ವಿಶ್ವದ ಡೇಂಜರಸ್ ಉಗ್ರ ಸಂಘಟನೆ ಪಟ್ಟಿ ಬಿಡುಗಡೆ, ಭಾರತದ ಸಿಪಿಐ ಪಕ್ಷಕ್ಕೆ 12ನೇ ಸ್ಥಾನ!

Published : Mar 17, 2023, 04:58 PM IST
ವಿಶ್ವದ ಡೇಂಜರಸ್ ಉಗ್ರ ಸಂಘಟನೆ ಪಟ್ಟಿ ಬಿಡುಗಡೆ, ಭಾರತದ ಸಿಪಿಐ ಪಕ್ಷಕ್ಕೆ 12ನೇ ಸ್ಥಾನ!

ಸಾರಾಂಶ

ವಿಶ್ವದ ಅತೀ ಭಯಾನಕ ಉಗ್ರ ಸಂಘಟನೆಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಆಸ್ಟ್ರೇಲಿಯಾ IEP  ನೀಡಿದ ವರದಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಮೊದಲ ಸ್ಥಾನ ಪಡೆದುಕೊಂಡಿದೆ. ಈ ಡೇಂಜರಸ್ ಉಗ್ರ ಸಂಘಟನೆಗಳ ಪಟ್ಟಿಯಲ್ಲಿ ಕಮ್ಯಾನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಸಿಪಿಐ) ಪಕ್ಷ 12ನೇ ಸ್ಥಾನದಲ್ಲಿದೆ.  

ನವದೆಹಲಿ(ಮಾ.17): ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಕೇರಳದಲ್ಲಿ ಆಡಳಿತ ನಡೆಸುತ್ತಿದೆ. ತಮಿಳುನಾಡು ಸಚಿವ ಸಂಪುಟದಲ್ಲಿ ನಾಲ್ವರು ಸಚಿವರಿದ್ದಾರೆ. ಇನ್ನು ತ್ರಿಪುರಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಸಿಪಿಐ ಪಕ್ಷ ಬಲವಾಗಿ ಬೇರೂರಿದೆ. ಆದರೆ ಸಿಪಿಐ ಪಕ್ಷದ ಮೇಲೆ ಉಗ್ರರಿಗೆ ಬೆಂಬಲ ನೀಡಿದ ಹಲವು ಆರೋಪಗಳಿವೆ. ಇದೀಗ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾಗೆ ತೀವ್ರ ಹಿನ್ನಡೆಯಾಗಿದೆ. ಆಸ್ಟ್ರೇಲಿಯಾದ ಎಕಾನಾಮಿಕ್ ಆ್ಯಂಡ್ ಪೀಸ್ ಇನ್ಸ್‌ಟಿಟ್ಯೂಟ್, ವಿಶ್ವದ ಅತ್ಯಂತ ಭೀಕರ ಹಾಗೂ ಭಯಾನಕ ಉಗ್ರ ಸಂಘಟನೆಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಸಿಪಿಐ ಪಕ್ಷ 12ನೇ ಸ್ಥಾನದಲ್ಲಿದೆ.

2022ರ ಜಾಗತಿಕ ಉಗ್ರಸಂಘಟನೆಗಳ ಇಂಡೆಕ್ಸ್ ಬಿಡುಗಡೆ ಮಾಡಲಾಗಿದೆ. ಅತ್ಯಂತ ಭೀಕರ ದಾಳಿ, ಭೀಕರವಾಗಿ ಅಮಾಯಕರ ಹತ್ಯೆ, ಸೇರಿದಂತೆ ಹಲವು ಘಟನೆಗಳ ಆಧಾರದಲ್ಲಿ ಈ ಉಗ್ರ ಸಂಘಟನೆಗಳ ಭೀಕರತೆಯನ್ನು ಅಳೆಯಲಾಗುತ್ತದೆ. IEP ನೀಡಿದ ವರದಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಮೊದಲ ಸ್ಥಾನ ಪಡೆದುಕೊಂಡಿದೆ. ವಿಶ್ವದ ಅತೀ ಭೀಕರ ಉಗ್ರಸಂಘಟನೆ ಅನ್ನೋ ಪಟ್ಟವನ್ನು 2022ರ ಸಾಲಿನಲ್ಲೂ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಉಳಿಸಿಕೊಂಡಿದೆ. ಕಳೆದ 8 ವರ್ಷದಿಂದ ಇಸ್ಲಾಮಿಟ್ ಸ್ಟೇಟ್ ಜಾಗತಿಕವಾಗಿ ಅತ್ಯಂತ ಭಯಾನಕ ಹಾಗೂ ಡೆಡ್ಲಿಯೆಸ್ಟ್ ಉಗ್ರಸಂಘಟನೆ ಪಟ್ಟ ಉಳಿಸಿಕೊಂಡಿದೆ. 

ನಿಮ್ಮವರು ನಮ್ಮವರು, ಒಳ್ಳೆಯವರು ಕೆಟ್ಟವರು, ಉಗ್ರರ ವರ್ಗೀಕರಣ ಅಪಾಯ, ವಿಶ್ವಸಂಸ್ಥೆಯಲ್ಲಿ ಗುಡುಗಿದ ಭಾರತ!

ಸೋಮಾಲಿಯಾದಲ್ಲಿ ಬೇರೂರಿರುವ ಅಲ್ ಸಹಾಬ್ ಅಲ್ ಮುಜಾಹಿದ್ದೀನ್ ಉಗ್ರ ಸಂಘಟನೆ 2ನೇ ಸ್ಥಾನದಲ್ಲಿದೆ.ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಬಲೂಚಿಸ್ತಾನ ಲಿಬರೇಶನ್ ಆರ್ಮಿ 3ನೇ ಅತೀ ಡೇಂಜರಸ್ ಉಗ್ರ ಸಂಘಟನೆಯಾಗಿದೆ. ಇನ್ನು ಪಶ್ಚಿಮ ಆಫ್ರಿಕಾದಲ್ಲಿ ಉಗ್ರವಾದ ಸೃಷ್ಟಿಸುತ್ತಿರುವ ಜಮಾತ್ ನುಸ್ರತ್ ಅಲ್ ಇಸ್ಲಾಮ್ ವಾಲ್ ಮುಸ್ಲಿಮೀನ್ 4ನೇ ಸ್ಥಾನ ಪಡೆದುಕೊಂಡಿದೆ. 

2022ರ ಸಾಲಿನಲ್ಲಿ ಭಯೋತ್ಪಾದನೆಗೆ ಅತೀ ಹೆಚ್ಚು ಬಲಿಯಾದ ಪ್ರದೇಶ ದಕ್ಷಿಣ ಏಷ್ಯಾ. ವರದಿ ಪ್ರಕಾರ 2022ರಲ್ಲಿ ದಕ್ಷಿಣ ಏಷ್ಯಾದಲ್ಲಿ 1,354 ಮಂದಿ ಭಯೋತ್ಪಾದನೆಗೆ ಬಲಿಯಾಗಿದ್ದಾರೆ. ಆದರೆ 2021ಕ್ಕೆ ಹೋಲಿಸಿದರೆ ಶೇಕಡಾ 30 ರಷ್ಟು ಇಳಿಕೆಯಾಗಿದೆ. 2022ರ ಸಾಲಿನಲ್ಲಿ ಭಯೋತ್ಪಾದಕ ದಾಳಿ ಶೇಕಡಾ 27 ರಷ್ಟು ಇಳಿಕೆಯಾಗಿದೆ. 

ಮಂಗಳೂರು: ಭಯೋತ್ಪಾದನಾ ಕೃತ್ಯಕ್ಕೆ ದ.ಕ.ದಿಂದ 25 ಕೋಟಿ ರು. ವರ್ಗಾವಣೆ?

ಭಯೋತ್ಪಾದನೆಗೆ ಬಳಲಿದ ದೇಶಗಳ ಪೈಕಿ ಭಾರತ ಕೂಡ ಒಂದು. ಜಮ್ಮು ಮತ್ತು ಕಾಶ್ಮೀರದ ಅತೀ ಹೆಚ್ಚು ಭಯೋತ್ಪಾದನೆ ಚಟುವಟಿಕಗೆ ಒಳಗಾಗಿರುವ ರಾಜ್ಯವಾಗಿದೆ. ಕಣಿವೆ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಹಲವು ಪ್ರಯತ್ನಗಳ ಫಲವಾಗಿ ಇದೀಗ ಗಣನೀಯವಾಗಿ ಉಗ್ರ ಸಂಘಟನೆಗಳ ದಾಳಿ ಇಳಿಕೆಯಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ