ಅಮೆರಿಕ ಸಂಸದರ ಹೊಗಳಿ ರಾಹುಲ್‌ ಕಾಲೆಳೆದ ಮೋದಿ: ಎಐ ಎಂದರೆ ಅಮೆರಿಕ, ಇಂಡಿಯಾ: ಪ್ರಧಾನಿ ಬಣ್ಣನೆ

Published : Jun 24, 2023, 07:41 AM ISTUpdated : Jun 24, 2023, 11:04 AM IST
ಅಮೆರಿಕ ಸಂಸದರ ಹೊಗಳಿ ರಾಹುಲ್‌ ಕಾಲೆಳೆದ ಮೋದಿ: ಎಐ ಎಂದರೆ ಅಮೆರಿಕ, ಇಂಡಿಯಾ: ಪ್ರಧಾನಿ ಬಣ್ಣನೆ

ಸಾರಾಂಶ

ದೇಶದ ವಿಷಯದ ಬಗ್ಗೆ ಮಾತನಾಡುವಾಗ ಎಲ್ಲರು ಒಂದೇ ಧ್ವನಿಯಲ್ಲಿ ಮಾತನಾಡುವುದು ಅತ್ಯಗತ್ಯ. ನನ್ನ ಭಾಷ​ಣಕ್ಕೆ ಪಕ್ಷ​ಭೇದ ಮರೆತು ಎಲ್ಲ ಸಂಸ​ದರು ಬಂದಿದ್ದು ಖುಷಿ ತಂದಿ​ದೆ’ ಎಂದು ಮೋದಿ ಬಣ್ಣಿಸಿದರು.

ವಾಷಿಂಗ್ಟನ್‌ (ಜೂನ್ 24, 2023): ಗುರುವಾರ ಇಲ್ಲಿ ಆಯೋಜಿಸಲಾಗಿದ್ದ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಆಡಳಿತ ಮತ್ತು ವಿಪಕ್ಷಗಳ ಎಲ್ಲಾ ಸದಸ್ಯರು ಪಕ್ಷ​ಭೇದ ಮರೆ​ತು ಭಾಗಿಯಾಗಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಬಹುವಾಗಿ ಶ್ಲಾಘಿಸಿ, ಪರೋ​ಕ್ಷ​ವಾಗಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರ ಕಾಲೆ​ಳೆ​ದರು.

‘ಭಾರತದೊಂದಿಗೆ ನಿಮ್ಮ ದೇಶದ ಸಂಬಂಧವನ್ನು ಸಂಭ್ರಮಿಸುವ ಸಲುವಾಗಿ ನೀವೆಲ್ಲಾ ಒಂದಾಗಿ ಆಗಮಿಸಿದ್ದು ಶ್ಲಾಘನೀಯ. ದೇಶದೊಳಗೆ ವಿವಿಧ ವಿಷ​ಯ​ಗಳ ಕುರಿತು ಭಿನ್ನಮತ ಉಂಟಾ​ಗ​ಬ​ಹು​ದು ಹಾಗೂ ಆ ಬಗ್ಗೆ ಚರ್ಚೆ ನಡೆ​ಯ​ಬೇ​ಕಾಗ​ಬ​ಹುದು. ಆದರೆ ಅದೆಲ್ಲ ಆಂತ​ರಿ​ಕ​ವಾಗಿ ನಡೆ​ಯ​ಬೇಕು. ದೇಶದ ವಿಷಯದ ಬಗ್ಗೆ ಮಾತನಾಡುವಾಗ ಎಲ್ಲರು ಒಂದೇ ಧ್ವನಿಯಲ್ಲಿ ಮಾತನಾಡುವುದು ಅತ್ಯಗತ್ಯ. ನನ್ನ ಭಾಷ​ಣಕ್ಕೆ ಪಕ್ಷ​ಭೇದ ಮರೆತು ಎಲ್ಲ ಸಂಸ​ದರು ಬಂದಿದ್ದು ಖುಷಿ ತಂದಿ​ದೆ’ ಎಂದು ಬಣ್ಣಿಸಿದರು.

ಇದನ್ನು ಓದಿ: ಅಮೆರಿಕದಲ್ಲಿ ಮೋದಿಗೆ ಇಂದ್ರದೇವನ ಆಶೀರ್ವಾದ: ಮಳೆಯ ಆರ್ಭಟದ ನಡುವೆಯೂ ರಾಷ್ಟ್ರಗೀತೆಗೆ ‘ನಮೋ’ ಗೌರವ

ಈ ಮೂಲಕ ಇತ್ತೀಚಿನ ಬ್ರಿಟನ್‌ ಹಾಗೂ ಅಮೆರಿಕ ಭೇಟಿ ವೇಳೆ ಭಾರತ ಸರ್ಕಾರವನ್ನು ಕಟುವಾಗಿ ಟೀಕಿಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವರ್ತನೆಯನ್ನು ಪರೋಕ್ಷವಾಗಿ ಟೀಕಿಸಿದರು.

ಎಐ ಎಂದರೆ ಅಮೆರಿಕ, ಇಂಡಿಯಾ: ಮೋದಿ ಬಣ್ಣನೆ
ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ನ ಹ್ರಸ್ವರೂಪವಾದ ಎ.ಐ. ಯನ್ನು ಅಮೆರಿಕ - ಇಂಡಿಯಾ ಎಂಬುದರ ಹ್ರಸ್ವರೂಪವಾಗಿಯೂ ಮೋದಿ ತಮ್ಮ ಅಮೆರಿಕ ಸಂಸತ್ತಿನ ಭಾಷಣದಲ್ಲಿ ಬನ್ಣಿಸಿದರು. ‘ಹಿಂದಿನ ಹಲವು ವರ್ಷಗಳಲ್ಲಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (ಎ.ಐ), ವಲಯದಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದೆ. ಆದರೆ ಇದೇ ವೇಳೆ ಇನ್ನೊಂದು ಎ.ಐ. ಎನ್ನಿಸಿಕೊಂಡ ‘ಅಮೆರಿಕ - ಇಂಡಿಯಾ’ ಸಂಬಂಧದಲ್ಲೂ ಸಾಕಷ್ಟು ಸುಧಾರಣೆಗಳು ಆಗಿವೆ’ ಎಂದು ಹೇಳಿದರು. ಆಗ ಪ್ರೇಕ್ಷಕರು ಕರತಾಡತನಗೈದರು.

ಇದನ್ನೂ ಓದಿ: ಅಮೆರಿಕಾದ ಶ್ವೇತಭವನದಲ್ಲಿ ಪ್ರಧಾನಿ ಮೋದಿಗೆ ವಿಶೇಷ ಔತಣಕೂಟ, ಮೆನುವಿನಲ್ಲಿ ಏನೇನಿದೆ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ₹610 ಕೋಟಿ ಟಿಕೆಟ್‌ ಹಣ ವಾಪಸ್‌ ನೀಡಿದ ಇಂಡಿಗೋ; ಪ್ರಯಾಣಿಕರಿಗೆ ತಲುಪಿದ ಲಗೇಜ್
ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !