ಕರ್ನಾಟಕಕ್ಕೆ ಮಹದಾಯಿ ನದಿ ನೀರು ಬಳಕೆಗೆ ಕೇಂದ್ರ ಜಲ ಆಯೋಗವು ನೀಡಿದ್ದ ಅನುಮತಿಗೆ ಮಧ್ಯಂತರ ತಡೆ ನೀಡುವಂತೆ ಕೋರಿ ಗೋವಾ ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ (Supreme Court) ಸೋಮವಾರ ತಿರಸ್ಕರಿಸಿದೆ. ಇದೊಂದು ಆತುರದ ಅರ್ಜಿ ಎಂದು ಹೇಳಿ ಗೋವಾದ ತಗಾದೆ ಅರ್ಜಿಯನ್ನು ಸೋಮವಾರ ಇತ್ಯರ್ಥಗೊಳಿಸಿದೆ.
ನವದೆಹಲಿ: ಕರ್ನಾಟಕಕ್ಕೆ ಮಹದಾಯಿ ನದಿ ನೀರು ಬಳಕೆಗೆ ಕೇಂದ್ರ ಜಲ ಆಯೋಗವು ನೀಡಿದ್ದ ಅನುಮತಿಗೆ ಮಧ್ಯಂತರ ತಡೆ ನೀಡುವಂತೆ ಕೋರಿ ಗೋವಾ ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ (Supreme Court) ಸೋಮವಾರ ತಿರಸ್ಕರಿಸಿದೆ. ಇದೊಂದು ಆತುರದ ಅರ್ಜಿ ಎಂದು ಹೇಳಿ ಗೋವಾದ ತಗಾದೆ ಅರ್ಜಿಯನ್ನು ಸೋಮವಾರ ಇತ್ಯರ್ಥಗೊಳಿಸಿದೆ. ಇದೇ ವೇಳೆ, ಮಹದಾಯಿ ನದಿ ನೀರು ತಿರುಗಿಸುವ ಮೊದಲು ಶಾಸನಬದ್ಧ ಸಂಸ್ಥೆಗಳಿಂದ ಎಲ್ಲಾ ರೀತಿಯ ಅನುಮತಿ ಪಡೆಯುವುದು ಕಡ್ಡಾಯವೆಂಬ ತನ್ನ ಈ ಹಿಂದಿನ ಆದೇಶ ಇನ್ನೂ ಊರ್ಜಿತದಲ್ಲಿರಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್‌ನ (Supreme Court) ಈ ಆದೇಶವನ್ನು ಗೋವಾ ಮುಖ್ಯಮಂತ್ರಿ (Goa Chief Minister) ಪ್ರಮೋದ್ ಸಾವಂತ್ (Pramod Sawant) ಸ್ವಾಗತಿಸಿದ್ದಾರೆ. ನ್ಯಾಯಾಲಯದ ಆದೇಶವು ನದಿ ನೀರು ತಿರುಗಿಸುವ ಮೊದಲು ಎಲ್ಲಾ ಅನುಮತಿ ಪಡೆಯುವುದು ಕಡ್ಡಾಯ ಎಂಬ ನಿಲುವನ್ನು ಪುನರುಚ್ಚರಿಸಿದೆ ಎಂದು ಹೇಳಿದ್ದಾರೆ.
ಮಹದಾಯಿ ಯೋಜನೆ ಹಂತ ಹಂತವಾಗಿ ಅನುಷ್ಠಾನ: ಸಿಎಂ ಬೊಮ್ಮಾಯಿ
ಖನ್ನಾ ನೇತೃತ್ವದ ಪೀಠ:
ಮಹದಾಯಿ ಯೋಜನಾ ಪ್ರದೇಶದಲ್ಲಿ ಅನುಮತಿ ಪಡೆಯದೆ ಕರ್ನಾಟಕ ಸರ್ಕಾರವು (Karnataka government) ಕಾಮಗಾರಿ ಶುರು ಮಾಡಿದೆ ಎಂಬ ತಗಾದೆ ತೆಗೆದು ಗೋವಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂ ಕೋರ್ಟ್ ನ್ಯಾ. ಸಂಜೀವ್ ಖನ್ನಾ (Sanjeev Khanna) ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ಗೋವಾ ತಕರಾರು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಗೋವಾ ಆರೋಪಕ್ಕೆ ತಕ್ಕ ಉತ್ತರ ನೀಡಿದ ಕರ್ನಾಟಕದ ವಕೀಲರು, ಈವರೆಗೆ ಯಾವುದೇ ಕಾಮಗಾರಿಗಳನ್ನು ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ನಿಮ್ಮ ಅರ್ಜಿ (ಗೋವಾ ಅರ್ಜಿ) ಆತುರದ್ದಾಗಿದೆ ಎಂದು ಹೇಳಿ ವಿಲೇವಾರಿ ಮಾಡಿತು. ಜತೆಗೆ ಈ ಹಿಂದಿನ ಆದೇಶದಂತೆ ಕಾಮಗಾರಿಗಳು ಕೈಗೊಳ್ಳುವಾಗ ಸಂಬಂಧಪಟ್ಟ ಶಾಸನಬದ್ಧ ಸಂಸ್ಥೆಗಳಿಂದ ಅನುಮತಿ ಪಡೆಯಬೇಕು ಎಂದು ಕರ್ನಾಟಕಕ್ಕೆ ಸೂಚಿಸಿತಲ್ಲದೆ, ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಜುಲೈಗೆ ಮುಂದೂಡಿತು.
ಮಹದಾಯಿ ವಿವಾದ ಬಗೆಹರಿಸಿದ್ದೇವೆ: ಅಮಿತ್ ಶಾ