3 ಲಸಿಕಾ ಘಟಕಗಳಿಗೆ ಮೋದಿ ಭೇಟಿ : ಪರಿಶೀಲಿಸಿದ ಪಿಎಂ

By Kannadaprabha NewsFirst Published Nov 29, 2020, 9:16 AM IST
Highlights

ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ನಡೆಯುತ್ತಿರುವ ಕೊರೋನಾ ಲಸಿಕೆ ಅಭಿವೃದ್ಧಿಯನ್ನು  ಖುದ್ದು ಪರಿಶೀಲನೆ ನಡೆಸಿದ್ದಾರೆ. 

ಅಹಮದಾಬಾದ್‌/ಹೈದರಾಬಾದ್‌/ಪುಣೆ (ನ.29):  ದೇಶದ ಜನತೆಗೆ ಕೋವಿಡ್‌ ಲಸಿಕೆ ವಿತರಣೆಗೆ ಯೋಜನೆ ರೂಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ನಡೆಯುತ್ತಿರುವ ಕೊರೋನಾ ಲಸಿಕೆ ಅಭಿವೃದ್ಧಿಯನ್ನು ಶನಿವಾರ ಖುದ್ದು ಪರಿಶೀಲನೆ ನಡೆಸಿದ್ದಾರೆ. ಪ್ರಧಾನಿ ಮೋದಿ ಶನಿವಾರ ಅಹಮದಾಬಾದ್‌, ಪುಣೆ ಮತ್ತು ಹೈದರಾಬಾದ್‌ನ ಕೊರೋನಾ ಲಸಿಕೆ ಉತ್ಪಾದನಾ ಘಟಕಗಳಿಗೆ ಭೇಟಿ ನೀಡಿದರು. ಈ ವೇಳೆ ಅವರು ಕೊರೋನಾ ಲಸಿಕೆಯ ಖುದ್ದು ಪರಿಶೀಲನೆ ಜೊತೆಗೆ ಹಾಗೂ ಲಸಿಕೆ ಸಂಶೋಧಕರನ್ನು ಹುರಿದುಂಬಿಸಿದರು.

"

ಮೊದಲು ಅಹಮದಾಬಾದ್‌ನಿಂದ 20 ಕಿ.ಮೀ. ದೂರದ ಝೈಡಸ್‌ ಕ್ಯಾಡಿಲಾ ಔಷಧ ಉತ್ಪಾದನಾ ಘಟಕಕ್ಕೆ ಆಗಮಿಸಿದ ಮೋದಿ, ಅಲ್ಲಿ ಪಿಪಿಇ ಕಿಟ್‌ ಧರಿಸಿ 1 ತಾಸು ಕಾಲ ಕೋವಿಡ್‌ ಲಸಿಕೆ ಅಭಿವೃದ್ಧಿ ಪ್ರಕ್ರಿಯೆಯನ್ನು ವೀಕ್ಷಿಸಿದರು. ಈ ವೇಳೆ ಕಂಪನಿಯ ಅಧಿಕಾರಿಗಳು ಯಾವ ಹಂತಕ್ಕೆ ಲಸಿಕಾ ಅಭಿವೃದ್ಧಿ ಬಂದಿದೆ? ಲಸಿಕೆಯನ್ನು ಹೇಗೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂಬುದನ್ನು ವಿವರಿಸಿದರು. ಲಸಿಕೆ ಸಂಶೋಧಕರ ಜತೆಗೂ ಮೋದಿ ಸಂವಾದ ನಡೆಸಿದರು.

ಗುಣಮುಖ ಆದವರಲ್ಲಿ ಮತ್ತೆ ಕೊರೋನಾ..! ..

ಈ ಬಗ್ಗೆ ಟ್ವೀಟ್‌ ಮಾಡಿದ ಮೋದಿ, ‘ಝೈಡಸ್‌ ಕ್ಯಾಡಿಲಾದ ಲಸಿಕೆ ಘಟಕಕ್ಕೆ ಭೇಟಿ ನೀಡಿದೆ. ಲಸಿಕೆ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಶೋಧಕರ ಕೆಲಸ ಮೆಚ್ಚುವಂಥದ್ದು. ಭಾರತ ಸರ್ಕರ ಸದಾ ಸಕ್ರಿಯವಾಗಿ ಅವರ ಕೆಲಸಕ್ಕೆ ಬೆಂಬಲವಾಗಿ ನಿಲ್ಲುತ್ತದೆ’ ಎಂದಿದ್ದಾರೆ. ಝೈಡಸ್‌ 2021ರ ಮಾಚ್‌ರ್‍ಗೆ ಲಸಿಕೆ ಲಭ್ಯಗೊಳಿಸುವ ಗುರಿ ಹೊಂದಿದೆ.

ಅಲ್ಲಿಂದ 11.40ಕ್ಕೆ ನಿರ್ಗಮಿಸಿದ ಮೋದಿ ಅವರು ಮಧ್ಯಾಹ್ನ 1 ಗಂಟೆಗೆ ಹೈದರಾಬಾದ್‌ಗೆ ಆಗಮಿಸಿದರು. ಜೆನೋಮ್‌ ವ್ಯಾಲಿ ಪ್ರದೇಶದಲ್ಲಿ ಲಸಿಕೆ ಉತ್ಪಾದನಾ ಘಟಕ ಹೊಂದಿರುವ ಭಾರತ್‌ ಬಯೋಟೆಕ್‌ ಔಷಧ ಕಂಪನಿಗೆ ಭೇಟಿ ನೀಡಿ, ಸುಮಾರು 1 ತಾಸು ‘ಕೋವ್ಯಾಕ್ಸಿನ್‌’ ಲಸಿಕೆ ಅಭಿವೃದ್ಧಿ ಹೇಗೆ ನಡೆಯುತ್ತಿದೆ ಎಂಬುದರ ವಿವರ ಪಡೆದರು. ಭಾರತ್‌ ಬಯೋಟೆಕ್‌ ಮುಖ್ಯಸ್ಥ ಕೃಷ್ಣ ಎಲ್ಲ ಹಾಗೂ ಇತರ ವಿಜ್ಞಾನಿಗಳ ಜತೆ ಸಂವಾದ ನಡೆಸಿದರು.

ಈ ಬಗ್ಗೆ ಟ್ವೀಟ್‌ ಮಾಡಿದ ಮೋದಿ, ‘ಸಂಶೋಧನೆಯಲ್ಲಿ ಉತ್ತಮ ಪ್ರಗತಿ ಕಂಡಿರುವ ಭಾರತ್‌ ಬಯೋಟೆಕ್‌ ವಿಜ್ಞಾನಿಗಳಿಗೆ ನನ್ನ ಅಭಿನಂದನೆ. ಐಸಿಎಂಆರ್‌ ಜತೆ ಈ ಕಂಪನಿಯು ಲಸಿಕೆ ಅಭಿವೃದ್ಧಿಯಲ್ಲಿ ವೇಗವಾಗಿ ಕೆಲಸ ಮಾಡುತ್ತಿದೆ’ ಎಂದರು. ಕೋವ್ಯಾಕ್ಸಿನ್‌ನ 3ನೇ ಹಂತದ ಲಸಿಕೆ ಪ್ರಯೋಗ ಈಗ ನಡೆಯುತ್ತಿದೆ.

ಹೈದರಾಬಾದ್‌ನಿಂದ ಮಧ್ಯಾಹ್ನ 3.20ಕ್ಕೆ ಹೊರಟು 4.30ಕ್ಕೆ ಪುಣೆಗೆ ಆಗಮಿಸಿದ ಮೋದಿ, ಸೀರಂ ಇನ್ಸ್‌ಟಿಟ್ಯೂಟ್‌ಗೆ ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ ಲಸಿಕೆ ಸಂಶೋಧನೆಯನ್ನು ವೀಕ್ಷಿಸಿದರು. ಸಂಜೆ 6 ಗಂಟೆಗೆ ದಿಲ್ಲಿಗೆ ಹೊರಟರು. ಸೀರಂ ಸಂಸ್ಥೆಯು ಆಕ್ಸ್‌ಫರ್ಡ್‌ ವಿವಿ ಹಾಗೂ ಆಸ್ಟ್ರಾಜೆನೆಕಾ ಕಂಪನಿಗಳ ಸಹಯೋಗದಲ್ಲಿ ಲಸಿಕೆ ವಿತರಣೆ ಒಪ್ಪಂದ ಮಾಡಿಕೊಂಡಿದೆ.

click me!