
ಹೈದರಾಬಾದ್(ಆ.01) ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಲೈಕ್ಸ್ , ಕಮೆಂಟ್ಸ್‌ಗಾಗಿ ಹಲವು ಕಸರತ್ತು ಮಾಡುತ್ತಾರೆ. ಕೆಲವು ವೈರಲ್ ಆದರೆ ಮತ್ತೆ ಕೆಲವು ವಿವಾದ, ಟೀಕೆಗೆ ಗುರಿಯಾಗಿದೆ. ಇದೀಗ ಮಹಿಳಾ ಇನ್‌ಫ್ಲುಯೆನ್ಸರ್ ನಡೆಸಿದ ಕಸರತ್ತು ಭಾರಿ ವಿವಾದಕ್ಕೆ ಗುರಿಯಾಗಿದೆ. ತನ್ನ ಮಗನ ಜೊತೆ ಬೋಲ್ಡ್ ಡ್ರೆಸ್ ಮೂಲಕ ವಿಡಿಯೋ ಶೂಟ್ ಮಾಡಿದ್ದಾಳೆ. ಹಾಟ್ ಡ್ರೆಸ್‌ನಲ್ಲಿ ಮಗನ ಜೊತೆ ಈ ರೀತಿಯ ವಿಡಿಯೋ ಶೂಟ್ ಮಾಡಿರುವುದು ಭಾರಿ ಟ್ರೋಲ್ ಹಾಗೂ ಟೀಕೆಗೆ ಗುರಿಯಾಗಿದೆ. ಇದರ ಬೆನ್ನಲ್ಲೇ ಮಹಿಳಾ ಇನ್‌ಫ್ಲುಯೆನ್ಸರ್ ಕಮೆಂಟ್ಸ್ ನಿರ್ಬಂಧಿಸಿದ್ದಾರೆ.
ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್, ಬಾಡಿ ಬಿಲ್ಡರ್ ಅಮೈರಾ ರೆಡ್ಡಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. 14.6K ಫಾಲೋವರ್ಸ್ಹೊಂದಿರುವ ಅಮೈರಾ ರೆಡ್ಡಿ ಈಗಾಗಲೇ ಮಗನ ಜೊತೆ ಹಲವು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಆದರೆ ಇದೀಗ ಶೇರ್ ಮಾಡಿರುವ ವಿಡಿಯೋ ಮಾತ್ರ ಭಾರಿ ಟೀಕೆಗೆ ಗುರಿಯಾಗಿದೆ.
ನನ್ನದೇ ತಪ್ಪು, ಖಾಸಗಿ ವಿಡಿಯೋ ವೈರಲ್ ಬೆನ್ನಲ್ಲೇ ಕ್ಷಮೆ ಕೇಳಿದ ಪಂಜಾಬ್ ಇನ್‌ಫ್ಲುಯೆನ್ಸರ್!
ಮಕ್ಕಳ ಜೊತೆ ಈ ರೀತಿಯ ಅಶ್ಲೀಲ ಸಲ್ಲದು ಎಂದು ಹಲವರು ಟೀಕಿಸಿದ್ದಾರೆ. ಮಕ್ಕಳಿಗೆ ಈ ವಯಸ್ಸಿನಲ್ಲಿ ಪೋಷಕರು ಏನು ಕಲಿಸಬೇಕು, ಹೇಗೆ ಮಾದರಿಯಾಗಬೇಕು ಅನ್ನೋದೇ ತಿಳಿಯದಾಗಿದೆ. ಇದು ಉತ್ತಮ ಬೆಳವಣಿಗೆ ಅಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಕೆಲವರು ಈಕೆಯ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ವಿಡಿಯೋ ಹಾಗೂ ಫೋಟೋದಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಮಗನ ಜೊತೆಗಿನ ಈ ವಿಡಿಯೋ ಟೀಕೆ, ಟ್ರೋಲ್‌ಗಳ ನಡುವೆ 2.5 ಮಿಲಿಯನ್ ವೀಕ್ಷಣೆ ಪಡೆದಿದೆ.38.5k ಲೈಕ್ಸ್ ಪಡೆದಿದೆ. ಟ್ರೋಲ್ ಹಾಗೂ ಟೀಕೆಗೆ ತಲೆಕೆಡಿಸಿಕೊಳ್ಳದ ಅಮೈರಾ ರೆಡ್ಡಿ ಮಗನ ಜೊತೆ ಮತ್ತಷ್ಟು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಈಕೆ ಈ ಹಿಂದೆ ಪೋಸ್ಟ್ ಮಾಡಿರುವ ಕೆಲ ವಿಡಿಯೋಗಳು, ಭರ್ಜರಿ ಕಮೆಂಟ್ ವ್ಯಕ್ತವಾಗಿದೆ. ನಿಮ್ಮ ಮಗನಾಗುವ ಆಸೆ ಎಂದು ಕೆಲವರು ಕಮೆಂಟ್ಸ್ ಮಾಡಿದ್ದಾರೆ.
ಇನ್‌ಸ್ಟಾ ಇನ್‌ಫ್ಲುಯೆನ್ಸರ್ ಜೊತೆ ಹಾರ್ದಿಕ್ ಪಾಂಡ್ಯ ಡೇಟಿಂಗ್? ವೈರಲ್ ವಿಡಿಯೋ ಸೃಷ್ಟಿಸಿದ ಅನುಮಾನ!
ಅಮೈರಾ ರೆಡ್ಡಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಹಾಗೂ ಫೋಟೋಗಳ ಮೂಲಕ ಭಾರಿ ಜನಪ್ರಿಯರಾಗಿದ್ದಾರೆ. ವೃತ್ತಿಯಲ್ಲಿ ಬಾಡಿ ಬಿಲ್ಡರ್ ಆಗಿರುವ ಅಮೈರಾ ರೆಡ್ಡಿ ಹಲವು ಮಹಿಳಾ ಬಾಡಿ ಬಿಲ್ಡರ್ಸ್ ಶೋಗಳಲ್ಲಿ ಪಾಲ್ಗೊಂಡಿದ್ದಾರೆ. ಪ್ರತಿ ದಿನ ಜಿಮ್ ಅಭ್ಯಾಸ ಮಾಡಿ ದೇಹ ದಂಡಿಸುತ್ತಾರೆ. ಈ ಮೂಲಕ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ