
ಬೆಂಗಳೂರು (ಫೆ.4): ಲಾಜಿಸ್ಟಿಕ್ಸ್ ಮತ್ತು ಹೋಮ್ ಡೆಲಿವರಿ ಜಗತ್ತಿನಲ್ಲಿ, ಏನು ಬೇಕಾದರೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುಲಭವಾಗಿ ಸಾಗಿಸಬಹುದು. ಒಂದೆ ಒಂದು ಬಾಳೆಹಣ್ಣಿಗಾಗಿ ಕ್ವಿಕ್ ಕಾಮರ್ಸ್ ಡೆಲಿವರಿ ಬುಕ್ ಮಾಡಿದ್ದನ್ನು ಕಂಡಿದ್ದೇವೆ. ಇನ್ನು ಮನೆ ಕೀಲಿ ಮರೆತುಬಂದರೂ ಚಿಂತಿಸಬೇಕಾಗಿಲ್ಲ. ಸಿಂಪಲ್ ಆಗಿ ಪೋರ್ಟರ್ ಬುಕ್ ಮಾಡಿದ್ರೆ ಸಾಕು. ನೀವಿದ್ದಲ್ಲಗೆ ಮರೆತುಹೋದ ಕೀಲಿ ಬರುತ್ತದೆ. ಆದರ, ಇತ್ತೀಚಿನ ರಾಪಿಡೋ ಕೇಸ್‌ನ ಒಳಗೊಂಡ ಘಟನೆ, ಒಂದು ಸಮಸ್ಯೆಗೆ ಸೃಜನಶೀಲ ಪರಿಹಾರ ಹೇಗೆ ಪಡೆದುಕೊಳ್ಳಬಹುದು ಅನ್ನೋದಕ್ಕೆ ಸಾಕ್ಷಿ. ಕೆಲವರು ಇದನ್ನು ಸೋಮಾರಿತನದ ಪೀಕ್ ಅಂತಲೂ ಹೇಳಬಹುದು.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಒಬ್ಬ ಮಹಿಳೆ ಎಂದಿನಂತೆ ರಾಪಿಡೋದಲ್ಲಿ ಪಾರ್ಸಲ್ ಬುಕ್ ಮಾಡಿದ್ದಳು. ಡೆಲಿವರಿ ಏಜೆಂಟ್ ಆಕೆಯ ಮನೆಯ ಬಾಗಿಲಿಗೆ ಬಂದು ಪಾರ್ಸಲ್ ಅನ್ನು ಸ್ವೀಕಾರ ಮಾಡಿದ್ದ. ಆತನ ಕೈಗೆ ಅಂದವಾಗಿ ಪ್ಯಾಕ್ ಮಾಡಲಾದ ಹಾಗೂ ಎತ್ತಲು ಸ್ವಲ್ಪ ಭಾರವಾಗಿದ್ದ ಕಾರ್ಡ್‌ಬೋರ್ಡ್ ಬಾಕ್ಸ್‌ಅನ್ನು ಮಹಿಳೆ ನೀಡಿದ್ದಳು.
ವೃತ್ತಿಪರ ಡೆಲಿವರಿ ಏಜೆಂಟ್ ಆಗಿರುವ ಕಾರಣ ತಮ್ಮ ಜರ್ನಿ ಆರಂಭ ಮಾಡುವ ಮೊದಲು ಮಹಿಳೆಯ ಬಳಿ ಪೇಮೆಂಟ್ ವಿಚಾರವಾಗಿ ಸ್ಪಷ್ಟನೆ ಕೇಳಿದ್ದಳು. 'ಮೇಡಂ ಪೇಮೆಂಟ್ ಆನ್‌ಲೈನ್ ಮಾಡ್ತೀರೋ ಅಥವಾ ಕ್ಯಾಶ್? ಎಂದು ಕೇಳಿದ್ದ. ಅದಕ್ಕೆ ಆಕೆ ಈಗಾಗಲೇ ಆನ್‌ಲೈನ್‌ನಲ್ಲಿ ಹಣ ಪಾವತಿ ಮಾಡಿದ್ದೇನೆ ಎಂದು ಹೇಳಿ ಮುಂದುವರಿದರು.
ಟ್ರಾಫಿಕ್‌ನಲ್ಲಿ ಮ್ಯಾಪ್ಸ್ ತೋರಿದಂತೆ ಸಾಗಿದ ಡೆಲಿವರಿ ಏಜೆಂಟ್ ಹೋಗುವ ಇಡೀ ಹಾದಿಯಲ್ಲಿ ಪ್ಯಾಕೇಜ್‌ಅನ್ನು ಅತ್ಯಂತ ಸೇಫ್ ಆಗಿ ಇರಿಸಿದ್ದರು. ಆದರೆ, ಡ್ರಾಪ್ ಲೊಕೇಷನ್ ಹತ್ತಿರ ಬಂದಾಗ ಆತನಿಗೆ ಅಲ್ಲಿ ಯಾರೊಬ್ಬರೂ ಕಂಡಿರಲಿಲ್ಲ. ಅಕ್ಕಪಕ್ಕ, ಹುಡುಕಾಡಿದರೂ ಒಂದೂ ಮನೆಯಿಲ್ಲ. ಕಚೇರಿ, ಅಪಾರ್ಟ್‌ಮೆಂಟ್ ಬಳಿ ಈ ಬಾಕ್ಸ್‌ಗೆ ಕಾಯುತ್ತಿರುವ ಯಾವೊಬ್ಬ ವ್ಯಕ್ತಿಯೂ ಕಾಣಲಿಲ್ಲ. ಅದರ ಬದಲು, ದೊಡ್ಡ ಬೆಟ್ಟದಂತಿದ್ದ, ಕೆಟ್ಟ ವಾಸನೆ ಇದ್ದ ಕಸದ ರಾಶಿಯೇ ಕಂಡಿತ್ತು.
ಬಹುಶಃ ತಾಂತ್ರಿಕ ಸಮಸ್ಯೆ ಆಗಿರಬೇಕು ಅಥವಾ ಬೇರೆ ವಿಳಾಸಕ್ಕೆ ಬಂದಿರಬೇಕು ಎಂದು ಡೆಲಿವರಿ ಏಜೆಂಟ್ ಪಾರ್ಸಲ್ ಬುಕ್ ಮಾಡಿದ ಮಹಿಳೆಗೆ ಕರೆ ಮಾಡಿದ್ದಾನೆ. 'ಮೇಡಮ್, ನಾನು ಲೊಕೇಷನ್‌ನಲ್ಲಿ ಇದ್ದೇನೆ. ಇಲ್ಲಿ ಯಾರೂ ಕಾಣುತ್ತಿಲ್ಲ. ಈ ಪಾರ್ಸಲ್‌ಅನ್ನು ಯಾರಿಗೆ ನೀಡಬೇಕು? ಎಂದು ಪ್ರಶ್ನೆ ಮಾಡಿದ್ದಾನೆ.
ಈ ವೇಳೆ ಸಿಂಪಲ್ ಆಗಿ ಉತ್ತರಿಸಿದ ಮಹಿಳೆ, 'ಅಯ್ಯೋ ಅದ್ಯಾರಿಗೂ ಕೊಡೋ ಪಾರ್ಸಲ್ ಅಲ್ಲ. ಅದನ್ನು ಕಸದ ರಾಶಿಯಲ್ಲಿ ಎಸೆದು ಬಿಡಿ. ಅದು ನಮ್ಮ ಮನೆಯ ಕಸ' ಎಂದು ಹೇಳಿದ್ದಾರೆ.
ಇದನ್ನು ಕೇಳಿದ ಡೆಲಿವರಿ ಬಾಯ್‌ಗೆ ಅಚ್ಚರಿಯಾಗಿದೆ. ಫೋನ್‌ಅನ್ನು ಒಂದು ಕೈಯಲ್ಲಿ ಹಿಡಿದುಕೊಂಡಿದ್ದ ಆತ, ಬಾಕ್ಸ್ಅನ್ನು ಇಡೀ ಟ್ರಾಫಿಕ್‌ನಲ್ಲಿ ಅತ್ಯಂತ ಜಾಣ್ಮೆಯಿಂದ ತೆಗೆದುಕೊಂಡು ಬಂದಿದ್ದ ರೀತಿಯನ್ನು ನೆನಪಿಸಿಕೊಳ್ಳುತ್ತಿದ್ದ. ನಾನು ಈಗ ಹೈಟೆಕ್ ಗಾರ್ಬೆಜ್ ಕಲೆಕ್ಟರ್ ಆಗಿಬಿಟ್ಟೆ ಅನ್ನೋದು ಆತನನ್ನು ಕಾಡಿತ್ತು.
ಆದರೆ, ಮಹಿಳೆಯ ವಿಚಾರವಾಗಿ ಸಿಟ್ಟಾಗುವ ಬದಲು ಅವರ ಮಾತು ಕೇಳಿ ನಗಲು ಆರಂಭಿಸಿದ್ದ. ಬಳಿಕ ಇದರ ಬಗ್ಗೆ ಮಾತನಾಡಿದ ಆತ, 'ಹಾಗಾದರೆ, ನಾವು ಇಲ್ಲಿದೆ ಬಂದು ಮುಟ್ಟಿದ್ದೇವೆ. ಜನರ ಕಸವನ್ನೂ ನಾವು ಡೆಲಿವರಿ ಮಾಡುವ ಮಟ್ಟಕ್ಕೆ ಹೋಗಿದ್ದೇವೆ' ಎಂದಿದ್ದಾನೆ.
ಇಡೀ ಘಟನೆಯ ತಮಾಷೆಯಾಗಿದ್ದರೂ, ಆಧುನಿಕ ಯುಗದ ಲೈಫ್ ಹ್ಯಾಕ್ ಹೇಗೆ ಬೇಕಾದರೂ ಇರಬಹುದು ಅನ್ನೋದನ್ನು ತೋರಿಸಿದೆ. ಮನೆ ಮುಂದೆ ಬರುವ ಪುರಸಭೆಯ ವ್ಯಾನ್‌ಗಾಗಿ ಕಾಯುವುದು, ಅದರ ಕಮ್ಯುನಿಟಿ ಡಸ್ಟ್‌ಬಿನ್‌ಗೆ ಕಸ ಹಾಕಲು ನಡೆದುಕೊಂಡು ಹೋಗೋದನ್ನು ತಪ್ಪಿಸಲು, ನಮ್ಮ ಕಸ ಎಲ್ಲಿ ಹೋಗುತ್ತದೆ ಅನ್ನೋ ರಿಯಲ್ ಟೈಮ್‌ನಲ್ಲಿ ಟ್ರ್ಯಾಕ್ ಕೂಡ ಮಾಡಬಹುದಾದ ಸರ್ವೀಸ್ ಇದಾಗಿದೆ. ಒಂದಂತೂ ಸತ್ಯ, ಮಹಿಳೆ ಸೇವೆಯನ್ನು ಅತ್ಯಂತ ಅನಿರೀಕ್ಷಿತ ರೀತಿಯಲ್ಲಿ ಬಳಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ