
ಮಲೇಷಿಯಾ: ಆನೆಗಳ ಸಾಕಷ್ಟು ಮುದ್ದಾದ ವಿಡಿಯೋಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಕೆಲ ದಿನಗಳ ಹಿಂದೆ ಆನೆಯೊಂದು ಪಾನಿಪುರಿ ಸವಿಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದೇ ರೀತಿ ಈಗ ಮರಿಯಾನೆಯೊಂದು ತನ್ನನ್ನು ಕೆಸರಿನಿಂದ ರಕ್ಷಿಸಿದ ಮಹಿಳೆಗೆ ಧನ್ಯವಾದ ತಿಳಿಸಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್ ನಂದಾ (sushanth Nanda) ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಆನೆ ಮರಿಯೊಂದು ರಸ್ತೆಯ ಪಕ್ಕದಲ್ಲಿರುವ ಕಬ್ಬಿನ ಗದ್ದೆಯ ಹೊಲದಲ್ಲಿ ಕೆಸರಿನ ಮಧ್ಯೆ ಸಿಲುಕಿಕೊಂಡಿದೆ. ಇದನ್ನು ನೋಡಿದ ಮಹಿಳಯೊಬ್ಬರು ಅದರ ರಕ್ಷಣೆಗೆ ಧಾವಿಸಿದ್ದು, ಆ ಆನೆಗೆ ಕೆಸರು ನೀರಿನಿಂದ ಮೇಲೆ ಬರಲು ಸಹಾಯ ಮಾಡುತ್ತಾಳೆ. ಆನೆಯೂ ಆಕೆ ಸಹಾಯವನ್ನು ಬಯಸಿದ್ದು, ಆಕೆಯ ಸಹಾಯದಿಂದಾಗಿ ಕೆಸರಿನಿಂದ ಮೇಲೆ ಬರುವಲ್ಲಿ ಯಶಸ್ವಿಯಾಗುತ್ತದೆ.
ಕೆಸರಿನಿಂದ(Mud) ಮೇಲೆ ಬಂದ ಆನೆ (elephant) ಆಕೆಯತ್ತ ಕೃತಜ್ಞತೆಯ ನೋಟ ಬೀರಿ ಸೊಂಡಿಲೆತ್ತಿ ನಮಸ್ಕರಿಸಿದೆ. 'ಅವಳು ಕೆಸರು ಮಣ್ಣಿನಲ್ಲಿ ಸಿಲುಕಿಕೊಂಡು ಸಂಕಟ ಪಡುತ್ತಿದ್ದ ಆನೆ ಮರಿಗೆ ಮೇಲೆ ಬರಲು ಸಹಕರಿಸಿದಳು. ಅದಕ್ಕೆ ಪ್ರತಿಯಾಗಿ ಆನೆ ಆಕೆಗೆ ಆಶೀರ್ವದಿಸಿದೆ ಎಂದು ಅವರು ಈ ವಿಡಿಯೋ ಜೊತೆ ಬರೆದುಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಆನೆಗೆ ಸಹಾಯ ಮಾಡಿದ ಮಹಿಳೆಗೆ ಧನ್ಯವಾದ ತಿಳಿಸಿದ್ದಾರೆ. ಈ ಭೂಮಿ ಎಲ್ಲರಿಗೂ ಸೇರಿದ್ದು, ಪ್ರತಿಯೊಬ್ಬರು ಪರಸ್ಪರ ಸಹಾಯ ಮಾಡಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆನೆಯನ್ನು ರಕ್ಷಿಸಿದ ಆ ಸುಂದರ ಮಹಿಳೆಗೆ ನಮ್ಮ ಕೃತಜ್ಞತೆ ಎಂದು ಮತ್ತೊಬ್ಬರು ಧನ್ಯವಾದ ತಿಳಿಸಿದ್ದಾರೆ. ಆದು ಧನ್ಯವಾದ ತಿಳಿಸುವ ಮೂಲಕ ಆಕೆಗೆ ಆಶೀರ್ವದಿಸಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋವನ್ನು 49 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಆನೆಗಳು ಬಹಳ ಬುದ್ಧಿವಂತ ಪ್ರಾಣಿಗಳು. ಮದವೇರಿದ ಸಂದರ್ಭ ಬಿಟ್ಟರೇ ಅವುಗಳು ತಮ್ಮನ್ನು ಪ್ರಚೋದಿಸದ ಹೊರತು ಅವುಗಳೇ ಮನುಷ್ಯರ ಮೇಲೆ ದಾಳಿಗೆ ಇಳಿಯುವುದು ತೀರಾ ವಿರಳ. ಕೆಲವು ಕಾಡಾನೆ ಹಾಗೂ ಮಾನವ ಸಂಘರ್ಷದ ನಡುವೆಯೂ ಕಾಡಾನೆಗಳ ತಾಳ್ಮೆ ಹಾಗೂ ಬುದ್ಧಿವಂತಿಕೆಯ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದೇ ರೀತಿ ಇಲ್ಲೊಂದು ಕಾಡಾನೆ ಕಾಡಿನಲ್ಲಿ ಕಳೆದು ಹೋದ ತನ್ನ ಮರಿಯನ್ನು ಹುಡುಕಿಕೊಟ್ಟು ಜತೆ ಸೇರಿಸಿದ ಅರಣ್ಯ ಸಿಬ್ಬಂದಿಗೆ ಧನ್ಯವಾದ ತಿಳಿಸಿದೆ.
Kanakapura; ತಾಯಿ ಆನೆ ನಿಧನ, ದನದ ಹಿಂಡಿನ ಜೊತೆ ಬಂದ ಅನಾಥವಾದ ಮರಿ ಆನೆ ರಕ್ಷಣೆ
ಈ ವಿಡಿಯೋವನ್ನು ಕೂಡ ಕೆಲ ದಿನಗಳ ಹಿಂದೆ ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್ ನಂದಾ (Susanth Nanda) ತಮ್ಮ ಟ್ವಿಟ್ಟರ್ (Twitter Account) ಖಾತೆಯಲ್ಲಿ ಹಂಚಿಕೊಂಡಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ತಾಯಿಯಿಂದ ಬೇರ್ಪಟ್ಟ ಆನೆ ಮರಿಯನ್ನು ತಾಯಿಯೊಂದಿಗೆ ಸೇರಿಸಿದರು. ಈ ವೇಳೆ ತಾಯಿ ಆನೆ ಮರಿಯೊಂದಿಗೆ ಹೊರಟು ಹೋಗುವ ಮೊದಲು ಅರಣ್ಯ ಸಿಬ್ಬಂದಿಗೆ ಧನ್ಯವಾದ ತಿಳಿಸಿತು. ಇದೊಂದು ತುಂಬಾ ಮುದ್ದಾದ ಕ್ಷಣ ತಮಿಳುನಾಡು ಅರಣ್ಯ ಇಲಾಖೆಯಿಂದ (Tamilnadu Forest department) ಬಂದಂತಹ ದೃಶ್ಯ ಎಂದು ಬರೆದು ಅವರು ಈ ವಿಡಿಯೋವನ್ನು ಶೇರ್ ಮಾಡಿದ್ದರು.
ಸಕ್ರೇಬೈಲಿನಲ್ಲಿ ಮಾವುತನನ್ನು ಅಟ್ಟಾಡಿಸಿದ ಪುಂಡಾನೆ: ಕೂದಲೆಳೆ ಅಂತರದಲ್ಲಿ ಮಾವುತ ಪಾರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ