18 ತಿಂಗಳಲ್ಲಿ ₹7.2 ಲಕ್ಷ 'ಫ್ರೀಡಂ ಫಂಡ್' ಸಂಗ್ರಹಿಸಿ, ಕಾರ್ಪೊರೇಟ್ ಜಗತ್ತಿಗೆ ವಿದಾಯ ಹೇಳಿದ ಯುವತಿ!

Published : Sep 03, 2026, 02:30 PM IST
Viral News Techie Riya Resigned Job

ಸಾರಾಂಶ

ಕಾರ್ಪೊರೇಟ್ ಕೆಲಸದ ತೀವ್ರ ಒತ್ತಡದಿಂದ ಪಾರಾಗಲು, ರಿಯಾ ಎಂಬ ಯುವತಿಯೊಬ್ಬರು 18 ತಿಂಗಳುಗಳ ಕಾಲ ಪ್ರತಿ ತಿಂಗಳು 40,000 ರೂ. ಉಳಿತಾಯ ಮಾಡಿ, 7.2 ಲಕ್ಷ ರೂಪಾಯಿಗಳ 'ಸ್ವಾತಂತ್ರ್ಯ ನಿಧಿ'ಯನ್ನು ಸೃಷ್ಟಿಸಿದರು. ಅನಗತ್ಯ ಖರ್ಚುಗಳನ್ನು ಕಡಿತಗೊಳಿಸಿ, ಪರ್ಯಾಯ ಆದಾಯದ ಮೂಲಗಳನ್ನು ಕಂಡುಕೊಂಡು ಆರ್ಥಿಕ ಭದ್ರತೆಯೊಂದಿಗೆ ಕೆಲಸಕ್ಕೆ ರಾಜೀನಾಮೆ ನೀಡಿದ ಅವರ ಕಥೆ ವೈರಲ್ ಆಗಿದೆ.

ಕಾರ್ಪೊರೇಟ್ ಕೆಲಸದ ತೀವ್ರ ಮಾನಸಿಕ ಮತ್ತು ದೈಹಿಕ ಒತ್ತಡದಿಂದ ಪಾರಾಗಲು, 33 ವರ್ಷದ ಯುವತಿಯೊಬ್ಬರು ತಮ್ಮ ದೈನಂದಿನ ಖರ್ಚುಗಳನ್ನು ಕಡಿತಗೊಳಿಸಿ, ಒಂದು ಭದ್ರವಾದ ಆರ್ಥಿಕ ಬುನಾದಿ ಹಾಕಿಕೊಂಡಿದ್ದಾರೆ. ರಿಯಾ ಎಂಬ ಈ ಯುವತಿಯ ಇನ್‌ಸ್ಟಾಗ್ರಾಮ್ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅವರು ಸತತ 18 ತಿಂಗಳುಗಳ ಕಾಲ ಪ್ರತಿ ತಿಂಗಳು 40,000 ರೂಪಾಯಿಯಂತೆ ಉಳಿತಾಯ ಮಾಡಿ, ಒಟ್ಟು 7.2 ಲಕ್ಷ ರೂಪಾಯಿಗಳ 'ಫ್ರೀಡಂ ಫಂಡ್' (ಸ್ವಾತಂತ್ರ್ಯ ನಿಧಿ) ರೂಪಿಸಿದ ಕಥೆಯನ್ನು ಹಂಚಿಕೊಂಡಿದ್ದಾರೆ.

ತಮ್ಮ 30ನೇ ವಯಸ್ಸಿನಲ್ಲಿ ತೀವ್ರ ಮಾನಸಿಕ ಒತ್ತಡ ಮತ್ತು ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದೇ ಜೀವನದಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಪ್ರೇರಣೆ ನೀಡಿತು ಎಂದು ರಿಯಾ ಹೇಳಿದ್ದಾರೆ. ತಕ್ಷಣವೇ ಕೆಲಸಕ್ಕೆ ರಾಜೀನಾಮೆ ನೀಡದೆ, ಸ್ಪಷ್ಟವಾದ ಆರ್ಥಿಕ ಭದ್ರತೆಯನ್ನು ಖಚಿತಪಡಿಸಿಕೊಂಡ ನಂತರವೇ ರಿಯಾ ಕಾರ್ಪೊರೇಟ್ ಜಗತ್ತಿಗೆ ವಿದಾಯ ಹೇಳಿದರು.

ರಿಯಾ ಕೈಬಿಟ್ಟ 5 ಖರ್ಚುಗಳು

ಹೊರಗಿನ ಊಟ, ಕಾಫಿ ಮತ್ತು ಆನ್‌ಲೈನ್ ಫುಡ್ ಆರ್ಡರ್‌ಗಳನ್ನು ಅವರು ಸಂಪೂರ್ಣವಾಗಿ ನಿಲ್ಲಿಸಿದರು. ಮನೆಯೂಟಕ್ಕೆ ಆದ್ಯತೆ ನೀಡಿದ್ದರಿಂದ ತಿಂಗಳಿಗೆ ಸುಮಾರು 20,000 ರೂ. ಉಳಿತಾಯವಾಯಿತು ಎಂದು ರಿಯಾ ಹೇಳಿಕೊಂಡಿದ್ದಾರೆ. 18 ತಿಂಗಳ ಕಾಲ ಹೊಸ ಬಟ್ಟೆ ಅಥವಾ ಅನಗತ್ಯ ವಸ್ತುಗಳನ್ನು ಖರೀದಿಸಲಿಲ್ಲ. ಹಳೆಯ ವಸ್ತುಗಳನ್ನೇ ಬಳಸಿದ್ದರಿಂದ ತಿಂಗಳಿಗೆ 10,000 ರೂ. ಉಳಿಸಿದರು. ಆ್ಯಪ್‌ಗಳು ಮತ್ತು ಸ್ಟ್ರೀಮಿಂಗ್ ಸೇವೆಗಳ ಸಬ್‌ಸ್ಕ್ರಿಪ್ಷನ್‌ಗಳನ್ನು ರದ್ದುಗೊಳಿಸಿ ತಿಂಗಳಿಗೆ 5,000 ರೂ. ಉಳಿಸಿದರು. ಆಗಾಗ ಬರುವ ಹುಟ್ಟುಹಬ್ಬದ ಪಾರ್ಟಿಗಳು ಮತ್ತು ಇತರ ಸಂಭ್ರಮಾಚರಣೆಗಳನ್ನು ತಪ್ಪಿಸಿ ತಿಂಗಳಿಗೆ 3,000 ರೂ. ಉಳಿತಾಯ ಮಾಡಿದರು. ವಾರಾಂತ್ಯದ ಟ್ರಿಪ್‌ಗಳನ್ನು ಕಡಿಮೆ ಮಾಡಿ, ತಿಂಗಳಿಗೆ 2,000 ರೂ. ಹೆಚ್ಚುವರಿಯಾಗಿ ಉಳಿಸಿದರು.

ರಾಜಿ ಮಾಡಿಕೊಳ್ಳದ ಆದ್ಯತೆಗಳು

ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿದರೂ, ವ್ಯಾಯಾಮ, ಆರೋಗ್ಯ, ಸಂಗಾತಿಯೊಂದಿಗಿನ ಸಮಯ, ಗುಣಮಟ್ಟದ ಆಹಾರ ಮತ್ತು ಮನೆ ಖರ್ಚುಗಳ ವಿಷಯದಲ್ಲಿ ರಿಯಾ ಯಾವುದೇ ರಾಜಿ ಮಾಡಿಕೊಳ್ಳಲಿಲ್ಲ. 'ಜೀವನದಲ್ಲಿ ಖರ್ಚು ಕಡಿಮೆ ಮಾಡುವುದು ಬಡತನದಿಂದಲ್ಲ, ಬದಲಿಗೆ ನಮ್ಮ ಆದ್ಯತೆಗಳನ್ನು ಗುರುತಿಸಿಕೊಳ್ಳಲು' ಎಂದು ರಿಯಾ ಬರೆದುಕೊಂಡಿದ್ದಾರೆ. ಇದರ ಜೊತೆಗೆ, ಕೆಲಸದಲ್ಲಿದ್ದಾಗಲೇ ರಿಯಾ ಕೆಲವು ಪಾರ್ಟ್-ಟೈಮ್ ಆದಾಯದ ಮೂಲಗಳನ್ನು ಕಂಡುಕೊಂಡಿದ್ದರು. 18ನೇ ತಿಂಗಳಲ್ಲಿ, ಈ ಪರ್ಯಾಯ ಆದಾಯವು ಅವರ ತಿಂಗಳ ಸಂಬಳವಾದ 1.6 ಲಕ್ಷ ರೂಪಾಯಿಗಿಂತ ಹೆಚ್ಚಾದಾಗ, ಅವರು ಅಧಿಕೃತವಾಗಿ ಕಂಪನಿಗೆ ರಾಜೀನಾಮೆ ನೀಡಿದರು.

ಸೋಶಿಯಲ್ ಮೀಡಿಯಾ ಪ್ರತಿಕ್ರಿಯೆ

ರಿಯಾ ಅವರ ಈ ಪೋಸ್ಟ್ ಇನ್‌ಸ್ಟಾಗ್ರಾಮ್‌ನಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಕೆಲವರು ಆಕೆಯ ಶಿಸ್ತಿನ ಆರ್ಥಿಕ ಯೋಜನೆಯನ್ನು ಹೊಗಳಿದರೆ, ಇನ್ನು ಕೆಲವರು ಸಾಮಾಜಿಕ ಜೀವನವನ್ನು ಸಂಪೂರ್ಣವಾಗಿ ಬದಿಗಿಟ್ಟು ಬದುಕುವುದು ಪ್ರಾಯೋಗಿಕವಲ್ಲ ಎಂದು ವಾದಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪೌರಕಾರ್ಮಿಕರಲ್ಲ, ಸರ್ಕಾರಿ ಅಧಿಕಾರಿಯೂ ಅಲ್ಲ, ಅರೋಗ್ಯ ಲೆಕ್ಕಿಸದೆ ಇಡೀ ನದಿ ಕ್ಲೀನ್ ಮಾಡಿದ ಯುವಕನಿಗೆ ದೇಶವೇ ಸಲಾಂ!
ದಕ್ಷಿಣ ಭಾರತದಾದ್ಯಾಂತ ಇಡಿ ಬೃಹತ್ ಬೇಟೆ: ಕರ್ನಾಟಕ ಸೇರಿ 4 ರಾಜ್ಯಗಳ 30 ಕಡೆ ಏಕಕಾಲಕ್ಕೆ ದಾಳಿ, ಬೆಂಗಳೂರಲ್ಲೂ ರೇಡ್!