ಮಹಿಳಾ ಅಧಿಕಾರಿಗಳಿಗೆ ಕಮಾಂಡ್ ಪೋಸ್ಟ್ ಏಕಿಲ್ಲ?: ಸುಪ್ರೀಂ ಪ್ರಶ್ನೆ!

By Suvarna NewsFirst Published Jan 30, 2020, 2:53 PM IST
Highlights

ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಕಮಾಂಡ್ ಪೋಸ್ಟ್| ಮಹಿಳಾ ಅಧಿಕಾರಿಗಳ ಪರ ಬ್ಯಾಟ್ ಬೀಸಿದ ಸುಪ್ರೀಂಕೋರ್ಟ್| 'ಸೇನೆಗೆ ಮಹಿಳೆ ಹಾಗೂ ಪುರುಷ ಎಂಬ ಬೇಧಭಾವ ಇಲ್ಲ'| ಮಹಿಳಾ ಅಧಿಕಾರಿಗಳಿಗೆ ಸೈನ್ಯ ತುಕಡಿಯ ಮುಂದಾಳತ್ವ ಕೊಡಿ ಎಂದ ಸುಪ್ರೀಂಕೋರ್ಟ್ | ನ್ಯಾ. ಚಂದ್ರಚೂಡ್‌ ಹಾಗೂ ಅಜಯ್ ರಸ್ತೋಗಿ ನೇತೃತ್ವದ ದ್ವಿಸದಸ್ಯ ಪೀಠ| ಮಹಿಳಾ ಅಧಿಕಾರಿಗಳನ್ನು ಖಾಯಂಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ನ್ಯಾಯಪೀಠ|

ನವದೆಹಲಿ(ಜ.30): ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಕಮಾಂಡ್ ಪೋಸ್ಟ್(ಯುದ್ಧ ಭೂಮಿಯಲ್ಲಿ ಕರ್ತವ್ಯ) ನೀಡದಿರುವ ಕುರಿತು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಸೇನೆಗೆ ಮಹಿಳೆ ಹಾಗೂ ಪುರುಷ ಎಂಬ ಬೇಧಭಾವ ಇಲ್ಲ. ಅದಾಗ್ಯೂ ಮಹಿಳಾ ಅಧಿಕಾರಿಗಳಿಗೆ ಸೈನ್ಯ ತುಕಡಿಯ ಮುಂದಾಳತ್ವ ವಹಿಸದಿರುವುದು ಆಶ್ಚರ್ಯ ತಂದಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಮಹಿಳಾ ಬಲ: ಗಣರಾಜ್ಯೋತ್ಸವ ಪರೇಡ್ ಮುನ್ನಡೆಸಿದ ಕ್ಯಾಪ್ಟನ್ ತಾನ್ಯಾ!

ಕೂಡಲೇ ಮಹಿಳಾ ಸೇನಾಧಿಕಾರಿಗಳಿಗೆ ಕಮಾಂಡ್ ಪೋಸ್ಟ್ ನೀಡಲು ಭಾರತೀಯ ಸೇನೆ ಮುಂದಾಗಬೇಕು ಎಂದು ನ್ಯಾ. ಚಂದ್ರಚೂಡ್‌ ಹಾಗೂ ಅಜಯ್ ರಸ್ತೋಗಿ ನೇತೃತ್ವದ ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

ಸೈನ್ಯದಲ್ಲಿ ಮಹಿಳಾ ಅಧಿಕಾರಿಗಳನ್ನು ಖಾಯಂಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ನ್ಯಾಯಪೀಠ, ಇದೀಗ ಮಹಿಳಾ ಅಧಿಕಾರಿಗಳಿಗೆ ಸೈನ್ಯ ತುಕಡಿಯ ಮುಮದಾಳತ್ವ ವಹಿಸುವ ಕಾಲ ಬಂದಿದೆ ಎಂದು ಹೇಳಿತು.

ಗಮನ ಸೆಳೆದ CRPF ವುಮೆನ್ ಡೇರ್‌ಡೆವಿಲ್ಸ್ ಸಾಹಸ ಪ್ರದರ್ಶನ!

ಸೈನ್ಯದಲ್ಲಿ ಪುರುಷ ಅಧಿಕಾರಿಗಳು ನಿರ್ವಹಿಸುವ ಎಲ್ಲಾ ಕರ್ತವ್ಯಗಳನ್ನು ನಿಭಾಯಿಸಲು ಮಹಿಳಾ ಅಧಿಕಾರಿಗಳೂ ಸಶಕ್ತರಾಗಿದ್ದು, ಅವರಿಗೆ ಕೇವಲ ಕಚೇರಿ ಕೆಲಸ ನೀಡುವುದು ಸಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಮುಧೋಳದ ಅನ್ಮೋಲ್‌ ನೌಕಾಪಡೆ ಮಹಿಳಾ ಕ್ಯಾಪ್ಟನ್‌

click me!