
ಸಾಮಾಜಿಕ-ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರ ತೊಡಗಿಕೊಳ್ಳುವಿಕೆಯಿಂದ ಹಿಡಿದು ಮಹಿಳಾ ವಿಜ್ಞಾನಿಗಳ ಕೊಡುಗೆಯವರೆಗೆ, 75 ಗಣರಾಜ್ಯೋತ್ಸವದ ಪರೇಡ್‌ನಲ್ಲಿ "ಮಹಿಳಾ ಸಬಲೀಕರಣ" ವನ್ನು ಹೈಲೈಟ್ ಮಾಡಲಾಯ್ತು. ದೇಶದ ಮೂರು ಸೇನೆಗಳ
ಮಹಿಳಾ ತುಕಡಿಗಳು ಪೆರೇಡ್ ನ ವಿಶೇಷ ಆಕರ್ಷಣೆಯಾಯ್ತು. ಮಹಿಳೆಯರ ಸಬಲೀಕರಣಕ್ಕೆ ಸಂಬಂಧಿಸಿ 26 ಟ್ಯಾಬ್ಲೋಗಳ ಮೆರವಣಿಗೆ ನಡೆಯಿತು.
75 ನೇ ಗಣರಾಜ್ಯೋತ್ಸವ ಹಿನ್ನೆಲೆ ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದಲ್ಲಿ ಪರೇಡ್ ನಡೆದಿದ್ದು, ಈ ಬಾರಿಯ ಪರೇಡ್ ಮಹಿಳಾ ಪ್ರಧಾನವಾಗಿ ಮೂಡಿಬಂತು. ಮೊದಲ ಬಾರಿಗೆ ಭಾರತೀಯ ಸಂಗೀತ ವಾದ್ಯಗಳೊಂದಿಗೆ 100 ಮಹಿಳಾ ಕಲಾವಿದರಿಂದ ಮೆರವಣಿಗೆ ನಡೆಯಿತು.
2030ರ ವೇಳೆಗೆ 30,000 ಭಾರತೀಯ ವಿದ್ಯಾರ್ಥಿಗಳಿಗೆ ಫ್ರಾನ್ಸ್ ಸ್ವಾಗತ: ಗಣತಂತ್ರ ದಿನಕ್ಕೆ ಮ್ಯಾಕ್ರನ್ ಶುಭಾಶಯ
ಸಾಮಾಜಿಕ-ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರ ನಿರ್ಣಾಯಕ ಪಾತ್ರಗಳನ್ನು ಹೈಲೈಟ್ ಮಾಡುವ ಮಣಿಪುರ ಕೋಷ್ಟಕವು ಕಮಲದ ಕಾಂಡಗಳ ಸೂಕ್ಷ್ಮ ನಾರುಗಳೊಂದಿಗೆ ಕೆಲಸ ಮಾಡುವ ಮಹಿಳೆಯರನ್ನು ಪ್ರದರ್ಶಿಸುತ್ತದೆ ಮತ್ತು ಸಾಂಪ್ರದಾಯಿಕ 'ಚರಖಾ'ಗಳನ್ನು ಬಳಸಿ ನೂಲುಗಳನ್ನು ತಯಾರಿಸುತ್ತದೆ.
ಟ್ಯಾಬ್ಲೋನ ಮುಂಭಾಗದ ಭಾಗದಲ್ಲಿ ಮಹಿಳೆಯೊಬ್ಬರು ಮಣಿಪುರದ ಐಕಾನಿಕ್ ಲೋಟಕ್ ಸರೋವರದಿಂದ ಕಮಲದ ಕಾಂಡಗಳನ್ನು ಸಂಗ್ರಹಿಸುತ್ತಿದ್ದಾರೆ. ದೋಣಿಗಳ ಮೇಲೆ ಸವಾರಿ ಮಾಡುವ ಮತ್ತು ಕಮಲದ ಕಾಂಡಗಳನ್ನು ಸಂಗ್ರಹಿಸುವ ಮಹಿಳೆಯರನ್ನು ಟ್ಯಾಬ್ಲೋನ ಬದಿಗಳಲ್ಲಿ ಪ್ರದರ್ಶಿಸಲಾಯ್ತು.
ವೈವಿಧ್ಯತೆ, ಏಕತೆ, ಪ್ರಗತಿಯನ್ನು ಸಾರುವ 16 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು 9 ಸಚಿವಾಲಯಗಳ ಸ್ತಭ್ದ ಚಿತ್ರಗಳ ಮೆರವಣಿಗೆ ನಡೆಯಿತು.
ಮಣಿಪುರದ ಟ್ಯಾಬ್ಲೋ ಹಿಂದೆ 'ಇಮಾ ಕೀಥೆಲ್' ನ ಪ್ರತಿಕೃತಿಯನ್ನು ಮಾಡಲಾಗಿದೆ - ಇದು ಸಂಪೂರ್ಣ ಮಹಿಳಾ ಮಾರುಕಟ್ಟೆಯಾಗಿದೆ. ಮಾರುಕಟ್ಟೆಯು ಹಲವಾರು ಶತಮಾನಗಳಷ್ಟು ಹಳೆಯದಾಗಿದೆ ಮತ್ತು ಸಂಪೂರ್ಣವಾಗಿ ಮಹಿಳೆಯರಿಂದ ನಡೆಸಲ್ಪಡುತ್ತದೆ.
ಈಶಾನ್ಯ ರಾಜ್ಯದ ಟ್ಯಾಬ್ಲೋವು ಮಣಿಪುರಿ ಮಹಿಳೆಯರಿಂದ ನವೀನಗೊಳಿಸಿದ ಜನಪ್ರಿಯ ಬಟ್ಟೆಗಳನ್ನು ಸಹ ಒಳಗೊಂಡಿರುತ್ತದೆ. ಕಮಲದ ರೇಷ್ಮೆಯನ್ನು ತಯಾರಿಸುವ ಪ್ರಕ್ರಿಯೆಯನ್ನು ಭಾರತದ ಮೊದಲ ಕಮಲದ ರೇಷ್ಮೆ ತಯಾರಕರಾದ ಬಿಜಯಶಾಂತಿ ಟೋಂಗ್‌ಬ್ರಾಮ್ ಅವರು ಆವಿಷ್ಕರಿಸಿದ್ದಾರೆ.
ಎನ್‌ಆರ್‌ಐಗಳು ದತ್ತು ಪಡೆಯಲು ನೆಲೆಸಿದ ದೇಶದ ಒಪ್ಪಿಗೆ ಕಡ್ಡಾಯ: ಹೈಕೋರ್ಟ್
ಈ ಬಾರಿಯ ಮುಖ್ಯ ಅತಿಥಿಯಾಗಿ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಭಾಗವಹಿಸಿದ್ದರು. ಕರ್ತವ್ಯ ಪಥ್ ಪೆರೇಡ್ ನಲ್ಲಿ ಪ್ರೆಂಚ್ ಸೇನಾ ತುಕಡಿಯಿಂದ ಪಥ ಸಂಚಲನ ನಡೆಯಿತು. ಜನ್ ಭಾಗಿದಾರಿ ಅಡಿ 13,000 ಮಂದಿಗೆ ಆಹ್ವಾನ ನೀಡಲಾಗಿದ್ದು, 75 ವರ್ಷಾಚರಣೆ ಸ್ಮರಣಾರ್ಥ ವಿಶೇಷ ಅಂಚೆ ಚೀಟಿ ಹಾಗು ನಾಣ್ಯ ಬಿಡುಗಡೆ ಮಾಡಲಾಯ್ತು. ಇ - ಟಿಕೆಟ್ ಮೂಲಕ 42 ಮಂದಿ ಸಾವಿರ ಮಂದಿಗೆ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು.
77 ಸಾವಿರ ಮಂದಿಗೆ ಆಸನ ವ್ಯವಸ್ಥೆ ಸಿದ್ದ
ರಾಷ್ಟ್ರಪತಿ ದ್ರೌಪದಿ ಮುರ್ಮು ಧ್ವಜಾರೋಹಣ ಮಾಡಿದ್ದು, ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪ್ರಧಾನಿ ಸೇನಾ ಸ್ಮಾರಕಕ್ಕೆ ತೆರಳಿ, ಯೋಧರಿಗೆ ಗೌರವ ನಮನ ಸಲ್ಲಿಸಿದರು. ಬೆಳಿಗ್ಗೆ 10.30ಕ್ಕೆ ಪೆರೇಡ್ ಆರಂಭವಾಗಿ, 90 ನಿಮಿಷಗಳ ಕಾಲ ನಡೆಯಿತು. ಭದ್ರತೆಗೆ 8 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಸಾವಿರಾರು ಸಿಸಿಟಿವಿ ಕ್ಯಾಮೆರಾ ಗಳನ್ನು ಅಳವಡಿಕೆ ಮಾಡಲಾಯ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ