
ನವದೆಹಲಿ(ಜು.05): ಕೋವಿಡ್ ಲಸಿಕೆ ಅಭಿಯಾನಕ್ಕೆಂದು ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ಮತ್ತು ಅಭಿಯಾನದ ಯಶಸ್ಸಿಗೂ ಕಾರಣವಾಗಿರುವ ಕೋ-ವಿನ್ ಆ್ಯಪ್ ಅಥವಾ ವೆಬ್‌ಸೈಟ್‌ನ ಯಶೋಗಾಥೆಯನ್ನು ಜಗತ್ತಿನೆದುರು ಪ್ರಧಾನಿ ನರೇಂದ್ರ ಮೋದಿ ತೆರೆದಿಟ್ಟಿದ್ದಾರೆ. ಆನ್‌ಲೈನ್ ಮೂಲಕ ನಡೆದ ಸಮಾವೇಶದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ದೇಶವೊಂದು ಅದೆಷ್ಟೇ ಶಕ್ತಿಶಾಲಿಯಾಗಿದ್ದರೂ, ಏಕಾಂಗಿಯಾಗಿ ಕೊರೋನಾ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಹೀಗಾಗಿ ಇಡೀ ದೇಶವೇ ಒಂದಾಗಿ ಇದನ್ನೆದುರಿಸಬೇಕು ಎಂದಿದ್ದಾರೆ.
ವಿಯೆಟ್ನಾಂ, ಪೆರು, ಮೆಕ್ಸಿಕೋ, ಇರಾಕ್, ಪನಾಮಾ, ಉಕ್ರೇನ್, ನೈಜೀರಿಯಾ, ಯುಎಇ, ಮತ್ತು ಉಗಾಂಡ ಸೇರಿದಂತೆ 20 ದೇಶಗಳು ಈ ಆ್ಯಪ್‌ಅನ್ನು ತಮ್ಮ ದೇಶದ ಲಸಿಕಾ ಅಭಿಯಾನದಲ್ಲಿ ಅಳವಡಿಸಿಕೊಳ್ಳಲು ಮುಂದೆ ಬಂದಿದ್ದು, ಈ ನಿಟ್ಟಿನಲ್ಲಿ ಈ ಸಮಾವೇಶದಲ್ಲಿ ಭಾಗಿಯಾಗಿವೆ. ಇನ್ನು ಸಮಾವೇಶಲ್ಲಿ ಪಿಎಂ ಮೋದಿ ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನದ ಡೇಟಾ ಸಂಗ್ರಹಿಸುವ CoWIN App ಬಗ್ಗೆ ಮಾಹಿತಿ ನೀಡಿದ್ದಾರೆ.. ಮೋದಿ ಮಾತಿನ ಮುಖ್ಯಾಂಶಗಳು ಇಲ್ಲಿವೆ ನೋಡಿ.
* ಸೋಂಕಿನಿಂದ ಜನರು ಸಾವನ್ನಪ್ಪಿದ ಎಲ್ಲ ದೇಶದ ಜನರಿಗೆ ನಾನು ಸಂತಾಪ ಸೂಚಿಸುತ್ತೇನೆ. ದೇಶವೊಂದು ಅದೆಷ್ಟೇ ಶಕ್ತಿಶಾಲಿಯಾಗಿರಲಿ ಆದರೆ ಏಕಾಂಗಿಯಾಗಿ ಇಂತಹ ಸಮಸ್ಯೆಯನ್ನು ಎದುರಿಸಲು ಸಾಧ್ಯವಿಲ್ಲ.
* ಮಾನವೀಯತೆಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ, ಮುಂದುವರೆಯಬೇಕು. ಪರಸ್ಪರರಿಂದ ಕಲಿತುಕೊಳ್ಳಬೇಕು ಹಾಗೂ ನಮ್ಮಲ್ಲಿ ಇಂತಹ ಸಮಸ್ಯೆ ನಿವಾರಣೆಗಾಗಿ ಬಳಸುವ ಸೌಲಭ್ಯಗಳ ಬಗ್ಗೆ ಮಾರ್ಗದರ್ಶನ ನೀಡಬೇಕು.
* ಕೊರೋನಾ ಸಂಕಷ್ಟ ಆರಂಭವಾದಾಗಿನಿಂದ ಭಾರತ ತನ್ನೆಲ್ಲಾಆ ಅನುಭವ, ಸೌಕರ್ಯಹಾಗೂ ಸವಲತ್ತಿನ ಮಾಹಿತಿ ವಿಶ್ವದ ಜೊತೆ ಹಂಚಿಕೊಳ್ಳುತ್ತಿದೆ.
* ಕೋವಿನ್ ಪ್ಲಾಟ್‌ಫಾರ್ಮ್ ಶೀಘ್ರದಲ್ಲೇ ಜಗತ್ತಿ ಪರಿಚಯವಾಗಲಿದೆ, ಭಾರತವು ಅನುಭವಗಳನ್ನು ಹಂಚಿಕೊಳ್ಳಲು ಸಿದ್ಧವಾಗಿದೆ. ನಾವು ಒಟ್ಟಾಗಿ ಕರೋನಾ ವಿರುದ್ಧ ಹೋರಾಡಬೇಕಾಗಿದೆ, ಇದು 100 ವರ್ಷದ ಅತಿದೊಡ್ಡ ಸಾಂಕ್ರಾಮಿಕ ರೋಗವಾಗಿದೆ.
* ಭಾರತೀಯ ಸಂಸ್ಕೃತಿ ಇಡೀ ಜಗತ್ತನ್ನು ಒಂದೇ ಕುಟುಂಬವೆಂದು ಪರಿಗಣಿಸುತ್ತದೆ. ಈ ಸೋಂಕು ಅನೇಕ ಜನರಿಗೆ ಈ ಮಾತಿನ ಮೂಲಭೂತ ಸತ್ಯವನ್ನು ಅರಿತುಕೊಳ್ಳುವಂತೆ ಮಾಡಿದೆ.
* ಆದ್ದರಿಂದ COVID ಲಸಿಕಾ ಅಭಿಯಾನಕ್ಕಾಗಿ ಆರಂಭಿಸಿದ ನಮ್ಮ ತಂತ್ರಜ್ಞಾನ ವೇದಿಕೆ, ಕೋವಿನ್ ಎಂದು ಕರೆಯಲಾಗುವ ಇದನ್ನು ಓಪನ್ ಸೋರ್ಸ್ ಆಗಿಸಲು ಇಷ್ಟಪಡುತ್ತೇವೆ.
* COVID19 ವಿರುದ್ಧದ ನಮ್ಮ ಹೋರಾಟದಲ್ಲಿ ತಂತ್ರಜ್ಞಾನ ಬಹಳ ಮುಖ್ಯ. ಅದೃಷ್ಟವಶಾತ್ ಸಾಫ್ಟ್‌ವೇರ್ ಎಂಬ ಕ್ಷೇತ್ರದಲ್ಲಿ ಸಂಪನ್ಮೂಲಗಳ ಕೊರತೆ ಕಾಣಿಸಿಕೊಂಡಿಲ್ಲ. ಇದೇ ಕಾರಣದಿಂದ ನಾವುವು ನಮ್ಮ COVID ಪತ್ತೆಹಚ್ಚುವಿಕೆ ಮತ್ತು ಟ್ರ್ಯಾಕಿಂಗ್ ಅಪ್ಲಿಕೇಶನ್ * ಅನ್ನು ತಾಂತ್ರಿಕವಾಗಿ ಸಾಧ್ಯವಾದಷ್ಟು ಬೇಗ ಓಪನ್ ಸೋರ್ಸ್ ಆಗಿ ಮಾಡಿದ್ದೇವೆ.
* ಕೊರೋನಾ ಮಣಿಸಲು ಹಾಗೂ ಈ ಸೋಂಕಿನಿಂದ ಹೊರಬರಲು ವ್ಯಾಕ್ಸಿನೇಷನ್ ಮಾನವ ಕುಲಕ್ಕೆ ಒಂದು ಭರವಸೆ ಕೊಟ್ಟಿದೆ. ಭಾರತದಲ್ಲಿ ನಮ್ಮ ರೋಗನಿರೋಧಕ ಕಾರ್ಯತಂತ್ರವನ್ನು ಯೋಜಿಸುವಾಗ ನಾವು ಸಂಪೂರ್ಣವಾಗಿ ಡಿಜಿಟಲ್ ವಿಧಾನ ಅಳವಡಿಸಿಕೊಳ್ಳಲು ಆರಂಭದಲ್ಲೇ ನಿರ್ಧರಿಸಿದ್ದೆವು.
ಕೊರೋನಾ ಹೋರಾಟದಲ್ಲಿ ಕೋವಿನ್ ಪಾತ್ರ
2021ರ ಜ.16ರ ನಂತರ ಭಾರತದಲ್ಲಿ ಕೋವಿಡ್ ಲಸಿಕೆ ಅಭಿಯಾನದ ನೋಂದಣಿಗೆಂದು ಅಭಿವೃದ್ಧಿಪಡಿಸಲಾಗಿರುವ ಈ ಆ್ಯಪ್‌ನಲ್ಲಿ ಸದ್ಯ ಸುಮಾರು 20 ಕೋಟಿ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಖಾಸಗಿತನ, ಹ್ಯಾಕಿಂಗ್‌ನಂಥ ಅಪವಾದಗಳನ್ನು ಎದುರಿಸಿ ಯಶಸ್ವಿಯಾಗಿರುವ ಕೋ-ವಿನ್ ಭಾರತದ ಲಸಿಕಾ ಅಭಿಯಾನದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ