ದೀಪಾವಳಿ ಹಬ್ಬಕ್ಕೆ ಮನೆ ಕ್ಲೀನ್ ಮಾಡುವಾಗ ಎಚ್ಚರ, 4 ಲಕ್ಷ ರೂ ಕಳೆದುಕೊಂಡ ಮಹಿಳೆ!

By Chethan Kumar  |  First Published Oct 28, 2024, 4:37 PM IST

ದೀಪಾವಳಿ ಹಬ್ಬಕ್ಕೆ ಮನೆ ಕ್ಲೀನ್ ಮಾಡುವುದು, ವಸ್ತುಗಳು, ವಾಹನ ಶುಚಿಗೊಳಿಸಿ ಆಯಧ ಪೂಜೆ ಮಾಡುವುದು ಸಾಮಾನ್ಯ. ಹೀಗೆ ದೀಪಾವಳಿ ಹಬ್ಬಕ್ಕೆ ಮನೆ ಶುಚಿಗೊಳಿಸಲು ಮುಂದಾದ ಮಹಿಳೆ ಬರೋಬ್ಬರಿ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿದ್ದಾರೆ.


ಮುಂಬೈ(ಅ.28) ದೀಪಾವಳಿ ಹಬ್ಬದ ತಯಾರಿಗಳು ಆರಂಭಗೊಂಡಿದೆ.  ಈಗಾಗಲೇ ದೂರದ ಊರುಗಳಿಂದ ತವರಿಗೆ ತೆರಳಿ ಕುಟುಂಬದೊಂದಿಗೆ ಹಬ್ಬ ಆಚರಿಸಲು ಪ್ರಯಾಣ ಶುರುವಾಗಿದೆ. ಬೆಳಕಿನ ಹಬ್ಬ ದೀಪಾವಳಿ. ದೀಪಾವಳಿ ಹಬ್ಬಕ್ಕೆ ಇಡೀ ಮನೆ ಸ್ವಚ್ಚಗೊಳಿಸುವುದು ಸಂಪ್ರದಾಯ. ಹೀಗೆ ದೀಪಾವಳಿ ಹಬ್ಬಕ್ಕೆ ಮನೆ ಸ್ವಚ್ಚಗೊಳಿಸಿದ ಮಹಿಳೆ ಬರೋಬ್ಬರಿ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳೆದುಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ. 

ದೀಪಾವಳಿ ಹಬ್ಬದ ಆಫರ್ ನೋಡಿ ಮರುಳಾಗುವ ಮುನ್ನ ಎಚ್ಚರವಹಿಸಿ. ದಹಿಸಾರ್ ನಿವಾಸಿ 55 ವರ್ಷದ ಲೀನಾ ಮೆಹತ್ರೆ ಮಹಿಳೆ ದೀಪಾವಳಿ ಹಬ್ಬಕ್ಕೂ ಮುನ್ನ ಸಂಪೂರ್ಣ ಮನೆ ಶುಚಿಗೊಳಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅಕ್ಟೋಬರ್ 21ರಂದು ಆನ್‌ಲೈನ್ ಮೂಲಕ ಸರ್ಚ್ ಮಾಡಿದ್ದಾರೆ. ಈ ವೇಳೆ ನೋ ಬ್ರೋಕರ್ ಆ್ಯಪ್‌ನಲ್ಲಿ ದೀಪಾವಳಿ ಮನೆ ಕ್ಲೀನಿಂಗ್ ಬಗ್ಗೆ ವಿವರಣೆ ನೀಡಲಾಗಿತ್ತು. ಸಿಕ್ಕಿದ್ದೆ ಚಾನ್ಸ್ ಎಂದು ಮಹಿಳೆ ದೀಪಾವಳಿ ಕ್ಲೀನಿಂಗ್ ಸರ್ವೀಸ್ ಬುಕ್ ಮಾಡಿದ್ದರೆ.

Tap to resize

Latest Videos

ಡಿಜಿಟಲ್ ಅರೆಸ್ಟ್‌ನಿಂದ 3 ತಿಂಗಳಲ್ಲಿ ಭಾರತಕ್ಕೆ 120 ಕೋಟಿ ರೂ ನಷ್ಟ, ಪಾರಾಗಲು 3 ಸೂತ್ರ!

ದೀಪಾವಳಿ ಕಾಂಬೋ ಆಫರ್ ಕಾರಣ ಕಡಿಮೆ ಬೆಲೆಯಲ್ಲಿ ಸಂಪೂರ್ಣ ಮನೆ ಕ್ಲೀನಿಂಗ್ ಆಗಲಿದೆ. ಈ ವಯಸ್ಸಿನಲ್ಲಿ ಇಡೀ ಮನೆ ಶುಚಿಗೊಳಿಸುವುದು ಅಸಾಧ್ಯ. ಹೀಗಾಗಿ ಆ್ಯಪ್ ಮೂಲಕ ಬುಕ್ ಮಾಡುವುದೇ ಉತ್ತಮ ಎಂದುಕೊಂಡು ಬುಕ್ ಮಾಡಿದ್ದಾರೆ. ಬುಕಿಂಗ್ ಬಳಿಕ ಇಬ್ಬರು ವ್ಯಕ್ತಿಗಳು ಲೀನಾ ಮೆಹತ್ರೆ ಮನೆಗೆ ಆಗಮಿಸಿದ್ದಾರೆ. ಮನೆಯನ್ನು ಶುಚಿಗೊಳಿಸಲು ಆರಂಭಿಸಿದ್ದಾರೆ.

ಮನೆಯ ಎಲ್ಲಾ ಕೋಣೆ, ಅಡುಗೆ ಕೋಣೆ, ಇಂಚಿಂಚು ಶುಚಿಗೊಳಿಸಿದ್ದಾರೆ. ನಗು ಮುಖದಿಂದಲೇ ಎಲ್ಲಾ  ಶುಚಿಗೊಳಿಸಿದ ಇಬ್ಬರು ಧನ್ಯವಾದ ಹೇಳಿದ್ದಾರೆ. ತಾಳ್ಮೆಯಿಂದ, ನಗು ಮುಖದಿಂದ ಮನೆ ಶುಚಿಗೊಳಿಸಿದ ಇಬ್ಬರಿಗೆ ಪ್ರೀತಿ ಹಾಗೂ ಸಂತೋಷದಿಂದ ಒಂದಿಷ್ಟು ಹಣ ಟಿಪ್ಸ್ ಆಗಿ ನೀಡಿದ್ದಾರೆ. ದೀಪಾವಳಿ ಹಬ್ಬದ ಕ್ಲೀನಿಂಗ್ ತಲೆನೋವು ಇನ್ನಿಲ್ಲ. ಇನ್ನೇನಿದ್ದರು ದೀಪಾವಳಿ ಹಬ್ಬಕ್ಕೆ ತಯಾರಿ ಮಾತ್ರ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ಅಕ್ಟೋಬರ್ 22ರಂದು ಸಂಜೆ ಯಾವುದೋ ಕಾರಣಕ್ಕೆ ಕೋಣೆಯೊಳಗೆ ಹೋದಾಗ ಅಚ್ಚರಿಯಾಗಿದೆ. ಕಬೋರ್ಡ್ ತೆರೆದುಕೊಂಡಿದೆ. ತಕ್ಷಣ ಕಬೋರ್ಡ್ ತಡಕಾಡಿದರೆ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿದೆ. ಲೀನಾ ಮನೆಗೆ ಮನೆ ಶುಚಿಗೊಳಿಸುವವರು ಬಿಟ್ಟರೆ ಇನ್ಯಾರು ಬಂದಿಲ್ಲ. ಕಳ್ಳತನ ಆಗಿರುವುದು ಮನೆ ಶುಚಿಗೊಳಿಸಿದ ಬಳಿಕ. ಹೀಗಾಗಿ ಇದು ಮನೆ ಶುಚಿ ಮಾಡಲು ಬಂದ ಇಬ್ಬರ ಕೆಲಸ ಅನ್ನೋದು ಲೀನಾಗೆ ಖಚಿತವಾಗಿದೆ.

ತಕ್ಷಣವೇ ಲೀನಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಮನೆ ಬಳಿಯ ಸಿಸಿಟಿವಿ ಪರಿಶೀಲಿಸಿದ್ದರೆ. ಆ್ಯಪ್ ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ. ಈ ವೇಳೆ ಶುಚಿಗೊಳಿಸಲು ಆಗಮಿಸಿದ ಅರ್ಬಾಜ್ ಖಾನ್ ಸೇರಿ ಇತರರು ಕಳ್ಳತನ ಮಾಡಿರುವುದು ಗೊತ್ತಾಗಿದೆ. ತಕ್ಷಣವೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ಪೊಲೀಸರು ನೋ ಬ್ರೋಕರ್ ಆ್ಯಪ್ ಇತಿಹಾಸ ಪರಿಶೀಲನೆ ಆರಂಭಿಸಿದ್ದಾರೆ. ಈ ಆ್ಯಪ್ ಎಷ್ಟು ಸುರಕ್ಷಿತ, ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಈ ರೀತಿ ಬೇರೆ ಕಳ್ಳತನ ಮಾಡಿದ್ದಾರೋ ಅನ್ನೋ ಕುರಿತು ತನಿಖೆ ನಡೆಯುತ್ತಿದೆ. ಸದ್ಯ ಆ್ಯಪ್ ಮ್ಯಾನೇಜರ್, ಮಾಲೀಕರು ಪೊಲೀಸ್ ವಿಚಾರಣೆಗೆ ಹಾಜರಾಗಿದ್ದಾರೆ. ಈ ರೀತಿಯ ಕಳ್ಳತನ ಆ್ಯಪ್ ಮ್ಯಾನೇಜರ್, ಮಾಲೀಕರ ಅರಿವನಲ್ಲಿ ನಡೆದಿದೆಯಾ ಅನ್ನೋದು ತನಿಖೆಯಾಗುತ್ತಿದೆ.

ಲಕಲಕ ರೀಲ್ಸ್ ರಾಣಿಯ ಐಷಾರಾಮಿ ಜೀವನದ ರಹಸ್ಯ ಬಯಲು, ಎಲ್ಲಿಂದ ಬಂತು ಇನ್‌ಕಮ್?
 

click me!