Wife Stabs Husband: ಟಿವಿ ಸೌಂಡ್ ಕಡಿಮೆ ಮಾಡು ಅಂದಿದ್ದಕ್ಕೆ ಗಂಡನನ್ನೇ ಚುಚ್ಚಿ ಕೊಂದ ಹೆಂಡತಿ!

Published : Feb 20, 2026, 11:05 AM IST
Wife Stabs Husband to Death Over TV Volume Dispute in Andhra Pradesh

ಸಾರಾಂಶ

ಆಂಧ್ರಪ್ರದೇಶದ ಅಮರಾವತಿಯಲ್ಲಿ ಟಿವಿ ಸೌಂಡ್ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಗಂಡನಿಗೆ ಚಾಕುವಿನಿಂದ ಇರಿದು ಪತ್ನಿ ಕೊಂದಿದ್ದಾಳೆ. 27 ವರ್ಷದ ಶೇಖ್ ಅಹ್ಮದ್ ಮೃತಪಟ್ಟಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಅಮರಾವತಿ (ಫೆ.20): ಆಂಧ್ರಪ್ರದೇಶದಲ್ಲಿ ಒಂದು ಶಾಕಿಂಗ್ ಘಟನೆ ನಡೆದಿದೆ. ಮನೆಯಲ್ಲಿ ಟಿವಿ ಸೌಂಡ್ ಕಡಿಮೆ ಮಾಡಲು ಹೇಳಿದ್ದಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಪತಿಯನ್ನು ಪತ್ನಿಯೇ ಚಾಕುವಿನಿಂದ ಇರಿದು ಕೊಂದಿದ್ದಾಳೆ.

ಟಿವಿ ವಾಲ್ಯೂಮ್ ಕಡಿಮೆ ಮಾಡು ಅಂದಿದ್ದೇ ತಪ್ಪಾಯ್ತು!

ಮೃತಪಟ್ಟ ವ್ಯಕ್ತಿಯನ್ನು 27 ವರ್ಷದ ಶೇಖ್ ಅಹ್ಮದ್ ಎಂದು ಗುರುತಿಸಲಾಗಿದೆ. ಎಸಿ ಮೆಕ್ಯಾನಿಕ್ ಆಗಿದ್ದ ಅಹ್ಮದ್, ಮಂಗಳಗಿರಿಯ ಟಿಡ್ಕೋ ಹೌಸಿಂಗ್ ಕಾಲೋನಿಯಲ್ಲಿ ಪತ್ನಿ ಜೊತೆ ವಾಸವಾಗಿದ್ದರು. ಟಿವಿ ವಾಲ್ಯೂಮ್ ಕಡಿಮೆ ಮಾಡುವಂತೆ ಅಹ್ಮದ್ ತನ್ನ ಪತ್ನಿಗೆ ಹೇಳಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ.

ಚಿಕಿತ್ಸೆ ಫಲಕಾರಿಯಾಗದೆ ಸಾವು

ಮಾತಿಗೆ ಮಾತು ಬೆಳೆದು, ಜಗಳ ತಾರಕಕ್ಕೇರಿದಾಗ ಪತ್ನಿ ಚಾಕುವಿನಿಂದ ಅಹ್ಮದ್‌ಗೆ ಇರಿದಿದ್ದಾಳೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆ ನಡೆದ ತಕ್ಷಣ ಅಕ್ಕಪಕ್ಕದವರು ಅಹ್ಮದ್‌ನನ್ನು ವಿಜಯವಾಡದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Ricky Syngkon: ಶಿಲ್ಲಾಂಗ್ ಸಂಸದ ರಿಕಿ ಎಜೆ ಸಿಂಗ್ಕಾನ್ ಹೃದಯಾಘಾತದಿಂದ ನಿಧನ, ಗಣ್ಯರ ಸಂತಾಪ
India Latest News Live: Ricky Syngkon - ಶಿಲ್ಲಾಂಗ್ ಸಂಸದ ರಿಕಿ ಎಜೆ ಸಿಂಗ್ಕಾನ್ ಹೃದಯಾಘಾತದಿಂದ ನಿಧನ, ಗಣ್ಯರ ಸಂತಾಪ