ಬಿಜೆಪಿ ಮಣಿಸಲು ಪಣ ತೊಟ್ಟ 17 ವಿಪಕ್ಷಗಳು: ಮುಂದಿನ ಸಭೆಗೆ ಬರಲು ಕಾಂಗ್ರೆಸ್‌ಗೆ ಆಪ್‌ ಷರತ್ತು

By Kannadaprabha NewsFirst Published Jun 24, 2023, 9:33 AM IST
Highlights

ಕಾಂಗ್ರೆಸ್‌, ಜೆಡಿಯು, ಆರ್‌ಜೆಡಿ, ಆಪ್‌, ಟಿಎಂಸಿ ಸೇರಿದಂತೆ 17 ವಿಪಕ್ಷಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದವು. ಆದರೆ ವಿವಾ​ದಿತ ‘ದಿಲ್ಲಿ ಸುಗ್ರೀ​ವಾ​ಜ್ಞೆ’ಗೆ ಸಂಬಂಧಿ​ಸಿ​ದಂತೆ ಆಮ್‌ ಆದ್ಮಿ ಪಕ್ಷವು (ಆ​ಪ್‌​) ಕಾಂಗ್ರೆಸ್‌ ಪಕ್ಷ​ದೊಂದಿಗೆ ಜಟಾ​ಪ​ಟಿಗೆ ಇಳಿ​ದಿದ್ದು, ಸದ್ಯದ ಮಟ್ಟಿಗೆ ಒಮ್ಮ​ತದ ಹೋರಾ​ಟದ ನಿರ್ಣ​ಯ​ದಿಂದ ದೂರ ಉಳಿ​ದಿದೆ.

ಪಟನಾ ( ಜೂನ್ 24, 2023): 2024ರ ಲೋಕಸಭೆಯಲ್ಲಿ ಬಿಜೆಪಿಯನ್ನು ಸೋಲಿಸಲು ಒಗ್ಗಟ್ಟಾಗಿ ಕಾರ್ಯತಂತ್ರ ರೂಪಿಸಲು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದಲ್ಲಿ ಶುಕ್ರವಾರ 17 ವಿಪಕ್ಷಗಳ ನಾಯಕರು ಸಭೆ ನಡೆಸಿದ್ದು, ಈ ಪೈಕಿ 16 ಪಕ್ಷ​ಗಳು ಚುನಾ​ವ​ಣೆ​ಯಲ್ಲಿ ಒಗ್ಗ​ಟ್ಟಿನ ಹೋರಾಟ ಮಾಡಲು ನಿರ್ಣ​ಯಿ​ಸಿ​ವೆ. ಇನ್ನಷ್ಟುರಣ​ನೀತಿ ರೂಪಿ​ಸಲು ಜುಲೈನಲ್ಲಿ ಶಿಮ್ಲಾ​ದಲ್ಲಿ 2ನೇ ಸುತ್ತಿನ ಸಭೆ ನಡೆ​ಯ​ಲಿ​ದೆ.

ಕಾಂಗ್ರೆಸ್‌, ಜೆಡಿಯು, ಆರ್‌ಜೆಡಿ, ಆಪ್‌, ಟಿಎಂಸಿ ಸೇರಿದಂತೆ 17 ವಿಪಕ್ಷಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದವು. ಆದರೆ ವಿವಾ​ದಿತ ‘ದಿಲ್ಲಿ ಸುಗ್ರೀ​ವಾ​ಜ್ಞೆ’ಗೆ ಸಂಬಂಧಿ​ಸಿ​ದಂತೆ ಆಮ್‌ ಆದ್ಮಿ ಪಕ್ಷವು (ಆ​ಪ್‌​) ಕಾಂಗ್ರೆಸ್‌ ಪಕ್ಷ​ದೊಂದಿಗೆ ಜಟಾ​ಪ​ಟಿಗೆ ಇಳಿ​ದಿದ್ದು, ಸದ್ಯದ ಮಟ್ಟಿಗೆ ಒಮ್ಮ​ತದ ಹೋರಾ​ಟದ ನಿರ್ಣ​ಯ​ದಿಂದ ದೂರ ಉಳಿ​ದಿದೆ. ಇದರ ಹೊರ​ತಾಗಿ ಮಿಕ್ಕ 16 ಪಕ್ಷ​ಗಳು ಒಗ್ಗ​ಟ್ಟಿನ ಸಮ​ರದ ಘೋಷಣೆ ಮಾಡಿ​ವೆ.

Latest Videos

ಇದನ್ನು ಓದಿ: 2024 ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರಣತಂತ್ರ: ಜೂನ್‌ 12ಕ್ಕೆ ಪಟನಾದಲ್ಲಿ ವಿಪಕ್ಷ ನಾಯಕರ ಬೃಹತ್‌ ‘ಲೋಕ’ಸಭೆ!

ಇದ​ಲ್ಲದೆ, ‘ಇದರೊಂದಿಗೆ ವಿಪಕ್ಷಗಳ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯಗಳನ್ನು ಸರಿ ಮಾಡಿಕೊಳ್ಳಬೇಕು. ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಬೇಕು’ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ. ವಿಪಕ್ಷಗಳ ಒಗ್ಗಟ್ಟಿಗೆ ಸಂಬಂಧಿಸಿದಂತೆ ಇದು ಮೊದಲ ಮೆಟ್ಟಿಲಾಗಿದೆ ಎಂದು ವಿಪಕ್ಷ ನಾಯಕರು ಸಭೆ ಬಳಿಕ ಜಂಟಿ ಸುದ್ದಿ​ಗೋ​ಷ್ಠಿ​ಯಲ್ಲಿ ಹೇಳಿ​ದ್ದಾ​ರೆ.

ಸಭೆ​ಯಲ್ಲಿ ಆಗಿ​ದ್ದೇ​ನು?:
ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (ಜೆ​ಡಿ​ಯು​), ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ (ಆ​ರ್‌​ಜೆ​ಡಿ​), ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ (ಕಾಂಗ್ರೆಸ್‌), ಪಶ್ವಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (ಟಿಎಂಸಿ), ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ (ಆಪ್‌), ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ (ಆಪ್‌), ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ (ಡಿಎಂಕೆ), ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೋರೆನ್‌ (ಜೆಎಂಎಂ), ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ (ಎ​ಸ್‌​ಪಿ​), ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ (ಶಿ​ವ​ಸೇನೆ ಉದ್ಧವ್‌ ಬಣ​), ಶರದ್‌ ಪವಾರ್‌ (ಎ​ನ್‌​ಸಿ​ಪಿ​) ಹಾಗೂ ಪಿಡಿಪಿ, ಸಿಪಿಐ (ಎಂ), ಸಿಪಿಐ, ನ್ಯಾಷನಲ್‌ ಕಾನ್ಫರೆನ್ಸ್‌ನ ನಾಯಕರು ಭಾಗಿಯಾಗಿದ್ದರು.
ಸಭೆಯ ಬಳಿಕ ಮಾತನಾಡಿದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ‘ಈ ಸಭೆ ಬಹಳ ಪರಿಣಾಮಕಾರಿಯಾಗಿದ್ದು, ಉತ್ತಮ ಚರ್ಚೆ ನಡೆದಿದೆ. ಎಲ್ಲರೂ ಸೇರಿ ಒಗ್ಗಟ್ಟಿನಿಂದ 2024ರ ಲೋಕಸಭೆ ಚುನಾವಣೆ ಎದುರಿಸುತ್ತೇವೆ’ ಎಂದು ಹೇಳಿದರು.

ಇದನ್ನೂ ಓದಿ: 2024ರ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಪಣ: ವಿಪಕ್ಷ ಸಭೆ ಮುಂದೂಡಿಕೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಮುಂದಿನ ಲೋಕಸಭೆ ಚುನಾವಣೆಗೆ ನಮ್ಮ ಅಜೆಂಡಾ ರೂಪಿಸು​ತ್ತಿ​ದ್ದೇವೆ. ಬಿಹಾ​ರ​ವನ್ನು ಗೆದ್ದರೆ ಇಡೀ ದೇಶ​ವನ್ನೇ ಗೆಲ್ಲುವ ಹುಮ್ಮಸ್ಸು ಮೂಡ​ಲಿ​ದೆ. ಜುಲೈನಲ್ಲಿ ಮತ್ತೊಂದು ಸಭೆ ನಡೆಯಲಿದ್ದು, ಇದನ್ನು ಶಿಮ್ಲಾದಲ್ಲಿ ಆಯೋಜಿಸಲಾಗುವುದು. ಆಗ ಮತ್ತಷ್ಟು ವಿಸ್ತೃತ ರಣ​ತಂತ್ರ ರೂಪಿ​ಸ​ಲಾ​ಗು​ವುದು. ವಿಪ​ಕ್ಷ​ಗಳು ಒಟ್ಟಾ​ದರೆ ಬಿಜೆ​ಪಿ​ಯನ್ನು ಸೋಲಿ​ಸಲು ಅಸಾ​ಧ್ಯ​ವೇ​ನ​ಲ್ಲ’ ಎಂದ​ರು. ರಾಹುಲ್‌ ಗಾಂಧಿ ಕೂಡ ‘ಒ​ಗ್ಗ​ಟ್ಟಿ​ನಿಂದ ಬಿಜೆಪಿ ಸೋಲಿ​ಸಲು ಸಾಧ್ಯ’ ಎಂದ​ರು.

ಇದೇ ವೇಳೆ, ‘ಬಿಜೆಪಿ ಇತಿಹಾಸವನ್ನು ಅಳಿಸಲು ಹೊರಡಿದೆ. ಆದರೆ ನಾವು ಇತಿಹಾಸವನ್ನು ಉಳಿಸಲಿದ್ದೇವೆ. ಬಿಹಾರದಿಂದ ಈಗ ಹೊಸ ಇತಿಹಾಸ ಸೃಷ್ಟಿಯಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.

ಇದನ್ನೂ ಓದಿ:  ನೂತನ ಸಂಸತ್‌ ಭವನ ಉದ್ಘಾಟನೆ ರಾಜನ ಪಟ್ಟಾಭಿಷೇಕದಂತಿತ್ತು: ವಿಪಕ್ಷಗಳ ಟೀಕೆ

ಮುಂದಿನ ಸಭೆಗೆ ಬರಲು ಕಾಂಗ್ರೆಸ್‌ಗೆ ಆಪ್‌ ಷರತ್ತು
ದೆಹಲಿ ಆಡ​ಳಿ​ತದ ಮೇಲೆ ಹಿಡಿತ ಸಾಧಿಸುವ ಕೇಂದ್ರ ಸರ್ಕಾ​ರದ ವಿವಾ​ದಿತ ಸುಗ್ರೀ​ವಾ​ಜ್ಞೆಗೆ ಕಾಂಗ್ರೆಸ್‌ ಬಹಿರಂಗವಾಗಿ ವಿರೋಧಿಸದಿದ್ದರೆ ವಿಪಕ್ಷಗಳ ಮುಂದಿನ ಸಭೆಗೆ ಹಾಜರಾಗುವುದಿಲ್ಲ ಎಂದು ಆಮ್‌ ಆದ್ಮಿ ಪಕ್ಷ ಶುಕ್ರವಾರ ಎಚ್ಚರಿಕೆ ನೀಡಿದೆ. ಅಲ್ಲದೇ ಪಟನಾದಲ್ಲಿ ನಡೆದ ವಿಪಕ್ಷಗಳ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಿಂದಲೂ ಹೊರಗುಳಿದಿದೆ.

ಪ್ರತಿಪಕ್ಷಗಳ ಒಗ್ಗಟ್ಟು ಅಸಾಧ್ಯ: ಅಮಿತ್‌ ಶಾ
ಪಟನಾದಲ್ಲಿ ಫೋಟೋ ಸೆಷನ್‌ ನಡೆಯುತ್ತಿದೆ. ಎಷ್ಟುಪಕ್ಷಗಳು ಬರುತ್ತವೆ ಎಂಬುದು ಮುಖ್ಯವೇ ಅಲ್ಲ. ಎಂದಿಗೂ ಇವರ ನಡುವೆ ಒಗ್ಗಟ್ಟು ಸಾಧ್ಯವೇ ಇಲ್ಲ. ಒಂದು ವೇಳೆ ಸಾಧ್ಯವಾದರೆ 2024ರಲ್ಲಿ ಜನ ಎದುರು ಬನ್ನಿ, ಮುಂದಿನ ಚುನಾವಣೆಯಲ್ಲೂ ಮೋದಿ 300ಕ್ಕೂ ಹೆಚ್ಚು ಸ್ಥಾನಗಳ ಗೆಲುವಿನೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ.
- ಅಮಿತ್‌ ಶಾ, ಕೇಂದ್ರ ಗೃಹ ಸಚಿವ

ಇದನ್ನೂ ಓದಿ: ಹೊಸ ಸಂಸತ್ ಭವನ ಉದ್ಘಾಟನೆ ವಿವಾದ, ವಿಪಕ್ಷಗಳ ಬಹಿಷ್ಕಾರ ನಡುವೆ ಕೇಂದ್ರಕ್ಕೆ ಸಿಎಂ ಪಟ್ನಾಯಕ್ ಬೆಂಬಲ

click me!