ನಾಳೆಯಿಂದಲೇ ಖಾಸಗಿ-ಸರ್ಕಾರಿ ಶೇ.50ರಷ್ಟು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಕಡ್ಡಾಯ

Published : Dec 17, 2025, 03:30 PM IST
 delhi pollution work from home 50 percent 10000 rupees worker relief

ಸಾರಾಂಶ

ನಾಳೆಯಿಂದಲೇ ಖಾಸಗಿ-ಸರ್ಕಾರಿ ಶೇ.50ರಷ್ಟು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ. ನಿಯಮ ಪಾಲಿಸದಿದ್ದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ದಿಢೀರ್ ಈ ನಿರ್ಧಾರ ಯಾಕೆ?

ನವದೆಹಲಿ (ಡಿ.17) ಉದ್ಯೋಗಿಗಳಿಗೆ ಮನೆಯಿಂದ ಕೆಲಸದ ಅವಕಾಶ ಬಹುತೇಕ ಕಂಪನಿಗಳು ನಿಲ್ಲಿಸಿದೆ. ಇತ್ತೀಚೆಗೆ ಎಲ್ಲರೂ ಕಚೇರಿಯಂದಲೇ ಕೆಲಸ ಮಾಡಬೇಕು ಎಂದು ಐಟಿ ಸೇರಿದಂತೆ ಹಲವು ಕ್ಷೇತ್ರಗಳು ಕಡ್ಡಾಯ ನಿಮಯ ತಂದಿದೆ. ಹೀಗಾಗಿ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಸಂಚಾರ ದಟ್ಟಣೆಯೂ ಹೆಚ್ಚಾಗಿದೆ. ಇದರ ನಡುವೆ ಸರ್ಕಾರ ಮಹತ್ವದ ಆದೇಶ ನೀಡಿದೆ. ನಾಳೆಯಿಂದಲೇ (ಡಿ.18) ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಶೇಕಡಾ 50 ರಷ್ಟು ಉದ್ಯೋಗಿಗಳೆ ವರ್ಕ್ ಫ್ರಮ್ ಹೋಮ್ (ಮನೆಯಿಂದ ಕೆಲಸ) ಕಡ್ಡಾಯ ಎಂದು ಆದೇಶ ಹೊರಡಿಸಿದೆ. ಹೌದು, ಈ ಆದೇಶ ಹೊರಡಿಸಿರುವುದು ದೆಹಲಿ ಸರ್ಕಾರ.

ಕೈಮೀರಿದ ಪರಿಸ್ಥಿತಿಯಲ್ಲಿ ನಿರ್ಧಾರ ಅನಿವಾರ್ಯ ಎಂದ ಸರ್ಕಾರ

ದೆಹಲಿಯಲ್ಲಿ ವಾಯು ಮಾಲಿನ್ಯ ವಿಪರೀತವಾಗಿದೆ. ಹಲವು ಕ್ರಮಗಳನ್ನು ಕೈಗೊಂಡರೂ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಿಗುತಿಲ್ಲ. ಒಂದೆಡೆ ವಾಹನಗಳ ದಟ್ಟಣೆ, ಕಾರ್ಖಾನೆಗಳು, ಕಾಮಗಾರಿ ಸೇರಿದಂತೆ ಎಲ್ಲವೂ ದೆಹಲಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಇದರ ಬೆನ್ನಲ್ಲೇ ಡಿಸೆಂಬರ್ 18 ರಿಂದ ದೆಹಲಿಯಲ್ಲಿ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಕಚೇರಿಗಳು ತಮ್ಮ ಉದ್ಯೋಗಿಗಳ ಶೇಕಡಾ 50 ರಷ್ಟು ಮಂದಿಗೆ ಕಡ್ಡಾಯವಾಗಿ ಮನೆಯಿಂದ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಆದೇಶ ಹೊರಡಿಸಿದೆ. ಈ ನಿಯಮ ಪಾಲಿಸದಿದ್ದರೆ ದುಬಾರಿ ದಂಡ ವಿಧಿಸಲಾಗುತ್ತದೆ ಎಂದಿದೆ.

ತುರ್ತ ಸೇವಾ ವಿಭಾಗಕ್ಕೆ ವಿನಾಯಿತಿ

ಶೇಕಡಾ 50 ರಷ್ಟು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನೀತಿ ನಾಳೆಯಿಂದ ದೆಹಲಿಯಲ್ಲಿ ಜಾರಿಗೆ ಬರುತ್ತಿದೆ. ಇದರಲ್ಲಿ ತುರ್ತು ಸೇವಾ ವಿಭಾಗಗಳಿಗೆ ವಿನಾಯಿತಿ ನೀಡಲಾಗಿದೆ. ಆಸ್ಪತ್ರೆ ಸೇರಿದಂತೆ ಇತರ ಸೇವೆಗಳು ಈ ನಿಯಮಕ್ಕೆ ಒಳಪಡುವುದಿಲ್ಲ ಎಂದಿದೆ. ಐಟಿ ಸೇರಿದಂತೆ ಇತರ ಕಂಪನಿಗಳು ಈ ನಿಯಮ ಪಾಲಿಸಬೇಕು ಎಂದಿದೆ. ಈ ಮೂಲಕ ವಾಹನಗಳ ಸಂಚಾರ ದಟ್ಟಣೆ ಕಡಿಮೆ ಮಾಡಿ ವಾಯು ಮಾಲಿನ್ಯ ತಗ್ಗಿಸಲು ದೆಹಲಿ ಸರ್ಕಾರ ಪ್ಲಾನ್ ಮಾಡಿದೆ. ವಾಹನಗಳ ಸಂಚಾರದಿಂದ ಹೊರಬರುವ ಕಾರ್ಬನ್ ಡೈಆಕ್ಸೈಡ್ ಪರಿಸರ ಮಾಲಿನ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಹೀಗಾಗಿ ವರ್ಕ್ ಫ್ರಮ್ ಹೋಮ್ ಮೂಲಕ ಈ ಮಾಲಿನ್ಯ ತಗ್ಗಿಸಲು ಪ್ಲಾನ್ ಮಾಡಲಾಗಿದೆ.

ಕೆಲಸ ಇಲ್ಲದ ಕಾರ್ಮಿಕರಿಗೆ 10,000 ರೂಪಾಯಿ ಸಹಾಯಧನ

ಡಿಸೆಂಬರ್ ಆರಂಭದಿಂದಲೇ ದೆಹಲಿಯಲ್ಲಿ GRAP 3 ನಿರ್ಬಂಧಗಳು ಜಾರಿ ಮಾಡಲಾಗಿದೆ. ಇದರಿಂದ ಕಟ್ಟಡ ಕಾರ್ಮಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಹಲವರು ಕೆಲಸ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ GRAP 3 ಕಾರಣದದಿಂದ ಕೆಲಸ ಕಳೆದುಕೊಂಡ, ಹಾಗೂ ಕೆಲಸವಿಲ್ಲದೆ ಸಂಕಷ್ಟ ಎದುರಿಸುತ್ತಿರುವ ಕಾರ್ಮಿಕರಿಗೆ ಸರ್ಕಾರ 10,000 ರೂಪಾಯಿ ಸಹಾಯಧನ ನೀಡುವುದಾಗಿ ಕಾರ್ಮಿಕ ಸಚಿವ ಕಪಿಲ್ ಮಿಶ್ರಾ ಹೇಳಿದ್ದಾರೆ.

ಡಿ.18 ರಿಂದ ಇಂಧನಕ್ಕೆ ಬೇಕು ಪಿಯುಸಿ ಸರ್ಟಿಫಿಕೇಟ್

ಡಿಸೆಂಬರ್ 18 ರಿಂದ ದೆಹಲಿಯಲ್ಲಿ ನಿಯಮಗಳು ಬಿಗಿಯಾಗುತ್ತಿದೆ. ವಾಹನಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ ಭರ್ತಿ ಮಾಡಲು ಪಿಯುಸಿ (ಪರಿಸರ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ) ಕಡ್ಡಾಯವಾಗಿದೆ. ಅದಿಕೃತ ದಾಖಲೆ ಇದ್ದರೆ ಮಾತ್ರ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ದೊರೆಯಲಿದೆ. ಎಮಿಶನ್ ಟೆಸ್ಟ್ ವೇಳೆ ನಿಮ್ಮ ವಾಹನದಿಂದ ಆಗುತ್ತಿರುವ ಪರಿಸರ ಮಾಲಿನ್ಯದ ಪ್ರಮಾಣಗಳನ್ನು ನಮೂದಿಸುತ್ತಾರೆ. ಇದು ನಿಗದಿತ ಅಂಶಕ್ಕಿಂತ ಹೆಚ್ಚಿರಬಾರದು. ಹೀಗಿದ್ದರೆ ನಾಳೆಯಿಂದ ದೆಹಲಿಯಲ್ಲಿ ಇಂಧನ ಸಿಗುವುದಿಲ್ಲ. ದೆಹಲಿ ಹೊರಗಿನ ವಾಹನಗಳು ದೆಹಲಿ ಪ್ರವೇಶಿಲಲು ಬಿಎಸ್‌6 ಎಮಿಶನ್ ಎಂಜಿನ್ ಆಗಿರಬೇಕು, ಇದಕ್ಕಿಂತ ಹಿಂದಿನ ವರ್ಶನ್ ಎಮಿಶನ್ ಎಂಜಿನ್ ವಾಹನಗಳಿಗೆ ದೆಹಲಿ ಪ್ರವೇಶವಿಲ್ಲ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜೀವ ವಿಮೆಗಾಗಿ ಜೀವ ತೆಗೆದ: ಲಿಫ್ಟ್ ಕೇಳಿದ್ದೇ ತಪ್ಪಾಯ್ತು: ಹಂತಕ ಸಿಕ್ಕಿಬಿದ್ದಿದ್ದು ಹೇಗೆ?
ಲಿಯೋನಲ್ ಮೆಸ್ಸಿಗೆ RM 003-V2 ವಾಚ್ ಉಡುಗೊರೆ, ಇದ್ರ ಬೆಲೆಗೆ 2 ರೋಲ್ಸ್ ರಾಯ್ಸ್ ಕಾರು ಬರುತ್ತೆ