ಬೋರಾಗ್ತಿದೆ ಎಂದಿದ್ದ ಸತ್ಯೇಂದ್ರ ಸೆಲ್‌ಗೆ ಕೈದಿಯ ಕಳುಹಿಸಿದ ಜೈಲಾಧಿಕಾರಿಗೆ ನೊಟೀಸ್

Published : May 15, 2023, 02:23 PM IST
ಬೋರಾಗ್ತಿದೆ  ಎಂದಿದ್ದ ಸತ್ಯೇಂದ್ರ ಸೆಲ್‌ಗೆ ಕೈದಿಯ ಕಳುಹಿಸಿದ ಜೈಲಾಧಿಕಾರಿಗೆ ನೊಟೀಸ್

ಸಾರಾಂಶ

ಬೋರಾಗ್ತಿದೆ ಎಂದ ಸತ್ಯೇಂದ್ರ ಜೈನ್‌ ವಾಸವಿದ್ದ ಜೈಲು ಸೆಲ್‌ಗೆ ಇನ್ನಿಬ್ಬರು ಕೈದಿಗಳನ್ನು ಕಳುಹಿಸಿದ ಜೈಲಾಧಿಕಾರಿಗೆ ಮೇಲಾಧಿಕಾರಿಗಳು ಶೋಕಾಸ್‌ ನೋಟೀಸ್‌ ನೀಡಿದ ಘಟನೆ ನಡೆದಿದೆ.

ನವದೆಹಲಿ: ಬೋರಾಗ್ತಿದೆ ಎಂದ ಸತ್ಯೇಂದ್ರ ಜೈನ್‌ ವಾಸವಿದ್ದ ಜೈಲು ಸೆಲ್‌ಗೆ ಇನ್ನಿಬ್ಬರು ಕೈದಿಗಳನ್ನು ಕಳುಹಿಸಿದ ಜೈಲಾಧಿಕಾರಿಗೆ ಮೇಲಾಧಿಕಾರಿಗಳು ಶೋಕಾಸ್‌ ನೋಟೀಸ್‌ ನೀಡಿದ ಘಟನೆ ನಡೆದಿದೆ.  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎಎಪಿ ಶಾಸಕ, ಮಾಜಿ ಸಚಿವ ಸತ್ಯೇಂದ್ರ ಜೈನ್‌ ತಿಹಾರ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ಅವರು ಜೈಲಿನಲ್ಲಿ ನನಗೆ ಬೋರಾಗುತ್ತಿದೆ. ಒಂಟಿತನ ಹಾಗೂ ಖಿನ್ನತೆ ಕಾಡುತ್ತಿದೆ ಹೀಗಾಗಿ ಬೇರೆ ಕೈದಿಗಳನ್ನು ಕೂಡ ನನ್ನ ಜೊತೆ ನಾನಿರುವ ಸೆಲ್‌ನಲ್ಲಿ ಇರಿಸುವಂತೆ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. 

ಇದಾದ ಬಳಿಕ ಸತ್ಯೇಂದ್ರ ಜೈನ್‌ ಇರುವ ಜೈಲಿನ ಕೊಠಡಿಯ ಸೂಪರಿಟೆಂಡೆಂಟ್ ಈ ಬಗ್ಗೆ ಮೇಲಾಧಿಕಾರಿಗಳಿಗೂ ತಿಳಿಸದೇ  ಯಾವುದೇ ಚರ್ಚೆ ನಡೆಸದೇ ಸತ್ಯೇಂದ್ರ ಜೈನ್‌ ಇದ್ದ ಕೊಠಡಿಗೆ ಇತರ ಕೊಠಡಿಯಲ್ಲಿದ್ದ ಇಬ್ಬರು ಕೈದಿಗಳನ್ನು ಕಳುಹಿಸಿದ್ದರು. ಈ ವಿಚಾರ ಈಗ ಮೇಲಾಧಿಕಾರಿಗಳಿಗೆ ಗೊತ್ತಾಗಿದ್ದು, ಜೈಲು ಸೂಪರಿಟೆಂಡೆಂಟ್‌ಗೆ ಶೋಕಾಸ್ ನೋಟೀಸ್ ನೀಡಿದ್ದಾರೆ.  ನಂತರ ಸೂಪರಿಟೆಂಡೆಂಟ್ ಅವರು ತಾನು ಸತ್ಯೇಂದ್ರ ಜೈನ್ ಅವರ ಕೊಠಡಿಗೆ ಕಳುಹಿಸಿದ್ದ ಇಬ್ಬರು ಕೈದಿಗಳನ್ನು (inmates) ಅವರು ಮೊದಲಿದ್ದ ಕೊಠಡಿಗೆ ಕಳುಹಿಸಿದ್ದಾರೆ. 

ಮಸಾಜ್‌ ಅಷ್ಟೇ ಅಲ್ಲ..! ಜೈಲಲ್ಲಿ ಆಪ್‌ ಸಚಿವ ಸತ್ಯೇಂದ್ರ ಜೈನ್‌ಗೆ ಸಲಾಡ್‌, ಹಣ್ಣು, ಭರ್ಜರಿ ಔತಣಕೂಟ..!

ಕೆಲವು ಮಾರ್ಗಸೂಚಿಗಳನ್ನು ಅನುಸರಿಸದೆ ಕೈದಿಗಳನ್ನು ದೆಹಲಿಯ ಮಾಜಿ ಸಚಿವರ ಸೆಲ್‌ಗೆ ವರ್ಗಾಯಿಸಿದ್ದಕ್ಕಾಗಿ ಮತ್ತು ಜೈಲು ಆಡಳಿತಕ್ಕೆ ತಿಳಿಸದೇ ಇದಿದ್ದಕ್ಕಾಗಿ ವಿವರಣೆಯನ್ನು ಕೋರಿ ಡೈರೆಕ್ಟರ್ ಜನರಲ್ ಸಂಜಯ್ ಬೇನಿವಾಲ್ (Sanjay Beniwal) ಅವರು ತಿಹಾರ್ ಜೈಲಿನ ಜೈಲು ಸಂಖ್ಯೆ 7 ರ ಅಧೀಕ್ಷಕರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ. ಎಂದು ಅಧಿಕಾರಿಯೊಬ್ಬರು  ಹೇಳಿದರು.  

ಇದಕ್ಕೂ ಮೊದಲು ಕಳೆದ ವರ್ಷ ಜೈಲಿನಲ್ಲಿ ಸತ್ಯೇಂದ್ರ ಜೈನ್‌ಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದಾದ ಬಳಿಕ ರೇಪ್‌ ಆರೋಪಿಯೋರ್ವ ಸತ್ಯೇಂದ್ರ ಜೈನ್‌ಗೆ ಮಸಾಜ್ ಮಾಡ್ತಿರುವ ವೀಡಿಯೋ ವೈರಲ್ ಆಗಿತ್ತು. ಆಗ ದೆಹಲಿಯ ಆರೋಗ್ಯ ಸಚಿವರಾಗಿದ್ದ ಸತ್ಯೇಂದ್ರ ಜೈನ್ (Satyendra Jain) ಅವರು ತಿಹಾರ್‌ ಜೈಲಿನಲ್ಲಿ(Tihar Jail) ವಿವಿಐಪಿ ಸೌಲಭ್ಯಗಳನ್ನು (VVIP Treatment) ಪಡೆಯುತ್ತಿದ್ದಾರೆ. ಮಸಾಜ್‌ (Massage) ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ (BJP) ಕೆಲ ದಿನಗಳ ಹಿಂದೆ ಆರೋಪಿಸಿತ್ತು. ಅಲ್ಲದೆ, ಎಎಪಿ ನಾಯಕನಿಗೆ (AAP Leader) ವಿಶೇಷ ಸೌಲಭ್ಯಗಳನ್ನು ನೀಡಲು ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಜೈಲು ಸೂಪರಿಂಟೆಂಡೆಂಟ್ (Jail Superintendent) ಅಜಿತ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿತ್ತು. ಅದಾದ ಬಳಿಕ ಮಸಾಜ್ ವಿಡಿಯೋ ವೈರಲ್ ಆಗಿ ಬಿಜೆಪಿ ಆರೋಪಗಳಿಗೆ ಪುಷ್ಠಿ ನೀಡಿತ್ತು. ಸಚಿವ ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲು (Tihar Jail) ಸಂಖ್ಯೆ 7 ರೊಳಗೆ ಮಸಾಜ್ ಮಾಡಿಸಿಕೊಳ್ಳುತ್ತಿರುವ ಸಿಸಿ ಕ್ಯಾಮೆರಾ ವಿಡಿಯೋ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ (Video Viral) ಆಗಿದ್ದವು.

ಕೇಜ್ರಿವಾಲ್ ಸರ್ಕಾರದ 2 ವಿಕೆಟ್ ಪತನ, ಜೈಲು ಪಾಲಾಗಿರುವ ಸಿಸೋಡಿಯಾ, ಸತ್ಯೇಂದ್ರ ಜೈನ್ ರಾಜೀನಾಮೆ!

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಮೇ 31 ರಂದು ಜಾರಿ ನಿರ್ದೇಶನಾಲಯ ಜೈನ್ ಅವರನ್ನು ಬಂಧಿಸಿತ್ತು. ಕಳೆದ ವರ್ಷ ಜೂನ್‌ನಲ್ಲಿ  ಸತ್ಯೇಂದ್ರ ಜೈನ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ 1.8 ಕೆಜಿ ಚಿನ್ನ ಹಾಗೂ 2.82 ರೂಪಾಯಿ ನಗದು ಜಪ್ತಿ ಮಾಡಿದ್ದರು. ಸತ್ಯೇಂದ್ರ ಜೈನ್ ಮೇಲೆ ಬರೋಬ್ಬರಿ 16 ಕೋಟಿ ರೂಪಾಯಿ ಹವಾಲಾ ಹಣ ವರ್ಗಾವಣೆ ಆರೋಪವಿದೆ. ಈ ಅಕ್ರಮ ಹಣ ವರ್ಗಾವಣೆಗೆ ಸಚಿವ ಸತ್ಯೇಂದ್ರ ಜೈನ್ ಪತ್ನಿ, ಮಕ್ಕಳು ಹಾಗೂ ಕೆಲ ಆಪ್ತರ ನೆರವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಸತ್ಯೇಂದ್ರ ಜನ್ ಕುಟುಂಬಸ್ಥರ ಮೇಲೂ ಪ್ರಕರಣ ದಾಖಲಾಗಿತ್ತು. ಹವಾಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸೇರಿದಂತೆ ಇತರ ಪ್ರದೇಶಗಳಲ್ಲಿರುವ ಜೈನ್‌ ಅವರ ನಿವಾಸಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಲಾಗಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ