ಕೋವಿಶೀಲ್ಡ್‌ ಲಸಿಕೆ ಪಡೆದ ಬಳಿಕ ಅಡ್ಡ ಪರಿಣಾಮ : 5 ಕೋಟಿ ಪರಿಹಾರ ಕೋರಿಕೆ

By Kannadaprabha News  |  First Published Nov 29, 2020, 8:52 AM IST

ಕೊರೋನಾ ಲಸಿಕೆ ಪಡೆದು ಅಡ್ಡ ಪರಿಣಾಮ ಉಂಟಾದ ಕಾರಣ ಭಾಗಿಯಾದ ವಿದ್ಯಾರ್ಥಿ ಬರೋಬ್ಬರಿ 5 ಕೋಟಿ ರು. ಪರಿಹಾರ ಕೇಳಿದ್ದಾನೆ. 


ನವದೆಹಲಿ (ನ.29): ಬ್ರಿಟನ್‌ನ ಆಕ್ಸ್‌ಫರ್ಡ್‌ ವಿವಿ ಮತ್ತು ಆಸ್ಟ್ರಾಜೆನಕಾ ಕಂಪನಿ ಅಭಿವೃದ್ಧಿಪಡಿಸಿದ ಕೊರೋನಾ ಲಸಿಕೆ ‘ಕೋವಿಶೀಲ್ಡ್‌’ ಅನ್ನು ಪ್ರಾಯೋಗಿಕ ಪರೀಕ್ಷೆ ವೇಳೆ ಪಡೆದುಕೊಂಡಿದ್ದ ವ್ಯಕ್ತಿಯೊಬ್ಬರಲ್ಲಿ ಅಡ್ಡ ಪರಿಣಾಮ ಬೀರಿದೆ ಎಂಬ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಪ್ರಯೋಗಕ್ಕೆ ಒಳಪಟ್ಟಿದ್ದ ವ್ಯಕ್ತಿ ತಮ್ಮ ವಕೀಲರ ಮೂಲಕ 5 ಕೋಟಿ ರು. ಪರಿಹಾರ ಕೋಟಿ, ಭಾರತದಲ್ಲಿ ಲಸಿಕೆ ಪ್ರಯೋಗ ಮತ್ತು ಉತ್ಪಾದನೆಯ ಹಕ್ಕು ಪಡೆದಿರುವ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ಗೆ ನೋಟಿಸ್‌ ಜಾರಿ ಮಾಡಿದ್ದಾರೆ.

Latest Videos

undefined

ಗುಣಮುಖ ಆದವರಲ್ಲಿ ಮತ್ತೆ ಕೊರೋನಾ..! .

ಬ್ರಿಟನ್‌ನಲ್ಲಿ ಇದೇ ಲಸಿಕೆ ಪಡೆದ ವ್ಯಕ್ತಿಯಲ್ಲಿ ತೊಂದರೆ ಕಾಣಿಸಿಕೊಂಡಾಗ, ಅಲ್ಲಿ ಮಾನವ ಪ್ರಯೋಗಕ್ಕೇ ತಡೆ ನೀಡಲಾಗಿತ್ತು. ಆದರೆ ಭಾರತದಲ್ಲಿ ಅಂಥ ಯಾವುದೇ ತಡೆ ನೀಡಿಲ್ಲ. 

ಜೊತೆಗೆ ಅಡ್ಡಪರಿಣಾಮ ಬೀರಿದ ವಿಷಯವನ್ನು ಕೂಡಾ ಮುಚ್ಚಿಡಲಾಗಿದೆ. ಈ ಹಿನ್ನೆಲೆಯಲ್ಲಿ 5 ಕೋಟಿ ರು. ಪರಿಹಾರ ಕೋರಿ ನ.21ಕ್ಕೆ ನಾವು ಕಂಪನಿಗೆ ನೋಟಿಸ್‌ ನೀಡಿದ್ದೇವೆ. ಅವರು ಸೂಕ್ತವಾಗಿ ಪ್ರತಿಕ್ರಿಯಿಸದೇ ಇದ್ದಲ್ಲಿ ಕೋರ್ಟ್‌ ಮೆಟ್ಟಿಲೇರುವುದಾಗಿ ಸಂತ್ರಸ್ತನ ಪರ ವಕೀಲ ಆರ್‌.ರಾಜಾರಾಂ ತಿಳಿಸಿದ್ದಾರೆ.

click me!