ಲೋಕಸಮರಕ್ಕೆ ಬಿಜೆಪಿ ಅಧಿಕೃತ ಚಾಲನೆ: ವಿಡಿಯೋ ಪ್ರಚಾರ ಶುರು

Published : Jan 26, 2024, 08:58 AM IST
ಲೋಕಸಮರಕ್ಕೆ ಬಿಜೆಪಿ ಅಧಿಕೃತ  ಚಾಲನೆ: ವಿಡಿಯೋ ಪ್ರಚಾರ ಶುರು

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಸತತ ಮೂರನೇ ಅವಧಿಗೆ ಪ್ರಧಾನಿ ಪೀಠದಲ್ಲಿ ಕೂರಿಸುವ ಗುರಿಯೊಂದಿಗೆ ಲೋಕಸಭೆ ಚುನಾವಣೆ ವಿಡಿಯೋ ಪ್ರಚಾರಕ್ಕೆ ಗುರುವಾರ ಬಿಜೆಪಿ ಅಧಿಕೃತ ಚಾಲನೆ ನೀಡಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸತತ ಮೂರನೇ ಅವಧಿಗೆ ಪ್ರಧಾನಿ ಪೀಠದಲ್ಲಿ ಕೂರಿಸುವ ಗುರಿಯೊಂದಿಗೆ ಲೋಕಸಭೆ ಚುನಾವಣೆ ವಿಡಿಯೋ ಪ್ರಚಾರಕ್ಕೆ ಗುರುವಾರ ಬಿಜೆಪಿ ಅಧಿಕೃತ ಚಾಲನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯನ್ನು ಸ್ಮರಿಸುವ ದೃಶ್ಯಗಳನ್ನು ಒಳಗೊಂಡ ‘ಸಪ್ನೆ ನಹೀ ಹಕೀಕತ್‌ ಬನತೇ ಹೈ, ತಭಿ ತೋ ಸಬ್‌ ಮೋದಿ ಕೋ ಚುನ್ತೆ ಹೈ’ (ಕನಸುಗಳನ್ನು ಅಲ್ಲ, ವಾಸ್ತವವನ್ನು ನೇಯುತ್ತಾರೆ, ಅದಕ್ಕೇ ಜನರೂ ಮೋದಿಯನ್ನೇ ಆರಿಸುತ್ತಾರೆ) ಎಂಬ ಗೀತೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಲೋಕಾರ್ಪಣೆ ಮಾಡಿದ್ದಾರೆ.

ಸದ್ಯದಲ್ಲೇ ಮೋದಿ ಅವರ ಕುರಿತಾಗಿ ಮತ್ತೊಂದು ಗೀತೆ, ಬ್ಯಾನರ್‌, ಡಿಜಿಟಲ್‌ ಫಿಲಂ ಹಾಗೂ ಪ್ರಚಾರ ಆಂದೋಲನಗಳನ್ನು ಆರಂಭಿಸಲು ಬಿಜೆಪಿ ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ. ಮೋದಿ ಅವರು ಎಲ್ಲ ಕ್ಷೇತ್ರಗಳಲ್ಲೂ ಮಾಡಿರುವ ಸಾಧನೆ ಹಾಗೂ ಅವರು ಪದೇ ಪದೇ ಜನರ ಸ್ವಾಭಾವಿಕ ಆಯ್ಕೆಯಾಗಿದ್ದಾರೆ ಎಂಬುದನ್ನೇ ನಿರೂಪಿಸಲು ಮುಂದಾಗಿದೆ ಎನ್ನಲಾಗಿದೆ. ಗುರುವಾರ ಬಿಡುಗಡೆ ಮಾಡಿದ ಜಾಗೃತಿ ಗೀತೆ ಜನರ ಒಡಲಾಳದಿಂದ ಸ್ವಾಭಾವಿಕವಾಗಿ ಉದಯಿಸಿರುವಂತಹದ್ದು. ಜನರ ಭಾವನೆಗೆ ತಕ್ಕಂತೆ ಅದನ್ನು ಪಕ್ಷ ಅಳವಡಿಸಿಕೊಂಡಿದೆ ಅಷ್ಟೆ ಎಂದು ಬಿಜೆಪಿ ತಿಳಿಸಿದೆ.

ಮಂಗಳೂರಿನ ಏಜೆಂಟ್‌ರಿಂದ ಪಾಕ್‌ನಲ್ಲಿ ಇಬ್ಬರು ಉಗ್ರರ ಹತ್ಯೆ: ದಾಖಲೆ ಬಿಡುಗಡೆ ಮಾಡಿದ ಪಾಕಿಸ್ತಾನ

ಈ ಗೀತೆಯಲ್ಲಿ ಅಯೋಧ್ಯೆಯಲ್ಲಿ ಲೋಕಾರ್ಪಣೆಯಾದ ರಾಮಮಂದಿರದಲ್ಲಿ ಪ್ರಧಾನಿ ಮೋದಿ ಅವರು ರಾಮನ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡುವ ದೃಶ್ಯವಿದೆ. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ದೇಶ ಮಂದ ಪ್ರಗತಿಯಲ್ಲಿತ್ತು. ಆದರೆ ಮೋದಿ ಅವರು ದೇಶವನ್ನು ಪ್ರಗತಿಯ ಪಥದಲ್ಲಿ ಕೂರಿಸಿದ್ದಾರೆ. ಜನರ ಭರವಸೆಗಳನ್ನು ಈಡೇರಿಸಿದ್ದಾರೆ ಎಂದು ವಿಡಿಯೋದಲ್ಲಿ ವಿವರಿಸಲಾಗಿದೆ. ಜಿ20 ಶೃಂಗದ ಅಧ್ಯಕ್ಷತೆ, ಚಂದ್ರಯಾನ-3, ಮೂಲಸೌಕರ್ಯ, ವಿದೇಶಾಂಗ ನೀತಿ, ಕ್ರೀಡೆ ಹಾಗೂ ಇನ್ನಿತರೆ ನೀತಿ ನಿರೂಪಣೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ.

ಇಂದು 75ನೇ ಗಣರಾಜ್ಯೋತ್ಸವ: ಮಿಲಿಟರಿ ಬ್ಯಾಂಡ್ ಬದಲು ಮೊಳಗಲಿದೆ ಶಂಖ, ನಾದಸ್ವರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಅಮೆರಿಕ ತೆರಿಗೆ ದಾಳಿಗೆ ಒಳಗಾದ ದೇಶಗಳಿಂದ ಮಾದರಿಯಾದ ಚೀನಾ; ಟ್ರಂಪ್‌ಗೆ ಶಾಕ್ ನೀಡಿ ದಾಖಲೆ ಬರೆದ ಡ್ರ್ಯಾಗನ್
ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ