ಆಹಾರ ನೀಡ್ತಿದ್ದ ಅಜ್ಜಿಗೆ ಅನಾರೋಗ್ಯ,  ಅಪ್ಪಿ ಸಾಂತ್ವನ ಹೇಳಿದ ವಾನರ; ವಿಡಿಯೋ

By Suvarna NewsFirst Published Jul 5, 2021, 4:47 PM IST
Highlights

* ಪ್ರಾಣಿ ಪ್ರೀತಿಗೆ ಮಿಗಿಲು ಇಲ್ಲ
* ಆಹಾರ ನೀಡುತ್ತಿದ್ದ ವೃದ್ಧೆಯ ಆರೋಗ್ಯ ವಿಚಾರಿಸಲು ಬಂದ ಕಪಿರಾಯ
* ಅಜ್ಜಿಯನ್ನು ಅಪ್ಪಿ ಸಾಂತ್ವನ ಹೇಳಿದ ಮಂಗ
* ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಬೆಂಗಳೂರು(ಜೂ.  05)  ಪ್ರತಿದಿನ ತನೆಗೆ ಆಹಾರ ನೀಡುತ್ತಿದ್ದ ವೃದ್ಧೆ ಅನಾರೋಗ್ಯದ ಕಾರಣ ಹಾಸಿಗೆ ಹಿಡಿದಿದ್ದಳು. ಆದರೆ  ಆಹಾರ ತಿಂದು ತೆರಳುತ್ತರಿದ್ದ ಮಂಗನಿಗೆ ಅದು ಗೊತ್ತಿರಲಿಲ್ಲ. ಒಂದೆರಡು ದಿನ ನೋಡಿದ ಮಂಗ ತನ್ನ ಅನ್ನದಾತೆ ಎಲ್ಲಿ ಹೋದಳು ಎಂದು ಹುಡುಕಾಡಿದೆ. ಕೊನೆಗೆ ವೃದ್ಧೆ ಹಾಸಿಗೆ ಹಿಡಿದ ಜಾಗಕ್ಕೆ ಬಂದಿದೆ.

ಅಜ್ಜಿಯನ್ನು ಅಪ್ಪಿ ಸಂತೈಸಿದ ಮಂಗ ತನ್ನ ಮೂಖ ಭಾಷೆಯಲ್ಲೇ ಮಾತನಾಡಿದೆ.  ಅಜ್ಜಿಯನ್ನು ಅಪ್ಪಿದೆ, ಸಂತೈಸಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಹೃದಯಸ್ಪರ್ಶಿ ದೃಶ್ಯಕ್ಕೆ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮರೆಯಾದ ಮಾವುತನಿಗೆ ಗಜರಾಜನ ಕಣ್ಣೀರ ವಿದಾಯ

ದೇವಾಲಯಗಳು ಇರುವ ಊರಿನಲ್ಲಿ ಮಂಗಗಳು ಮಾನವರೊಂದಿಗೆ ನಿಕಟವಾಗಿ ವರ್ತಿಸುತ್ತವೆ. ಆದರೆ  ಕಾಡಿನ ಮಂಗಗಳ ವರ್ತನೆ ಬೇರೆಯೇ ಆಗಿರುತ್ತದೆ ಎಂದು ಕೆಲರು ಎಚ್ಚರಿಕೆ ನೀಡಲು ಮರೆತಿಲ್ಲ. 

ತೋರಿಕೆಯ ದುಖಃ ಹಂಚುವ ಮಾನವ ಪ್ರಪಂಚದಲ್ಲಿ ಪ್ರಾಣಿಗಳೆ ಮಿಗಿಲು. ತನ್ನ ಕರುವನ್ನು ಕೊಂದ ಬಸ್ ಬಣ್ಣ ಬದಲಾಗಿದ್ದರೂ ವರ್ಷಗಳ ಕಾಲ ದ್ವೇಷ ಸಾಧಿಸುತ್ತ ಆ ಬಸ್ ಬಂದಾಗಲೆಲ್ಲ ಅಟ್ಟಿಸಿಕೊಂಡು ಹೋಗುವ ಹಸು ಶಿರಸಿಯಲ್ಲಿದೆ. ಐಎಎಸ್ ಅಧಿಕಾರಿ ಡಿಕೆ ರವಿ ಸಾವನ್ನಪ್ಪಿದಾಗ ಅವರ ಮನೆಯ ಶ್ವಾನ ರೋದಿಸುತ್ತಿದ್ದ ದೃಶ್ಯ ಹಲವರ ಕಣ್ಣಮುಂದೆ ಹಾಗೆ ಇರಬಹುದು. ಮಾಲೀಕನ ಶವ ಮಣ್ಣು ಮಾಡಿದ್ದರೂ ವಾರಗಟ್ಟಲೇ ಅಲ್ಲಿಯೇ ಕೂತ ಶ್ವಾನದ  ಕತೆಯನ್ನು ಕೇಳಿದ್ದೇವೆ.  ಈ ಸ್ಟೋರಿಯೂ ಅದೇ ಸಾಲಿಗೆ ಸೇರಿಕೊಳ್ಳುತ್ತದೆ.

 

click me!