Galwan brave ಉನ್ನತ ಸೇನಾ ಹುದ್ದೆ ಏರಲು ಗಲ್ವಾನ್‌ ಹುತಾತ್ಮನ ಪತ್ನಿ ಸಜ್ಜು!

Published : Feb 06, 2022, 04:45 AM IST
Galwan brave ಉನ್ನತ ಸೇನಾ ಹುದ್ದೆ ಏರಲು ಗಲ್ವಾನ್‌ ಹುತಾತ್ಮನ ಪತ್ನಿ ಸಜ್ಜು!

ಸಾರಾಂಶ

ವ್ಯಕ್ತಿತ್ವ, ಗುಪ್ತಚರ ಪರೀಕ್ಷೆಯಲ್ಲಿ ರೇಖಾ ದೇವಿ ಪಾಸ್‌ ವೈದ್ಯಕೀಯ ಪರೀಕ್ಷೆ ಉತ್ತೀರ್ಣವಾದರೆ ತರಬೇತಿಗೆ ಗಲ್ವಾನ್ ಘರ್ಷಣೆಯಲ್ಲಿ ಹುತಾತ್ಮರಾಗಿರುವ ದೀಪಕ್ ಸಿಂಗ್

ನವದೆಹಲಿ(ಫೆ.06): ದೇಶ ಸೇವೆ ವೇಳೆ ಯೋಧರು ಹುತಾತ್ಮರಾದರೆ, ಅವರ ಪತ್ನಿಯರು ತಾವು ಕೂಡಾ ಸೇನೆ ಸೇರಿ ದೇಶ ಸೇವೆಗೆ ಕೈಜೋಡಿಸುವ ಪರಂಪರೆ ಮುಂದುವರೆದಿದ್ದು, ಈ ಹಾದಿಯಲ್ಲಿ ಇದೀಗ ಗಲ್ವಾನ್‌ ವೀರ(Galwan brave) ದೀಪಕ್‌ ಸಿಂಗ್‌(Naik Deepak Singh) ಅವರ ಪತ್ನಿ ರೇಖಾ ದೇವಿ ಕೂಡಾ ಹೆಜ್ಜೆ ಇಟ್ಟಿದ್ದಾರೆ.

2020ರಲ್ಲಿ ಲಡಾಖ್‌ನ ಗಲ್ವಾನ್‌ ಕಣಿವೆಯಲ್ಲಿ ಚೀನಾ ಯೋಧರ ವಿರುದ್ಧ ಹೋರಾಡುವ ವೇಳೆ ಅಪ್ರತಿಮ ಸಾಹಸ ತೋರುತ್ತಲೇ ದೀಪಕ್‌ಸಿಂಗ್‌ ಸಾವನ್ನಪ್ಪಿದ್ದರು. ಅವರ ಸಾಹಸಕ್ಕೆ ಕೇಂದ್ರ ಸರ್ಕಾರ ಇತ್ತೀಚೆಗೆ ವೀರ ಚಕ್ರ ನೀಡಿ ಗೌರವಿಸಿತ್ತು. ಆ ಗೌರವವನ್ನು ಸ್ವತಃ ಹುತಾತ್ಮ ಯೋಧ ದೀಪಕ್‌ರ ಪತ್ನಿ ರೇಖಾ(Rekha Devi) ಸ್ವೀಕರಿಸಿದ್ದರು.

Galwan Clash: ಗಲ್ವಾನ್ ಕಣಿವೆಯಲ್ಲಿ ಚೀನಾದ ರಹಸ್ಯ ಬಯಲು ಮಾಡಿದ ಆಸೀಸ್ ಪತ್ರಿಕೆ

ಇದೀಗ ಪತಿಯ ಹಾದಿಯಲ್ಲೇ ರೇಖಾ ಕೂಡಾ ಸೇನೆಗೆ(Indian Army) ಸೇರ್ಪಡೆಯಾಗಲು ಮುಂದಾಗಿದ್ದಾರೆ. ಈ ಕುರಿತ ಮೊದಲ ಹಂತದ ಕಠಿಣವಾದ ವ್ಯಕ್ತಿತ್ವ ಮತ್ತು ಗುಪ್ತಚರ ಪರೀಕ್ಷೆಯಲ್ಲಿ ರೇಖಾ ಉತ್ತೀರ್ಣರಾಗಿದ್ದಾರೆ. ಮುಂದಿನ ಹಂತದಲ್ಲಿ ಅವರು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಒಳಪಡಬೇಕಿದೆ. ಅದರಲ್ಲಿ ಅವರು ಉತ್ತೀರ್ಣರಾದರೆ ಚೆನ್ನೈನಲ್ಲಿ ಇರುವ ಆಫೀಸ​ರ್‍ಸ್ ಟ್ರೈನಿಂಗ್‌ ಅಕಾಡೆಮಿಗೆ (ಒಟಿಎ) ಸೇರುವ ಅವಕಾಶ ಪಡೆಯಲಿದ್ದಾರೆ.

ಆಫೀಸ​ರ್‍ಸ್ ಟ್ರೈನಿಂಗ್‌ ಅಕಾಡೆಮಿಗೆ ಆಯ್ಕೆಯಾದವರಿಗೆ 9 ತಿಂಗಳ ಕಾಲ ಕಠಿಣವಾದ ತರಬೇತಿ ನೀಡಲಾಗುವುದು. ಬಳಿಕ ಅವರನ್ನು ಸೇನೆಯಲ್ಲಿ ಲೆಫ್ಟಿನೆಂಟ್‌ ಹುದ್ದೆಗೆ ಸೇರಿಸಿಕೊಳ್ಳಲಾಗುವುದು.

Row Over Galwan Soldier : ವಿಂಟರ್ ಒಲಿಂಪಿಕ್ಸ್ ಸಮಾರಂಭಕ್ಕೆ ಭಾರತ ಬಾಯ್ಕಾಟ್!

ಸೇನೆಯಲ್ಲಿ ಮೆಡಿಕಲ್‌ ಅಸಿಸ್ಟೆಂಟ್‌ ಆಗಿದ್ದ ದೀಪಕ್‌ ಸಿಂಗ್‌, ಗಲ್ವಾನ್‌ ಹೋರಾಟದ ವೇಳೆ ಗಾಯಗೊಂಡಿದ್ದ ಹಲವು ಭಾರತೀಯ ಸೈನಿಕರಿಗೆ ತಕ್ಷಣವೇ ಚಿಕಿತ್ಸೆ ನೀಡಿ ಅವರ ಜೀವ ಕಾಪಾಡಿದ್ದರು. ಈ ಹೋರಾಟದ ವೇಳೆ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದ್ದ ಭಾರತೀಯ ಯೋಧರಿಗೆ ಪ್ರಥಮ ಚಿಕಿತ್ಸೆ ನೀಡುವ ವೇಳ ಚೀನಾ ಯೋಧರ ಕಲ್ಲಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು. ದೀಪಕ್‌ ಸಿಂಗ್‌ ಮತ್ತು ಅವರ ಪತ್ನಿ ಇಬ್ಬರೂ ಮಧ್ಯಪ್ರದೇಶದ ರೇವಾ ಜಿಲ್ಲೆಯವರು.

ಚೀನಾ ಸುಳ್ಳು ಲೆಕ್ಕ ಬಯಲು:
ನವದೆಹಲಿ: 2020ರ ಜೂನ್‌ನಲ್ಲಿ ಭಾರತ ಹಾಗೂ ಚೀನಾ ನಡುವೆ ಗಲ್ವಾನ್‌ನಲ್ಲಿ ನಡೆದ 4 ದಶಕಗಳಲ್ಲೇ ಭೀಕರವಾದ ಸಂಘರ್ಷದಲ್ಲಿ ಸಾವಿಗೀಡಾದ ಚೀನಾ ಸೈನಿಕರ ಸಂಖ್ಯೆ ಆ ದೇಶ ಹೇಳಿಕೊಳ್ಳುತ್ತಿರುವಂತೆ ಕೇವಲ 4 ಅಲ್ಲ, 38! ಭಾರತೀಯ ಸೈನಿಕರ ಪ್ರತಿದಾಳಿಗೆ ಹೆದರಿ ಪರಾರಿಯಾಗುವಾಗ ಹಲವು ಚೀನಿ ಯೋಧರು ನೀರು ಪಾಲಾಗಿದ್ದಾರೆ ಎಂದು ಆಸ್ಪ್ರೇಲಿಯಾದ ಪತ್ರಿಕೆಯೊಂದು ಸ್ಫೋಟಕ ವರದಿ ಮಾಡಿದೆ.

ಭಾರತದ ಜತೆಗಿನ ಕಾದಾಟದಲ್ಲಿ ತನಗೆ ಅತೀವ ಹಿನ್ನಡೆಯಾಗಿದ್ದರೂ, ಯೋಧರ ಸಾವಿನ ಅಸಲಿ ಸಂಖ್ಯೆಯನ್ನು ಮುಚ್ಚಿಟ್ಟು ಚೀನಾ ಕಳ್ಳಾಟವಾಡಿದ್ದು, ಪತ್ರಿಕೆಯ ವರದಿಯಿಂದಾಗಿ ಅದರ ನೈಜ ಮುಖ ಮತ್ತೊಮ್ಮೆ ಜಾಗತಿಕ ಸಮುದಾಯದ ಮುಂದೆ ಅನಾವರಣಗೊಂಡಂತಾಗಿದೆ.

ಭದ್ರತಾ ಕಾರಣಕ್ಕೆ ಹೆಸರು ಬಹಿರಂಗಗೊಳ್ಳಲು ಬಯಸದ ಚೀನಾ ಸಂಶೋಧಕರು ಹಾಗೂ ಬ್ಲಾಗರ್‌ಗಳು ನೀಡಿದ ಮಾಹಿತಿಯನ್ನು ಆಧರಿಸಿ ಆಸ್ಪ್ರೇಲಿಯಾದ ‘ಕ್ಲಾಕ್ಸನ್‌’ ಎಂಬ ಪತ್ರಿಕೆ ತನಿಖಾ ವರದಿ ಪ್ರಕಟಿಸಿದೆ. ಅಲ್ಲದೆ ಅಸಲಿ ಸಾವಿನ ಸಂಖ್ಯೆಯನ್ನು ಮುಚ್ಚಿಡಲು ಆ ಕುರಿತಾದ ಚರ್ಚೆಗಳನ್ನೇ ಚೀನಾ ಬಂದ್‌ ಮಾಡಿಸಿದೆ. ಸಂಘರ್ಷಕ್ಕೆ ಏನು ಕಾರಣ ಎಂಬುದನ್ನು ಬಚ್ಚಿಟ್ಟಿದೆ ಎಂದು ‘ಗಲ್ವಾನ್‌ ಡೀಕೋಡೆಡ್‌’ ಎಂಬ ವರದಿಯಲ್ಲಿ ಪತ್ರಿಕೆ ವಿವರಿಸಿದೆ.

ಚೀನಾದ ಗಲ್ವಾನ್‌ ಯೋಧನಿಗೆ ಒಲಿಂಪಿಕ್‌ ಗೌರವ, ಭಾರತ ಕಿಡಿ
2020ರಲ್ಲಿ ಗಲ್ವಾನ್‌ನಲ್ಲಿ ಭಾರತೀಯ ಯೋಧರ ಮೇಲೆ ದಾಳಿ ಮಾಡಿದ್ದ ತನ್ನ ಯೋಧನೊಬ್ಬನಿಗೆ ಚೀನಾ ಸೇನೆ ವಿಶೇಷ ಗೌರವ ಕಲ್ಪಿಸಿದೆ. ಬೀಜಿಂಗ್‌ನಲ್ಲಿ ನಡೆಯುವ ಚಳಿಗಾಲದ ಒಲಿಂಪಿಕ್ಸ್‌ ರಾರ‍ಯಲಿಯಲ್ಲಿ ಒಲಿಂಪಿಕ್ಸ್‌ ಜ್ಯೋತಿಯನ್ನು ಹಿಡಿದು ಓಡುವ ಅವಕಾಶವನ್ನು ಯೋಧ ಕ್ವಿ ಫಬಾವೋಗೆ ಚೀನಾ ನೀಡಿದೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತ ಸರ್ಕಾರ, ಒಲಿಂಪಿಕ್ಸ್‌ ಕ್ರೀಡಾಕೂಟದ ಆರಂಭ ಮತ್ತು ಸಮಾರೋಪ ಸಮಾರಂಭವನ್ನು ಬಹಿಷ್ಕರಿಸುವುದಾಗಿ ಘೋಷಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌
ಜಾಲತಾಣಗಳಲ್ಲಿ ಮಕ್ಕಳ ಬಳಕೆ ನಿರ್ಬಂಧಿಸಿ: ಸುಧಾ ಮೂರ್ತಿ