ಒಂಟಿ ಮನೆ, ರಾತ್ರಿಯೆಲ್ಲಾ ವಿಚಿತ್ರ ಶಬ್ದ; ದಾಳಿ ನಡೆಸಿದ ಪೊಲೀಸರಿಗೆ ಬಿಗ್ ಶಾಕ್ !

Published : Jul 05, 2025, 02:56 PM IST
House

ಸಾರಾಂಶ

ಗ್ರಾಮದ ಹೊರವಲಯದ ಒಂಟಿ ಮನೆಯಿಂದ ಬರುತ್ತಿದ್ದ ವಿಚಿತ್ರ ಶಬ್ದಗಳ ಬಗ್ಗೆ ಪೊಲೀಸರಿಗೆ ದೂರು ಬಂದಿತ್ತು. ದಾಳಿ ನಡೆಸಿದಾಗ ಪೊಲೀಸರಿಗೆ ಆಘಾತಕಾರಿ ಸತ್ಯ ಬಯಲಾಗಿದೆ.

ಲಕ್ನೋ: ಗ್ರಾಮದ ಹೊರವಲಯದಲ್ಲಿ ಒಂಟಿ ಮನೆ ಇತ್ತು. ಮನೆ ಸುತ್ತಲೂ ಮುಳ್ಳುಕಂಟಿ ಬೆಳೆದಿದ್ದರಿಂದ ಸುತ್ತಲೂ ಯಾರು ಹೋಗುತ್ತಿರಲಿಲ್ಲ. ಆದ್ರೆ ಕೆಲವೊಮ್ಮೆ ಅಲ್ಲಿ ಜನರು ಕಾಣಿಸಿಕೊಳ್ಳುತ್ತಿದ್ದರು. ರಾತ್ರಿಯೆಲ್ಲಾ ಲೈಟ್ ಬೆಳಗುತ್ತಿದ್ದವು. ಆ ಮನೆಯಿಂದ ಬರುತ್ತಿದ್ದ ಸೌಂಡ್ ಗ್ರಾಮಸ್ಥರನ್ನು ಆತಂಕಗೊಂಡಿದ್ದರು. ಈ ವಿಷಯವನ್ನು ಗ್ರಾಮಸ್ಥರು ಸ್ಥಳೀಯ ಪೊಲೀಸರಿಗೆ ತಿಳಿಸಿದ್ದರು. ಗ್ರಾಮಸ್ಥರು ನೀಡಿದ ದೂರಿನ ಮೇಲೆಗೆ ಪೊಲೀಸರು ಗ್ರಾಮದ ಹೊರವಲಯದಲ್ಲಿರುವ ಒಂಟಿ ಮನೆ ಮೇಲೆ ದಾಳಿ ನಡೆಸಿದ್ದರು. ಒಂಟಿ ಮನೆ ಬಾಗಿಲು ತೆಗೆದ ಪೊಲೀಸರಿಗೆ ಬಿಗ್ ಶಾಕ್ ಕಾದಿತ್ತು.

ಆ ಒಂಟಿ ಮನೆಯಲ್ಲಿ ಪೊಲೀಸರು ನೋಡಿದ್ದೇನು? ಎಲ್ಲಿದೆ ಆ ಒಂಟಿ ಮನೆ? ರಾತ್ರಿ ಬರುತ್ತಿದ್ದ ಶಬ್ದವಾದರೂ ಏನು? ಆಗಾಗ್ಗೆ ಆ ಒಂಟಿ ಮನೆಗೆ ಬರುತ್ತಿದ್ದ ಜನರು ಯಾರು? ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

ಎಲ್ಲಿದೆ ಈ ಒಂಟಿ ಮನೆ?

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ನವಾಬಗಂಜ್ ಗ್ರಾಮದಲ್ಲಿ ಒಂಟಿ ಮನೆಯಿದೆ. ಈ ಮನೆಗೆ ಪದೇ ಪದೇ ಜನರು ಬರುತ್ತಿರೋದನ್ನು ನೋಡಿದ ಗ್ರಾಮಸ್ಥರು ಕಾರ್ಯಕ್ರಮ ನಡೆಯುತ್ತಿರಬಹುದು ಅಂತ ತಿಳಿದುಕೊಂಡಿದ್ದರು. ಹೀಗೆ ಈ ಮನೆಗೆ ಪುರುಷರು ಮತ್ತು ಮಹಿಳೆಯರು ಬರುತ್ತಿರೋದು ನಡೆಯುತ್ತಿತ್ತು. ರಾತ್ರಿಯಾಗುತ್ತಿದ್ದಂತೆ ಮನೆಯಿಂದ ಜನರು ಜೋರಾಗಿ ಕೂಗುವ, ಮ್ಯೂಸಿಕ್ ಸೌಂಡ್ ಕೇಳಿಸುತ್ತಿತ್ತು. ಗ್ರಾಮದವರ ಮನೆಯಾಗಿದ್ದರಿಂದ ಆರಂಭದಲ್ಲಿ ಯಾವುದೇ ಅನುಮಾನ ಬಂದಿರಲಿಲ್ಲ. ನಂತರ ಈ ಮನೆಗೆ ಬರುತ್ತಿರುವ ಜನರ ಸಂಖ್ಯೆ ಹೆಚ್ಚಾದಾಗ ಗ್ರಾಮಸ್ಥರಲ್ಲಿ ಅನುಮಾನ ಮೂಡಿತ್ತು.

ಕೂಡಲೇ ಗ್ರಾಮಸ್ಥರು ಒಂಟಿ ಮನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಶಾಕ್ ಕಾದಿತ್ತು. ಈ ದಾಳಿಯಲ್ಲಿ ಪೊಲೀಸರು ನಾಲ್ವರು ಯುವತಿಯರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಈ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು. ದಾಳಿ ವೇಳೆ 3,200 ರೂ. ನಗದು, ನಾಲ್ಕು ಮೊಬೈಲ್ ಫೋನ್ ಮತ್ತು ಕೆಲವು ಆಕ್ಷೇಪಾರ್ಹ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ದಾಳಿಯಾದಾಗ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದರು!

ಈ ಕುರಿತು ಪ್ರತಿಕ್ರಿಯಿಸಿರುವ ನವಾಬಗಂಜ್ ಠಾಣೆಯ ಪೊಲೀಸ್ ಅಧಿಕಾರಿ ಗೌರವ್ ಸಿಂಗ್, ಗ್ರಾಮಸ್ಥರ ಮಾಹಿತಿ ಮೇರೆಗೆ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ ಮನೆಯ ಒಡೆತಿ, ಮೂವರು ಮಹಿಳೆಯುರು ಓರ್ವ ಪುರುಷನೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದರು. ಕೂಡಲೇ ಐವರನ್ನು ಬಂಧಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ನಗರ ಪ್ರದೇಶಗಳಲ್ಲಿ ವೇಶ್ಯಾವಾಟಿಕೆ ದಂಧೆಗಳು ನಡೆಯುತ್ತಿರುತ್ತವೆ. ಇದೀಗ ಗ್ರಾಮೀಣ ಭಾಗಕ್ಕೂ ವಿಸ್ತರಿಸುತ್ತಿರೋದು ಆತಂಕಕಾರಿ ವಿಷಯವಾಗಿದೆ. ಈ ದಂಧೆ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ ಎಂದು ಗೌರವ್ ಸಿಂಗ್ ಮಾಹಿತಿ ನೀಡಿದ್ದಾರೆ.

ವೇಶ್ಯಾವಾಟಿಕೆ, ಗ್ರಾಮೀಣ ಯುವತಿಯರೇ ಟಾರ್ಗೆಟ್, ಸಲೂನ್, ಸ್ಪಾ

ವೇಶ್ಯಾವಾಟಿಕೆ, ಗ್ರಾಮೀಣ ಯುವತಿಯರೇ ಟಾರ್ಗೆಟ್, ಸಲೂನ್, ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ಅಡ್ಡವಾಗುತ್ತಿರುವಂತೆ ಕಂಡುಬರುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ. ಕಾಲೇಜು ವಿದ್ಯಾರ್ಥಿನಿಯರು ಹಾಗೂ ಗ್ರಾಮೀಣ ಯುವತಿಯರನ್ನೇ ದಂಧೆ ನಡೆಸುತ್ತಿರುವವರು ಟಾರ್ಗೆಟ್ ಮಾಡಿಕೊಂಡಿರುವುದು ಆಘಾತಕಾರಿಯೂ ಆಗಿದೆ.  ಈಶಾನ್ಯ ರಾಜ್ಯ ಮತ್ತು ಬಾಂಗ್ಲಾದೇಶದಿಂದ ಯುವತಿಯರನ್ನು ಕರೆದುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುವ ಪ್ರಕರಣಗಳು ಬೆಳಕಿಗೆ ಬರುತ್ತಿರುತ್ತವೆ. ನಗರ ಪ್ರದೇಶಗಳಲ್ಲಿ ಇಂತಹ ಘಟನೆಗಳು ಬೆಳಕಿಗೆ ಬರುತ್ತಿರುತ್ತವೆ.

ಇದನ್ನೂ ಓದಿ: ಉಡುಪಿ ಮೂಲಕ ನಡೀತಿದ್ದ ಅಂತಾರಾಷ್ಟ್ರೀಯ ಡ್ರಗ್ಸ್‌ ಜಾಲ ಬಯಲು: 8 ಮಂದಿ ಸೆರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ