ಪತ್ನಿಯ ರೀಲ್ಸ್‌ ಕ್ರೇಜ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಗಂಡ: ಪೊಲೀಸ್‌ ಗಂಡನಿಗೆ ಅಮಾನತಿನ ಶಿಕ್ಷೆ

ಮಹಿಳೆಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವುದಕ್ಕೋಸ್ಕರ ರಸ್ತೆಯ ಜೀಬ್ರಾ ಕ್ರಾಸಿಂಗ್ ಮೇಲೆ ಡಾನ್ಸ್ ಮಾಡಿದ್ದಾಳೆ. ಅಲ್ಲದೇ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ. ಅದು ಈಗ ವೈರಲ್ ಆಗಿದೆ. ವೈರಲ್ ಆಗುತ್ತಿದ್ದಂತೆ ಪೊಲೀಸರು ಆಕೆಯ ಬದಲು ಆಕೆಯ ಗಂಡನಿಗೆ ಶಿಕ್ಷೆ ನೀಡಿದ್ದಾರೆ.

Wifes Dance Video on Zebra Crossing Lands Cop in Trouble

ಇತ್ತೀಚೆಗೆ ಕೆಲವರ ಸೋಶಿಯಲ್ ಮೀಡಿಯಾ ಕ್ರೇಜ್‌ ಮತ್ತಿನ್ಯಾರನ್ನೋ ಸಂಕಷ್ಟಕ್ಕೀಡು ಮಾಡುತ್ತಿದೆ.  ರೈಲ್ವೆ ನಿಲ್ದಾಣಗಳು, ಬಸ್‌ ಸ್ಟಾಪ್‌ಗಳು, ಆಸ್ಪತ್ರೆ, ದೇವಸ್ಥಾನಗಳು, ಮೆಟ್ರೋ ಸ್ಟೇಷನ್‌ಗಳು, ಮೆಟ್ರೋ ರಲುಗಳು, ಹೀಗೆ ಎಲ್ಲೆಂದರಲ್ಲಿ ರೀಲ್ಸ್ ಮಾಡುವ ಕ್ರೇಜ್‌ಗೆ ಬಿದ್ದು, ಈ ಸೋಶಿಯಲ್ ಮೀಡಿಯಾ ಸ್ಟಾರ್‌ಗಳು ಇತರರಿಗೆ ತೊಂದರೆ ಕೊಡುತ್ತಿದ್ದಾರೆ. ಜೊತೆಗೆ ತಾವು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಅದೇ ರೀತಿ ಇಲ್ಲೊಂದು ಕಡೆ ಮಹಿಳೆಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವುದಕ್ಕೋಸ್ಕರ ರಸ್ತೆಯ ಜೀಬ್ರಾ ಕ್ರಾಸಿಂಗ್ ಮೇಲೆ ಡಾನ್ಸ್ ಮಾಡಿದ್ದಾಳೆ. ಅಲ್ಲದೇ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ. ಅದು ಈಗ ವೈರಲ್ ಆಗಿದೆ. ವೈರಲ್ ಆಗುತ್ತಿದ್ದಂತೆ ಪೊಲೀಸರು ಆಕೆಯ ಬದಲು ಆಕೆಯ ಗಂಡನಿಗೆ ಶಿಕ್ಷೆ ನೀಡಿದ್ದಾರೆ.

ಅಂದಹಾಗೆ ಈ ಘಟನೆ ನಡೆದಿರುವುದು ಚಂಡೀಗಢದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಅಜಯ್ ಕುಂಡುಗೆ ಎಂಬುವರ ಪತ್ನಿ ಜ್ಯೋತಿ ಎಂಬಾಕೆ ಜೀಬ್ರಾ ಕ್ರಾಸಿಂಗ್‌ನಲ್ಲಿ ಡಾನ್ಸ್ ಮಾಡಿದ್ದು, ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಚಂಢೀಗಢ ಪೊಲೀಸ್ ಇಲಾಖೆಯಲ್ಲಿ ಸೀನಿಯರ್ ಕಾನ್ಸ್‌ಟೇಬಲ್ ಆಗಿ ಕೆಲಸ ಮಾಡುತ್ತಿದ್ದ ಅಜಯ್ ಕುಂಡುಗೆ ಅವರನ್ನು ಅಮಾನತು ಮಾಡಲಾಗಿದೆ. ಅಜಯ್ ಕುಂಡುಗೆ ಪತ್ನಿ  ಚಂಡಿಗಢದ ಸೆಕ್ಟರ್ 20 ಗುರುದ್ವಾರ ಚೌಕ್‌ನ ರಸ್ತೆಯ ಜೀಬ್ರಾ ಕ್ರಾಸಿಂಗ್ ಮೇಲೆ ಡಾನ್ಸ್ ಮಾಡಿದ್ದರು. 

ರೀಲ್ಸ್ ಮಾಡುವುದಕ್ಕಾಗಿ ಎಲ್‌ಪಿಜಿ ಲೀಕ್ ಮಾಡಿದ ಅತ್ತಿಗೆ ಮೈದುನ: ಭಾರಿ ಬೆಂಕಿ 8 ಫ್ಲಾಟ್‌ಗಳಿಗೆ ಹಾನಿ

Latest Videos

ಮಾರ್ಚ್ 20 ರಂದು ಸಾಯಂಕಾಲ 4:30ಕ್ಕೆ ಈ ಘಟನೆ ನಡೆದಿದೆ. ಕಾನ್ಸ್‌ಟೇಬಲ್ ಪತ್ನಿ ಜ್ಯೋತಿ ಡಾನ್ಸ್ ಮಾಡಿದ್ದರಿಂದ ಅಲ್ಲಿ ಟ್ರಾಫಿಕ್ ಜಾಮ್ ಆಗಿ ಗಲಾಟೆ ಶುರುವಾಗಿದೆ. ಸೆಕ್ಟರ್ 32ರಲ್ಲಿರುವ ದೇವಸ್ಥಾನಕ್ಕೆ ಹೋಗಿದ್ದ ಜ್ಯೋತಿ ಮರಳುವ ವೇಳೆ ರಸ್ತೆಯಲ್ಲಿ ಡಾನ್ಸ್ ಮಾಡಿದ್ದು, ಆಕೆಯ ತಂಗಿ ಪೂಜಾ ಅಕ್ಕನ ಡಾನ್ಸ್‌ನ್ನು ವಿಡಿಯೋ ರೆಕಾರ್ಡ್ ಮಾಡಿದ್ದಳು. ಹೀಗೆ ರಸ್ತೆಯಲ್ಲಿ ಡಾನ್ಸ್ ಮಾಡಿದರೆ ಟ್ರಾಫಿಕ್ ಜಾಮ್ ಆಗುತ್ತದೆ ಅಂತ ಗೊತ್ತಿದ್ದರೂ ಜ್ಯೋತಿ  ಹರಿಯಾನ್ವಿ ಹಾಡಿಗೆ ಡಾನ್ಸ್ ಮಾಡಿದ್ದರಿಂದ ವಿಡಿಯೋ ವೈರಲ್ ಆಯ್ತು.

ವಿಡಿಯೋ ವೈರಲ್ ಆದ ಮೇಲೆ ಹೆಡ್ ಕಾನ್ಸ್‌ಟೇಬಲ್ ಜಸ್‌ಬೀರ್, ಚಂಡೀಗಢದ ಸೆಕ್ಟರ್ 34 ಪೋಲಿಸ್ ಸ್ಟೇಷನ್‌ನಲ್ಲಿ ಈ ಬಗ್ಗೆ ದೂರು ನೀಡಿದ್ದರು. ನಂತರ ಸೆಕ್ಟರ್ 20ರ ಗುರುದ್ವಾರ ಚೌಕ್ ಮತ್ತು ಸೆಕ್ಟರ್ 17ರ ಪೋಲಿಸ್ ಸ್ಟೇಷನ್‌ನಲ್ಲಿರೋ ಕ್ಯಾಮೆರಾಗಳಲ್ಲಿನ ಸಿಸಿಟಿವಿ ದೃಶ್ಯಗಳನ್ನು ಎಎಸ್ಐ ಬಲ್ಜಿತ್ ಸಿಂಗ್ ಟೀಮ್ ಪರಿಶೀಲಿಸಿದ್ದು ತನಿಖೆ ಶುರು ಮಾಡಿದರು. ಟ್ರಾಫಿಕ್ ಜಾಮ್ ಮಾಡಿ, ಜನರಿಗೆ ತೊಂದರೆ ಕೊಟ್ಟಿದ್ದಕ್ಕೆ ಜ್ಯೋತಿ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 125, 292, 3(5)  ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ಹಾಕಿದ್ದಾರೆ.

ಚಲಿಸುತ್ತಿರುವ ರೈಲಿನ ಬಾಗಿಲಲ್ಲಿ ನಿಂತು ರೀಲ್ಸ್ ಮರಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಯುವತಿ

ಅಂದಹಾಗೆ ವಿಡಿಯೋ ಮಾಡಿದ ಪತ್ನಿ ಜ್ಯೋತಿ ಅದನ್ನು ಪತಿ ಕಾನ್ಸ್‌ಟೇಬಲ್ ಅಜಯ್ ಕುಂಡು ಅವರ ಇನ್‌ಸ್ಟಾಗ್ರಾಮ್ ಅಕೌಂಟ್‌ನಿಂದ ಅಪ್‌ಲೋಡ್ ಮಾಡಿದ್ದಳು. ಹೀಗಾಗಿ ಪೊಲೀಸ್‌ ಕಾನ್ಸ್‌ಟೇಬಲ್‌ಗೆ ಸಸ್ಪೆನ್ಷನ್ ಶಿಕ್ಷೆ ಸಿಕ್ಕಿದೆ. ಜ್ಯೋತಿ ಮತ್ತು ಪೂಜಾಗೆ ಜಾಮೀನು ಸಿಕ್ಕಿದೆ. ಆದರೆ  ಕಾನ್ಸ್‌ಟೇಬಲ್ ಅಜಯ್ ಕುಂಡುಗೆ ಸಸ್ಪೆನ್ಷನ್ ಶಿಕ್ಷೆ ಕೊಟ್ಟಿದ್ದಕ್ಕೆ ಬೇರೆ ಬೇರೆ ರೀತಿಯ ರಿಯಾಕ್ಷನ್ ಬರುತ್ತಿವೆ. ಹೆಂಡತಿ ಟ್ರಾಫಿಕ್ ಜಾಮ್ ಮಾಡಿದ್ದಕ್ಕೆ ಗಂಡನಿಗೆ ಏಕೆ ಶಿಕ್ಷೆ ಎಂದು ಕೆಲವರು ಕೇಳ್ತಿದ್ದಾರೆ.

 

vuukle one pixel image
click me!