ಬಸ್ಸು, ರೈಲು ಮುಂತಾದ ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸುವಾಗಿ ಸೀಟಿಗಾಗಿ ಸಣ್ಣಪುಟ್ಟ ಜಗಳಗಳು ಆಗಾಗ ಆಗುತ್ತಿರುತ್ತವೆ. ಹಾಗೂ ಇವು ಸಾಮಾನ್ಯ ಎನಿಸಿವೆ. ಆದರೆ ಕಂಡಿದ್ದನ್ನೆಲ್ಲಾ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವ ಇಂದಿನ ಕಾಲಘಟ್ಟದಲ್ಲಿ ಇಂತಹ ಜಗಳವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದ್ದು, ವೈರಲ್ ಆಗಿದೆ. ಸಾಮಾನ್ಯರಂತೆ ಮಹಿಳೆಯರಿಬ್ಬರು ಮೆಟ್ರೋ ರೈಲಿನಲ್ಲಿ ಸೀಟಿಗಾಗಿ ಜಗಳ ಮಾಡುತ್ತಿರುವ ವಿಡಿಯೋ ಇದಾಗಿದೆ. ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ವೆಲ್ಲು ಎಂಬ ಹೆಸರಿರುವ ಬಳಕೆದಾರರು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಮಹಿಳೆಯ ಈ ಕಿತ್ತಾಟಕ್ಕೆ ಸಖತ್ ಕಾಮೆಂಟ್ ಮಾಡಿದ್ದಾರೆ.
ದೆಹಲಿ ಮೆಟ್ರೋ, ರಾಜಧಾನಿಯ ಜೀವನಾಡಿಯಾಗಿದ್ದು, ಸಾವಿರಾರು ಜನ ದೆಹಲಿಯ ಮೆಟ್ರೋದಲ್ಲಿ ಸಂಚರಿಸುತ್ತ ತಮ್ಮ ಗಮ್ಯಸ್ಥಾನವನ್ನು ತಲುಪುತ್ತಾರೆ. ಆದರೆ ಇದೇ ಮೆಟ್ರೋ ರೈಲಿನಲ್ಲಿ ನಡೆದ ನಾರಿಯರ ಸಣ್ಣಮಟ್ಟಿನ ಕಿತ್ತಾಟವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಒಂದು ಲಾಂಗ್ ಸೀಟಿನಲ್ಲಿ ಹಲವು ಮಹಿಳಾ ಪ್ರಯಾಣಿಕರು ಕುಳಿತಿದ್ದಾರೆ. ಇಬ್ಬರು ಹುಡುಗಿಯರು ತಾವು ಕುಳಿತಿದ್ದಲ್ಲದೇ ತಮ್ಮ ಇನ್ನಿಬ್ಬರು ಕುಳಿತುಕೊಳ್ಳಬಹುದಾದ ಜಾಗದಲ್ಲಿ ತಮ್ಮ ಬ್ಯಾಗ್‌ಗಳನ್ನು ಇರಿಸಿ ಕುಳಿತಿದ್ದಾರೆ. ಸೀಟಿಲ್ಲದೇ ನಿಂತುಕೊಂಡಿದ್ದ ಮಹಿಳೆಯೊಬ್ಬರು, ಕುಳಿತುಕೊಳ್ಳಬಹುದಾದ ಜಾಗದಲ್ಲಿ ಬ್ಯಾಗ್ ಇಟ್ಟಿದ್ದ ಮಹಿಳೆಗೆ ಬ್ಯಾಗ್ ತೆಗೆದು ಕುಳಿತುಕೊಳ್ಳಲು ಜಾಗ ನೀಡುವಂತೆ ಕೇಳಿದ್ದಾರೆ.
ಆದರೆ ಇದಕ್ಕೆ ಆಕೆ ವಿರೋಧ ವ್ಯಕ್ತಪಡಿಸಿದ್ದು, ಬ್ಯಾಗ್ ತೆಗೆದು ಆ ಮಹಿಳೆಗೆ ಕುಳಿತುಕೊಳ್ಳಲು ಜಾಗ ನೀಡಲು ಮುಂದಾಗಿಲ್ಲ. ಇದರಿಂದ ಸಿಟ್ಟಗೆದ್ದ ಮತ್ತೊರ್ವ ಮಹಿಳೆ ಬ್ಯಾಗಿನ ಸಮೀಪವೇ ಇದ್ದ ಪುಟ್ಟ ಜಾಗದಲ್ಲಿ ತನ್ನನ್ನು ತೂರಿಸಿಕೊಂಡು ಕುಳಿತಿದ್ದಾಳೆ. ಇವರ ಸಮೀಪದಲ್ಲೇ ಇದ್ದ ಇನ್ನೋರ್ವ ಮಹಿಳೆ ಹೊಂದಿಕೊಂಡು ಕುಳಿತುಕೊಳ್ಳುವಂತೆ ಜಗಳ ಮಾಡದಂತೆ ಹೇಳಿದ್ದಾರೆ. ಆದರೆ ಬ್ಯಾಗ್ ಇಟ್ಟಿದ್ದ ಮಹಿಳೆ ಆಕೆಗೂ ಬೈದಿದ್ದಾಳೆ. ಅದೇ ಮೆಟ್ರೋ ರೈಲಿನಲ್ಲಿದ್ದ ಯಾರೋ ಈ ದೃಶ್ಯವನ್ನು ತಮ್ಮ ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದು, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ರೈಲಿನಲ್ಲಿದ್ದವರೆಲ್ಲಾ ಇವರ ಕಿತ್ತಾಟವನ್ನು ನೋಡುತ್ತಾ ಬಿಟ್ಟಿ ಮನೋರಂಜನೆ ತೆಗೆದುಕೊಂಡಿದ್ದಾರೆ. ಅಲ್ಲದೇ ಸಮೀಪದಲ್ಲಿ ಕುಳಿತಿದ್ದ ಓರ್ವ ಯುವತಿ ಕೈಯಲ್ಲಿ ಫಿಜ್ಜಾ ಹಿಡಿದುಕೊಂಡು ಅದಕ್ಕೆ ಸಾಸ್ ಹಾಕಿ ಹಾಯಾಗಿ ತನಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ಫಿಜ್ಜಾ ತಿನ್ನುತ್ತಾ ಕುಳಿತಿರುವುದು ನಗು ತರಿಸುತ್ತಿದೆ.
ಮೆಟ್ರೋದಲ್ಲಿ ಯುವ ತರುಣ ಮಾಡಿದ ಒಂದೊಳ್ಳೆ ಕೆಲಸ ವೈರಲ್
ಕೆಲ ದಿನಗಳ ಹಿಂದೆ ದೆಹಲಿ ಮೆಟ್ರೋದಲ್ಲಿ ಯುವಕ ಯುವತಿ ಇಬ್ಬರು ಪರಸ್ಪರ ಹೊಡೆದಾಡಿಕೊಂಡ ವಿಡಿಯೋವೊಂದು ವೈರಲ್ ಆಗಿತ್ತು. ಹುಡುಗಿಯೊಬ್ಬಳು ತಾನು Zara ದಿಂದ 1000 ರೂಪಾಯಿ ನೀಡಿ ಟೀಶರ್ಟ್ ಖರೀದಿಸಿದಾಗಿ ತಾನು ಧರಿಸಿದ್ದ ಟೀ ಶರ್ಟ್ ಬಗ್ಗೆ ಹೇಳುತ್ತಾಳೆ. ಆದರೆ ಯುವಕ ಆ ಟೀಶರ್ಟ್‌ಗೆ 150 ರೂಪಾಯಿಗಿಂತ ಹೆಚ್ಚು ಇರಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ. ಇದರಿಂದ ಸಿಟ್ಟಿಗೆದ್ದ ಯುವತಿ ಯುವಕನಿಗೆ ಕೋಪದಲ್ಲಿ ಸರಿಯಾಗಿ ಬಾರಿಸುತ್ತಾಳೆ. ಈ ವೇಳೆ ಯುವಕ ಇದು ಸಾರ್ವಜನಿಕ ಸ್ಥಳ ಎಂದು ಹೇಳಿದರೂ ಆಕೆ ಕಿತ್ತಾಟ ನಿಲ್ಲಿಸದೇ ರಪ ರಪನೇ ಆತನ ಕೆನ್ನೆಗೆ ಬಾರಿಸುತ್ತಾಳೆ. ಈ ವೇಳೆ ಯುವಕನಿಗೂ ಸಿಟ್ಟು ಬಂದಿದ್ದು, ಆತನೂ ಆಕೆಯ ಕೆನ್ನೆಗೆ ಬಾರಿಸುತ್ತಾನೆ. ಈ ವಿಡಿಯೋವನ್ನು ಕೂಡ ಯಾರೋ ಮೆಟ್ರೋದಲ್ಲಿದ್ದವರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು. ಇದು ಸಾಕಷ್ಟು ವೈರಲ್ ಆಗಿದ್ದಲ್ಲದೇ ಯುವತಿ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಮತ್ತೆ ಕೆಲವರು ಇವರು ಪ್ರೇಮಿಗಳಿರಬೇಕು ಎಂದು ಕಾಮೆಂಟ್ ಮಾಡಿದ್ದರು.
ಯೂಟ್ಯೂಬರ್‌ಗೆ ಇಷ್ಟೊಂದು ಅಭಿಮಾನಿಗಳಾ..? ಫ್ಯಾನ್ಸ್‌ಗಳಿಂದ ರಸ್ತೆ ಬಂದ್, ಗೌರವ್ ತನೇಜಾ ಅಂದರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ