ವಾರಕ್ಕೆ 60 ತಾಸು ದುಡಿಮೆ ಆರೋಗ್ಯಕ್ಕೆ ಹಾನಿಕಾರಕ!

Published : Feb 01, 2025, 07:24 AM IST
ವಾರಕ್ಕೆ 60 ತಾಸು ದುಡಿಮೆ ಆರೋಗ್ಯಕ್ಕೆ ಹಾನಿಕಾರಕ!

ಸಾರಾಂಶ

ಉತ್ಪಾದಕತೆಯ ಹೆಸರಲ್ಲಿ ಕಚೇರಿಗಳಲ್ಲಿ ಸುದೀರ್ಘ ಅವಧಿಗೆ ಕೆಲಸ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ನಿತ್ಯವೂ ಕುಳಿತಲ್ಲೇ 12 ತಾಸಿಗಿಂತ ಅಧಿಕ ಕೆಲಸ ಮಾಡುವುದು ಮಾನಸಿಕ ಸ್ವಾಸ್ಥ್ಯಕ್ಕೆ ಅಪಾಯಕಾರಿ ಎಂದು ಹಲವು ಅಧ್ಯಯನ ವರದಿಗಳು ಹೇಳಿವೆ ಎಂದು ಸರ್ಕಾರ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. 

ನವದೆಹಲಿ(ಫೆ.01): ವಾರಕ್ಕೆ 60ರಿಂದ 90 ಗಂಟೆ ಕೆಲಸ ಮಾಡುವ ಅಗತ್ಯದ ಬಗ್ಗೆ ಇನ್ಫೋಸಿಸ್‌ನ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ಮತ್ತು ಎಲ್ ಆ್ಯಂಡ್ ಟಿ ಅಧ್ಯಕ್ಷ ಸುಬ್ರಹ್ಮಣ್ಯಂ ಅವರ ಸಲಹೆ ಕುರಿತು ದೇಶವ್ಯಾಪಿ ಚರ್ಚೆ ನಡೆದ ಬೆನ್ನಲ್ಲೇ, ವಾರಕ್ಕೆ 60 ಗಂಟೆಗಿಂತ ಹೆಚ್ಚಿನ ದುಡಿಮೆಯು ಸಿಬ್ಬಂದಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷೆ ಹೇಳಿರುವುದು ಸಂಚಲನ ಮೂಡಿಸಿದೆ.

ಆದರೆ ಇಂಥ ಅಭಿಪ್ರಾಯದ ಜೊತೆಜೊತೆಗೇ, ದೇಶದ ಕಾರ್ಮಿಕ ಕಾನೂನುಗಳು ಗರಿಷ್ಠ ಕೆಲಸ ಅವಧಿಗೆ ಹೊಂದಿರುವ ಬಿಗಿ ನಿಯಮಗಳ ಬಗ್ಗೆ ಆಕ್ಷೇಪವನ್ನೂ ವ್ಯಕ್ತಪಡಿಸಿದೆ. ಇಂಥ ಬಿಗಿ ನಿಯಮಗಳು ಉದ್ಯಮಗಳ ಬೆಳವಣಿಗೆ ಮತ್ತು ವೈಯಕ್ತಿಕವಾಗಿ ಸಿಬ್ಬಂದಿ ಬೆಳವಣಿಗೆಗೂ ಅಡ್ಡಿಯಾಗಿದೆ ಎಂದು ಹೇಳಿದೆ. ಇಂಥ ಎರಡು ಅಭಿಪ್ರಾಯಗಳು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷಾ ವರದಿಯಲ್ಲಿದೆ.

90 ಗಂಟೆ ಕೆಲಸ: ಯಾವ ದೇಶದಲ್ಲಿ ವಾರಕ್ಕೆ ಗರಿಷ್ಠ ಗಂಟೆ ಕೆಲಸ ಅಂತಾ ಗೊತ್ತಿದ್ಯಾ?

ಆರೋಗ್ಯಕ್ಕೆ ಹಾನಿಕರ: 

ಉತ್ಪಾದಕತೆಯ ಹೆಸರಲ್ಲಿ ಕಚೇರಿಗಳಲ್ಲಿ ಸುದೀರ್ಘ ಅವಧಿಗೆ ಕೆಲಸ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ನಿತ್ಯವೂ ಕುಳಿತಲ್ಲೇ 12 ತಾಸಿಗಿಂತ ಅಧಿಕ ಕೆಲಸ ಮಾಡುವುದು ಮಾನಸಿಕ ಸ್ವಾಸ್ಥ್ಯಕ್ಕೆ ಅಪಾಯಕಾರಿ ಎಂದು ಹಲವು ಅಧ್ಯಯನ ವರದಿಗಳು ಹೇಳಿವೆ ಎಂದು ಸರ್ಕಾರ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. 

ಜೊತೆಗೆ ಇಂಥ ಕೆಲಸದ ವಾತಾವರಣದಿಂದಾಗಿ ಸಿಬ್ಬಂದಿಗಳು ಖಿನ್ನತೆಮೊದಲಾದಸಮಸ್ಯೆಗೆತುತ್ತಾಗುತ್ತಿದ್ದು, ಜಾಗತಿಕವಾಗಿ 120 ಕೋಟಿಕೆಲಸದ ದಿನಗಳುನಷ್ಟವಾಗುತ್ತಿದೆ.ಇದರಿಂದಾಗಿ 85 ಲಕ್ಷ ಕೋಟಿ ರು.ನಷ್ಟು ನಷ್ಟವಾಗುತ್ತಿದೆ ಎಂದು ಹೇಳಿದೆ.

ಆಕ್ಷೇಪ:

ಇದೇ ವೇಳೆ ಭಾರತದ ಕಾರ್ಮಿಕ ಕಾನೂನುಗಳು ಸಿಬ್ಬಂದಿಗೆ ನಿತ್ಯದ ಗರಿಷ್ಠದ ಸಮಯದ ಮಿತಿ ಹಾಕಿವೆ. ಆದರೆ ವಿದೇಶಗಳಲ್ಲಿ ಕರ್ತವ್ಯದ ಅವಧಿಯಲ್ಲಿ ಹೊಂದಾಣಿಕೆಗೆ ಅವಕಾಶವಿದೆ. ಅಲ್ಲಿ ಕರ್ತವ್ಯದ ಅವಧಿಯನ್ನು ದೈನಂದಿನ ಬದಲಾಗಿ ವಾರ ಅಥವಾ ಮಾಸಿಕದ ಲೆಕ್ಕಾಚಾರ ಮಾಡಲಾಗುತ್ತದೆ. ಹೀಗಾಗಿ ಅಗತ್ಯವಿದ್ದಾಗ ಸಂಸ್ಥೆಗಳು ಸಿಬ್ಬಂದಿಯಿಂದ ಹೆಚ್ಚು ಕೆಲಸ ಮಾಡಲು ಅವಕಾಶ ಸಿಗುತ್ತದೆ. ಜಾಗತಿಕ ಮಟ್ಟದ ಕಂಪನಿಗಳೊಂದಿಗೆ ಸ್ಪರ್ಧೆ ಮಾಡುವ ನಿಟ್ಟಿನಲ್ಲಿ ಇಂಥ ನೀತಿ ಅವಶ್ಯಕ ಎಂದೂ ಸರ್ಕಾರ ಸಮೀಕ್ಷೆಯಲ್ಲಿ ಹೇಳಿದೆ.

ದಿನಕ್ಕೆ 14 ಗಂಟೆ ಕೆಲಸ: ರಾಜ್ಯ ಸರ್ಕಾರ ಜಾರಿಗೆ ತರಲು ಚಿಂತಿಸಿದ ಹೊಸ ಬಿಲ್‌ಗೆ ಟೆಕ್ಕಿಗಳ ತೀವ್ರ ವಿರೋಧ

ಭಾರತದಲ್ಲಿ ಹೀಗೆ ದೈನಂದಿನ, ವಾರ, ಮಾಸಿಕ, ವಾರ್ಷಿಕ ಹಾಕಿರುವುದು ಉದ್ಯಮಗಳ ಬೆಳವಣಿಗೆ ಅಡ್ಡಿಯಾಗುವ ಜೊತೆಗೆ ಸಿಬ್ಬಂದಿಗಳ ಆದಾಯಕ್ಕೂ ಮಿತಿ ಹಾಕಿದೆ ಎಂದು ಸರ್ಕಾರ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಮೀಕ್ಷೇಲಿ ಇನ್ನೇನಿದೆ?

ದೇಶದ ಮಹಾನಗರಗಳಲ್ಲಿ ಹೆಚ್ಚುತ್ತಿರುವ 14 ಮಾಲಿನ್ಯ ತಡೆಯಲು ಸಿಂಗಾಪುರದೆ ಮಾದರಿಯಲ್ಲಿ ಲಂಬವಾಗಿ ಗಿಡಗಳನ್ನು ನೆಟ್ಟು ಹಸಿರುಗೋಡೆ ನಿರ್ಮಿಸಬೇಕು
2 ಮಾನವರಷ್ಟೇ ಸಮರ್ಥವಾಗಿ ನಿರ್ಧಾರಗ ಳನ್ನು ಕೈಗೊಳ್ಳಬಲ್ಲ ಸಾಮರ್ಥವನ್ನು ಎಐ ಹೊಂದಿರುವುದರಿಂದ ಭವಿಷ್ಯದಲ್ಲಿ ಉದ್ಯೋಗಗಳು ನಷ್ಟವಾಗಬಹುದು
10 ರ್ಒಂಗೆ ಈಗಾಗಲೇ 83 ಸಾವಿರ ರು. ಗಡಿ 3 ತಲುಪಿರುವ ಚಿನ್ನದ ಬೆಲೆ ಈ ವರ್ಷ ಕುಸಿತ ಕಾಣುವ ನಿರೀಕ್ಷೆ ಇದೆ. ಆದರೆ ಬೆಳ್ಳಿಯ ಬೆಲೆ ಮಾತ್ರ ಏರಿಕೆಯಾಗುವ ಸಂಭವ ಇದೆ
4 ಎಲ್ಲ ಹವಾಮಾನದಲ್ಲೂ ಉತ್ತಮವಾಗಿ ಬೆಳೆವ ಬೆಳೆ ಅಭಿವೃದ್ಧಿಪಡಿಸುವುದು ಅಗತ್ಯ. ಕಾಳು, ಎಣ್ಣೆಬೀಜ, ಟೊಮೆಟೋ ಹಾಗೂ ಈರುಳ್ಳಿ ಇಳುವರಿ ಹೆಚ್ಚಿಸಬೇಕು
5 2025-26 ಆರ್ಥಿಕ ವರ್ಷದಲ್ಲಿ ಜಿಡಿಪಿ ಶೇ.6.3ರಿಂದ 6.8ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆ. 4 ವರ್ಷಗಳಲ್ಲೇ ಕನಿಷ್ಠವಾದ ಶೇ.6.4ಕ್ಕೆ ಇಳಿಕೆ ಭೀತಿ ಕೂಡ ಇದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಗುಲ ದುಡ್ಡು ಅನ್ಯ ಕೆಲಸಕ್ಕೆ ಬಳಸಕೂಡದು : ಸುಪ್ರೀಂ
ಉಗ್ರವಾದದ ವಿರುದ್ಧ ಜಂಟಿ ಹೋರಾಟ : ಮೋದಿ ಘೋಷಣೆ