ತಮಿಳುನಾಡಿನಲ್ಲಿ ವ್ಯಾಪಕವಾಗಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಆದರೂ ಸರ್ಕಾರ ಸಾಮಾಜಿಕ ನ್ಯಾಯದ (social justice)ಕುರಿತಾಗಿ ಹೆಚ್ಚಾಗಿ ಮಾತಾಡುತ್ತಿದೆ ಎಂದು ಮತ್ತೊಮ್ಮೆ ಡಿಎಂಕೆ ಸರ್ಕಾರದ ವಿರುದ್ಧ ರಾಜ್ಯಪಾಲ ಆರ್.ಎನ್.ರವಿ ಚಾಟಿ ಬೀಸಿದ್ದಾರೆ.
ಚೆನ್ನೈ: ತಮಿಳುನಾಡಿನಲ್ಲಿ ವ್ಯಾಪಕವಾಗಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಆದರೂ ಸರ್ಕಾರ ಸಾಮಾಜಿಕ ನ್ಯಾಯದ (social justice)ಕುರಿತಾಗಿ ಹೆಚ್ಚಾಗಿ ಮಾತಾಡುತ್ತಿದೆ ಎಂದು ಮತ್ತೊಮ್ಮೆ ಡಿಎಂಕೆ ಸರ್ಕಾರದ ವಿರುದ್ಧ ರಾಜ್ಯಪಾಲ ಆರ್.ಎನ್.ರವಿ ಚಾಟಿ ಬೀಸಿದ್ದಾರೆ. ಆದರೆ ಡಿಎಂಕೆ ಇದಕ್ಕೆ ತಿರುಗೇಟು ನೀಡಿದ್ದು, ದಲಿತ ದೌರ್ಜನ್ಯ (atrocities) ತಮಿಳುನಾಡಲ್ಲಿ ಹೆಚ್ಚಲ್ಲ. ಉತ್ತರ ಭಾರತದಲ್ಲಿ ಹೆಚ್ಚಿದೆ ಎಂದು ತಿರುಗೇಟು ನೀಡಿದೆ. ಅಣ್ಣಾ ವಿವಿಯಲ್ಲಿ ಅಂಬೇಡ್ಕರ್ ಕುರಿತಾಗಿ ಮಾತನಾಡುವ ವೇಳೆ ರವಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯದಲ್ಲಿ ದಲಿತ ಕಾಲೋನಿಗಳಿಗೆ ನೀಡುವ ಕುಡಿಯುವ ನೀರಿನಲ್ಲಿ ಮಲ (faeces) ಬೆರೆಸಲಾಗುತ್ತಿದೆ. ಸುಮಾರು 10 ಸಾವಿರ ಲೀಟರ್‌ನ ನೀರಿನ ಟ್ಯಾಂಕ್‌ನಲ್ಲಿ ಮಲ ಪತ್ತೆಯಾಗಿದೆ. ದಲಿತ ಸಮುದಾಯಗಳು ದೇವಾಲಯವನ್ನು ಪ್ರವೇಶಿಸುವುದನ್ನು ತಡೆಯಲಾಗುತ್ತಿದೆ. ಸಾರ್ವಜನಿಕವಾಗಿ ದಲಿತರನ್ನು ಅವಮಾನಿಸಲಾಗುತ್ತಿದೆ. ಅಂಗನವಾಡಿಗಳಲ್ಲಿ ದಲಿತ ಮಕ್ಕಳನ್ನು ಪ್ರತ್ಯೇಕವಾಗಿ ಕೂರಿಸಲಾಗುತ್ತಿದೆ. ದಲಿತರ ಮೇಲೆ ಇಷ್ಟೆಲ್ಲಾ ದೌರ್ಜನ್ಯಗಳು ನಡೆಯುತ್ತಿದ್ದರೂ ಸರ್ಕಾರ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿಡರು.
ನಮ್ಮ ರಾಜ್ಯಪಾಲ ಬಿಹಾರಿಗಳ ರೀತಿ ಪಾನಿಪೂರಿ ಮಾರೋಕ್ಕೆ ಲಾಯಕ್ಕು ಎಂದ ಡಿಎಂಕೆ ನಾಯಕ!
ಸಿಎಜಿ (CAG) ಬಿಡುಗಡೆ ಮಾಡಿರುವ ವರದಿಯನ್ನು ಉಲ್ಲೇಖಿಸಿದ ರವಿ, ದಲಿತರಿಗೆ ಮನೆ ಕಟ್ಟಿಕೊಡಲು ಬಿಡುಗಡೆಯಾಗಿರುವ ಹಣವನ್ನು ಬಳಕೆ ಮಾಡಲಾಗಿಲ್ಲ. ಅಲ್ಲದೇ ಈ ಹಣವನ್ನು ಸರ್ಕಾರ ಇತರ ಉದ್ದೇಶಗಳಿಗಾಗಿ ವರ್ಗಾವಣೆ ಮಾಡಿದೆ ಎಂದು ಅವರು ಆರೋಪಿಸಿದರು. ಅಲ್ಲದೇ ದಲಿತರ ವಿರುದ್ಧದ ಕ್ರಿಮಿನಲ್ ಪ್ರಕರಣಗಳಲ್ಲಿ (criminal cases against Dalits) ಸರ್ಕಾರ ಹಾಗೂ ಕಾನೂನು ಇಲಾಖೆ ನಡೆದುಕೊಳ್ಳುತ್ತಿರುವ ರೀತಿ ಭೀಕರವಾಗಿದೆ ಎಂದು ಅವರು ಹೇಳಿದರು.
ತಮಿಳುನಾಡು ರಾಜ್ಯಪಾಲ ರವಿ ಮತ್ತೊಂದು ವಿವಾದ: ಗೆಟ್ ಔಟ್ ರವಿ ಬ್ಯಾನರ್ ಹಿಡಿದು ಡಿಎಂಕೆ ಪ್ರೊಟೆಸ್ಟ್..!