾ ರಾಮ್‌ ಖಜಾನೆ 2 ವರ್ಷದಿಂದ ತುಂಬುತ್ತಿರುವುದಕ್ಕೆ ಕಾರಣ ಈ ಬ್ಯಾಗ್?

ಏಕೆ ಇಷ್ಟುದರ?

ಈ ಹ್ಯಾಂಡ್‌ಬ್ಯಾಗ್‌ ಅನ್ನು ಹೊಳಪಾದ ಮೊಸಳೆಯ ಚರ್ಮದಿಂದ ಮಾಡಲಾಗಿದೆ. ಜೊತೆಗೆ ಬ್ಯಾಗಿನ ಅಲಂಕಾರಕ್ಕೆ 10 ವೈಟ್‌ ಗೋಲ್ಡ್‌ನಿಂದ ಮಾಡಿದ ಪಾತರಗಿತ್ತಿಗಳು ಹಾಗೂ ವಜ್ರದ ಹರಳುಗಳನ್ನು ಬಳಕೆ ಮಾಡಲಾಗಿದೆ. 

ನೀಲ ಮಣಿಗಳು, ಅಪರೂಪದ ನೀಲಿ ಹವಳಗಳು ಬ್ಯಾಗಿನ ಮೆರುಗನ್ನು ಹೆಚ್ಚಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು
ಬೆಂಗ್ಳೂರಲ್ಲಿ ಸಿ-130 ವಿಮಾನ ವಿರ್ವಹಣಾ ಕೇಂದ್ರಕ್ಕೆ ಶಂಕು