One Nation One Uniform: ದೇಶದ ಪೊಲೀಸರಿಗೆ ಒಂದೇ ರೀತಿಯ ಸಮವಸ್ತ್ರ!

Published : Oct 28, 2022, 06:46 PM IST
One Nation One Uniform: ದೇಶದ ಪೊಲೀಸರಿಗೆ ಒಂದೇ ರೀತಿಯ ಸಮವಸ್ತ್ರ!

ಸಾರಾಂಶ

ಸೂರಜ್‌ಕುಂಡದಲ್ಲಿ ನಡೆದ ದೇಶದ ಗೃಹ ಸಚಿವರ ಚಿಂತನ ಶಿಬಿರದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪೊಲೀಸ್‌ ವ್ಯವಸ್ಥೆ ಆಧುನಿಕರಣಗೊಳ್ಳಬೇಕು ಎಂದು ಹೇಳಿದ್ದಾರೆ. ಅದರೊಂದಿಗೆ ಒಂದು ದೇಶ, ಒಂದು ಸಮವಸ್ತ್ರ ವಿಚಾರದಲ್ಲಿ ಗೃಹ ಇಲಾಖೆ ಗಮನ ನೀಡಬೇಕು. ಇದು ನನ್ನ ಸಲಹೆಯಷ್ಟೇ, ಹೇರಿಕೆಯಲ್ಲ ಎಂದೂ ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.  

ನವದೆಹಲಿ (ಅ. 28): ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಪೊಲೀಸರಿಗೆ 'ಒಂದು ರಾಷ್ಟ್ರ, ಒಂದು ಸಮವಸ್ತ್ರ' ನೀತಿಯನ್ನು ಸೂಚಿಸಿದ್ದಾರೆ. ಹರಿಯಾಣದ ಸೂರಜ್‌ಕುಂಡ್‌ನಲ್ಲಿ ಗುರುವಾರದಿಂದ ನಡೆದ ಗೃಹ ಸಚಿವರ ಚಿಂತನ್ ಶಿವರ್‌ನ ಸಮಾರೋಪ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ವರ್ಚುವಲ್‌ ಆಗಿ ಮಾತನಾಡಿದರು. ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಗೃಹ ಮಂತ್ರಿಗಳಿಗೆ ಈ ಕುರಿಯಾಗಿ ಸಲಹೆ ನೀಡಿದ ಅವರು,  'ಒಂದು ರಾಷ್ಟ್ರ, ಒಂದು ಸಮವಸ್ತ್ರ' ಎಂಬುದು ಪೊಲೀಸರಿಗೆ ನನ್ನದೊಂದು ಕಲ್ಪನೆಯಷ್ಟೇ. ನಾನು ಅದನ್ನು ನಿಮ್ಮ ಮೇಲೆ ಹೇರಲು ಪ್ರಯತ್ನಿಸುತ್ತಿಲ್ಲ. ಇದನ್ನು ಸಾಧ್ಯವಾದರೆ ಪರಿಗಣಿಸಿ. ಇದು 5 ವರ್ಷ ಅಥವಾ 50-100 ವರ್ಷಗಳನ್ನು ತೆಗೆದುಕೊಳ್ಳಬಹುದು, ಆದರೆ ನಾವು ಅದರ ಬಗ್ಗೆ ಯೋಚಿಸಬೇಕು ಎಂದು ಹೇಳಿದ್ದಾರೆ. ಪೊಲೀಸ್ ಠಾಣೆಗಳ ಮೇಲೆ 20 ಅಂತಸ್ತಿನ ಕಟ್ಟಡಗಳನ್ನು ನಿರ್ಮಿಸಿ. ಭದ್ರತೆಯನ್ನು ರಚಿಸಿ. ಇದರಿಂದ ಪೊಲೀಸ್ ಠಾಣೆಯನ್ನು ಆಧುನಿಕವಾಗಿ ನಿರ್ಮಿಸಿ ವಸತಿ ವ್ಯವಸ್ಥೆಯನ್ನೂ ಮಾಡಿಕೊಳ್ಳಬಹುದು. ಪ್ರತಿ ನಗರದಲ್ಲಿ 20-25 ಪೊಲೀಸ್ ಠಾಣೆಗಳಿದ್ದು, ಅದನ್ನು ಇನ್ನಷ್ಟು ಆಧುನಿಕಗೊಳಿಸಬಹುದು. ಇದರಿಂದ ಯಾವ ಪೋಲೀಸರೂ 20-25 ಕಿ.ಮೀ ದೂರ ಮನೆ ಮಾಡಿಕೊಳ್ಳುವ ಪ್ರಮೇಯವೇ ಬರುವುದಿಲ್ಲ ಎಂದಿದ್ದಾರೆ.

ಶಿಬಿರದಲ್ಲಿ ಫೇಕ್ ನ್ಯೂಸ್ (Fake News) ಬಗ್ಗೆಯೂ ಪ್ರಧಾನಿ ಮಾತನಾಡಿದರು.  ಇಂದು ಸಾಮಾಜಿಕ ಮಾಧ್ಯಮವು ವಿಶ್ವದ ಅತಿದೊಡ್ಡ ಶಕ್ತಿಯಾಗಿದೆ, ಆದರೆ ಅದರ ಬಳಕೆಯಲ್ಲೂ ಎಚ್ಚರಿಕೆ ಅಗತ್ಯ. ಒಂದು ಸಣ್ಣ ಸುಳ್ಳು ಸುದ್ದಿ ಇಡೀ ದೇಶವನ್ನು ಬಿರುಗಾಳಿಯಲ್ಲಿ ತೆಗೆದುಕೊಳ್ಳುತ್ತದೆ. ಯಾವುದೇ ವಿಷಯವನ್ನು ಫಾರ್ವರ್ಡ್ ಮಾಡುವ ಮುನ್ನ ಹತ್ತು ಬಾರಿ ಯೋಚಿಸಿ ಎಂದು ಜನರಿಗೆ ಅರಿವು ಮೂಡಿಸಬೇಕು. ನಿಮಗೆ ಯಾವುದೇ ಸಂದೇಶ ಬಂದರೂ ಅದನ್ನು ಫಾರ್ವರ್ಡ್ ಮಾಡುವ ಮುನ್ನ ಅದರ ಸತ್ಯಾಸತ್ಯತೆಯನ್ನು ಖಂಡಿತಾ ಪರಿಶೀಲಿಸಬೇಕು ಎಂದು ಹೇಳಿದರು.

ಕಾನೂನು ಸುವ್ಯವಸ್ಥೆ ವ್ಯವಸ್ಥೆ ಚುರುಕಾಗಬೇಕು: ಸಂಪೂರ್ಣ ಕಾನೂನು (Law andd Order) ಮತ್ತು ಸುವ್ಯವಸ್ಥೆ ವ್ಯವಸ್ಥೆಯು ವಿಶ್ವಾಸಾರ್ಹವಾಗಿರುವುದು ಬಹಳ ಮುಖ್ಯ ಎಂದು ಪ್ರಧಾನಿ ಹೇಳಿದರು. ಸ್ಮಾರ್ಟ್ ತಂತ್ರಜ್ಞಾನವು ಕಾನೂನು ಮತ್ತು ಸುವ್ಯವಸ್ಥೆಯನ್ನು ಸ್ಮಾರ್ಟ್ ಮಾಡಲು ಸಾಧ್ಯವಾಗಿಸುತ್ತದೆ. ಇದು ಸೈಬರ್ ಕ್ರೈಮ್ (Cyber Crime) ಆಗಿರಲಿ ಅಥವಾ ಡ್ರೋನ್ ತಂತ್ರಜ್ಞಾನದ (Drone Technology) ಬಳಕೆಯಾಗಲಿ ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳ ಕಳ್ಳಸಾಗಣೆಯನ್ನು ತಡೆಯಲು, ಇದಕ್ಕಾಗಿ ನಾವು ಹೊಸ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಲೇ ಇರಬೇಕು ಎಂದಿದ್ದಾರೆ.

ಚೀನಾ ಗಡಿಯಲ್ಲಿರುವ ಭಾರತದ ಕೊನೆಯ ಗ್ರಾಮಕ್ಕೆ ಮೋದಿ ಭೇಟಿ, ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತ!

ಅಂತರರಾಜ್ಯ ಮತ್ತು ಅಂತರಾಷ್ಟ್ರೀಯ ಅಪರಾಧಗಳು ನಡೆಯುತ್ತಿವೆ:  ಕಾನೂನು ಮತ್ತು ಸುವ್ಯವಸ್ಥೆ ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ. ಅಂತರರಾಜ್ಯ ಮತ್ತು ಅಂತರಾಷ್ಟ್ರೀಯ ಅಪರಾಧಗಳು ನಡೆಯುತ್ತಿವೆ. ತಂತ್ರಜ್ಞಾನದ ಲಾಭದೊಂದಿಗೆ ಅಪರಾಧಿಗಳು ಈಗ ರಾಜ್ಯಗಳಲ್ಲಿ ಅಪರಾಧಗಳನ್ನು ಮಾಡುವ ಶಕ್ತಿಯನ್ನು ಹೊಂದಿದ್ದಾರೆ. ಮಿತಿಗಳನ್ನು ಮೀರಿದ ಅಪರಾಧಿಗಳು ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಎಲ್ಲಾ ರಾಜ್ಯ ಏಜೆನ್ಸಿಗಳ ನಡುವೆ ಸಮನ್ವಯ ಮತ್ತು ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳ ನಡುವಿನ ಸಮನ್ವಯ ಈ ನಿಟ್ಟಿನಲ್ಲಿ ಅತ್ಯಗತ್ಯವಾಗಿದೆ ಎಂದರು.

'ಆದಿ ಅನಂತ ಶಿವ...' ಕೇದಾರನಾಥದ ಶಿವಸ್ಥಳದಲ್ಲಿ ಮೋದಿ!

ಒಳ್ಳೆಯ ವಿಷಯಗಳನ್ನು ರಾಜ್ಯಗಳು ಪರಸ್ಪರ ಕಲಿಯುತ್ತವೆ: ಸೂರಜ್‌ಕುಂಡ್‌ನಲ್ಲಿರುವ ಗೃಹ ವ್ಯವಹಾರಗಳ ಸಚಿವಾಲಯದ ಈ ಚಿಂತನ್ ಶಿವರ್ ಸಹಕಾರಿ ಫೆಡರಲಿಸಂಗೆ ಒಂದು ಶ್ರೇಷ್ಠ ಉದಾಹರಣೆಯಾಗಿದೆ. ಇದು ಸಂವಿಧಾನದ ಆಶಯ ಮತ್ತು ನಾಗರಿಕರಿಗೆ ನಮ್ಮ ಕರ್ತವ್ಯವಾಗಿದೆ. ಪ್ರತಿಯೊಂದು ರಾಜ್ಯವೂ ಪರಸ್ಪರ ಕಲಿಯಲಿ ಮತ್ತು ಒಟ್ಟಾಗಿ ಕೆಲಸ ಮಾಡಲಿ ಎಂದು (Narendra Modi) ಆಶಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ