Latest Videos

Statue of Equality : ಸಮಾನತೆಯ ಪ್ರತಿಮೆ ಅನಾವರಣ ಮಾಡಿದ ಪ್ರಧಾನಿ ಮೋದಿ

By Suvarna NewsFirst Published Feb 5, 2022, 6:21 PM IST
Highlights

12 ದಿನಗಳ ಶ್ರೀ ರಾಮಾನುಜ ಸಹಸ್ರಾಬ್ದಿ ‘ಸಮಾರೋಹಮ್’, 
ಶ್ರೀ ರಾಮಾಂಜುವಾ ಅವರ 1000 ನೇ ಜನ್ಮ ವಾರ್ಷಿಕೋತ್ಸವ
ಇದರ ಭಾಗವಾಗಿ 216 ಅಡಿ ಎತ್ತರದ ಸಮಾನತೆಯ ಪ್ರತಿಮೆ ಅನಾವರಣ

ಹೈದರಾಬಾದ್ (ಫೆ. 5): ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು, ಶನಿವಾರ ಶಂಶಾಬಾದ್ ನಲ್ಲಿ  (Shamshabad) 216 ಅಡಿ ಎತ್ತರದ ಸಮಾನತೆಯ ಪ್ರತಿಮೆಯನ್ನು (Statue of Equality) ವಿಶ್ವಕ್ಕೆ ಸಮರ್ಪಣೆ ಮಾಡಿದ್ದಾರೆ. ಇದು ಶ್ರೀ ರಾಮಾನುಜಾಚಾರ್ಯರ (Sri Ramanujacharya) ಬೋಧನೆಗಳನ್ನು ಸ್ಮರಿಸುವ ಪ್ರತಿಮೆ ಇದಾಗಿದ್ದು, ಇದು ಎಲ್ಲಾ ನಂಬಿಕೆ, ಜಾತಿ ಮತ್ತು ಧರ್ಮದ ಜನರಲ್ಲಿ ಸಮಾನತೆಯನ್ನು ಅದರ ನಿಜವಾದ ಅರ್ಥದಲ್ಲಿ ಉತ್ತೇಜಿಸುಲಿದೆ. ಅದರೊಂದಿಗೆ 45 ಎಕರೆ ವಿಸ್ತೀರ್ಣದ ಆವರಣದಲ್ಲಿ ನಿರ್ಮಾಣವಾಗಗಿರುವ ದೇವಾಲಯಗಳ ಸಂಕೀರ್ಣವನ್ನು ಪ್ರಧಾನಿ ಮೋದಿ ವೀಕ್ಷಣೆ ಮಾಡಿದ್ದು, ಇದಲ್ಲಿ 108 ದಿವ್ಯ ದೇಶಂಗಳನ್ನು ಮರುಸ್ಥಾಪನೆ ಮಾಡಲಾಗಿದೆ. ಶ್ರೀರಾಮಾನುಜಾಚಾರ್ಯರ ಪ್ರತಿಮೆ ಸುತ್ತುವರಿದಿರುವ ದೇಗುಲಗಳು ಬದ್ರಿನಾಥ, ಮುಕ್ತಿನಾಥ, ಅಯೋಧ್ಯೆ, ಬೃಂದಾವನ, ಕುಂಭಕೋಣಂ, ತಿರುಮಲ, ಶ್ರೀರಂಗಂ, ಕಂಚಿ ಮತ್ತು ಇತರ ದೇವಾಲಯ ಮಾದರಿಗಳು ಆಗಿವೆ. 

ಕಳೆದ 12 ದಿನಗಳಿಂದ ನಡೆಯುತ್ತಿರುವ ಶ್ರೀ ರಾಮಾನುಜ ಸಹಸ್ರಾಬ್ದಿ 'ಸಮಾರೋಹಮ್', (Sri Ramanuja Sahasrabdi ‘Samaroham’) ಶ್ರೀ ರಾಮಾನುಜಂ ಅವರ 1000 ನೇ ಜನ್ಮ ವಾರ್ಷಿಕೋತ್ಸವದ ಒಂದು ಭಾಗವಾಗಿ ಸಮಾನತೆಯ ಪ್ರತಿಮೆಯ ಅನಾವರಣವು ನಡೆದಿದೆ. ಫೆ. 2 ರಿಂದ ಈ ಸಮಾರೋಹಮ್ ಆರಂಭವಾಗಿದೆ. ಚಿನ್ನ ಜೀಯರ್ ಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರೆ, ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ಪ್ರಪಂಚದಾದ್ಯಂತದ ಸಾವಿರಾರು ಭಕ್ತರು ಈ ವೇಳೆ ಭಾಗವಹಿಸಿದ್ದರು.

ಸಮಾನತೆಯ ಪ್ರತಿಮೆಯು ಪಂಚಲೋಹದಿಂದ ಮಾಡಲ್ಪಟ್ಟಿದೆ. ಪ್ರತಿಮೆಯುಲ್ಲಿ ಐದು ಲೋಹಗಳ ಸಂಯೋಜನೆ ಇದೆ. ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಮತ್ತು ಸತುವಿನಿಂದ ನಿರ್ಮಾಣವಾಗಿದೆ.  54 ಅಡಿ ಎತ್ತರದ ಬೇಸ್ ಕಟ್ಟಡವು 'ಭದ್ರ ವೇದಿ' ಎಂದು ಹೆಸರಿಸಲ್ಪಟ್ಟಿದೆ. ಇದರಲ್ಲಿ ಶೈಕ್ಷಣಿಕ ಗ್ಯಾಲರಿಯ ಮಹಡಿಗಳಿದ್ದು, ಇದು ವೈದಿಕ ಡಿಜಿಟಲ್ ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರ, ಪ್ರಾಚೀನ ಭಾರತೀಯ ಗ್ರಂಥಗಳು, ರಂಗಮಂದಿರ, ಶ್ರೀ ರಾಮಾನುಜಾಚಾರ್ಯರ ಅನೇಕ ಕೃತಿಗಳನ್ನು ಒಳಗೊಂಡಿದೆ.

Telangana | Prime Minister Narendra Modi will shortly inaugurate the 216-feet tall 'Statue of Equality' commemorating the 11th-century Bhakti Saint Sri Ramanujacharya

Prime Minister Narendra Modi present at 'Yagyashala' in Shamshabad pic.twitter.com/qT3HqklLwe

— ANI (@ANI)


“ಸಮಾನತೆಯ ಪ್ರತಿಮೆಯ ಉದ್ಘಾಟನೆಯ ಕ್ಷಣವನ್ನು ವೀಕ್ಷಿಸಲು ನನಗೆ ತುಂಬಾ ಹೆಮ್ಮೆಯಾಗುತ್ತದೆ. ಪ್ರತಿಯೊಬ್ಬ ಭಾರತೀಯನಿಗೂ ಇದು ನಿಜಕ್ಕೂ ಹೆಮ್ಮೆಯ ಕ್ಷಣ. ಭಾರತವು ಅನೇಕ ಮಹಾನ್ ಸಂತರನ್ನು ಕಂಡಿದೆ. ಅವರಲ್ಲಿ ಒಬ್ಬರು ಶ್ರೀ ರಾಮಾನುಜಾಚಾರ್ಯರು, ಅವರು ನಮಗೆ ಎಲ್ಲಾ ಜಾತಿ, ಪಂಥ ಮತ್ತು ಲಿಂಗಗಳ ನಡುವಿನ ಸಮಾನತೆಯ ಪಾಠವನ್ನು ಕಲಿಸಿದರು. ಸಮಾನತೆಯ ಪ್ರತಿಮೆಯು ನಾವು ಜಗತ್ತಿನಲ್ಲಿಯೇ ಅತ್ಯಂತ ಸಮಾನತೆ ಬಯಸುವ ರಾಷ್ಟ್ರ ಎನ್ನುವ ನಿಟ್ಟಿನಲ್ಲಿ ನಮ್ಮನ್ನು ಮುಂಚೂಣಿಯಲ್ಲಿರಿಸಲಿದೆ. ಯಾಕೆಂದರೆ ನಾವು ಜಾಗತಿಕವಾಗಿ ಅತ್ಯಂತ ವೈವಿಧ್ಯಮಯವಾದ ಜನಸಂಖ್ಯೆಯನ್ನು ಹೊಂದಿದ್ದೇವೆ. ನಮ್ಮ ರಾಷ್ಟ್ರಕ್ಕೆ ಸಮಾನತೆ ಮತ್ತು ಏಕತೆಯ ಸಂಕೇತವನ್ನು ನೀಡಲು ಮುಂದಾಗಿರುವ ತ್ರಿದಂಡಿ ಚಿನ್ನಜೀಯರ ಸ್ವಾಮೀಜಿಯವರಿಗೆ (Tridandi Chinna Jeeyar Swamiji) ಧನ್ಯವಾದ ಹೇಳಲು ನಾನು ಈ ಸಂದರ್ಭವನ್ನು ಬಳಸಿಕೊಳ್ಳುತ್ತೇನೆ, ಇದು ಭಾರತದ ಮೂಲತತ್ವವಾಗಿದೆ' ಎಂದು ಪ್ರಧಾನಿ ಮೋದಿ ಪ್ರತಿಮೆಯನ್ನು ಅನಾವರಣ ಮಾಡಿದ ಬಳಿಕ ಹೇಳಿದರು.

ಸಮಾನತೆಯ ಪ್ರತಿಮೆಯ ಉದ್ಘಾಟನಾ ಸಮಾರಂಭಕ್ಕೆ ಸರ್ವರನ್ನು ಸ್ವಾಗತಿಸಿದ ಚಿಣ್ಣ ಜೀಯರ್ ಸ್ವಾಮೀಜಿ, “ಭಗವದ್ ರಾಮಾನುಜಾಚಾರ್ಯರು 1000 ವರ್ಷಗಳ ಕಾಲ ಸಮಾನತೆಯ ನಿಜವಾದ ಐಕಾನ್ ಆಗಿ ಉಳಿದಿದ್ದಾರೆ ಮತ್ತು ಈ ಯೋಜನೆಯು ಅವರ ಬೋಧನೆಗಳನ್ನು ಕನಿಷ್ಠ 1000 ವರ್ಷಗಳವರೆಗೆ ಅಭ್ಯಾಸ ಮಾಡುವುದನ್ನು ಖಚಿತಪಡಿಸುತ್ತದೆ. ಪ್ರಪಂಚದಾದ್ಯಂತದ ಜನರಿಗೆ ಸಮಾನತೆಯ ಪ್ರತಿಮೆಯನ್ನು ಸಾಂಸ್ಕೃತಿಕವಾಗಿ ಅತ್ಯುನ್ನತ ತಾಣವನ್ನಾಗಿ ಮಾಡುವುದು ಮತ್ತು ಜಗತ್ತನ್ನು ಬದುಕಲು ಹೆಚ್ಚು ಸಮಾನ ಸ್ಥಳವನ್ನಾಗಿ ಮಾಡಲು ಪ್ರತಿಯೊಬ್ಬರನ್ನು ಪ್ರೇರೇಪಿಸುವುದು ನಮ್ಮ ಉದ್ದೇಶವಾಗಿದೆ, ”ಎಂದರು.

Statue Of Equality: ಫೆ.5ರಂದು ಮೋದಿಯಿಂದ ರಾಮಾನುಜಂ ಬೃಹತ್ ಪ್ರತಿಮೆ ಅನಾವರಣ
ಶ್ರೀ ಲಕ್ಷ್ಮೀ ನಾರಾಯಣ ಮಹಾ ಯಜ್ಞ, ಪವಿತ್ರ ಅಗ್ನಿಗಳಿಗೆ ಅರ್ಪಣೆ ಮಾಡುವ ವೈದಿಕ ವಿಧಿ, 'ಸಮಾರೋಹಮ್' ಪ್ರಾರಂಭವನ್ನು ಗುರುತಿಸಿತು. 5000 ವೈದಿಕ ವಿದ್ವಾಂಸರ ಭಾಗವಹಿಸುವಿಕೆಯನ್ನು ಒಳಗೊಂಡ ಮಹಾ ಯಜ್ಞವನ್ನು ಫೆಬ್ರವರಿ 2  ರಂದು 144 'ಹೋಮಶಾಲೆಗಳಲ್ಲಿ' 1035 'ಯಾಗ ಕುಂಡ'ಗಳೊಂದಿಗೆ ನಡೆಸಲಾಯಿತು, ಇದು ಆಧುನಿಕ ಇತಿಹಾಸದಲ್ಲಿ ಈ ರೀತಿಯ ವಿಶ್ವದ ಅತಿದೊಡ್ಡ ಯಜ್ಞವಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜೀ ಅವರು ಫೆಬ್ರವರಿ 13 ರಂದು ರಾಮಾನುಜರ ಪ್ರತಿಮೆಯ ಒಳ ಆವರಣವನ್ನು ಅನಾವರಣಗೊಳಿಸಲಿದ್ದಾರೆ.

PM Modi visits Hyderabad : ಹವಾಮಾನ ಬದಲಾವಣೆಯಿಂದ ರೈತರನ್ನು ರಕ್ಷಿಸುವ ಕೆಲಸವಾಗಬೇಕು!
ರಾಮಾನುಜ ಸಹಸ್ರಾಬ್ದಿ 'ಸಮಾರೋಹಮ್' ನಾಲ್ಕು ವೇದಗಳ ಒಂಬತ್ತು ಶಾಖೆಗಳ ಪಠಣ, ಅಷ್ಟಾಕ್ಷರಿ ಮಹಾ ಮಂತ್ರದ ಜಪ, ಮಂತ್ರ ರಾಜಮ್, ಇತಿಹಾಸಗಳು, ಪುರಾಣಗಳು ಮತ್ತು ಆಗಮಗಳ ಪಠಣದಂತಹ ಅನೇಕ ಆಧ್ಯಾತ್ಮಿಕ ಚಟುವಟಿಕೆಗಳನ್ನು ಒಳಗೊಂಡಿದೆ. ಅಷ್ಟಾಕ್ಷರಿ ಮಹಾ ಮಂತ್ರದ ನಿರಂತರ ಪಠಣವು ಸಮರೋಹದ ಅಂತ್ಯದ ವೇಳೆಗೆ ಒಂದು ಕೋಟಿಯ ಎಣಿಕೆಯನ್ನು ತಲುಪುವ ನಿರೀಕ್ಷೆಯಿದೆ. 2014ರಲ್ಲಿ ಯೋಜನೆಗೆ ಅಡಿಗಲ್ಲು ಹಾಕಲಾಗಿತ್ತು.
 

ರಾಮಾನುಜಾಚಾರ್ಯರ ಪ್ರತಿಮೆಯ ವಿಶೇಷತೆಗಳೇನು?
* ಪ್ರತಿಮೆಯ ಒಟ್ಟು ಎತ್ತರ 216 ಅಡಿ ಆಗಿದೆ, ರಾಮಾನುಜಾಚಾರ್ಯರ ಮೂರ್ತಿ 108 ಅಡಿ ಎತ್ತರವಾಗಿದೆ

* ತ್ರಿದಂಡಮ್ 135 ಅಡಿ ಎತ್ತರವಾಗಿದೆ ಪದ್ಮಪೀಠ 27 ಅಡಿ ಹಾಗೂ ಭದ್ರಾ ವೇದಿಕೆ 54 ಅಡಿ ಎತ್ತರವಾಗಿದೆ

* ಪ್ರತಿಮೆಯಲ್ಲಿ 18 ಶಂಖಗಳು ಮತ್ತು 18 ಚಕ್ರಗಳು ಇವೆ

* 54 ಕಮಲದ ದಳಗಳು ಹಾಗೂ 34 ಆನೆಗಳು ಪ್ರತಿಮೆಯಲ್ಲಿ ಒಳಗೊಂಡಿದೆ

click me!