
ಹೈದರಾಬಾದ್ (ಮೇ 15, 2023): ಅಸ್ಸಾಂನಲ್ಲಿ ಈವರೆಗೆ ನಾನು 600 ಮದ್ರಸಾಗಳನ್ನು ಮುಚ್ಚಿದ್ದೇನೆ. ಅಲ್ಲದೆ ಇದೇ ವರ್ಷದಲ್ಲಿ ಇನ್ನೂ 300 ಮದ್ರಸಾಗಳನ್ನು ಸಂಪೂರ್ಣವಾಗಿ ಬಂದ್ ಮಾಡುತ್ತೇನೆ ಎಂದು ಎಂಐಎಂ ನಾಯಕ ಅಸಾದುದ್ದೀನ್ ಓವೈಸಿಗೆ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ನೇರ ಸವಾಲು ಹಾಕಿದ್ದಾರೆ.
ಭಾನುವಾರ ಸಂಜೆ ಹೈದರಾಬಾದ್‌ನ ಕರೀಂನಗರದಲ್ಲಿ ನಡೆದ ‘ಹಿಂದೂ ಏಕತಾ ಯಾತ್ರೆ’ ಗೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಲವ್ ಜಿಹಾದ್ ಮತ್ತು ಮದ್ರಸಾಗಳನ್ನು ನಿಲ್ಲಿಸುವತ್ತ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ‘ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ತೆಲಂಗಾಣ ‘ರಜಾಕರ ರಾಜ್ಯ’ ದಿಂದ ‘ರಾಮರಾಜ್ಯ’ ವಾಗಲಿದೆ ಎಂದೂ ಹೇಳಿದ್ದಾರೆ.
ಇದನ್ನು ಓದಿ: ಬಾಲ್ಯವಿವಾಹಕ್ಕೆ ಬ್ರೇಕ್ ಬೆನ್ನಲ್ಲೇ ಬಹುಪತ್ನಿತ್ವ ಬ್ಯಾನ್ ಮಾಡಲು ಮುಂದಾದ ಅಸ್ಸಾಂ ಸಿಎಂ
ಲವ್ ಜಿಹಾದ್ ಅನ್ನು ಅರ್ಥ ಮಾಡಿಕೊಳ್ಳಲು ‘ದ ಕೇರಳ ಸ್ಟೋರಿ’ ಸಿನಿಮಾ ವೀಕ್ಷಿಸಿ. ಸುಳ್ಳು ಜಾತ್ಯಾತೀತರು ಸಿನಿಮಾ ಸುಳ್ಳು ಎನ್ನುತ್ತಾರೆ. ಅಸ್ಸಾಂನಲ್ಲಿ ಲವ್ ಜಿಹಾದ್ ಪ್ರಕರಣಗಳನ್ನು ನಿಮಗೆ ತೋರಿಸುತ್ತೇನೆ. ಅದರ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಅಸ್ಸಾಂನಲ್ಲಿ ಮದರಸಾ ಶಿಕ್ಷಣ, ಬಹುಪತ್ನಿತ್ವವನ್ನು ಕೊನೆಗಾಣಿಸಲು ಕೆಲಸ ಮಾಡಲಾಗುತ್ತಿದೆ ಎಂದೂ ಉದ್ಘರಿಸಿದರು. ಅಲ್ಲದೆ, ಮದ್ರಸಾ ಶಿಕ್ಷಣದ ಬದಲು ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳನ್ನು ಕಟ್ಟಲು ಬಯಸುತ್ತೇವೆ ಎಂದೂ ಅಸ್ಸಾಂ ಸಿಎಂ ಕರೀಂನಗರದಲ್ಲಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ಅಸ್ಸಾಂನಲ್ಲಿ ಮಹಿಳೆಯರು ನಾಲ್ಕು ಪುರುಷರನ್ನು ಮದುವೆಯಾಗುತ್ತಾರೆ. ಸಾಧ್ಯವಿದ್ದರೆ ಅದನ್ನು ನಿಲ್ಲಿಸಿ ಎಂದು ಅಸಾದುದ್ದೀನ್ ಓವೈಸಿ ಅಲ್ಲಿನ ಸಿಎಂ ಹಾಗೂ ಬಿಜೆಪಿ ನಾಯಕ ಹಿಮಂತ ಬಿಸ್ವಾ ಶರ್ಮಾಗೆ ಸವಾಲು ಹಾಕಿದ್ದರು.
ಇದಕ್ಕೂ ಮುನ್ನ ಬೆಳಗಾವಿಯಲ್ಲಿ ಮಾತನಾಡಿದ್ದ ಅಸ್ಸಾಂ ಸಿಎಂ, ಬಾಂಗ್ಲಾದೇಶದ ಜನರು ಅಸ್ಸಾಂಗೆ ಬಂದು ನಮ್ಮ ನಾಗರಿಕತೆ ಮತ್ತು ಸಂಸ್ಕೃತಿಗೆ ಬೆದರಿಕೆಯನ್ನು ಸೃಷ್ಟಿಸುತ್ತಾರೆ. ಈ ಹಿನ್ನೆಲೆ ನಾನು 600 ಮದರಸಾಗಳನ್ನು ಮುಚ್ಚಿದ್ದೇನೆ ಮತ್ತು ನಮಗೆ ಮದರಸಾಗಳು ಬೇಡವಾದ ಕಾರಣ ಎಲ್ಲಾ ಮದರಸಾಗಳನ್ನು ಮುಚ್ಚಲು ನಾನು ಉದ್ದೇಶಿಸಿದ್ದೇನೆ. ನಮಗೆ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಬೇಕು ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ಮದ್ರಸಾಗೆ ಹೋಗ್ದೆ ಹಠ ಹಿಡಿದು ಶಾಲೆ, ಕಾಲೇಜಲ್ಲಿ ಓದಿ ಈ ಗ್ರಾಮದ ಮೊದಲ ಡಾಕ್ಟರ್ ಎನಿಸಿಕೊಂಡ ಶೇಖ್ ಯೂನುಸ್
ಅಲ್ಲದೆ, ಜನವರಿಯಲ್ಲಿ, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ರಾಜ್ಯದಲ್ಲಿ ಮದರಸಾಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ವ್ಯವಸ್ಥೆಯ ನೋಂದಣಿಯನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಬಯಸಿದೆ ಎಂದೂ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Dog Scare: ಕೇರಳದಲ್ಲಿ ಬೀದಿ ನಾಯಿ ಹಾವಳಿ; ಮಗಳನ್ನು ಮದ್ರಸಾಗೆ ಕರೆದೊಯ್ಯಲು ಏರ್ ಗನ್ ಹಿಡಿದ ವ್ಯಕ್ತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ