Row Over Galwan Soldier : ವಿಂಟರ್ ಒಲಿಂಪಿಕ್ಸ್ ಸಮಾರಂಭಕ್ಕೆ ಭಾರತ ಬಾಯ್ಕಾಟ್!

ಗಲ್ವಾನ್ ಸಂಘರ್ಷದಲ್ಲಿದ್ದ ಸೈನಿಕನನ್ನು ಟಾರ್ಚ್ ಬೇರ್ ಆಗಿ ಆಯ್ಕೆ ಮಾಡಿದ ಚೀನಾ
ವಿಂಟರ್ ಒಲಿಂಪಿಕ್ಸ್ ಸಮಾರಂಭವನ್ನು ಬಹಿಷ್ಕರಿಸಲು ಭಾರತ ನಿರ್ಧಾರ
ರಾಜತಾಂತ್ರಿಕರಿಂದ ಬಾಯ್ಕಾಟ್, ದೂರದರ್ಶನದಲ್ಲಿ ನೇರಪ್ರಸಾರವಿಲ್ಲ

Row Over Galwan Soldier Indias top diplomat in China not to attend Beijing Winter Olympics ceremonies san

ನವದೆಹಲಿ (ಫೆ.3): "ಒಲಿಂಪಿಕ್ಸ್ ಕ್ರೀಡಾಕೂಟವನ್ನು (Olympics Event)ಚೀನಾ (China) ರಾಜಕೀಯಗೊಳಿಸುತ್ತಿದೆ' ಎಂದು ಆರೋಪಿಸಿರುವ ಭಾರತ (India), ಬೀಜಿಂಗ್ ನಲ್ಲಿ ನಡೆಯಲಿರುವ ವಿಂಟರ್ ಒಲಿಂಪಿಕ್ಸ್ ನ (Winter Olympics in Beijing) ಉದ್ಘಾಟನಾ (opening ) ಹಾಗೂ ಸಮಾರೋಪ (closing ceremony)ಸಮಾರಂಭಕ್ಕೆ ತನ್ನ ಯಾವುದೇ ರಾಜತಾಂತ್ರಿಕರು (diplomat ) ಪಾಲ್ಗೊಳ್ಳುತ್ತಿಲ್ಲ. ಈ ಸಮಾರಂಭವನ್ನು ಬಹಿಷ್ಕಾರ ಮಾಡುತ್ತಿದ್ದೇವೆ ಎಂದು ಘೋಷಿಸಿದೆ. 2020ರಲ್ಲಿ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ (Galwan Valley) ಭಾರತದ ಸೈನಿಕರ ವಿರುದ್ಧ ಹೋರಾಟ ನಡೆಸಿದ ಸೈನಿಕನನ್ನು ಚೀನಾ ವಿಂಟರ್ ಒಲಿಂಪಿಕ್ಸ್ ನ ಟಾರ್ಚ್ ಬೇರ್ (torchbearer ) ಆಗಿ ಆಯ್ಕೆ ಮಾಡಿರುವುದು ಭಾರತದ ಕೆಂಗಣ್ಣಿಗೆ ಗುರಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ನಡೆದ ಭೀಕರ ಮುಖಾಮುಖಿ ಎಂದು ಇದನ್ನು ಹೇಳಲಾಗಿದ್ದು, ಭಾರತದ 20 ಸೈನಿಕರು ಹುತಾತ್ಮರಾಗಿದ್ದರೆ, ಇನ್ನೊಂದೆಡೆ ಅಧಿಕೃತವಾಗಿ ಕೇವಲ 4 ಸೈನಿಕರು ಮೃತರಾಗಿದ್ದಾರೆ ಎಂದು ಹೇಳಿದೆ. ಇನ್ನೊಂದೆಡೆ ಚೀನಾದ ಕ್ರಮವನ್ನು ಅಮೆರಿಕ ಕಟುವಾಗಿ ಟೀಕಿಸಿದ್ದು, ಇದೊಂದು ನಾಚಿಕೆಗೇಡಿನ ವಿಷಯ ಎಂದು ಹೇಳಿದೆ.

ಗಲ್ವಾನ್ ಕಣಿವೆಯಲ್ಲಿ ಭಾರತದ ಸೈನಿಕರೊಂದಿಗೆ ಹೊಡೆದಾಟ ಮಾಡಿದ್ದ ಪೀಪಲ್ಸ್ ಲಿಬರೇಷನ್ ಆರ್ಮಿಯ (regiment commander of the People’s Liberation Army) ರೆಜಿಮೆಂಟ್ ಕಮಾಂಡರ್ ಕ್ವಿ ಫಬಾವೋ (Qi Fabao) ಅವರನ್ನು ಬುಧವಾರ ಚೀನಾ, ಟಾರ್ಚ್ ಬೇರ್ ಆಗಿ ಆಯ್ಕೆ ಮಾಡಿತ್ತು. ವಿಂಟರ್ ಒಲಿಂಪಿಕ್ ಜ್ಯೋಯಿಯನ್ನು ಫಬಾವೋ ಹಿಡಿದಿರುವ ಚಿತ್ರವನ್ನು ಗ್ಲೋಬಲ್ ಟೈಮ್ಸ್ ಪತ್ರಿಕೆ ಕೂಡ ಟ್ವೀಟ್ ಮಾಡಿತ್ತು. ವಿದೇಶಾಂಗ ಸಚಿವಾಲಯ ಗುರುವಾರ ತನ್ನ ರಾಜತಾಂತ್ರಿಕರ ನಿರ್ಧಾರವನ್ನು ಪ್ರಕಟಿಸುವಾಗ "ವಿಷಾದನೀಯ" ಎಂದು ಕರೆದಿದೆ. "ನಾವು ಈ ವಿಷಯದ ವರದಿಗಳನ್ನು ನೋಡಿದ್ದೇವೆ. ಚೀನಾದ ಕಡೆಯವರು ಒಲಿಂಪಿಕ್ಸ್‌ನಂತಹ ವೇದಿಕೆಯನ್ನು ರಾಜಕೀಯಗೊಳಿಸಲು ಆಯ್ಕೆ ಮಾಡಿಕೊಂಡಿರುವುದು ನಿಜಕ್ಕೂ ವಿಷಾದನೀಯ" ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಇದೇ ಕಾರಣದಿಂದಾಗಿ ಬೀಜಿಂಗ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯ ನಮ್ಮ ಚಾರ್ಜ್ ಡಿ ಅಫೇರ್ಸ್ ಬೀಜಿಂಗ್ 22ರ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ. ಈ ಬಾರಿಯ ಚಳಿಗಾಲದ ಒಲಿಂಪಿಕ್ಸ್ ನಲ್ಲಿ ದೇಶದ ಒಬ್ಬ ಅಥ್ಲೀಟ್ ಮಾತ್ರ ಭಾಗವಹಿಸುತ್ತಿದ್ದಾರೆ. 
 


ದೂರದರ್ಶನದಲ್ಲಿ ನೇರಪ್ರಸಾರವಿಲ್ಲ: ವಿದೇಶಾಂಗ ಇಲಾಖೆಯ ಈ ಪ್ರಕಟಣೆಯ ಬೆನ್ನಲ್ಲಿಯೇ ದೂರದರ್ಶನ, ವಿಂಟರ್ ಒಲಿಂಪಿಕ್ಸ್ ನ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭವನ್ನು ನೇರಪ್ರಸಾರ ಮಾಡುವುದಿಲ್ಲ ಎಂದು ಘೋಷಣೆ ಮಾಡಿದೆ. ವಿದೇಶಾಂಗ ಇಲಾಖೆಯ ಪ್ರಕಟಣೆಯಿಂದಾಗಿ ಬೀಜಿಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳನ್ನು ದೂರದರ್ಶನ ನೇರ ಪ್ರಸಾರ ಮಾಡುವುದಿಲ್ಲ" ಎಂದು ಪ್ರಸಾರ ಭಾರತಿಯ ಮುಖ್ಯಸ್ಥ ಶಶಿ ಶೇಖರ್ ವೆಂಪತಿ ಟ್ವೀಟ್ ಮಾಡಿದ್ದಾರೆ.

Galwan Clash: ಚೀನಾ ಸುಳ್ಳು ಬಟಾಬಯಲು, ಗಲ್ವಾನ್ ಸಂಘರ್ಷದಲ್ಲಿ 38 ಚೀನಾ ಸೈನಿಕರು ಸಾವು!
ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಚೀನಾ ಕನಿಷ್ಠ 42 ಸೈನಿಕರನ್ನು ಕಳೆದುಕೊಂಡಿದೆ ಎಂದು ಆಸ್ಟ್ರೇಲಿಯಾದ ದಿ ಕ್ಲಾಕ್ಸನ್ ಪತ್ರಿಕೆ ತನಿಖಾ ವರದಿಯನ್ನು ಪ್ರಕಟ ಮಾಡಿರುವ ಬೆನ್ನಲ್ಲಿಯೇ ಚೀನಾದಿಂದ ಈ ಕ್ರಮ ಬಂದಿದೆ. ಗಲ್ವಾನ್ ಕಣಿವೆಯ ಹೋರಾಟದಲ್ಲಿ ಕೇವಲ 4 ಸೈನಿಕರನ್ನು ಕಳೆದುಕೊಂಡಿದ್ದೇವೆ ಎಂದು ಚೀನಾ ಅಧಿಕೃತವಾಗಿ ಹೇಳಿಕೊಂಡಿದ್ದಕ್ಕಿಂತ 9 ಪಟ್ಟು ಇದು ಹೆಚ್ಚಾಗಿದೆ.

Ladakh Issue: ಚೀನಾಕ್ಕೆ ತಿರುಗೇಟು, ಗಲ್ವಾನ್‌ನಲ್ಲಿ ಭಾರತದಿಂದಲೂ ಧ್ವಜಾರೋಹಣ!
ಗಲ್ವಾನ್ ಘರ್ಷಣೆಯಲ್ಲಿ ಚೀನಾದ ಹೆಚ್ಚಿನ ಸೈನಿಕರು ವೇಗವಾಗಿ ಹರಿಯುವ ನದಿಯನ್ನು ದಾಟುವ ಪ್ರಯತ್ನದಲ್ಲಿ ಮುಳುಗಿ ಹೋಗಿದ್ದರು. ಕನಿಷ್ಠ 38 ಸೈನಿಕರು ಹೀಗೇ ಸಾವನ್ನಪ್ಪಿದ್ದಾರೆ ಎಂದು ದಿ ಕ್ಲಾಕ್ಸನ್ ಪತ್ರಿಕೆಯು ಅಂದಾಜು ಒಂದು ವರ್ಷಗಳ ಕಾಲ ತನ್ನ ಸಂಶೋಧಕರ ಗುಂಪಿನಿಂದ ನಡೆಸಿದ ತನಿಖಾ ವರದಿಯಲ್ಲಿ ತಿಳಿಸಿದೆ. ಸೈನಿಕರು ಶೂನ್ಯ ತಾಪಮಾನದಲ್ಲಿ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ, ಕಡು ಕತ್ತಲೆಯಲ್ಲಿ ನದಿಯನ್ನು ದಾಟಲು ಪ್ರಯತ್ನಿಸಿದ್ದು ಚೀನಾದ ಹೆಚ್ಚಿನ ನಷ್ಟಕ್ಕೆ ಕಾರಣವಾಯಿತು ಎಂದು ತಿಳಿಸಿದೆ.

Latest Videos
Follow Us:
Download App:
  • android
  • ios