
ತಿರುವನಂತಪುರಂ: ನಂಬರ್ ಪ್ಲೇಟ್ ತಯಾರಿಸುವಾಗ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರ ಬೆರಳು ಯಂತ್ರದಲ್ಲಿ ಸಿಲುಕಿಕೊಂಡಂತಹ ಘಟನೆ ನಡೆದಿದೆ. ಬಳಿಕ. ಅಗ್ನಿಶಾಮಕ ದಳದವರು ಬಂದು ಯಂತ್ರದಲ್ಲಿ ಸಿಲುಕಿದ್ದ ಮಹಿಳೆಯ ಕೈಯನ್ನು ಹೊರತೆಗೆದಿದ್ದಾರೆ. ನಿನ್ನೆ ಸಂಜೆ ಕೇರಳದ ತೈಕಾಡ್ ಜಂಕ್ಷನ್‌ನಲ್ಲಿರುವ ನಂಬರ್‌ಪ್ಲೇಟ್ ಡಿಸೈನಿಂಗ್ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಸಂಸ್ಥೆಯ ಉದ್ಯೋಗಿ ಅನೀಷಾ (24) ಅವರ ಬೆರಳು ಡಿಸೈನಿಂಗ್ ಯಂತ್ರದಲ್ಲಿ ಸಿಲುಕಿಕೊಂಡಿತ್ತು.
ಅನೀಷಾ ಅವರ ಬಲಗೈ ಬೆರಳು ಯಂತ್ರದಲ್ಲಿ ಸಿಲುಕಿಕೊಂಡಿದ್ದರಿಂದ ಹೊರತೆಗೆಯಲು ಸಾಧ್ಯವಾಗದೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ನಂತರ ತಿರುವನಂತಪುರಂ ಘಟಕದಿಂದ ಗ್ರೇಡ್ ಎಎಸ್‌ಟಿಒ ಉಲ್ಲಾಸ್ ನೇತೃತ್ವದಲ್ಲಿ ಸಜಿಕುಮಾರ್, ಶಹೀರ್, ಹರಿಲಾಲ್, ಮನು, ಸನು, ಶ್ರೀಜಿತ್, ಪ್ರಶಾಂತ್, ಬೈಜು ಅವರು ಹೈಡ್ರಾಲಿಕ್ ಕಟ್ಟರ್, ಆಂಗಲ್ ಕಟ್ಟರ್ ಬಳಸಿ ಅರ್ಧ ಗಂಟೆಗಳ ಕಾಲ ಪ್ರಯತ್ನಿಸಿ ಯಂತ್ರದಲ್ಲಿ ಸಿಲುಕಿದ್ದ ಬೆರಳನ್ನು ಹೊರತೆಗೆದರು. ಬೆರಳಿಗೆ ಗಾಯವಾಗಿ ಊತ ಬಂದಿದ್ದರಿಂದ ಅನೀಷಾ ಅವರನ್ನು ಅಗ್ನಿಶಾಮಕ ದಳದ ಆಂಬ್ಯುಲೆನ್ಸ್‌ನಲ್ಲಿ ತಿರುವನಂತಪುರಂ ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯ ನಂತರ ಅನೀಷಾ ಗುಣಮುಖರಾಗುತ್ತಿದ್ದಾರೆ ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.
ವ್ಯಕ್ತಿಯ ಮರ್ಮಾಂಗದಲ್ಲಿ ಸಿಲುಕಿದ್ದ ಬೋಲ್ಟ್ ನಟ್ ತೆಗೆಯಲು ಅಗ್ನಿಶಾಮಕ ಸಿಬ್ಬಂದಿಯ ಕರೆಸಿದ ವೈದ್ಯರು
ಕೆಲ ದಿನಗಳ ಹಿಂದಷ್ಟೇ ಕೇರಳದಲ್ಲಿ ವ್ಯಕ್ತಿಯೊಬ್ಬನ ಗುಪ್ತಾಂಗದಲ್ಲಿ ಸಿಲುಕಿಕೊಂಡಿದ್ದ ಬೋಲ್ಟ್ ನಟ್ ಅನ್ನು ತೆಗೆಯಲು ವೈದ್ಯರು ಅಗ್ನಿ ಶಾಮಕ ಸಿಬ್ಬಂದಿಯನ್ನು ಕರೆಸಿದಂತಹ ವಿಚಿತ್ರ ಘಟನೆ ನಡೆದಿತ್ತು. ಕುಡಿದು ಮಲಗಿದ್ದ ವೇಳೆ ಯಾರು ತನ್ನ ಗುಪ್ತಾಂಗಕ್ಕೆ ಬೋಲ್ಡ್ ನಟ್ ಹಾಕಿದ್ದಾರೆ ಎಂದು ಆ ವ್ಯಕ್ತಿ ವೈದ್ಯರ ಬಳಿ ಹೇಳಿದ್ದಾನೆ. ಕೇರಳದ ಕಾಸರಗೋಡು ಸಮೀಪದ ಕಾಂಞಂಗಾಡಿನಲ್ಲಿ ಈ ವಿಚಿತ್ರ ಘಟನೆ ನಡೆದಿತ್ತು. 46 ವರ್ಷದ ವ್ಯಕ್ತಿಯೊಬ್ಬರು ತನ್ನ ಜನನಾಂಗದ ಸುತ್ತಲೂ ಸಿಲುಕಿಕೊಂಡಿದ್ದ ಒಂದೂವರೆ ಇಂಚಿನ ಬೋಲ್ಟ್ ನಟ್‌ನ್ನು ತಾವಾಗಿಯೇ ತೆಗೆಯಲು ಎರಡು ದಿನಗಳ ಕಾಲ ಪ್ರಯತ್ನಿಸಿದ್ದಾರೆ. ಆದರೆ ಅವರಿಗೆ ಅದನ್ನು ತೆಗೆಯಲು ಸಾಧ್ಯವಾಗಲಿಲ್ಲ, ಇದರಿಂದ ಜನನಾಂಗದಲ್ಲಿ ಊತ ಉಂಟಾಗಿದ್ದು, ಮೂತ್ರ ವಿಸರ್ಜನೆ ಮಾಡುವುದಕ್ಕೂ ಅವರು ಚಡಪಡಿಸಿದ್ದಾರೆ. ಕೊನೆಗೆ ವಿಧಿ ಇಲ್ಲದೇ ಅವರು ಜಿಲ್ಲಾಸ್ಪತ್ರೆಯ ವೈದ್ಯರ ಸಹಾಯ ಕೋರಿದ್ದರು.
ಆಸ್ಪತ್ರೆಯಲ್ಲಿ ವೈದ್ಯರು ಕೂಡ ವ್ಯಕ್ತಿಯ ಮರ್ಮಾಂಗದಲ್ಲಿ ಸಿಲುಕಿದ್ದ ನಟ್ ಬೋಲ್ಟನ್ನು ತೆಗೆಯಲು ತಮಗೆ ತಿಳಿದ ಎಲ್ಲಾ ಸಾಹಸವನ್ನೂ ಮಾಡಿದ್ದಾರೆ. ಆದರೆ ಅವರ ಎಲ್ಲಾ ಪ್ರಯತ್ನಗಳು ವಿಫಲವಾದಾಗ ಅವರು ಕಾಂಞಂಗಾಡ್‌ನ ಅಗ್ನಿ ಶಾಮಕ ಇಲಾಖೆಗೆ ಕರೆ ಮಾಡಿ ಅಲ್ಲಿಂದ ರಕ್ಷಣಾ ತಂಡವೊಂದನ್ನು ಕರೆಸಿದ್ದಾರೆ. ಬಳಿಕ ಅಗ್ನಿಶಾಮಕ ದಳದ ಅಧಿಕಾರಿ ಕೆ.ಎಂ ಶಿಜು ನೇತೃತ್ವದಲ್ಲಿ ರಕ್ಷಣಾ ತಂಡವೊಂದು ಒಂದೂವರೆ ಗಂಟೆಗೂ ಅಧಿಕ ಕಾಲ ಪ್ರಯತ್ನ ಮಾಡಿ ಕಡೆಗೂ ವ್ಯಕ್ತಿಯ ಮರ್ಮಾಂಗದಲ್ಲಿ ಸಿಲುಕಿದ್ದ ಬೋಲ್ಟ್ ನಟ್‌ನ್ನು ಹೊರತೆಗೆದಿದ್ದರು.
ಎಕ್ಸ್ ಗರ್ಲ್‌ಫ್ರೆಂಡ್ ಜೊತೆ ಗಂಡನ ಫೋಟೋ: ಎಣ್ಣೆ ಬಿಸಿ ಮಾಡಿ ಗಂಡನ ಖಾಸಗಿ ಭಾಗಕ್ಕೆ ಎರಚಿದ ಪತ್ನಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ