ಗೂಡ್ಸ್ ಸಾಗಿಸುತ್ತಿದ್ದ ವ್ಯಕ್ತಿಗೆ ನೆರವಾದ ಯುವತಿ, ನೆಟ್ಟಿಗರಿಂದ ಮೆಚ್ಚುಗೆ

By Vinutha Perla  |  First Published Jun 6, 2024, 2:12 PM IST

ಮಾನವೀಯತೆ ಮರೀಚಿಕೆಯಾಗಿದೆ. ಕಷ್ಟದಲ್ಲಿರುವರನ್ನು ಕಂಡು ಮರುಗುವ, ಅವರಿಗೆ ನೆರವಾಗುವ ಗುಣ ಯಾರಲ್ಲೂ ಕಾಣುತ್ತಿಲ್ಲ. ಹೀಗಿರುವಾಗ ಗೂಡ್ಸ್ ಸಾಗಿಸುವ ಚಾಲಕನಿಗೆ ಯುವತಿ ನೆರವಾಗಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ವಿಜ್ಞಾನ-ತಂತ್ರಜ್ಞಾನ, ಆವಿಷ್ಕಾರ, ಬಾಹ್ಯಾಕಾಶ, ಫ್ಯಾಷನ್‌ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಮನುಷ್ಯ ಪ್ರಗತಿ ಸಾಧಿಸುತ್ತಲೇ ಇದ್ದಾನೆ. ಆದರೆ ಎಲ್ಲಾ ವಿಷಯದಲ್ಲೂ ಅಭಿವೃದ್ಧಿಯಾಗುತ್ತಿರುವ ಹಾಗೆಯೇ ಮನುಷ್ಯನಲ್ಲಿ ಮಾನವೀಯ ಗುಣಗಳು ಕಡಿಮೆಯಾಗುತ್ತಿವೆ. ಹ್ಯುಮಾನಿಟಿ ಅನ್ನೋದು ಮರೀಚಿಕೆ ಎಂಬಂತಾಗಿದೆ. ಕಷ್ಟದಲ್ಲಿರುವರನ್ನು ಕಂಡು ಮರುಗುವ, ಅವರಿಗೆ ನೆರವಾಗುವ ಗುಣ ಯಾರಲ್ಲೂ ಕಾಣುತ್ತಿಲ್ಲ. ಅಸಹಾಯಕರನ್ನು ಕಂಡು ಎಲ್ಲರೂ ಮುಖ ತಿರುಗಿಸಿಕೊಂಡು ಹೋಗುವವರೇ. ಹೀಗಿರುವಾಗ ಗೂಡ್ಸ್ ಸಾಗಿಸುವ ಚಾಲಕನಿಗೆ ಯುವತಿ ನೆರವಾಗಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಆಕೆಯ ಕೆಲಸಕ್ಕೆ ಶಹಬ್ಬಾಸ್ ಅಂದಿದ್ದಾರೆ.

ಸಾಮಾಜಿಕ ಮಾಧ್ಯಮದ ಪ್ರಪಂಚವು ವೈವಿಧ್ಯಮಯ ವಿಷಯಗಳಿಂದ ತುಂಬಿದೆ. ಕೆಲವು ಜನರು ತಮ್ಮ ಅಸಂಬದ್ಧ ಮತ್ತು ವಿಲಕ್ಷಣ ವಿಷಯಕ್ಕಾಗಿ ಸಾಕಷ್ಟು ಪ್ರಚಾರವನ್ನು ಪಡೆಯುತ್ತಾರೆ. ಮತ್ತೆ ಕೆಲವರು ಒಳ್ಳೆಯ ಕೆಲಸದಿಂದ ಸುದ್ದಿಯಾಗುತ್ತಾರೆ. ಬಿಸಿಲಿನ ಬೇಗೆಯಲ್ಲಿ ಯುವತಿ ಸಹಾಯ ಮಾಡುತ್ತಿರುವುದು ಇತ್ತೀಚೆಗೆ ಗಮನ ಸೆಳೆದಿರುವ ವಿಡಿಯೋ. ವೀಡಿಯೋ ನೋಡಿದ ನಂತರ ನೆಟಿಜನ್‌ಗಳು ಆಕೆಯ ನೆರವಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Tap to resize

Latest Videos

undefined

ಬರಿಗಾಲಲ್ಲಿ ರಸ್ತೆ ದಾಟುತ್ತಿದ್ದ ಮಗುವಿಗೆ ಚಪ್ಪಲಿ, ಬಟ್ಟೆ ಕೊಡಿಸಿದ ಹೃದಯವಂತ ಬೈಕರ್‌!

ಎಕ್ಸ್‌ನಲ್ಲಿ ಪ್ರಸಾರವಾದ ವೈರಲ್ ವೀಡಿಯೊದಲ್ಲಿ, ಯುವತಿಯೊಬ್ಬಳು ಟ್ರಾಲಿ ರಿಕ್ಷಾದ ಹಿಂದೆ ಓಡುತ್ತಿರುವುದನ್ನು ನೋಡಬಹುದು ಮೇಲ್ಸೇತುವೆ ದಾಟುವಾಗ ಚಾಲಕ ದೊಡ್ಡ ತಳ್ಳುಗಾಡಿಯನ್ನು ದೂಟುತ್ತಾ ಹೋಗುತ್ತಿರುವುದು ಕಾಣಿಸುತ್ತದೆ. ಮಹಿಳೆಯು ಗಾಡಿಗೆ ಹತ್ತಿರವಾಗುತ್ತಿದ್ದಂತೆ, ಅವಳು ಅದನ್ನು ತಳ್ಳಲು ಪ್ರಾರಂಭಿಸುತ್ತಾಳೆ, ಭಾರವನ್ನು ಕಡಿಮೆ ಮಾಡಲು ಆತನಿಗೆ ಸಹಾಯ ಮಾಡುತ್ತಾಳೆ. ಆದರೆ, ಸ್ವಲ್ಪ ಸಮಯದ ನಂತರ, ದಣಿದ ಭಾವನೆಯಿಂದಾಗಿ ಆಕೆ ನಿಧಾನಗೊಳಿಸುತ್ತಾಳೆ. ಸಹಾಯಕ್ಕಾಗಿ ತನ್ನ ಸ್ನೇಹಿತನನ್ನು ಕರೆಯುತ್ತಾಳೆ.

ಆ ನಂತರ ಗಾಡಿಯನನ್ಉ ನಿಲ್ಲಿಸಿ ಚಾಲಕನಿಗೆ ಊಟ, ನೀರಿನ ಬಾಟಲ್ ನೀಡುತ್ತಾಳೆ. ನಂತರ ನಿಮಗೆ ಬಿಸಿಲಿಗೆ ಹೆಚ್ಚು ದಣಿವಾಗುತ್ತಿರಬಹುದು ಎಂದು ತಲೆಗೆ ಹೊದ್ದುಕೊಳ್ಳಲು ಶಾಲನ್ನು ನೀಡುತ್ತಾಳೆ. ವೀಡಿಯೊ ಪೋಸ್ಟ್ ಮಾಡಿದ ನಂತರ, ಅದು ತಕ್ಷಣವೇ ವೈರಲ್ ಆಗಿದೆ. ಇಲ್ಲಿಯವರೆಗೆ ವೀಡಿಯೋ ಎಕ್ಸ್‌ನಲ್ಲಿ 440,500 ವೀವ್ಸ್‌ ಸಂಗ್ರಹಿಸಿದೆ.

ಮನೆಗೆಲಸದವನಿಗೆ ಕೋಟ್ಯಾಂತರ ಮೌಲ್ಯದ ಆಸ್ತಿ ಬರೆದ ಮಾಲೀಕ, ಛೇ ಇಂಥ ಲಕ್ ನಮಗಿಲ್ವಲ್ಲಾ?

ಕ್ಲಿಪ್‌ನ ಮೂಲ ಗುರುತಿಸಲು ಸಾಧ್ಯವಾಗದಿದ್ದರೂ, ಜನರು ಈ ವೀಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ಇದು ಕೇವಲ ವೀವ್ಸ್‌ಗಾಗಿ ಮಾಡುವ ಗಿಮಿಕ್‌' ಎಂದಿದ್ದಾರೆ. ಮತ್ತೊಬ್ಬರು, ಬಡ ವ್ಯಕ್ತಿಗೆ ಸಹಾಯ ಮಾಡಿದ್ದಕ್ಕಾಗಿ ಆಕೆಯನ್ನು ಶ್ಲಾಘಿಸಿದರು. ಬಳಕೆದಾರರಲ್ಲಿ ಇನ್ನೊಬ್ಬರು, 'ಕ್ಯಾಮರಾ ಇರುವವರೆಗೂ ನಾನು ಮನುಷ್ಯನಿಗೆ ಸಹಾಯ ಮಾಡುತ್ತೇನೆ. ಇದು ಕೇವಲ ಪ್ರಚಾರಕ್ಕಾಗಿ ಮಾಡಿರುವುದು' ಎಂದು ವ್ಯಂಗ್ಯವಾಡಿದ್ದಾರೆ.

यह है असली पापा की परी।👏❤️ pic.twitter.com/Yxy7L5kuFL

— ज़िन्दगी गुलज़ार है ! (@Gulzar_sahab)
click me!