ಟೂರ್‌ ಗೈಡ್‌ಗಳು ಸೇನೆಗೆ ಮಾಹಿತಿ ನೀಡದ್ದೇ ನರಮೇಧಕ್ಕೆ ಕಾರಣವಾಯ್ತಾ?

Published : Apr 26, 2025, 10:37 PM ISTUpdated : Apr 26, 2025, 10:45 PM IST
ಟೂರ್‌ ಗೈಡ್‌ಗಳು ಸೇನೆಗೆ ಮಾಹಿತಿ ನೀಡದ್ದೇ ನರಮೇಧಕ್ಕೆ ಕಾರಣವಾಯ್ತಾ?

ಸಾರಾಂಶ

ಪಹಲ್ಗಾಂ ಉಗ್ರದಾಳಿ ವೇಳೆ ಭದ್ರತಾ ಲೋಪದ ಬಗ್ಗೆ ಕೇಂದ್ರ ಸ್ಪಷ್ಟನೆ ನೀಡಿದೆ. ಅಮರನಾಥ ಯಾತ್ರೆಯ ಹಿನ್ನೆಲೆಯಲ್ಲಿ ಬೈಸರನ್‌ನಲ್ಲಿ ಭದ್ರತೆ ಹೆಚ್ಚಿಸಲಾಗಿದ್ದರೂ, ಪ್ರವಾಸ ನಿರ್ವಾಹಕರು ಮಾಹಿತಿ ನೀಡದೆ ಪಹಲ್ಗಾಂ ತೆರೆದಿದ್ದರಿಂದ ಭದ್ರತಾ ಸಿಬ್ಬಂದಿ ನಿಯೋಜನೆ ಆಗಿರಲಿಲ್ಲ. ಸ್ಥಳೀಯರು ಯಾತ್ರೆಯ ಸಮಯದಲ್ಲಿ ಮಾತ್ರ ಭದ್ರತೆ ಇರುತ್ತದೆ ಎಂದಿದ್ದಾರೆ.

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ 370 ವಿಧಿ ರದ್ದತಿಯ ಬಳಿಕ ಉಗ್ರರ ಸದ್ದಡಗಿದ್ದರೂ, ಭದ್ರತಾ ದೃಷ್ಟಿಯಿಂದ ಸೇನಾ ನಿಯೋಜನೆ ಅತ್ಯಗತ್ಯ. ಹೀಗಿರುವಾಗ, ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಏಕೆ ಉಪಸ್ಥಿತರಿರಲಿಲ್ಲ ಎಂಬ ಬಗ್ಗೆ ಕೇಂದ್ರ ಸರ್ಕಾರ ಉತ್ತರಿಸಿದೆ. ಗುರುವಾರ ನಡೆದ ಸರ್ವಪಕ್ಷ ಸಭೆ ವೇಳೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ವಿಪಕ್ಷಗಳ ಹಲವು ನಾಯಕರು, ಭಾರೀ ಭದ್ರತಾ ಲೋಪ ಮತ್ತು ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುವ ಬೈಸರನ್‌ನಲ್ಲಿ ಯೋಧರ ಅನುಪಸ್ಥಿತಿ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು.

ಇದಕ್ಕೆ ಉತ್ತರ ನೀಡಿದ ಗುಪ್ತಚರ ಸಂಸ್ಥೆಯ ಮುಖ್ಯಸ್ಥರು, ‘ಬೈಸರನ್‌ ಪ್ರವಾಸಿ ತಾಣವು, ಅಮರನಾಥ ಯಾತ್ರೆ ಸಾಗುವ ಮಾರ್ಗದಲ್ಲಿ ಬರುತ್ತದೆ. ಪ್ರತಿ ವರ್ಷ ಜೂನ್‌ನಲ್ಲಿ ಆರಂಭವಾಗುವ ಅಮರನಾಥ ಯಾತ್ರೆಯ ಹಿನ್ನೆಲೆಯಲ್ಲಿ ಯೋಧರನ್ನು ನಿಯೋಜಿಸಿ ಆ ಮಾರ್ಗವನ್ನು ತೆರೆಯಲಾಗುತ್ತದೆ. ಈ ವೇಳೆ ಇಡೀ ಮಾರ್ಗದುದ್ದಕ್ಕೂ ಹಲವು ಸ್ತರದ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ.

ಪ್ರವಾಸಿ ಮಹಿಳೆ ಕೊಟ್ಟ ಸುಳಿವು, ಹೇಸರಗತ್ತೆ ಮಾಲೀಕ, ಶಂಕಿತ ಉಗ್ರನ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ?

ಆದರೆ ಪಹಲ್ಗಾಂನ ಪ್ರವಾಸ ನಿರ್ವಾಹಕರು ಈ ಬಾರಿ ಪ್ರವಾಸ ಕೈಗೊಳ್ಳೂವ ಕುರಿತು ಸ್ಥಳೀಯ ಆಡಳಿತ ಮತ್ತು ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡದೆ ಏ.20ರಂದು ಪ್ರವಾಸಿಗರ ಭೇಟಿಗೆ ಆ ಪ್ರದೇಶವನ್ನು ತೆರೆದಿದ್ದರು. ಆದ್ದರಿಂದ ಪಹಲ್ಗಾಂನಲ್ಲಿ ದೊಡ್ಡ ಪ್ರಮಾಣದಲ್ಲಿ ಸೈನಿಕರಿದ್ದರೂ ಅವರನ್ನು ಅಲ್ಲಿ ನಿಯೋಜಿಸಿರಲಿಲ್ಲ’ ಎಂದು ತಿಳಿಸಿದ್ದಾರೆ.

ಭಾರತ-ಪಾಕ್​ ಬತ್ತಳಿಕೆಯಲ್ಲಿರೋ ಅಸ್ತ್ರಗಳೇನು? ಅವುಗಳ ತಾಕತ್ತೇನು?

ಹೊಟೇಲ್ ಮಾಲೀಕರು ಹೇಳೋದೇನು?
ಅಮರನಾಥ ಯಾತ್ರೆಯ ಸಮಯದಲ್ಲಿ ಪ್ರವಾಸಿ ತಾಣವಾದ ಪಹಲ್ಗಾಮ್‌ನಲ್ಲಿ ಸೈನ್ಯದ ನಿಯೋಜನೆಯು ತುಂಬಾ ಹೆಚ್ಚಾಗಿರುತ್ತದೆ ಆದರೆ ಪ್ರವಾಸಿ ಸ್ಥಳದಲ್ಲಿರುವ ಸ್ಥಳೀಯರ ಪ್ರಕಾರ ಅಲ್ಲಿ ಯಾವುದೇ ಸೈನ್ಯದ ಉಪಸ್ಥಿತಿ ಇರುವುದಿಲ್ಲ. ಯಾತ್ರೆಯ ಸಮಯದಲ್ಲಿ ಪ್ರವಾಸಿಗರಿಗೆ ಕೆಲವು ನಿರ್ದಿಷ್ಟ ಸಮಯದಲ್ಲಿ ಮಾತ್ರ ಪ್ರವಾಸಿ ರೆಸಾರ್ಟ್‌ಗೆ ಪ್ರವೇಶ ನೀಡಲಾಗುತ್ತದೆ ಮತ್ತು ಬೈಸರನ್ ಹುಲ್ಲುಗಾವಲು ಎಲ್ಲರಿಗೂ ಮುಚ್ಚಲ್ಪಡುತ್ತದೆ ಎಂದು ಹೋಟೆಲ್ ಮಾಲೀಕರು ಹೇಳುತ್ತಾರೆ.

ಮಿನಿ ಸ್ವಿಟ್ಜರ್ಲೆಂಡ್ ಪಹಲ್ಗಾಮ್‌ನ ಬೈಸರನ್ ಅನ್ನೇ ಉಗ್ರರು ಟಾರ್ಗೆಟ್‌ ಮಾಡಿದ್ಯಾಕೆ?

ಸಿಸಿಟಿವಿ ರಕ್ಷಣೆ ಇಲ್ಲ
ಭಯೋತ್ಪಾದಕ ದಾಳಿ ನಡೆದ ಸ್ಥಳದಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಹುಲ್ಲುಗಾವಲಿನ ತಳದಲ್ಲಿರುವ ಹೋಟೆಲ್ ಹಿಲ್ ಪಾರ್ಕ್ ಬಳಿಯ ಶಿಬಿರದಲ್ಲಿರುವ ಸಿಆರ್‌ಪಿಎಫ್ ಮಾತ್ರ ಹತ್ತಿರದ ಭದ್ರತಾ ಸಿಬ್ಬಂದಿ. ಹುಲ್ಲುಗಾವಲಿನಲ್ಲಿ ಸಿಸಿಟಿವಿ ರಕ್ಷಣೆ ಇಲ್ಲ. ಯಾತ್ರೆಯ ಸಮಯದಲ್ಲಿ ಅಧಿಕಾರಿಗಳು ಹೋಟೆಲ್‌ಗಳಲ್ಲಿ ಅರೆಸೈನಿಕ ಪಡೆ ಸಿಬ್ಬಂದಿಯನ್ನು ಸಹ ಇರಿಸುತ್ತಾರೆ. ಪಹಲ್ಗಾಮ್ ಮಾರುಕಟ್ಟೆಯಲ್ಲಿ 15 ಕುದುರೆಗಳನ್ನು ಹೊಂದಿರುವ ಸಜಾದ್ ಅಹ್ಮದ್, "ಅಮರನಾಥ ಯಾತ್ರೆ ಮುಗಿದ ನಂತರ, ಸೈನ್ಯವನ್ನು ಹುಲ್ಲುಗಾವಲಿನಿಂದ ತೆಗೆದುಹಾಕಲಾಗುತ್ತದೆ" ಎಂದು ಹೇಳಿದರು.

ಅಮರನಾಥ ಗುಹೆ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಬೈಸರನ್‌ನಲ್ಲಿ ವಿಶ್ರಾಂತಿ ಪಡೆಯುವ ಯಾತ್ರಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗುತ್ತದೆ.

ಪಾಕ್ ವಾಯುಮಾರ್ಗ ಬಂದ್: ಭಾರತದ ಏರ್‌ಲೈನ್‌ಗಳಿಗೆ ಮಾರ್ಗಸೂಚಿ ಬಿಡುಗಡೆ

ಗುರುವಾರ ಹುಲ್ಲುಗಾವಲಿನಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರು ಹಾಜರಿದ್ದರು ಮತ್ತು ಮಂಗಳವಾರದ ಭಯೋತ್ಪಾದಕ ದಾಳಿಯ ನಂತರ ವೈಮಾನಿಕ ಕಣ್ಗಾವಲು ನಡೆಸಲಾಗುತ್ತಿತ್ತು. ಆಳವಾದ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಭದ್ರತಾ ಅಧಿಕಾರಿಗಳು ಹುಲ್ಲುಗಾವಲಿಗೆ ಭೇಟಿ ನೀಡಿದರು. ಉಗ್ರರ ದಾಳಿಯಲ್ಲಿ ಓರ್ವ ನೇಪಾಳಿ ಮತ್ತು 25 ಭಾರತೀಯರು ಸೇರಿ 26 ಮಂದು ಅಮಾಯಕರು ಬಲಿಯಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು