ಕತ್ತರಿ ಕಾಣೆ: ತಾಳ್ಮೆ ಕಳೆದುಕೊಂಡ ಸಿಎಂ ಕೈಯಲ್ಲೇ ರಿಬ್ಬನ್ ಎಳೆದು ಉದ್ಘಾಟನೆ!

Published : Jul 05, 2021, 04:17 PM IST
ಕತ್ತರಿ ಕಾಣೆ: ತಾಳ್ಮೆ ಕಳೆದುಕೊಂಡ ಸಿಎಂ ಕೈಯಲ್ಲೇ ರಿಬ್ಬನ್ ಎಳೆದು ಉದ್ಘಾಟನೆ!

ಸಾರಾಂಶ

ರಿಬ್ಬನ್ ಕತ್ತರಿಸಲು ಕತ್ತರಿ ಕಾಣೆ, ಉದ್ಘಾಟನೆ ವೇಳೆ ತಾಳ್ಮೆ ಕಳೆದುಕೊಂಡ ಸಿಎಂ ಕೈಯಲ್ಲೇ ರಿಬ್ಬನ್ ಎಳೆದು ಉದ್ಘಾಟನೆ ಮಾಡಿದ ವಿಡಿಯೋ ವೈರಲ್ ಕಮ್ಯೂನಿಟಿ ಹೌಸ್ ಉದ್ಘಾಟನೆ ವೇಳೆ ನಡೆದ ಘಟನೆ

ತೆಲಂಗಾಣ(ಜು.05):  ಉದ್ಘಾಟನೆಗೆ ವೇದಿಕೆ ರೆಡಿಯಾಗಿದೆ, ಕಾರ್ಯಕ್ರಮಕ್ಕೆ ತೆಲಂಗಾಣ ಮುಖ್ಯಮಂತ್ರಿ  ಕೆ ಚಂದ್ರಶೇಖರ್ ರಾವ್ ಆಗಮಿಸಿದ್ದಾರೆ. ಸುತ್ತಲು ಜನ ನಿಂತಿದ್ದಾರೆ. ರಿಬ್ಬನ್ ಕತ್ತರಿಸಿ ಉದ್ಘಾಟನೆ ಮಾಡಲು ಸಜ್ಜಾದ ಮುಖ್ಯಮಂತ್ರಿಗೆ ಕತ್ತರಿ ಇಲ್ಲ. ಆಯೋಜಕರು ಕತ್ತರಿಗಾಗಿ ತಡಬಡಿಸಿದ್ದಾರೆ. ಒಂದೆರಡು ನಿಮಿಷ ಕಾದರೂ ಕತ್ತರಿ ಬರಲಿಲ್ಲ. ತಾಳ್ಮೆ ಕಳೆದುಕೊಂಡ ರಾವ್, ಕೈಯಲ್ಲಿ ರಿಬ್ಬನ್ ಎಳೆದು ಉದ್ಘಾಟನೆ ಮಾಡಿದ್ದಾರೆ.

ಕೋಳಿ ಮರಿಗೆ ಸಿಹಿ ಮುತ್ತು ನೀಡಿ ಬಿಗಿದಪ್ಪಿದ ಕೋತಿ ಮರಿ; ಹೃದಯಸ್ಪರ್ಶಿ ವಿಡಿಯೋ ವೈರಲ್!

ತೆಲಂಗಾಣದ ಮಂದೆಪಲ್ಲಿ ಗ್ರಾಮದಲ್ಲಿನ ಕಮ್ಯೂನಿಟಿ ಹೌಸ್ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಉದ್ಘಾಟನೆಗೆ ಆಹ್ವಾನಿಸಲಾಗಿತ್ತು. ತಕ್ಕ ಸಮಯಕ್ಕೆ ಮುಖ್ಯಮಂತ್ರಿ ಉದ್ಘಾಟನೆಗೆ ಹಾಜರಾಗಿದ್ದಾರೆ.  

 

ಆಯೋಜಕರು ಮಾಡಿದ ಸಣ್ಣ ಎಡವಟ್ಟಿನಿಂದ ಸಿಎಂ ಸಿಟ್ಟಾಗಿದ್ದಾರೆ. ಉದ್ಘಾಟನೆ ಮಾಡಲು ಅಲಂಕೃತ ಟ್ರೇ ನೀಡಲಾಗಿತ್ತು. ಈ ಟ್ರೇನಲ್ಲಿ ಕತ್ತರಿ ಇಡಲು ಆಯೋಜಕರು ಮರೆತಿದ್ದಾರೆ. ರಿಬ್ಬನ್ ಕತ್ತರಿಸಲು ರಾವ್ ಮುಂದಾದಾಗ ಕತ್ತರಿ ಇಲ್ಲ. ಆಯೋಜಕರು ಕತ್ತರಿಗಾಗಿ ಹುಡುಕಾಟ ನಡೆಸಿದ್ದಾರೆ. ತಕ್ಷಣಕ್ಕೆ ಸಿಗಲಿಲ್ಲ.

ಸುಂದರಿಯ ನೋಡಿ ಕಮೆಂಟರಿ ಬಿಟ್ಟು ಹಾಡು ಹಾಡಿದ ಕಮೆಂಟೇಟರ್; ವಿಡಿಯೋ ವೈರಲ್!

ಇತ್ತ ಸಿಎಂ ತಾಳ್ಮೆ ಕಳೆದುಕೊಂಡಿದ್ದಾರೆ. ಬಳಿಕ ಕೈಯಲ್ಲಿ ರಿಬ್ಬನ್ ಎಳದು ಉದ್ಘಾಟನೆ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?