ಸುರಕ್ಷತಾ ಸಾಧನಗಳನ್ನು ನೀಡದೆ ರೈಲು ಶೌಚಾಲಯಗಳನ್ನು ಬರಿಗೈಯಲ್ಲಿ ಕ್ಲೀನ್ ಮಾಡಲು ಕಾರ್ಮಿಕರಿಗೆ ಒತ್ತಾಯಿಸಲಾಗಿದೆ ಎಂದು ತಿಳಿದುಬಂದಿದೆ.
ಮಧುರೈ (ಜೂನ್ 27, 2023): ಸುರಕ್ಷತಾ ಸಾಧನಗಳನ್ನು ನೀಡದೆ ಬರಿಗೈಯಿಂದಲೇ ರೈಲು ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಕಾರ್ಮಿಕರಿಗೆ ಒತ್ತಾಯಿಸಲಾಯಿತು ಎಂದು ಮಧುರೈ ರೈಲ್ವೆ ವಿಭಾಗದ ಗುತ್ತಿಗೆಯಲ್ಲಿರುವ ಕನ್ಸರ್ವೆನ್ಸಿ ಕಾರ್ಯಕರ್ತರು ಆಘಾತಕಾರಿ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಸೋಮವಾರ ಸಂಜೆ ರೈಲ್ವೇ ಕಲ್ಯಾಣ ಮಂಟಪದಲ್ಲಿ ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಎಂ ವೆಂಕಟೇಶನ್ ನಡೆಸಿದ ಪರಿಶೀಲನಾ ಸಭೆಯಲ್ಲಿ ಅವರು ಈ ಸಂಬಂಧ ಆರೋಪ ಮಾಡಿದ್ದು, ವಿಡಿಯೋ ಸಾಕ್ಷ್ಯವನ್ನು ಸಹ ತೋರಿಸಿದ್ದಾರೆ.
ಬಳಿಕ ಈ ಸಂಬಂಧ ದೂರನ್ನು ಸಹ ನೀಡಲಾಗಿದ್ದು, ಅಲ್ಲದೆ ವಿಡಿಯೋ ಕ್ಲಿಪ್ಪಿಂಗ್‌ಗಳ ಸಾಕ್ಷ್ಯವನ್ನು ಸಹ ತೋರಿಸಿದ ಕಾರಣ ಕೋಲಾಹಲಕ್ಕೆ ಕಾರಣವಾಗಿದೆ. ಹಿರಿಯ ರೈಲ್ವೆ ಅಧಿಕಾರಿಗಳು ಮತ್ತು ಅಧ್ಯಕ್ಷರು ಈ ಬಗ್ಗೆ ಸುದೀರ್ಘ ಚರ್ಚೆಯನ್ನೂ ನಡೆಸಿದ್ದಾರೆ.
ಇದನ್ನು ಓದಿ: ಇದು ಟ್ರೈನೋ, ಓಪನ್ ಶವರ್ ಬೋಗಿಯೋ: ಎಸಿ ಕೋಚ್‌ನಲ್ಲಿ ನೀರು ಸೋರಿಕೆ ವಿರುದ್ಧ ನೆಟ್ಟಿಗರ ವ್ಯಂಗ್ಯ
ಇದಕ್ಕೂ ಮುನ್ನ ಸಭೆ ಆರಂಭವಾಗುತ್ತಿದ್ದಂತೆ ಗುತ್ತಿಗೆ ಕಂಪನಿಗಳ ಎಲ್ಲಾ ಮೇಲ್ವಿಚಾರಕರು ಮತ್ತು ವ್ಯವಸ್ಥಾಪಕರನ್ನು ಸಭಾಂಗಣದಿಂದ ಹೊರಹೋಗುವಂತೆ ವೆಂಕಟೇಶನ್ ಹೇಳಿದರು. ಹಾಗೆ, ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಳುವಂತೆ ತಿಳಿಸಿದರು. ಅತ್ಯಂತ ಕಡಿಮೆ ಸಂಬಳ ನೀಡಲಾಗುತ್ತಿದೆ ಎಂದು ಕಾರ್ಮಿಕರು ತಮ್ಮ ಸಂಕಷ್ಟವನ್ನು ವಿವರಿಸಿದರು. ಅಲ್ಲದೆ, ವಾರದ ರಜೆಯಿಲ್ಲದೆ ಇಡೀ ತಿಂಗಳು ಕೆಲಸ ಮಾಡುವಂತೆ ಮಾಡಲಾಗಿದೆ ಎಂದೂ ಅವರು ಹೇಳಿದರು.
ಅಷ್ಟೇ ಅಲ್ಲದೆ, ತಮ್ಮ ಭವಿಷ್ಯ ನಿಧಿ ಮತ್ತು ಇಎಸ್‌ಐ ಪ್ರಯೋಜನಗಳ ಬಗ್ಗೆಯೂ ನಮಗೆ ತಿಳಿದಿಲ್ಲ. ಈ ಬಗ್ಗೆ ಗುತ್ತಿಗೆದಾರರು ನಮಗೆ ಮಾಹಿತಿ ನೀಡಿಲ್ಲ ಎಂದೂ ಕಾರ್ಮಿಕರು ದೂರಿದ್ದಾರೆ. ಹಾಗೆ, ನಾವು ಯಾವುದೇ ಪೇ ಸ್ಲಿಪ್‌ಗಳನ್ನು ಸ್ವೀಕರಿಸುವುದಿಲ್ಲ. ಆದರೆ ಅವರ ಖಾತೆಗಳಿಗೆ ಸಂಬಳವನ್ನು ಜಮಾ ಮಾಡಿದ ನಂತರ ನೋಟ್‌ಬುಕ್‌ಗೆ ಸಹಿ ಮಾಡಲು ಕೇಳಲಾಗುತ್ತದೆ. ರೈಲ್ವೆ ಮಂಜೂರು ಮಾಡಿದ ಮೊತ್ತ ಮತ್ತು ಗುತ್ತಿಗೆದಾರರು ಕಾರ್ಮಿಕರಿಗೆ ವಿತರಿಸಿದ ಮೊತ್ತದ ನಡುವೆ ಅಗಾಧ ವ್ಯತ್ಯಾಸವಿದೆ ಎಂದೂ ಅವರು ಹೇಳಿದರು.
ಇದನ್ನೂ ಓದಿ: ಲೈಂಗಿಕ ಕಿರುಕುಳಕ್ಕೆ ವಿರೋಧ: ಚಲಿಸುತ್ತಿದ್ದ ರೈಲಿನಿಂದ ಮಹಿಳೆ ತಳ್ಳಿದ ಐವರು ಕಾಮುಕರು!
ಕೆಲವು ಮಹಿಳಾ ಕಾರ್ಮಿಕರು ಕಳೆದ ಮೂರು ವರ್ಷಗಳಿಂದ ಬೋನಸ್ ಮೊತ್ತವನ್ನು ಪಡೆದಿಲ್ಲ, ಆದರೆ ನಕಲಿ ದಾಖಲೆಗಳಿಗೆ ಸಹಿ ಹಾಕಿಸಿಕೊಳ್ಳಲಾಗಿದೆ ಎಂದೂ ಹೇಳಿದರು. ತಮ್ಮ ಸಮಸ್ಯೆಗಳನ್ನು ರೈಲ್ವೆ ಅಧಿಕಾರಿಗಳಿಗೆ ದೂರು ನೀಡಲು ಗುತ್ತಿಗೆ ಕಂಪನಿಗಳ ಮೇಲ್ವಿಚಾರಕರು ಮತ್ತು ವ್ಯವಸ್ಥಾಪಕರು ಕಿರುಕುಳ ನೀಡುತ್ತಾರೆಂಬ ಭಯವೂ ಇದೆ ಎಂದಿದ್ದಾರೆ. ಅಲ್ಲದೆ, ಲೈಂಗಿಕ ಕಿರುಕುಳ ಸೇರಿದಂತೆ ಕಿರುಕುಳದ ಬಗ್ಗೆ ದೂರು ಸಲ್ಲಿಸಲು ಮಹಿಳಾ ಉದ್ಯೋಗಿಗಳಿಗೆ ಯಾಂತ್ರಿಕ ವ್ಯವಸ್ಥೆ ಇದೆಯೇ ಎಂದು ವೆಂಕಟೇಶನ್ ಕೇಳಿದಾಗ ಈ ಬಗ್ಗೆಯೂ ಕಾರ್ಮಿಕರಿಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಬಳಿಕ ಅವರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪಿ ಅನಂತ್ ಅವರೊಂದಿಗೂ ಚರ್ಚೆ ನಡೆಸಿದ್ದಾರೆ. ಅವರು, ವಿಭಾಗದಲ್ಲಿ ಮಹಿಳಾ ಕೋಶವಿದ್ದು, ಅವರಿಗಾಗಿ ಎಲ್ಲ ಸಹಾಯವಾಣಿ ಸಂಖ್ಯೆಗಳನ್ನು ಪ್ರದರ್ಶಿಸಲಾಗುವುದು ಎಂದೂ ತಿಳಿಸಿದರು. ಈ ಮಧ್ಯೆ, ಸಭೆ ನಡೆಯುತ್ತಿರುವಾಗಲೇ ಮೇಲ್ವಿಚಾರಕರು ದೂರವಾಣಿ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಹಿಳಾ ಕಾರ್ಯಕರ್ತೆಯೊಬ್ಬರು ದೂರಿದ್ದಾರೆ. ಇನ್ನು, ಈ ದೂರು ನೀಡಿದ ಯಾರ ಉದ್ಯೋಗಗಳು ಅಪಾಯದಲ್ಲಿರುವುದಿಲ್ಲ ಎಂದು DRM ಭರವಸೆ ನೀಡಿದರು.
ಇದನ್ನೂ ಓದಿ: ವಂದೇ ಭಾರತ್ ರೈಲಲ್ಲಿ ಒಮ್ಮೆಯಾದ್ರೂ ಹೋಗ್ಬೆಕು ಅನ್ನೋ ಆಸೆಗೆ ತಣ್ಣೀರೆರಚಿದ ರೈಲ್ವೆ ಇಲಾಖೆ: ಪ್ರಯಾಣಿಕನ ಆಕ್ರೋಶ!
ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ವೆಂಕಟೇಶನ್, ಈ ವಿಡಿಯೋ ಕ್ಲಿಪ್ಪಿಂಗ್‌ಗಳ ಬಗ್ಗೆ ತನಿಖೆ ನಡೆಸಲಾಗುವುದು ಮತ್ತು ವಿಡಿಯೋಗಳನ್ನು ಪರಿಶೀಲಿಸಿದ ನಂತರ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು. ಗುತ್ತಿಗೆ ಸಂಸ್ಥೆಗೆ ನೋಟಿಸ್ ನೀಡಲು ಮುಂದಾಗಿದ್ದೇವೆ. ಸಮಗ್ರ ತನಿಖೆಯ ನಂತರ ಒಪ್ಪಂದವನ್ನು ರದ್ದುಗೊಳಿಸಲಾಗುವುದು ಎಂದೂ ಅವರು ಹೇಳಿದರು. ಮಹಿಳಾ ಕೋಶ ಮತ್ತು ಕಿರುಕುಳವನ್ನು ನಿವಾರಿಸುವ ಕಾರ್ಯವಿಧಾನದ ಬಗ್ಗೆ ಸಂರಕ್ಷಣಾ ಕಾರ್ಯಕರ್ತರಿಗೆ ಜಾಗೃತಿ ಸಭೆ ನಡೆಸುವಂತೆ ವಿಭಾಗವನ್ನು ಕೋರಿದ್ದೇನೆ ಎಂದೂ ಹೇಳಿದರು.
ಇದನ್ನೂ ಓದಿ: IRCTCಯನ್ನೂ ಅದಾನಿ ಸ್ವಾಧೀನಪಡಿಸಿಕೊಳ್ತಾರೆ ಎಂದ ಕಾಂಗ್ರೆಸ್: ರೈಲ್ವೆ ಬುಕಿಂಗ್ ಪ್ಲಾಟ್‌ಫಾರ್ಮ್ ತಿರುಗೇಟು